For Quick Alerts
  ALLOW NOTIFICATIONS  
  For Daily Alerts

  ಕಿರು ತೆರೆಗೆ ಬರಲಿದೆ ರಾಜೀವ್ ಗಾಂಧಿ ಕೊಲೆ ಪ್ರಕರಣ

  |

  ಭಾರತದ ರಾಜಕೀಯ ಇತಿಹಾಸದ ಪ್ರಮುಖ ಘಟನೆಗಳಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಲೆ ಸಹ ಒಂದು. ಈಗಾಗಲೇ ಹಲವು ಪುಸ್ತಕಗಳು, ಡಾಕ್ಯುಮೆಂಟರಿಗಳು ಕೆಲವು ಸಿನಿಮಾಗಳು ರಾಜೀವ್ ಗಾಂಧಿ ಕೊಲೆಯ ಬಗ್ಗೆ ಬಂದು ಹೋಗಿವೆ. ಇದೀಗ ಹೊಸದಾಗಿ ವೆಬ್ ಸರಣಿಯೊಂದು ಇದೇ ವಿಷಯವಾಗಿ ನಿರ್ಮಾಣವಾಗುತ್ತಿದೆ.

  ಜನಪ್ರಿಯ ನಿರ್ದೇಶಕ ನಾಗೇಶ್ ಕುಕನೂರ್, ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಕೊಲೆ ಪ್ರಕರಣ ಕುರಿತಾದ ವೆಬ್ ಸರಣಿ ನಿರ್ದೇಶಿಸಲು ಮುಂದಾಗಿದ್ದಾರೆ. ವೆಬ್ ಸರಣಿಯನ್ನು ಅಪ್ಲಾಸ್ ಎಂಟರ್ಟೈನ್‌ಮೆಂಟ್‌ ನಿರ್ಮಾಣ ಮಾಡಲಿದ್ದಾರೆ.

  ರಾಜೀವ್ ಗಾಂಧಿ ಕೊಲೆ ಪ್ರಕರಣದ ಕುರಿತಾಗಿ ಪತ್ರಕರ್ತ ಅನಿರುದ್ಧ್ ಮಿತ್ರ ಬರೆದಿರುವ ''90 ಡೇಸ್: ದಿ ಟ್ರು ಸ್ಟೋರಿ ಆಫ್ ದಿ ಹಂಟ್ ಫಾರ್ ರಾಜೀವ್ ಗಾಂಧಿ ಅಸಾಸಿನ್' ಪುಸ್ತಕವನ್ನು ಆಧರಿಸಿ ವೆಬ್ ಸರಣಿ ನಿರ್ಮಿಸಲಾಗುತ್ತಿದ್ದು, ಚಿತ್ರಕತೆ ಈಗಾಗಲೇ ತಯಾರಿದೆ. ವೆಬ್ ಸರಣಿಗೆ 'ಟ್ರೈಯಲ್ ಆಫ್ ಅಸಾಸಿನ್' ಎಂದು ಹೆಸರಿಡಲಾಗಿದೆ.

  ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲು ಕಾರಣವಾದ ಘಟನೆಗಳು, ಇಂಡಿಯನ್ ಪೀಸ್ ಕೀಪಿಂಗ್ ಫೋರ್ಸ್ ಹಾಗೂ ಅದರ ಹಿಂದಿನ ರಾಜಕೀಯ, ರಾಜೀವ್ ಗಾಂಧಿ ಹತ್ಯೆಯಲ್ಲಿ ಎಲ್‌ಟಿಟಿಇ ಪ್ರಭಾಕರನ್ ಪಾತ್ರ, ರಾಜೀವ್ ಗಾಂಧಿ ಹತ್ಯೆಯ ಸೂತ್ರಧಾರ ಶಿವರಸನ್ ಪಾತ್ರ, ರಾಜೀವ್ ಗಾಂಧಿ ಹತ್ಯೆಗೆ ಧನು ಅನ್ನೇ ಮಾನವ ಬಾಂಬ್ ಆಗಿ ಆಯ್ಕೆ ಮಾಡಿದ್ದು ಏಕೆ? ರಾಜೀವ್ ಗಾಂಧಿ ಕೊಲೆಗೆ ಚುನಾವಣೆ ಪ್ರಚಾರ ಸಭೆಯನ್ನು ಆಯ್ಕೆ ಮಾಡಿದ್ದು ಏಕೆ? ಕೊಲೆಗಾರರ ಬಂಧನ ಇನ್ನಿತರೆ ಪ್ರಶ್ನೆಗಳಿಗೆ ವಿವರವಾದ ಮಾಹಿತಿ ವೆಬ್ ಸರಣಿಯಲ್ಲಿ ಇರಲಿದೆಯಂತೆ. ಈ ವೆಬ್ ಸರಣಿಯು ರಾಜೀವ್ ಗಾಂಧಿ ಹಂತಕರ ಕೋರ್ಟ್ ವಿಚಾರಣೆಯ ಮಾಹಿತಿಯನ್ನೂ ಒಳಗೊಂಡಿರಲಿದೆ ಎನ್ನಲಾಗಿದೆ.

  ವೆಬ್ ಸರಣಿ ನಿರ್ಮಿಸುತ್ತಿರುವ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ನಾಗೇಶ್ ಕುಕನೂರು, ''ನೈಂಟಿ ಡೇಸ್: ದಿ ಟ್ರೂ ಸ್ಟೋರಿ ಆಫ್ ದಿ ಹಂಟ್ ಫಾರ್ ರಾಜೀವ್ ಗಾಂಧಿಸ್ ಅಸಾಸಿನ್' ಪುಸ್ತಕದ ರೋಮಾಂಚಕ ಕಥೆಯನ್ನು ವೆಬ್ ಸರಣಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಅಪ್ಲಾಸ್ ಎಂಟರ್ಟೈನ್‌ಮೆಂಟ್‌ ಜೊತೆಗೆ ಕೆಲಸ ಮಾಡುವುದು ಸದಾ ಒಂದು ತೃಪ್ತಿದಾಯಕ ಹಾಗೂ ಸೃಜನಾತ್ಮಕ ಅನುಭವ. ಈ ವೆಬ್ ಸರಣಿಯ ಪಯಣದ ಅನುಭವವನ್ನು ಪಡೆಯಲು ಎದುರು ನೋಡುತ್ತಿದ್ದೇನೆ'' ಎಂದಿದ್ದಾರೆ.

  ರಾಜೀವ್ ಗಾಂಧಿಯವರು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ತಮಿಳುನಾಡಿನ ಶ್ರೀಪೆರಂಬೂರ್‌ನಲ್ಲಿ 1991, ಮೇ 21ರಂದು ಕೊಲೆ ಮಾಡಲಾಯ್ತು. ತೆನ್ಮೋಳಿ ರಾಜರತ್ಮನ್ ಅಲಿಯಾಸ್ ಧನು ಮಾನವ ಬಾಂಬ್ ಆಗಿ ಮಾರ್ಪಟ್ಟು ರಾಜೀವ್ ಗಾಂಧಿಯನ್ನು ಕೊಂದಳು. ರಾಜೀವ್ ಗಾಂಧಿ ಹಾಗೂ ಧನು ಸೇರಿ ಹದಿನೆಂಟು ಮಂದಿ ಆ ಬಾಂಬ್ ಬ್ಲಾಸ್ಟ್‌ನಲ್ಲಿ ಹತರಾದರು.

  ಈವರೆಗೆ ಹಲವು ಸಿನಿಮಾಗಳು ರಾಜೀವ್ ಗಾಂಧಿ ಹತ್ಯೆಯ ಕುರಿತಾಗಿ ಬಂದಿವೆ. ತಮಿಳಿನ 'ಕುತ್ರಪತ್ರಿಕೈ', ಮಲಯಾಳಂನ 'ಮಿಶನ್ 90 ಡೇಸ್', ಕನ್ನಡದ 'ಸೈನೈಡ್', ತಮಿಳಿನ 'ದಿ ಟೆರರಿಸ್ಟ್', ಹಿಂದಿಯ 'ಮಡ್ರಾಸ್ ಕೆಫೆ' ಸಿನಿಮಾಗಳು ರಾಜೀವ್ ಗಾಂಧಿ ಕೊಲೆಯ ವಿಷಯವನ್ನು ಒಳಗೊಂಡಿವೆ.

  English summary
  Director Nagesh Kukunoor directing a web series which is about Rajiv Gandhi's assassin. Web series is based on book '90 days: The True story of the hunt for Rajiv Gandhi's assassins.
  Thursday, September 8, 2022, 10:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X