Bad manners OTT: ಯಾರೂ ಊಹಿಸದ ಪ್ಲಾಟ್‌ಫಾರ್ಮ್‌ನಲ್ಲಿ 'ಬ್ಯಾಡ್ ಮ್ಯಾನರ್ಸ್' ಸ್ಟ್ರೀಮಿಂಗ್

ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಕೆಲವರು ಬಹಳ ಇಷ್ಟವಾದರೆ ಮತ್ತೆ ಕೆಲವರಿಗೆ ಸಿನಿಮಾ ಭಾರೀ ನಿರಾಸೆ ಮೂಡಿಸಿತ್ತು. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಅಭಿ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಸಿನಿಮಾ ಗೆಲ್ಲಲಿಲ್ಲ.

'ಪಾಪ್‌ಕಾರ್ನ್‌ ಮಂಕಿಟೈಗರ್' ಬಳಿಕ ದುನಿಯಾ ಸಿನಿಮಾ ಈ ಸಿನಿಮಾ ಕೈಗೆತ್ತಿಕೊಂಡಿದ್ದರು. ಕೊಂಚ ತಡವಾಗಿಯೇ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ರುದ್ರ ಆಗಿ ಅಭಿ ಅಬ್ಬರಿಸಿದ್ದರು. ಸೂರಿ ಕಂಟ್ರಿ ಪಿಸ್ತೂಲ್ ಸುತ್ತಾ 'ಬ್ಯಾಡ್‌ ಮ್ಯಾನರ್ಸ್' ಕಥೆ ಹೆಣೆದಿದ್ದರು. ಜಯಣ್ಣ ಕಂಬೈನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು.

Duniya Suri and Abishek Ambareesh s Bad manners OTT Streaming Partner Fixed

ಸೂರಿ- ಅಭಿ ಕಾಂಬಿನೇಷನ್ ಎನ್ನುವ ಕಾರಣಕ್ಕೆ ಸಿನಿಮಾ ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಮಿಂಚಿದ್ದರು. ಇನ್ನುಳಿದಂತೆ ಸೂರಿ ಒಂದಷ್ಟು ವಿಭಿನ್ನ ಪಾತ್ರಗಳನ್ನು ಸೃಷ್ಟಿಸಿ ತಮ್ಮದೇ ಶೈಲಿಯ ಮೇಕಿಂಗ್, ಟ್ರೀಟ್‌ಮೆಂಟ್ ಸದ್ದು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಅದರಲ್ಲಿ ಸಂಪೂರ್ಣವಾಗಿ ಗೆಲ್ಲಲಿಲ್ಲ.

'ಗೋಢ' ಎನ್ನುವ ಊರಿನಲ್ಲಿ ಕಂಟ್ರಿ ಪಿಸ್ತೂಲ್ ಅಕ್ರಮ ತಯಾರಿಕೆ ಹಾಗೂ ಅಕ್ರಮ ಸಾಗಾಣಿಕೆ ಜಾಲ. ಅದನ್ನು ಬೇಧಿಸಲು ಅಲ್ಲಿಗೆ ಎಂಟ್ರಿ ಕೊಡುವ ರುದ್ರ, ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಸೂರಿ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಹೇಳಿದ್ದರು. ಒಂದಷ್ಟು ಸನ್ನಿವೇಶಗಳನ್ನು ಮೊದಲಿಗೆ ಚೆಲ್ಕಾಪಿಲ್ಲಿಯಾಗಿ ತೋರಿಸಿ ಕೊನೆ ಅದನ್ನೆಲ್ಲಾ ಒಂದು ದಾರದಲ್ಲಿ ಪೋಣಿಸಿ ಕಥೆ ಹೇಳುವ ತಂತ್ರವನ್ನು ಈ ಚಿತ್ರದಲ್ಲೂ ಸೂರಿ ಬಳಸಿದ್ದರು. ಇದು ಸಾಮಾನ್ಯ ಪ್ರೇಕ್ಷಕನಿಗೆ ಅರ್ಥವಾಗಲಿಲ್ಲ.

Duniya Suri and Abishek Ambareesh s Bad manners OTT Streaming Partner Fixed

ಸಣ್ಣ ಕಥೆಯನ್ನೇ ತಿರುವಾಕಿ ಅತ್ತ ಇತ್ತ ಹೇಳಿ ಏನೇನೊ ಪ್ರಯತ್ನ ಮಾಡಲಾಗಿತ್ತು. ಆದರೂ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ಆದರೂ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಸಾಕಷ್ಟು ಜನ ಕಾಯುತ್ತಿದ್ದಾರೆ. ಸಿನಿಮಾ ತೆರೆಕಂಡು 4 ತಿಂಗಳು ಕಳೆದರೂ ಇನ್ನು ಸ್ಮಾಲ್‌ ಸ್ಕ್ರೀನ್‌ಗೆ ಬಂದಿಲ್ಲ. ಯಾವ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಯಾವಾಗ ಬರುತ್ತದೆ ಎನ್ನುವ ಕುತೂಹಲ ಹಲವರಲ್ಲಿದೆ.

ಅಂತೂ ಇಂತೂ 'ಬ್ಯಾಡ್ ಮ್ಯಾನರ್ಸ್' ಚಿತ್ರಕ್ಕೆ ಓಟಿಟಿ ಪಾರ್ಟ್ನರ್ ಫಿಕ್ಸ್ ಆಗಿದ್ದಾರೆ. ಅಮೇಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಹಾಟ್‌ಸ್ಟರ್, ಜೀ5 ಬದಲಿಗೆ ಸನ್‌ನೆಕ್ಸ್ಟ್‌ನಲ್ಲಿ ಸಿನಿಮಾ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ. ಕನ್ನಡದಲ್ಲಿ ಬಹುತೇಕ ಸಿನಿಮಾಗಳು ಪ್ರೈಂ ವಿಡಿಯೋ ಹಾಗೂ ಜೀ5ನಲ್ಲಿ ಬರುತ್ತವೆ. ಆಗೊಮ್ಮೆ ಈಗೊಮ್ಮೆ ಸನ್‌ನೆಕ್ಸ್ಟ್‌ನಲ್ಲಿ ಸಿನಿಮಾ ಸಿಗುತ್ತದೆ. 'ಬ್ಯಾಡ್‌ ಮ್ಯಾನರ್ಸ್' ಕೂಡ ಅದೇ ಲಿಸ್ಟ್ ಸೇರಿದೆ.

ಓಟಿಟಿ ಜೊತೆಗೆ ಸ್ಯಾಟಲೈಟ್ ರೈಟ್ಸ್ ಕೂಡ ಉದಯ ಟಿವಿಗೆ ಮಾರಾಟವಾಗಿದೆ. ಶೀಘ್ರದಲ್ಲೇ ಸನ್‌ನೆಕ್ಸ್ಟ್‌ನಲ್ಲಿ ರುದ್ರನ 'ಬ್ಯಾಡ್‌ ಮ್ಯಾನರ್ಸ್' ದರ್ಶನವಾಗಲಿದೆ. ಆ ಬಳಿಕ ಸಿನಿಮಾ ಉದಯ ಟಿವಿಯಲ್ಲಿ ಪ್ರೀಮಿಯರ್ ಆಗಲಿದೆ. ಮತ್ತೊಂದು ಕಡೆ ಅಭಿಷೇಕ್ ಹಾಗೂ ಸೂರಿ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ.

ಯುವ ನಟ ವಿರಾಟ್ ಚಿತ್ರಕ್ಕೆ ಸೂರಿ ಆಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ. ಈ ಚಿತ್ರವನ್ನು ಕೂಡ ಜಯಣ್ಣ-ಭೋಗೇಂದ್ರ ನಿರ್ಮಿಸಲಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಕೂಡ ನಟಿಸುವ ಸಾಧ್ಯತೆಯಿದೆ. ಹಾಗಾಗಿ ಇದು ಮಲ್ಟಿಸ್ಟಾರರ್ ಸಿನಿಮಾ ಆಗುವ ನಿರೀಕ್ಷೆಯಿದೆ. ಇನ್ನು ಹೆಬ್ಬುಲಿ ಕೃಷ್ಣ ನಿರ್ದೇಶನದ 'ಕಾಳಿ' ಚಿತ್ರದಲ್ಲಿ ಅಭಿ ನಟಿಸುತ್ತಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

More from Filmibeat

English summary
Abishek Ambareesh starrer Bad manners OTT Streaming details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X