ಕಳೆದೊಂದು ತಿಂಗಳಲ್ಲಿ ಪ್ರೈಂಗೆ ಬಂದ ಈ 5 ಕನ್ನಡ ಚಿತ್ರಗಳನ್ನು ಮಿಸ್ ಮಾಡ್ಬೇಡಿ
ಚಿತ್ರಮಂದಿರಗಳಲ್ಲಿ ಒಳ್ಳೆ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುವುದು, ಬಳಿಕ ಓಟಿಟಿಯಲ್ಲಿ ನೋಡಿ ಮೆಚ್ಚಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗಿದೆ. ಕನ್ನಡದಲ್ಲಿ ಇದು ಹೆಚ್ಚಾಗುತ್ತಿದೆ. ಓಟಿಟಿಯಲ್ಲಿ ಸಿನಿಮಾ ನೋಡಿ ಅಯ್ಯೋ ಈ ಸಿನಿಮಾ ಚಿತ್ರಮಂದಿರದಲ್ಲಿ ನೋಡಬೇಕಿತ್ತು. ನನ್ನ ಟಿಕೆಟ್ ತಗೊಳ್ಳಿ ಎಂದು ನಿರ್ಮಾಪಕರಿಗೆ ಹಣ ಕಳುಹಿಸಿರುವವರು ಇದ್ದಾರೆ.
ಒಂದು ಚಿತ್ರದಲ್ಲಿ ದೊಡ್ಡ ಕಲಾವಿದರು ಇದ್ದಾರೋ ಇಲ್ವೋ? 2 ಗಂಟೆ ಮನರಂಜನೆ ಬೇಕು. ಅಷ್ಟು ಹೊತ್ತು ಎಲ್ಲಾ ಜಂಟಾಟ ಬಿಟ್ಟು ಸಿನಿಮಾ ನೋಡುತ್ತ ಜನ ಮೈಮರೆಯಬೇಕು. ಅಂತಹ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತದೆ. ಒಂದು ವೇಳೆ ಬಂದರೂ ಸರಿಯಾದ ಮನ್ನಣೆ ಸಿಗುವುದಿಲ್ಲ. ಸದ್ಯ ಓಟಿಟಿಯಲ್ಲಿ ಕನ್ನಡ ಚಿತ್ರಗಳು ಸದ್ದು ಮಾಡುತ್ತಿವೆ. ಥಿಯೇಟರ್‌ಗಳಲ್ಲಿ ಮಿಸ್ ಮಾಡಿಕೊಂಡಿದ್ದ ಒಳ್ಳೆ ಸಿನಿಮಾಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನೋಡಿ ಜೈಕಾರ ಹಾಕುತ್ತಿದ್ದಾರೆ.

ಪರಭಾಷಾ ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನು ನೋಡಿ ಕೊಂಡಾಡುತ್ತಿದ್ದಾರೆ. ಬೇರೆ ಭಾಷೆಯ ಸಿನಿಮಾಗಳನ್ನು ಸುಖಾಸುಮ್ಮನೆ ಹೊಗಳುವುದು ಬಿಟ್ಟು ಕನ್ನಡದಲ್ಲಿ ಅಂತಹ ಸಿನಿಮಾಗಳನ್ನು ಬಂದಾಹ ಗುರ್ತಿಸಿ, ಹರಸಿ ಹಾರೈಸಿ ಎಂದು ಮನವಿ ಮಾಡುವಂತಾಗಿದೆ. ಕಳೆದೊಂದು ತಿಂಗಳಲ್ಲಿ ಬಂದ ಈ 5 ಕನ್ನಡ ಚಿತ್ರಗಳನ್ನು ಇನ್ನು ನೋಡಿದಿದ್ದರೆ ಈಗಲೇ ನೋಡಿ.
1. ಜೂನಿ
ವೈಭವ್ ಮಹಾದೇವ್ ನಿರ್ದೇಶನದ 'ಜೂನಿ' ಕನ್ನಡದಲ್ಲಿ ಒಂದು ಒಳ್ಳೆ ಪ್ರಯತ್ನ. ಅದ್ಭುತ ಕೇಕ್ ರೆಸೆಪಿ ಹುಡಕಾಟದಲ್ಲಿರುವ ಪಾರ್ಥ(ಪೃಥ್ವಿ ಅಂಬರ್). ಆತನ ಬಾಳಿಗೆ ಎಂಟ್ರಿ ಕೊಡುವ ಜೂನಿ(ರಿಷಿಕಾ ನಾಯ್ಕ್) ಮುಂದೆ ಕಥೆ ಎಲ್ಲಿಗೋ ಸಾಗಿ ಪ್ರೇಕ್ಷಕರನ್ನು ಅದ್ಭುತ ಅನುಭವ ನೀಡುತ್ತದೆ. 'ಬ್ಲಿಂಕ್' ಹಾಗೂ 'ಶಾಖಾಹಾರಿ' ಸಿನಿಮಾಗಳ ಮಟ್ಟಿಗೆ ಈ ಚಿತ್ರಕ್ಕೆ ಓಟಿಟಿಯಲ್ಲೂ ರೆಸ್ಪಾನ್ಸ್ ಸಿಗಲಿಲ್ಲ ಎನ್ನುವುದೇ ವಿಪರ್ಯಾಸ. ಮಿಸ್ ಮಾಡ್ದೆ 'ಜೂನಿ' ಚಿತ್ರ ಒಮ್ಮೆ ನೋಡಿ.
2. ಯುವ
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್ ನಟನೆಯ ಚೊಚ್ಚಲ ಚಿತ್ರ ಕೂಡ ಓಟಿಟಿಗೆ ಬಂದಿದೆ. ಮಾರ್ಚ್ 28ಕ್ಕೆ ತೆರಹಗಪ್ಪಳಿಸಿದ್ದ ಈ ಆಕ್ಷನ್ ಎಂಟರ್‌ಟೈನರ್ ಏಪ್ರಿಲ್ ಕೊನೆಗೆ ಪ್ರೈಂಗೆ ಬಂತು. ಮೊದಲಿಗೆ ಬಾಡಿಗೆಗೆ ಲಭ್ಯವಿದ್ದ ಸಿನಿಮಾ ಬಳಿಕ ಎಲ್ಲರಿಗೂ ಸಿಗಲು ಆರಂಭಿಸಿತು. ಇತ್ತೀಚೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಆಡಿಯೋ ಜೊತೆಗೂ ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ. ಇದೊಂದು ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್. 'ಯುವ' ಡ್ಯಾನ್ಸ್, ಆಕ್ಷನ್, ಸಂತು ಡೈಲಾಗ್ಸ್‌ಗಾಗಿ ಸಿನಿಮಾ ನೋಡಬಹುದು.

3. ಬ್ಲಿಂಕ್
ಶ್ರೀನಿಧಿ ಬೆಂಗಳೂರು ನಿರ್ದೇಶನದ 'ಬ್ಲಿಂಕ್' ಮತ್ತೊಂದು ಅದ್ಭುತ ಪ್ರಯತ್ನ. ದೀಕ್ಷಿತ್ ಶೆಟ್ಟಿ ಲೀಡ್ ರೋಲ್‌ನಲ್ಲಿರುವ ಈ ಸೈನ್ಸ್ ಫಿಕ್ಷನ್ ಚಿತ್ರಕ್ಕೆ ಓಟಿಟಿಯಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಟೈಲ್ ಟ್ರಾವೆಲಿಂಗ್ ಕಾನ್ಸೆಪ್ಟ್‌ನಲ್ಲಿ ಸಿನಿಮಾ ಹೊಸ ಅನುಭವ ನೀಡುತ್ತದೆ. ಚೈತ್ರಾ ಆಚಾರ್, ಗೋಪಾಲ್ ದೇಶಪಾಂಡೆ ಚಿತ್ರದ ತಾರಾಗಣದಲ್ಲಿದ್ದಾರೆ.
4. ಶಾಖಾಹಾರಿ
ರಂಗಾಯಣ ರಘು ಲೀಡ್ ರೋಲ್‌ನಲ್ಲಿ ನಟಿಸಿರುವ ಮರ್ಡರ್ ಮಿಸ್ಟರಿ ಸಿನಿಮಾ 'ಶಾಖಾಹಾರಿ'. ಮೃಗವಧೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಕಥೆ ಒಳ್ಳೆ ಅನುಭವ ನೀಡುತ್ತದೆ. ದುರ್ಗಾ ಪ್ರಸಾದ್ ಹೋಟೆಲ್. ಅದರ ಮಾಲೀಕ, ಬಾಣಸಿಗ ಸುಬ್ಬಣ್ಣ. ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡ ಆರೋಪಿಯೊಬ್ಬ ಸುಬ್ಬಣ್ಣ ಹೋಟೆಲ್ ಸೇರುತ್ತಾನೆ. ಅಲ್ಲಿಂದ ಮುಂದೆ ಕಥೆ ನಾನಾ ತಿರುವು ಪಡೆಯುತ್ತದೆ. ಶುದ್ಧ ಶಾಖಾಹಾರಿ ಹೋಟೆಲ್ ಮುಂದೆ ಒಂದರ್ಥದಲ್ಲಿ ಖಸಾಯಿಖಾನೆ ಆಗಿಬಿಡುವ ಕಥೆ ಇಂಟ್ರೆಂಸ್ಟಿಂಗ್ ಎನಿಸುತ್ತದೆ.
5. O2
ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಚಿತ್ರ 'O2'. ಆಶಿಕಾ ರಂಗನಾಥ್ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಏಪ್ರಿಲ್ 19ಕ್ಕೆ ಬಿಡುಗಡೆ ಆಗಿದ್ದ ಚಿತ್ರ ಇದೀಗ ಪ್ರೈಂ ವಿಡಿಯೋದಲ್ಲಿದೆ. ಇದೊಂದು ಮೆಡಿಕಲ್ ಥ್ರಿಲ್ಲರ್ ಸಿನಿಮಾ. ಒಂದೊಳ್ಳೆ ಲವ್ ಸ್ಟೋರಿ ಕೂಡ ಚಿತ್ರದಲ್ಲಿದೆ. ವೀಕೆಂಡ್‌ನಲ್ಲಿ ಮನೆಯಲ್ಲೇ ಕೂತು ನೋಡಲು 'O2' ಒಳ್ಳೆ ಆಯ್ಕೆ.


Click it and Unblock the Notifications











