Dunki OTT: ಯಾರೂ ಊಹಿಸದ ಪ್ಲಾಟ್‌ಫಾರ್ಮ್‌ನಲ್ಲಿ 'ಡಂಕಿ' ಸ್ಟ್ರೀಮಿಂಗ್: ಭರ್ಜರಿ ಬೆಲೆಗೆ ರೈಟ್ಸ್ ಸೇಲ್?

ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ತೆರೆಗಪ್ಪಳಿಸಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರಕ್ಕೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳ ನಡುವೆ ಬಾಕ್ಸಾಫೀಸ್‌ನಲ್ಲಿ ಭಾರೀ ಫೈಟ್ ನಡೀತಿದೆ. ಇನ್ನು ಲೀಕಾಸುರರು ಚಿತ್ರಕ್ಕೆ ಶಾಕ್ ಕೊಟ್ಟಿದ್ದಾರೆ.

ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಚಿತ್ರದಲ್ಲಿ ಕಿಂಗ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಮಾಷೆಯ ಜೊತೆ ಜೊತೆಗೆ ದೇಶಪ್ರೇಮ, ಭಾವನಾತ್ಮಕ ವಿಚಾರವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಹಿರಾನಿ, ಶಾರುಖ್ ಲೆಕ್ಕಾಚಾರ ತಪ್ಪಾಗಿಲ್ಲ. ಪ್ರೇಕ್ಷಕರು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

Dunki OTT release platform: Movie locks OTT deal at a whopping price

ಈ ವರ್ಷ ಶಾರುಖ್ ಖಾನ್ 'ಪಠಾಣ್' ಹಾಗೂ 'ಜವಾನ್' ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಎರಡೂ ಸಿನಿಮಾಗಳು 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿವೆ. 'ಡಂಕಿ' ಸಿನಿಮಾ ಕೂಡ ಬಾಕ್ಸಾಫೀಸ್ ದೋಚುವ ಸುಳಿವು ಸಿಗುತ್ತಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಈಗಾಗಲೇ ಥ್ರಿಯೇಟ್ರಿಕಲ್ ರೈಟ್ಸ್, ಓಟಿಟಿ ರೈಟ್ಸ್ ಮಾರಾಟವಾಗಿ ನಿರ್ಮಾಪಕರು ಸೇಫ್ ಆಗಿದ್ದಾರೆ ಎನ್ನಲಾಗ್ತಿದೆ.

ಬಹಳ ಹಿಂದೆಯೇ ಕ್ರಿಸ್‌ಮಸ್ ಸಂಭ್ರಮದಲ್ಲಿ 'ಡಂಕಿ' ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಇತ್ತೀಚೆಗೆ 'ಸಲಾರ್' ಚಿತ್ರವನ್ನು 'ಡಂಕಿ' ಎದುರು ತೆರೆಗೆ ತರುವ ಪ್ರಯತ್ನ ನಡೀತು. ಆದರೂ ಶಾರುಖ್ ಖಾನ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ತಮ್ಮ ಸಿನಿಮಾ ಮೇಲಿನ ನಂಬಿಕೆಯಿಂದ ಹೇಳಿದ ದಿನವೇ ಸಿನಿಮಾ ರಿಲೀಸ್ ಮಾಡಿದ್ದಾರೆ.

'ಡಂಕಿ' ಚಿತ್ರದ ಓಟಿಟಿ ರೈಟ್ಸ್ ಜಿಯೋ ಸಿನಿಮಾ ಪಾಲಾಗಿದೆ ಎನ್ನುವ ಚರ್ಚೆ ನಡೀತಿದೆ. ಜಿಯೋ ಸಿನಿಮಾ ಸದ್ಯಕ್ಕೆ ಉಚಿತವಾಗಿ ಸಿನಿಮಾ, ಕಾರ್ಯಕ್ರಮಗಳನ್ನು ಸ್ಟ್ರೀಮಿಂಗ್ ಮಾಡುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ಈವರೆಗೆ ಕೊಂಡುಕೊಂಡಿರಲಿಲ್ಲ. ಕೆಲ ಸಿನಿಮಾಗಳನ್ನು ಬಾಡಿಗೆ ರೂಪದಲ್ಲಿ ನೋಡುವ ಅವಕಾಶ ಕಲ್ಪಿಸಿತ್ತು. ಇದೀಗ 'ಡಂಕಿ' ಚಿತ್ರವನ್ನು ಈ ಸಂಸ್ಥೆ ಕೊಂಡುಕೊಂಡಿದೆ. ನೆಟ್‌ಫ್ಲಿಕ್ಸ್ ಕೂಡ ಪ್ರಯತ್ನಿಸಿ ಕೊನೆ ಗಳಿಗೆಯಲ್ಲಿ ಕೈಬಿಟ್ಟಿರುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.

Dunki OTT release platform: Movie locks OTT deal at a whopping price

ಅಂದಾಜು 150 ಕೋಟಿ ರೂ. ಕೊಟ್ಟು ಜಿಯೋ ಸಿನಿಮಾ 'ಡಂಕಿ' ಡಿಜಿಟಲ್ ರೈಟ್ಸ್ ಖರೀದಿಸಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಶಾರುಖ್, ಹಿರಾನಿ ನಿರ್ಮಾಪಕರಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಂದಾಜು 85 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪ್ರಮೋಷನ್‌ಗಾಗಿ 35 ಕೋಟಿ ರೂ. ವ್ಯಯಿಸಿರುವ ಅಂದಾಜಿದೆ. ಒಟ್ಟಾರೆ 120 ಕೋಟಿ ರೂ. ಬಜೆಟ್ ಸಿನಿಮಾ ಓಟಿಟಿ ರೈಟ್ಸ್‌ನಿಂದಲೇ ಲಾಭದಲ್ಲಿದೆ ಎನ್ನುವ ಚರ್ಚೆ ನಡೀತಿದೆ.

ವೀಸಾ ಇಲ್ಲದೇ ದೇಶದ ಗಡಿ ದಾಟಿ ಲಂಡನ್‌ಗೆ ಹೋಗಲು ಯತ್ನಿಸುವವರ ಕಥೆಯನ್ನು ತಮಾಷೆಯಾಗಿ ತೋರಿಸುವ ಪ್ರಯತ್ನ 'ಡಂಕಿ' ಚಿತ್ರದಲ್ಲಿ ಮಾಡಿದ್ದಾರೆ. ತಮಾಷೆಯಾಗಿಯೇ ಒಂದು ಗಂಭೀರ ವಿಚಾರವನ್ನು ದಾಟಿಸುವ ಪ್ರಯತ್ನ ಇಲ್ಲಿ ನಡೆದಿದೆ. ಫೆಬ್ರವರಿ ವೇಳೆಗೆ 'ಡಂಕಿ' ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆದರೆ ಜನ ಹಣ ತೆತ್ತು ಸಿನಿಮಾ ನೋಡಬೇಕಾದ ಅನಿವಾರ್ಯತೆ ಎದುರಾಗಹುದು.

ಶಾರುಖ್ ಖಾನ್ ಜೊತೆಗೆ ಚಿತ್ರದಲ್ಲಿ ವಿಕ್ಕಿ ಕೌಶಲ್ ಹಾಗೂ ತಾಪ್ಸಿ ಪನ್ನು ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ವಿಕ್ಕಿ ನಟನೆಗೆ ಹೆಚ್ಚಿನ ಅಂಕ ಕೊಟ್ಟಿದ್ದಾರೆ. ಉತ್ತರ ಭಾರತದಲ್ಲಿ 'ಡಂಕಿ' ಸಿನಿಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗಿದೆ. ದಕ್ಷಿಣದಲ್ಲೂ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಸಲಾರ್' ಹಾಗೂ 'ಡಂಕಿ' ಚಿತ್ರಗಳಿಗೆ ಶೋಗಳನ್ನು ಕೊಡುವ ವಿಚಾರದಲ್ಲಿ ಭಾರೀ ರಾದ್ಧಾಂತವಾಗಿದೆ.

More from Filmibeat

English summary
Shahrukh Khan starrer dunki sold to OTT for a whopping amount;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X