ಹೊಸ ದಾಖಲೆ ಬರೆದ ಸುಶಾಂತ್ ಸಿಂಗ್ ಕೊನೆಯ ಸಿನಿಮಾ
ಸುಶಾಂತ್ ಸಿಂಗ್ ನಟಿಸಿದ್ದ ಕೊನೆಯ ಸಿನಿಮಾ ದಿಲ್ ಬೇಚಾರಾ ಜುಲೈ 24 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿದೆ.
ಇತ್ತೀಚಿನ ದಿನಗಳಲ್ಲಿ ಬಹಳ ಕಾತರವಾಗಿದ್ದ ಕಾದಿದ್ದ ಸಿನಿಮಾ 'ದಿಲ್ ಬೇಚಾರಾ', ಸುಶಾಂತ್ ಸಾವಿನ ಕಾರಣಕ್ಕೆ ಈ ಸಿನಿಮಾ ಅಭಿಮಾನಿಗಳಿಗೆ ಹಾಗೂ ಇತರೆ ಸಿನಿಪ್ರಿಯರಿಗೆ ಅತ್ಯಂತ ಮಹತ್ವದ್ದಾಗಿತ್ತು.
ನಿನ್ನೆ ಬಿಡುಗಡೆ ಆಗಿರುವ ದಿಲ್ ಬೇಚಾರಾ ಸಿನಿಮಾ ಭಾರತದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ದಿಲ್ ಬೇಚಾರದ ಟ್ರೇಲರ್ ಬಿಡುಗಡೆ ಆಗಿದ್ದಾಗಲೂ ಅದು ಸಹ ಹೊಸ ದಾಖಲೆಯನ್ನು ಬರೆದಿತ್ತು. ಈಗ ಸಿನಿಮಾ ಸಹ ಹೊಸ ದಾಖಲೆ ಬರೆದಿದೆ.

7.50 ಕೋಟಿ ಮಂದಿ ಸಿನಿಮಾ ನೋಡಿದ್ದಾರೆ
ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆದ ಕೇವಲ 18 ಗಂಟೆಗಳ ಒಳಗಾಗಿ 7.50 ಕೋಟಿಗೂ ಹೆಚ್ಚು ಮಂದಿ ದಿಲ್ ಬೇಚಾರಾ ಸಿನಿಮಾವನ್ನು ನೋಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೋಂದು ಮಂದಿ ಇನ್ನಾವ ಭಾರತೀಯ ಸಿನಿಮಾವನ್ನೂ ನೋಡಿಲ್ಲ.

ಸಂಜೆ ಬಿಡುಗಡೆ ಆಗಿದ್ದ ಸಿನಿಮಾ
ದಿಲ್ ಬೇಚಾರಾ ಸಿನಿಮಾ ಬಿಡುಗಡೆ ಆಗಿದ್ದು ಜುಲೈ 24 ರ ಸಂಜೆ 7:30 ಕ್ಕೆ ಅದಾದ 18 ಗಂಟೆಯೆಂದರೆ ಮಾರನೇಯ ದಿನ ಮಧ್ಯಾಹ್ನದ ವೇಳೆಗಾಗಲೇ 7.50 ಕೋಟಿ ಮಂದಿ ಸಿನಿಮಾವನ್ನು ವೀಕ್ಷಿಸಿದ್ದಾರೆ.

ಉಚಿತವಾಗಿ ಸಿನಿಮಾ ನೋಡಬಹುದು
ಸುಶಾಂತ್ ಗೌರವಾರ್ಥ ಹಾಟ್‌ಸ್ಟಾರ್, ದಿಲ್ ಬೇಚಾರಾ ಸಿನಿಮಾವನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿತ್ತು. ಸಬ್‌ಸ್ಕ್ರೈಬ್ ಆಗದೇ ಇರುವವರೂ ಸಹ ದಿಲ್ ಬೇಚಾರಾ ಸಿನಿಮಾವನ್ನು ನೋಡಬಹುದಾಗಿದೆ.

ಐಎಂಡಿಬಿನಲ್ಲಿ 10 ಕ್ಕೆ 10 ರೇಟಿಂಗ್ ಸಿಕ್ಕಿದೆ
ದಿಲ್ ಬೇಚಾರಾ ಸಿನಿಮಾ ನೋಡಿದವರು ಸಿನಿಮಾವನ್ನು ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ಐಎಂಡಿಬಿನಲ್ಲಿ 10 ಕ್ಕೆ 10 ರೇಟಿಂಗ್ ಸಿಕ್ಕಿದೆ ಸಿನಿಮಾಕ್ಕೆ. ಚಿತ್ರಮಂದಿರಗಳು ತೆರೆದ ಮೇಲೆ ಅಲ್ಲಿಯೂ ಸಿನಿಮಾವನ್ನು ಬಿಡುಗಡೆ ಮಾಡಲು ಒತ್ತಾಯ ಮಾಡಿದ್ದಾರೆ ಅಭಿಮಾನಿಗಳು.


Click it and Unblock the Notifications











