twitter
    For Quick Alerts
    ALLOW NOTIFICATIONS  
    For Daily Alerts

    ನಾಲ್ಕು ವರ್ಷ ಕಳೆದರೂ 'ಗೋಧಿ ಬಣ್ಣ...' ಚಿತ್ರಕ್ಕೆ ಅನ್ಯಾಯ: ನಿರ್ದೇಶಕ ಹೇಮಂತ್ ಬೇಸರ

    |

    ಕನ್ನಡದಲ್ಲಿ ಗಟ್ಟಿ ಕಥೆ, ತಾಂತ್ರಿಕತೆಯ ಬಳಕೆ ಮತ್ತು ವಿಭಿನ್ನ ನಿರೂಪಣೆಯ ಪ್ರಯೋಗಾತ್ಮಕ ಚಿತ್ರಗಳೆಂದು ಗುರುತಿಸುವ ಸಿನಿಮಾಗಳಲ್ಲಿ ನಿಸ್ಸಂಶಯವಾಗಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರವೂ ಒಂದು. ತಮ್ಮ ಮೊದಲ ಚಿತ್ರದಲ್ಲಿಯೇ ನಿರ್ದೇಶಕ ಹೇಮಂತ್ ರಾವ್ ಅಚ್ಚರಿ ಮೂಡಿಸುವಂತೆ ಇಡೀ ಸಿನಿಮಾ ಕಟ್ಟಿಕೊಟ್ಟಿದ್ದರು. ಸ್ವಲ್ಪ ನಿಧಾನಗತಿಯ ಸಿನಿಮಾ ಎಂಬ ಸಣ್ಣ ಆರೋಪದ ಹೊರತಾಗಿ ಇಡೀ ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್-ಎಮೋಷನ್ಸ್‌ಗಳ ನಡುವೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಾಗಿ ಯಶಸ್ವಿಯಾಗಿತ್ತು.

    ಈ ಚಿತ್ರ ಬಿಡುಗಡೆಯಾಗಿ ಮೊನ್ನೆ ಜೂನ್ 3ಕ್ಕೆ ನಾಲ್ಕು ವರ್ಷ ತುಂಬಿದೆ. ಎರಡು ವರ್ಷಗಳ ಹಿಂದೆ ಈ ಚಿತ್ರ ತಮಿಳಿಗೂ ರೀಮೇಕ್ ಆಗಿತ್ತು. ಚಿತ್ರದ ಬಗ್ಗೆ ನೆರೆಯ ಭಾಷೆಗಳಲ್ಲಿಯೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್, ವಸಿಷ್ಠ ಸಿಂಹ ಮುಂತಾದವರ ನಟನೆ ಚಿತ್ರಕ್ಕೆ ಮತ್ತಷ್ಟು ಶಕ್ತಿ ನೀಡಿತ್ತು. ಆದರೆ ನಾಲ್ಕು ವರ್ಷಗಳಿಂದ ಇದುವರೆಗೂ ಹೇಮಂತ್ ರಾವ್ ಅವರ ನೋವೊಂದು ಹಾಗೆಯೇ ಉಳಿದಿದೆ. ಮುಂದೆ ಓದಿ...

    ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ

    ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ

    'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರವನ್ನು ಡಿಸ್ನಿಯ ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ವೀಕ್ಷಿಸಬಹುದಾಗಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಮೂಲಕ ಈ ಚಿತ್ರವನ್ನು ಅದರಲ್ಲಿ ವೀಕ್ಷಿಸಬಹುದು. ಆದರೆ ಕನ್ನಡೇತರರಿಗೆ ಸಿನಿಮಾ ನೋಡಿದರೂ ಅವರಿಗೆ ಅರ್ಥವಾಗಲಾರದು.

    'ಸಪ್ತಸಾಗರದಾಚೆ ಎಲ್ಲೋ' ಹೊರಟ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಹೊಸ ಸಿನಿಮಾ'ಸಪ್ತಸಾಗರದಾಚೆ ಎಲ್ಲೋ' ಹೊರಟ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಹೊಸ ಸಿನಿಮಾ

    ಕನ್ನಡೇತರರಿಗೆ ತಲುಪುತ್ತಿಲ್ಲ

    ಕನ್ನಡೇತರರಿಗೆ ತಲುಪುತ್ತಿಲ್ಲ

    ಏಕೆಂದರೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರವನ್ನು ಕನ್ನಡೇತರರು ಅರ್ಥ ಮಾಡಿಕೊಳ್ಳಲು ಇಂಗ್ಲಿಷ್ ಸಬ್‌ ಟೈಟಲ್ ಅಗತ್ಯ. ಆದರೆ, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಇಂಗ್ಲಿಷ್ ಸಬ್‌ ಟೈಟಲ್ ಪ್ರಸಾರವಾಗುತ್ತಿಲ್ಲ. ಇದರಿಂದ ಒಟಿಟಿಗೆ ಬಂದ ಬಳಿಕವೂ ಲಕ್ಷಾಂತರ ಜನರಿಗೆ 'ಗೋಧಿ ಬಣ್ಣ...' ತಲುಪಬಹುದಾಗಿದ್ದ ಅವಕಾಶ ಕೈಗೂಡುತ್ತಿಲ್ಲ.

    ದಯವಿಟ್ಟು ಅಪ್ಲೋಡ್ ಮಾಡಿ

    ದಯವಿಟ್ಟು ಅಪ್ಲೋಡ್ ಮಾಡಿ

    ಈ ಬೇಸರವನ್ನು ನಿರ್ದೇಶಕ ಹೇಮಂತ್ ರಾವ್ ಹೊರಹಾಕಿದ್ದಾರೆ. 'ನನ್ನ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟು'ವಿನ ಇಂಗ್ಲಿಷ್ ಸಬ್‌ ಟೈಟಲ್‌ಗಳನ್ನು ಅಪ್ಲೋಡ್ ಮಾಡಿ ಎಂದು ಅವರು ಹಾಟ್‌ಸ್ಟಾರ್‌ಗೆ ಮನವಿ ಮಾಡಿಕೊಂಡಿದ್ದಾರೆ.

    ಮತ್ತೆ ಜೊತೆಯಾಗುತ್ತಿದೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಜೋಡಿಮತ್ತೆ ಜೊತೆಯಾಗುತ್ತಿದೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಜೋಡಿ

    ನಾಲ್ಕು ವರ್ಷದಿಂದ ಏನೂ ಆಗಿಲ್ಲ

    ನಾಲ್ಕು ವರ್ಷದಿಂದ ಏನೂ ಆಗಿಲ್ಲ

    'ನಾನು ನಿಮಗಾಗಿ ಸಬ್ ಟೈಟಲ್ ಬರೆದಿದ್ದೆ. ನಿಮಗೆ ಅನೇಕ ಬಾರಿ ಕರೆ ಕೂಡ ಮಾಡಿದ್ದೇನೆ. ಆದರೆ ನಾಲ್ಕು ವರ್ಷಗಳಲ್ಲಿ ಏನೂ ಆಗಿಲ್ಲ. ಬೇಕೆಂದರೆ ಸಬ್ ಟೈಟಲ್‌ಗಳನ್ನು ಮತ್ತೆ ಕಳುಹಿಸಲು ಸಿದ್ಧನಿದ್ದೇನೆ' ಎಂದು ಹೇಮಂತ್ ತಿಳಿಸಿದ್ದಾರೆ.

    'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರಕ್ಕೆ ಮೂರು ವರ್ಷ'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರಕ್ಕೆ ಮೂರು ವರ್ಷ

    English summary
    Director Hemanth Rao has requested Disney Plus Hotstar to upload the subtitles for his film Godhi Banna Sadharna Mykattu.
    Friday, June 5, 2020, 10:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X