ಒಟಿಟಿಯಲ್ಲಿ ಮಂಸೋರೆ ಸಿನಿಮಾಗಳು: 'Bcineet' ಮೂಲಕ ಮನೆ ಮನ ತಲುಪಲಿವೆ 19-20-21 ಹಾಗೂ ಆಕ್ಟ್-1978

ಒಟಿಟಿ ವೇದಿಕೆಗಳಲ್ಲಿ ಕನ್ನಡ ಸಿನಿಮಾಗಲಿಗೆ ಅನ್ಯಾಯವಾಗುತ್ತಿರುವುದು ಗೊತ್ತಿರದ ವಿಷಯವೇನಲ್ಲ. ಕನ್ನಡ ಸಿನಿಮಾಗಳನ್ನು ಕೂಡ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪರಿಗಣಿಸಬೇಕು ಎಂಬ ಬೇಡಿಕೆ ಬಹಳ ದಿನದ್ದು. ಆದರೆ, ಒಟಿಟಿ ಮತ್ತು ಕನ್ನಡ ಸಿನಿಮಾಗಳ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಕೆಲವು ಸಿನಿಮಾಗಳು ಮಾತ್ರ ಒಟಿಟಿ ಅಂಗಲ ತಲುಪುತ್ತಿವೆ. ಈಗ ಇನ್ನೊಂದು ಹೊಸ ವೇದಿಕೆ ಕನ್ನಡ ಸಿನಿಮಾಗಳಿಗೆ ಸಿಕ್ಕಿದೆ. ಅದೇ Bcineet. ಈ ಪ್ಲಾಟ್‌ಫಾರ್ಮ್ ಸಹಾಯದಿಂದ ಹಲವು ಒಟಿಟಿಗಳ ಮೂಲಕ ಸಿನಿಮಾಗಳು ಪ್ರೇಕ್ಷಕರನ್ನು ತಲುಪಲಿವೆ.

ಕನ್ನಡದ ಹೊಸ ತಲೆಮಾರಿನ ನಿರ್ದೇಶಕರ ಪೈಕಿ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿ ಸಾಮಾಜಿಕ ಸಂದೇಶಗಳ ಮೂಲಕ ಜನರ ಮನೆ ಮನಗಳನ್ನು ತಲುಪಿರುವ ನಿರ್ದೇಶಕ ಮಂಸೋರೆ. ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳನ್ನು ಪ್ರೇಕ್ಷಕರ ಎದುರು ಅಚ್ಚುಕಟ್ಟಾಗಿ ಪ್ರಸ್ತುತಪಡಿಸುವಲ್ಲಿ ಪ್ರಮುಖ ಸಾಲಿನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ಅಗ್ರಸ್ಥಾನದಲ್ಲಿ ನಿಂತಿದ್ದಾರೆ. ಅವರ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಬೇಕು ಎನ್ನುವವರ ಆಸೆ ಈಗ ಈಡೇರಲಿದೆ.

Director Mansores Act 1978 and 19 20 21 Movies Streaming on Multiple OTT Platforms

'Bcineet' ಒಟಿಟಿಯಲ್ಲಿ 19-20-21 ಹಾಗೂ ಆಕ್ಟ್-1978

ತಮ್ಮದೆ ಆದ ವಿಭಿನ್ನ, ಮರೆತುಹೋದ, ಬೆಳಕಿಗೆ ಬಾರದ ಅನ್ಯಾಯದ ಘಟನೆಗಳ ಸುತ್ತ ಕಟ್ಟಿದ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುತ್ತ ಬಂದಿರುವ ನಿರ್ದೇಶಕ ಮಂಸೋರೆ ನಿರ್ದೇಶನದ 19-20-21 ಹಾಗೂ ಆಕ್ಟ್-1978 ಚಿತ್ರಗಳು ನಿಮ್ಮ ಅಂಗೈಯಲ್ಲಿ ಸಿಗಲಿದೆ. 'Bcineet' ಒಟಿಟಿಯಲ್ಲಿ ಜನವರಿ 12 ಸ್ಟ್ರೀಮಿಂಗ್ ಆಗುತ್ತಿವೆ.

ಈ ಬಗ್ಗೆ ನಿರ್ದೇಶಕ ಮಂಸೋರೆ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ. "ಎಲ್ಲ ಅಡೆತಡೆಗಳನ್ನು ದಾಟಿ, ಈಗ ನಿಮ್ಮ ಅಂಗೈಯಲ್ಲಿ ! ಕಳೆದ ವರ್ಷ ಬಂದ ಅತ್ಯುತ್ತಮ ಚಿತ್ರಗಳಲ್ಲೊಂದು.. ನಿಮ್ಮಲ್ಲಿ ಹಲವರಿಗೆ ಈ ಚಿತ್ರ ಬಿಡುಗಡೆಯಾದಾಗ ನೋಡಲಾಗಲಿಲ್ಲ, ಆದರೆ ಈಗಲಾದರೂ ದಯವಿಟ್ಟು ನೋಡಿ.. ಸ್ನೇಹಿತರಿಗೆ ತಿಳಿಸಿ. ನೀವೆಲ್ಲರೂ ನೋಡಿ ಇಷ್ಟಪಟ್ಟರೆ, ಕಷ್ಟ ಪಟ್ಟು ಇಂಥ ಸಿನಿಮಾ ಮಾಡಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಮತ್ತೊಂದು ಚಂದನೆಯ ಚಿತ್ರ ಮಾಡುವ ಶಕ್ತಿ ಬರುತ್ತದಲ್ಲವೇ... ಇಂದೇ ನೋಡಿ..192021 !!" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Director Mansores Act 1978 and 19 20 21 Movies Streaming on Multiple OTT Platforms

ಇನ್ನು, Bcineet Kannada Ott ವೇದಿಕೆ ಕೂಡ ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ. "ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು ಆದ ಮಂಸೋರೆ ಅವರ 4 ನೇ ಬಹು ನಿರೀಕ್ಷಿತ ಚಲನಚಿತ್ರ 19.20.21 ಥೀಯೇಟರ್ ಅಂಗಳದಲ್ಲಿ ವೀಕ್ಷಕರಿಂದ, ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದ ಚಿತ್ರ. ಇನ್ನು ಮುಂದೆ OTTs ಗಳಲ್ಲಿ 170+ ರಾಷ್ಟಗಳಲ್ಲಿ ಲಭ್ಯವಾಗಲಿದೆ. ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಸಾರಾಂಶ ಸಾರುವ ಎಲ್ಲರೂ ನೋಡಲೇ ಬೇಕಾದ ಅತೀ ಅಪರೂಪದ ನೈಜ ಘಟನೆ ಆಧಾರಿತ ಕನ್ನಡ ಚಿತ್ರ 19.20.21 ಚಿತ್ರವನ್ನು ನೀವು ಇದೆ ಜನವರಿ 12 ರಿಂದ ಮೇಲ್ಕಂಡ ಎಲ್ಲ OTTs ಗಳಲ್ಲಿ ನೋಡಬಹುದು" ಎಂದು ಫೋಸ್ಟರ್ ಹಂಚಿಕೊಂಡಿದೆ.

ಜೊತೆಗೆ "ನಿಮ್ಮನ್ನು ರೀಲ್ ಇಂದ ರಿಯಾಲಿಟಿ ಲೋಕಕ್ಕೆ ಕೊಂಡೋಯ್ದ ಅಪರೂಪದ ಚಿತ್ರ "Act -1978" ಇನ್ನು ಮುಂದೆ ಮೇಲ್ಕಂಡ ಎಲ್ಲ OTT ಗಳಲ್ಲೂ ಲಭ್ಯ, ಇದೆ ಜನವರಿ 12 ರಿಂದ" ಎಂದು Act -1978 ಬಿಡುಗಡೆ ಬಗ್ಗೆಯೂ ಮಾಹಿತಿ ನೀಡಿದೆ. ಎರಡು ಸಿನಿಮಾಗಳು Bcineet ಮೂಲಕ ಏರ್​ಟೆಲ್​ ಎಕ್ಸ್​ಸ್ಟ್ರೀಮ್​, ಅಮೇಜಾನ್​ ಪ್ರೈಂ ವಿಡಿಯೋ (ಯುಎಸ್ ಅಂಡ್ ಯುಕೆ), ಹಂಗಾಮಾ ಪ್ಲೇ, ಮೂವೀಫ್ಲೆಕ್ಸ್​, ಜಸ್ಟ್​ ವಾಚ್​, ಒನ್​ಪ್ಲಸ್​ ಟಿವಿ, ಎಲ್‌ಜಿ ಸ್ಮಾರ್ಟ್ ಟಿವಿ, ಟಿಸಿಎಲ್ ಬ್ರಾಡ್‌ಕಾಸ್ಟ್ ಟಿವಿ, ಬಿಎಸ್‌ಎನ್‌ಎಲ್ ಬ್ರಾಡ್‌ಕಾಸ್ಟ್, ಎಬಿಸಿ ಟಾಕೀಸ್​ ಸೇರಿ ಹಲವೆಡೆ ನೋಡಬಹುದು.

More from Filmibeat

English summary
Act 1978 and 19 20 21 movies streaming on multiple ott platforms.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X