₹30 ಕೋಟಿ ಬಜೆಟ್‌.. ₹100 ಕೋಟಿ ಗಳಿಸಿದ್ದ ಚಿತ್ರ; 'ಡ್ರ್ಯಾಗನ್' ಓಟಿಟಿ ರಿಲೀಸ್ ಡೇಟ್ ಘೋಷಣೆ

ಈ ವರ್ಷದ ತಮಿಳು ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ 'ಡ್ರ್ಯಾಗನ್'. ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿ ಸಿನಿಮಾ ಅಚ್ಚರಿಯ ಗೆಲುವು ಕಂಡಿತ್ತು. 3 ವರ್ಷಗಳ ಹಿಂದೆ 'ಲವ್ ಟುಡೇ' ಎಂಬ ಸಿನಿಮಾ ನಿರ್ದೇಶಿಸಿ ನಟಿಸಿ ಸಕ್ಸಸ್ ಕಂಡಿದ್ದ ಪ್ರದೀಪ್ ರಂಗನಾಥನ್ ನಟನೆಯ ಸಿನಿಮಾ ಇದು. ಸಿಂಪಲ್ ಕಥೆಯನ್ನು ಇವತ್ತಿನ ಯುವಜನತೆಗೆ ಇಷ್ಟವಾಗುವಂತೆ ಹೇಳಿ ಚಿತ್ರತಂಡ ಗೆದ್ದಿದ್ದೆ.

ಪ್ರದೀಪ್ ಈ ಹಿಂದೆ 'ಕೊಮಲಿ' ಮತ್ತೊಂದು ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಅಂದಹಾಗೆ 'ಡ್ರ್ಯಾಗನ್' ಚಿತ್ರಕ್ಕೆ ಅಶ್ವಥ್ ಮಾರಿಮುತ್ತು ಸಾರಥ್ಯ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಂಜಿನಿಯರಿಂಗ್ ಕಾಲೇಜು ಯುವಕ ಡ್ರ್ಯಾಗನ್ ಅಲಿಯಾಸ್ ಡಿ. ರಾಘವನ್ ಎಂಬ ಪಾತ್ರದಲ್ಲಿ ಪ್ರದೀಪ್ ನಟಿಸಿದ್ದಾರೆ. ಫೆಬ್ರವರಿ 21ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಸೂಪರ್ ಹಿಟ್ ಸೇರಿದೆ.

Dragon Tamil film OTT release date confirmed When and where to watch the comedy-drama

ಅಂದಾಜು 30 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಡ್ರ್ಯಾಗನ್' ಸಿನಿಮಾ 100 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಕೆಲವರು ಸೂರ್ಯ ನಟನೆಯ 'ಕಂಗುವ' ಚಿತ್ರಕ್ಕೆ 'ಡ್ರ್ಯಾಗನ್' ಚಿತ್ರದ ಸಕ್ಸಸ್ ಅನ್ನು ಹೋಲಿಸಿ ವ್ಯಂಗ್ಯವಾಡಿದ್ದರು. ಯಾವುದೇ ದೊಡ್ಡ ಸ್ಟಾರ್‌ಕಾಸ್ಟ್ ಇಲ್ಲದೇ ಹೆಚ್ಚು ಬಂಡವಾಳ ಇಲ್ಲದೇ ಸಿಂಪಲ್ ಕಥೆ ಹೇಳಿ ಚಿತ್ರತಂಡ ಪ್ರೇಕ್ಷಕರನ್ನು ರಂಜಿಸಿದೆ. ಇಂತಹ ಸಿನಿಮಾ ಮಾಡಬೇಕು ಎಂದು ಕೆಲವರು ಸಲಹೆ ನೀಡಿದ್ದರು.

ನಟ ಸೂರ್ಯಗಿಂತ ಪ್ರದೀಪ್ ರಂಗನಾಥನ್ ಉತ್ತಮ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು. ಇದು ನಟ ಸೂರ್ಯ ಪತ್ನಿ ಜ್ಯೋತಿಕಾ ಗಮನಕ್ಕೂ ಹೋಗಿತ್ತು. ಅಂದಹಾಗೆ ಇದೀಗ 'ಡ್ರ್ಯಾಗನ್' ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆ ಆಗಿದೆ. ಅನುಪಮಾ ಪರಮೇಶ್ವರನ್ ಹಾಗೂ ಕಯಾದು ಲೋಹರ್ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ.

ಸೆಕೆಂಡ್ ಪಿಯುಸಿಯಲ್ಲಿ ಚೆನ್ನಾಗಿ ಓದಿ ಗೋಲ್ಡ್ ಮೆಡಲ್ ತಗೊಂಡಿದ್ದ ಡಿ. ರಾಘವನ್(ಪ್ರದೀಪ್ ರಂಗನಾಥನ್) ಇಂಜಿನಿಯರಿಂಗ್ ಕಾಲೇಜು ಸೇರಿ ಬದಲಾಗುತ್ತಾನೆ. ಡ್ರ್ಯಾಗನ್ ಎಂದು ಹೆಸರು ಬದಲಿಸಿಕೊಂಡು ಕೀರ್ತಿ(ಅನುಪಮಾ ಪರಮೇಶ್ವರನ್) ಪ್ರೀತಿಯಲ್ಲಿ ಬೀಳುತ್ತಾನೆ. ಓದು ಬಿಟ್ಟು ಕಾಲೇಜಿನಲ್ಲಿ ಕೆಟ್ಟ ಹೆಸರು ತೆಗೆದುಕೊಳ್ಳುತ್ತಾನೆ.

ಕೀರ್ತಿ ಜೊತೆ ಲವ್ ಬ್ರೇಕಪ್‌ ಬಳಿಕ ಇಂಜಿನಿಯರಿಂಗ್ ಪಾಸ್ ಮಾಡಿದ್ದೀನಿ ಎಂದು ಫೇಕ್ ಸರ್ಟಿಫಿಕೇಟ್ ಮಾಡಿಸಿಕೊಂಡು ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಇದ್ದಕ್ಕಿದಂತೆ ಅವರ ಲೈಫ್ ಬದಲಾಗುತ್ತದೆ. ದೊಡ್ಡ ಮನೆತನದ ಯುವತಿ ಜೊತೆ ಮದುವೆ ಫಿಕ್ಸ್ ಆಗುತ್ತದೆ. ಇನ್ನೇನು ಎಲ್ಲಾ ಸರಿ ಹೋಯಿತು ಎಂದುಕೊಳ್ಳುವ ವೇಳೆಗೆ ಒಂದು ಸಂಕಷ್ಟ ಎದುರಾಗುತ್ತದೆ. ಮುಂದೇನು ಎನ್ನುವುದು ಇನ್ನುಳಿದ ಕಥೆ.

ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಇತ್ತೀಚೆಗೆ 'ಡ್ರ್ಯಾಗನ್' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ನಿರ್ದೇಶಕರನ್ನು ಮನೆಗೆ ಕರೆಸಿ ಚಿತ್ರದ ಬರವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಈ ಕುರಿತು ನಿರ್ದೇಶಕ ಅಶ್ವಥ್ ಮಾರಿಮುತ್ತು ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಬಾಕ್ಸಾಫೀಸ್‌ನಲ್ಲಿ ಕೂಡ ಸಿನಿಮಾ ಗೆಲುವಿನ ನಗೆ ಬೀರಿತ್ತು.

ನೆಟ್‌ಫ್ಲಿಕ್ಸ್ 'ಡ್ರ್ಯಾಗನ್' ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿತ್ತು. ಸಿನಿಮಾ ತೆರೆಗೆ ಬಂದ 30 ದಿನಕ್ಕೆ ಸರಿಯಾಗಿ ಅಂದರೆ ಮಾರ್ಚ್ 21ಕ್ಕೆ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ತಮಿಳು ಜೊತೆಗೆ ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ. ಎಜಿಎಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಎಸ್. ಅಘೋರಂ, ಎಸ್.ಗಣೇಶ್ ಹಾಗೂ ಎಸ್.ಸುರೇಶ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಲಿಯೋನ್ ಜೇಮ್ಸ್ ಸಂಗೀತ ಚಿತ್ರಕ್ಕಿದೆ.

Take a Poll

More from Filmibeat

Read more about: kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X