ಥಿಯೇಟರ್‌ ಬಿಡುಗಡೆಯಿಂದ ಹಿಂದೆ ಸರಿದ ವೆಂಕಟೇಶ್ ದೃಶ್ಯಂ-2

ತೆಲುಗು ನಟ ವಿಕ್ಟರಿ ವೆಂಕಟೇಶ್ ಅಭಿನಯದ ದೃಶ್ಯಂ 2 ಸಿನಿಮಾ ಪೂರ್ಣವಾಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಕೋವಿಡ್ ಕಾರಣ ಹಾಗೂ ಥಿಯೇಟರ್‌ಗಳು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅನುಮತಿ ಸಿಗದ ಕಾರಣ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಇದೀಗ ಆಂಧ್ರ-ತೆಲಂಗಾಣದಲ್ಲಿ ಚಿತ್ರಮಂದಿರಗಳಿಗೆ 100 ಪರ್ಸೆಂಟ್ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕದಲ್ಲಿ ಅಕ್ಟೋಬರ್ 1ರಿಂದಲೇ ಶೇಕಡಾ 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಮಹಾರಾಷ್ಟ್ರ ಸರ್ಕಾರವೂ ಅಕ್ಟೋಬರ್ ತಿಂಗಳಿನಿಂದ ಥಿಯೇಟರ್ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಬಹುದು ಎಂದು ಸೂಚಿಸಿದೆ. ಹೀಗೆ ಎಲ್ಲಾ ಕಡೆಯೂ ಚಿತ್ರಮಂದಿರಗಳು ತೆರೆಯುತ್ತಿವೆ. ಆದರೂ ವೆಂಕಟೇಶ್ ನಟನೆಯ ದೃಶ್ಯಂ 2 ಸಿನಿಮಾ ಚಿತ್ರಮಂದಿರ ಬಿಡುಗಡೆಯಿಂದ ಹಿಂದೆ ಸರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯದ ವರದಿ ಪ್ರಕಾರ ದೃಶ್ಯಂ 2 ತೆಲುಗು ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆಯಂತೆ. ಅಮೇಜಾನ್ ಪ್ರೈಮ್ ವಿಡಿಯೋ ಜೊತೆ ದೃಶ್ಯಂ ಮೇಕರ್ಸ್ ಒಪ್ಪಂದ ಮಾಡಿಕೊಂಡಿದ್ದು, ಖಚಿತಪಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಬಹಿರಂಗವಾಗಿದೆ.

ಅಂದ್ಹಾಗೆ, ವೆಂಕಟೇಶ್ ನಟನೆಯಲ್ಲಿ ತಯಾರಾಗಿರುವ ದೃಶ್ಯಂ 2 ಮಲಯಾಳಂ ಚಿತ್ರದ ರಿಮೇಕ್. ಮಲಯಾಳಂನಲ್ಲಿ ಮೋಹನ್ ಲಾಲ್ ನಟಿಸಿ ಹಿಟ್ ಆಗಿದೆ. 2020 ಫೆಬ್ರವರಿಯಲ್ಲಿ ಮಲಯಾಳಂ ಚಿತ್ರ ಅಮೇಜಾನ್‌ನಲ್ಲೇ ತೆರೆಕಂಡಿತ್ತು. ಈ ಚಿತ್ರವೀಗ ಭಾರತದ ಇತರೆ ಪ್ರಮುಖ ಭಾಷೆಗಳಲ್ಲಿ ರಿಮೇಕ್ ಆಗುತ್ತಿದ್ದು, ವೆಂಕಟೇಶ್ ನಟಿಸಿರುವ ತೆಲುಗು ವರ್ಷನ್ ರಿಲೀಸ್‌ಗೆ ಸಜ್ಜಾಗಿದೆ.

ಅಧಿಕೃತವಾಗಿ ಪ್ರಕಟವಾಗಿಲ್ಲ

ಅಧಿಕೃತವಾಗಿ ಪ್ರಕಟವಾಗಿಲ್ಲ

ಅಮೇಜಾನ್ ಜೊತೆ ಅಂತಿಮ ಹಂತದ ಮಾತುಕತೆ ಮಾಡುತ್ತಿರುವ ದೃಶ್ಯಂ 2 ಸಿನಿಮಾ ಉತ್ತಮ ಬೆಲೆಗೆ ಬೇಡಿಕೆಯಿಟ್ಟಿದೆ. ಅದಕ್ಕೆ ತಕ್ಕಂತೆ ಅಮೇಜಾನ್ ಸಹ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಒಟಿಟಿ ಬಿಡುಗಡೆ ಪಕ್ಕಾ ಎನ್ನಲಾಗಿದೆ. ಆದರೆ, ಈವರೆಗೂ ದೃಶ್ಯಂ 2 ಚಿತ್ರ ರಿಲೀಸ್ ಕುರಿತು ಅಧಿಕೃತ ಪ್ರಕಟಣೆ ಸಿಕ್ಕಿಲ್ಲ.

ವೆಂಕಟೇಶ್-ಮೀನಾ ಜೋಡಿ

ವೆಂಕಟೇಶ್-ಮೀನಾ ಜೋಡಿ

ಅಂದ್ಹಾಗೆ, 2013ರಲ್ಲಿ ದೃಶ್ಯಂ ಸಿನಿಮಾ ಮೂಲ ಭಾಷೆ ಮಲಯಾಳಂನಲ್ಲಿ ಬಿಡುಗಡೆಯಾಗಿತ್ತು. ನಂತರ ಅದೇ ಸಿನಿಮಾ ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿಯಲ್ಲಿ ರಿಮೇಕ್ ಆಗಿತ್ತು. ಈಗ ದೃಶ್ಯಂ 2 ಸಿನಿಮಾನೂ ಹಿಟ್ ಆಗಿದೆ. ಈ ಚಿತ್ರವನ್ನು ಸಹ ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿಯಲ್ಲಿ ತಯಾರಾಗುವಂತೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ವೆಂಕಟೇಶ್, ಮೀನಾ, ಕೃತಿಕಾ, ಎಸ್ತರ್ ಅನಿಲ್, ಸಂಪತ್ ರಾಜ್, ನಾದಿಯಾ, ನರೇಶ್ ಮತ್ತು ಪೂರ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೂಲ ಚಿತ್ರ ನಿರ್ದೇಶಿಸಿದ್ದ ಜಿತು ಜೋಸೆಫ್ ಅವರೇ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ.

ಕನ್ನಡದಲ್ಲಿ ರವಿಚಂದ್ರನ್ ದೃಶ್ಯಂ 2

ಕನ್ನಡದಲ್ಲಿ ರವಿಚಂದ್ರನ್ ದೃಶ್ಯಂ 2

ಮೋಹನ್ ಲಾಲ್ ನಟಿಸಿರುವ ದೃಶ್ಯಂ 2 ಸಿನಿಮಾವನ್ನು ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮಾಡ್ತಿದ್ದಾರೆ. ಈ ಹಿಂದೆ 2014ರಲ್ಲಿ ದೃಶ್ಯಂ ಸಿನಿಮಾವನ್ನು ರವಿಚಂದ್ರನ್ ಅವರೇ ಮಾಡಿ ಯಶಸ್ಸು ಕಂಡಿದ್ದರು. ಪಿ ವಾಸು ನಿರ್ದೇಶಿಸಿದ್ದರು. ಈಗ ಅದೇ ಕಾಂಬಿನೇಷನ್‌ನಲ್ಲಿ ಸಿಕ್ವೆಲ್ ಚಿತ್ರ ತಯಾರಾಗಿದೆ. ಅದಾಗಲೇ ಮುಂದುವರಿದ ಭಾಗದ ಚಿತ್ರೀಕರಣ ಪೂರ್ಣವಾಗಿ ಮುಗಿದಿದೆ. ಚಿತ್ರಮಂದಿರಗಳು 100% ತೆರೆಯಲಿ, ಆಮೇಲೆ ರಿಲೀಸ್ ದಿನಾಂಕ ಪ್ರಕಟಿಸುವ ಯೋಜನೆ ಇತ್ತು. ರವಿಚಂದ್ರನ್ ಜೊತೆಯಲ್ಲಿ ನವ್ಯ ನಾಯರ್, ಅಚ್ಯುತ್ ರಾವ್, ಶಿವಾಜಿ ಪ್ರಭು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ರಾಣಾ ನಾಯ್ಡು' ವೆಬ್‌ ಸಿರೀಸ್‌ನಲ್ಲಿ ವೆಂಕಿ

'ರಾಣಾ ನಾಯ್ಡು' ವೆಬ್‌ ಸಿರೀಸ್‌ನಲ್ಲಿ ವೆಂಕಿ

ವೆಂಕಟೇಶ್ ಮತ್ತು ರಾಣಾ ದಗ್ಗುಬಾಟಿ ನೆಟ್‌ಫ್ಲಿಕ್ಸ್ ಪ್ರಸ್ತುತಪಡಿಸುವ 'ರಾಣಾ ನಾಯ್ಡು' ಎನ್ನುವ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಇದು ಅಮೆರಿಕದ ಜನಪ್ರಿಯ ವೆಬ್ ಸಿರೀಸ್ 'ರೇ ಡೊನೊವನ್'ನ ರಿಮೇಕ್ ಆಗಿದೆ. ಇದು ಲಾಸ್ ಏಂಜಲೀಸ್‌ನ ಶ್ರೀಮಂತ ಮತ್ತು ಪ್ರಭಾವಶಾಲಿ ಕುಟುಂಬಗಳ ಸಮಸ್ಯೆಗಳನ್ನು ಪರಿಹರಿಸುವ ವ್ಯಕ್ತಿಯ ಕಥೆಯನ್ನು ಒಳಗೊಂಡಿದೆ. ರೇ ಡೊನೊವನ್ ಪಾತ್ರ ಭಾರತದಲ್ಲಿ ರಾಣಾ ನಾಯ್ಡು ಆಗಿದೆ.

More from Filmibeat

English summary
Drushyam 2 to skip theatrical release. to be premiered directly on Amazon Prime Video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X