ಸುಶಾಂತ್, ಅಕ್ಷಯ್ ಸಿನಿಮಾ ಸೇರಿದ್ದಂತೆ 7 ಬಿಗ್ ಬಜೆಟ್ ಚಿತ್ರಗಳು OTTಯಲ್ಲಿ ರಿಲೀಸ್

ಕೊರೊನಾ ವೈರಸ್ ವಿಶ್ವದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಮನರಂಜನ ಕ್ಷೇತ್ರ ಸಹ ದೊಡ್ಡ ಬದಲಾವಣೆಯೊಂದಿಗೆ ಸಾಗುತ್ತಿದೆ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ್ದರು ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಕ್ಕಿಲ್ಲ. ಹಾಗಾಗಿ ವೀಕ್ಷಕರಿದ್ದಲ್ಲಿಗೆ ಸಿನಿಮಾವನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ.

Recommended Video

Yash says New Lockdown rules is wife friendly |ಹೊಸ ಲಾಕ್ ಡೌನ್ ಯಶ್ ಮತ್ತು ರಾಧಿಕಾಗೆ ತುಂಬಾ ಇಷ್ಟ ಅಯ್ತಂತೆ.!

ಈಗಾಗಲೆ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾಗನ್ನು ರಿಲೀಸ್ ಮಾಡಲು ನಿರ್ಮಾಪಕರು ಡಿಜಿಟಲ್ ಫ್ಲಾಟ್ ಫಾರ್ಮ್ ಮೊರೆ ಹೋಗಿದ್ದಾರೆ. ಈಗಾಗಲೆ ಅನೇಕ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿವೆ. ಅಮೆಜಾನ್ ಪ್ರೈನ್ ನಲ್ಲಿ ಈಗಾಗಲೆ ಕೆಲವು ಸಿನಮಾಗಳು ಬಿಡುಗಡೆಯಾಗಿವೆ. ಈಗ ಸುಶಾಂತ್ ಸಿಂಗ್ ಕೊನೆಯ ಸಿನಿಮಾ ಸೇರಿದ್ದಂತೆ ಒಟ್ಟು 7 ಸಿನಿಮಾಗಳು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಫ್ಲಾಟ್ ಪಾರ್ಮ್ ನಲ್ಲಿ ನೇರವಾಗಿ ಬಿಡುಗಡೆಯಾಗಲು ಸಿದ್ಧವಾಗಿವೆ.

ಖುದಾ ಹಾಫಿಜ್ ಮತ್ತು ಲೂಟ್ ಕೇಸ್

ಖುದಾ ಹಾಫಿಜ್ ಮತ್ತು ಲೂಟ್ ಕೇಸ್

ವಿದ್ಯುತ್ ಜಮ್ವಾಲ್ ಅಭಿನದ ರೊಮ್ಯಾಂಟಿಕ್ ಸಿನಿಮಾ ಖುದಾ ಹಾಫಿಸ್ ಸಿನಿಮಾ ನೇರವಾಗಿ ಆನ್ ಲೈನ್ ನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಫರುಖ್ ಕಬೀರ್ ಆಕ್ಷನ್ ಕಟ್ ಹೇಳಿದ್ದಾರೆ. ಶಿವಲಿಕಾ ಒಬಾಯ್ ನಾಯಕಿಯಾಗಿ ಕಾಣಿಸಿಕೊಕೊಂಡಿದ್ದಾರೆ. ಇನ್ನೂ ಕನಾಲ್ ಕೆಮು ಅವರ ಲೂಟ್ ಕೇಸ್ ಸಿನಿಮಾ ಸಹ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ. ಕಾಮಿಕ್ ಎಂಟರ್ಟೈನರ್ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ರಸಿಕಾ ದುಗಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 11ಕ್ಕೆ ತೆರೆಗೆ ಬರಲು ಸಜ್ಜಾಗಿತ್ತು. ಆದರೀಗ ಸಿನಿಮಾ ಆನ್ ಲೈನ್ ನಲ್ಲಿ ನೇರವಾಗಿ ರಿಲೀಸ್ ಆಗುತ್ತಿದೆ.

ಸುಶಾಂತ್ ಸಿಂಗ್- ದಿಲ್ ಬೆಚಾರ

ಸುಶಾಂತ್ ಸಿಂಗ್- ದಿಲ್ ಬೆಚಾರ

ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೆಚಾರ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಜುಲೈ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸುಶಾಂತ್ ಸಿಂಗ್ ಜೊತೆ ನಾಯಕಿಯಾಗಿ ಸಂಜನಾ ಸಾಂಘಿ ಕಾಣಿಸಿಕೊಂಡಿದ್ದಾರೆ. ಸಂಜನಾಗೆ ಇದು ಮೊದಲ ಸಿನಿಮಾ. ಸೈಫ್ ಅಲಿ ಖಾನ್ ಮತ್ತು ಸ್ವಸ್ತಿಕ ಮುಖರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಲ್ ಬೆಚಾರ ಹಾಲಿವುಡ್ ಸಿನಿಮಾದ ರಿಮೇಕ್ ಆಗಿದೆ.

ಅಭಿಷೇಕ್ ಬಚ್ಚನ್- ದಿ ಬಿಗ್ ಬುಲ್

ಅಭಿಷೇಕ್ ಬಚ್ಚನ್- ದಿ ಬಿಗ್ ಬುಲ್

ಅಭಿಷೇಕ್ ಬಚ್ಚನ್ ಅಭಿನಯದ ದಿ ಬಿಗ್ ಬುಲ್ ಸಿನಿಮಾ ಕೂಡ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಬರ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾ ಕುಖ್ಯಾತ ಸ್ಟಾಕ್ ಬ್ರೋಕರ್ ಹರ್ಷದ್ ಮೆಹ್ತಾ ಅವರ ಜೀವನವನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಮೊದಲು ಸಿನಿಮಾ ಅಕ್ಟೋಬರ್23ಕ್ಕೆ ರಿಲೀಸ್ ಆಗಲು ಸಿದ್ಧವಾಗಿತ್ತು. ಆದರೀಗ ಸಿನಿಮಾ ಡಿಜಿಟಲ್ ಫ್ಲಾಟ್ ಪಾರ್ಮ್ ನಲ್ಲಿ ರಿಲೀಸ್ ಆಗುತ್ತಿದೆ.

ಅಜಯ್ ದೇವಗನ್-ಭುಜ್

ಅಜಯ್ ದೇವಗನ್-ಭುಜ್

ಅಜಯ್ ದೇವಗನ್ ಅಭಿನಯದ ಭುಜ್ ಸಿನಿಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ 1971ರ ಇಂಡು-ಪಾಕ್ ಯುದ್ಧದ ಬಗ್ಗೆ ಇರುವ ಚಿತ್ರವಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್ ಸ್ಕ್ವಾಡ್ರನ ನಾಯಕ ವಿಜಯ್ ಕಾರ್ನಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ಅಲಿಯಾ ಭಟ್- ಸಡಕ್-2

ಅಲಿಯಾ ಭಟ್- ಸಡಕ್-2

ಅಲಿಭಾ ಭಟ್ ಅಭಿನಯದ ಸಡಕ್-2 ಸಿನಿಮಾ ಆನ್ ಲೈನ್ ನಲ್ಲಿ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಂಜಯ್ ದತ್, ಪೂಜಾ ಭಟ್ ಮತ್ತು ಆದಿತ್ಯ ರಾಯ್ ಕಪೂರ್ ಅಭಿನಯಿಸಿದ್ದಾರೆ. 1991ರಲ್ಲಿ ರಿಲೀಸ್ ಆದ ಸಡಕ್ ಸಿನಿಮಾದ ಸೀಕ್ವೆಲ್ ಇದಾಗಿದೆ.

ಅಕ್ಷಯ್ ಕುಮಾರ್-ಲಕ್ಷ್ಮಿ ಬಾಂಬ್

ಅಕ್ಷಯ್ ಕುಮಾರ್-ಲಕ್ಷ್ಮಿ ಬಾಂಬ್

ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಲಕ್ಷಿ ಬಾಂಬ್ ಸಿನಿಮಾ ಆನ್ ಲೈನ್ ನಲ್ಲಿ ನೇರವಾಗಿ ರಿಲೀಸ್ ಆಗುತ್ತಿದೆ. ಜೂನ್ 5ರಂದು ರಿಲೀಸ್ ಗೆ ಸಿದ್ಧವಾಗಿತ್ತು. ಆದರೀಗ ಸಿನಿಮಾ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ಮೂಲಕವೆ ಅಭಿಮಾನಿಗಳ ನಿದ್ದೆಗೆಡಿಸಿದ್ದ ಲಕ್ಷ್ಮಿ ಬಾಂಬ್ ಈಗ ಆನ್ ಲೈನ್ ನಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Dil Bechara and Laxmmi bomb and 7 big budget movies will set to release on OTT platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X