OTT releases this week: 20ಕ್ಕೂ ಅಧಿಕ ಚಿತ್ರಗಳು ಈ ವಾರ ಓಟಿಟಿಗೆ ಎಂಟ್ರಿ; ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಓಟಿಟಿಯಲ್ಲಿ ಕಳೆದ ವಾರ ಬಿಡುಗಡೆಯಾದ ಸಿನಿಮಾಗಳ ಆರ್ಭಟವೇ ಕಮ್ಮಿ ಆಗಿಲ್ಲ. ಮತ್ತಷ್ಟು ಹೊಸ ಸಿನಿಮಾ, ವೆಬ್‌ ಸೀರಿಸ್ ಈ ವಾರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ದಾಂಗುಡಿ ಇಡುತ್ತಿವೆ. ಅದರಲ್ಲಿ ಒಂದಷ್ಟು ಸಿನಿಮಾಗಳು ಬಹಳ ನಿರೀಕ್ಷೆ ಹುಟ್ಟಾಕ್ಕಿದೆ.

ಕಳೆದ ವಾರ ಜೀ5ನಲ್ಲಿ ಕನ್ನಡದ 'ಕಾಟೇರ', ನೆಟ್‌ಫ್ಲಿಕ್ಸ್‌ನಲ್ಲಿ ತೆಲುಗಿನ 'ಗುಂಟೂರು ಖಾರಂ' ಹಾಗೂ ಅಮೇಜಾನ್ ಪ್ರೈಂನಲ್ಲಿ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿವೆ. ಎಲ್ಲಾ ಸಿನಿಮಾಗಳಿಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಕೇವಲ 5 ದಿನಗಳಲ್ಲಿ 'ಕಾಟೇರ' ಚಿತ್ರ 100 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಸಾಧಿಸಿ ದಾಖಲೆ ಬರೆದಿದೆ.

Dunki To Naa Saami Ranga: New OTT movies and web series to watch this week

ಬಹುನಿರೀಕ್ಷಿತ 'ಡಂಕಿ' ಸಿನಿಮಾ ಈ ವಾರದ ಮಧ್ಯದಲ್ಲೇ ಸದ್ದಿಲ್ಲದೇ ಓಟಿಟಿಗೆ ಬಂದುಬಿಟ್ಟಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ. ಇನ್ನು ವೀಕೆಂಡ್‌ನಲ್ಲಿ ರಿಲೀಸ್‌ಗೆ ಸಿದ್ಧವಾಗಿರುವ ಸಿನಿಮಾ, ಸೀರಿಸ್ ಲಿಸ್ಟ್ ಮುಂದೆ ಓದಿ.

ಡಿಸ್ನಿ ಹಾಟ್‌ಸ್ಟರ್

1. ನಾ ಸಾಮಿರಂಗ

ತೆಲುಗಿನಲ್ಲಿ ನಾಗಾರ್ಜುನಾ ಹಾಗೂ ಕನ್ನಡ ನಟಿ ಆಶಿಕಾ ರಂಗನಾಥ್ ನಟಿಸಿದ 'ನಾ ಸಾಮಿರಂಗ' ಸಂಕ್ರಾಂತಿಗೆ ತೆರೆಗಪ್ಪಳಿಸಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಮಲಯಾಳಂ ಸಿನಿಮಾ ರೀಮೆಕ್ ಆಗಿದ್ದರೂ ತೆಲುಗು ಪ್ರೇಕ್ಷಕರನ್ನು ಒಂದು ರೇಂಜ್‌ಗೆ ರಂಜಿಸಿತ್ತು. ಆಶಿಕಾ ನಟಗೆ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಫೆಬ್ರವರಿ 17ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

2. ಸಲಾರ್(ಹಿಂದಿ ವರ್ಷನ್)

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಥಿಯೇಟರ್‌ನಲ್ಲಿ ಮಾತ್ರವಲ್ಲದೇ ಓಟಿಟಿಯಲ್ಲೂ ಸದ್ದು ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಕಂಡಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ತೆಲುಗು, ತಮಿಳು, ಮಲಯಾಳಂ, ಕನ್ನಡ ವರ್ಷನ್ ಈಗಾಗಲೇ ಸ್ಟ್ರೀಮಿಂಗ್ ಆಗುತ್ತಿದೆ. ನಾಳೆ(ಫೆಬ್ರವರಿ 16)ಯಿಂದ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಹಿಂದಿ ವರ್ಷನ್ ಬರಲಿದೆ.

3. ದಿ ಸ್ಟೋರಿ ಆಫ್ ಏಜ್(ವೆಬ್‌ ಸಿರೀಸ್-1)- ಫೆಬ್ರವರಿ 16

4. ಸಭಾ ನಾಯಗನ್(ತಮಿಳು ಸಿನಿಮಾ) ಫೆಬ್ರವರಿ- 14

Dunki To Naa Saami Ranga: New OTT movies and web series to watch this week

ಜೀ5

1. ದಿ ಕೇರಳ ಸ್ಟೋರಿ

ಕಳೆದ ವರ್ಷ ಭಾರೀ ವಿವಾದ ಹುಟ್ಟುಹಾಕಿದ್ದ 'ದಿ ಕೇರಳ ಸ್ಟೋರಿ' ಸಿನಿಮಾ ಬಹಳ ತಡವಾಗಿ ಓಟಿಟಿಗೆ ಬರ್ತಿದೆ. ಜೀ-5ನಲ್ಲಿ ಫೆಬ್ರವರಿ 16ರಿಂದ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ನಟಿಸಿದ್ದಾರೆ. ಬಲವಂತದ ಮತಾಂತರ ಕುರಿತು ಚಿತ್ರದ ಕಥೆ ಸಾಗುತ್ತದೆ.

2. ಕ್ವೀನ್ ಎಲಿಜಬೆತ್(ತಮಿಳು, ಮಲಯಾಳಂ ಸಿನಿಮಾ) ಫೆಬ್ರವರಿ- 14

ನೆಟ್‌ಫ್ಲಿಕ್ಸ್

1. ಡಂಕಿ

ಶಾರುಖ್ ಖಾನ್ ನಟನೆಯ 'ಡಂಕಿ' ಚಿತ್ರಕ್ಕೆ ರಾಜ್‌ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳಿದ್ದರು. ಪ್ರಭಾಸ್ ನಟನೆಯ 'ಸಲಾರ್' ಜೊತೆಗೆ ತೆರೆಗಪ್ಪಳಿಸಿದ್ದ ಸಿನಿಮಾ ಸಖತ್ ಸದ್ದು ಮಾಡ್ತಿತ್ತು. 600 ಕೋಟಿ ರೂ. ಗಳಿಕೆ ಕಂಡು ಗೆದ್ದಿತ್ತು. ಸದ್ದಿಲ್ಲದೇ 'ಡಂಕಿ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

2. ಲಿಟಲ್ ನಿಕೊಲಸ್- ಹೌಸ್ ಆಫ್ ಸ್ಕೌಂಡ್ರಲ್(ಡಾಕ್ಯುಮೆಂಟರಿ ಸಿನಿಮಾ) ಫೆಬ್ರವರಿ 15

3. ರೆಡಿ ಸೆಟ್ ಲವ್(ವೆಬ್ ಸೀರಿಸ್)ಫೆಬ್ರವರಿ 15

4. ದಿ ವಿನ್ಸ್ ಸ್ಟಾಪುಲ್ಸ್ ಶೋ(ವೆಬ್ ಸೀರಿಸ್) ಫೆಬ್ರವರಿ 15

5. ದಿ ಕ್ಯಾಚರ್ ವಾಜ್ ಎ ಸ್ಪೈ(ಹಾಲಿವುಡ್ ಸಿನಿಮಾ) ಫೆಬ್ರವರಿ 15

6. ಕಾಮೆಡಿ ಚಾವೋಸ್(ವೆಬ್ ಸೀರಿಸ್) ಫೆಬ್ರವರಿ 16

7. ಐನ್‍ಸ್ಟೀನ್ ಅಂಡ್‌ ದಿ ಬಾಂಬ್(ಡಾಕ್ಯು ಡ್ರಾಮ) ಫೆಬ್ರವರಿ 16

8. ದಿ ವಾರಿಯರ್-ಸೀಸನ್ 1ರಿಂದ 3(ವೆಬ್ ಸೀರಿಸ್) ಫೆಬ್ರವರಿ 16

9. ಅಲ್ ರವಾಬಿ ಸ್ಕೂಲ್ ಫಾರ್ ಗರ್ಲ್ಸ್- ಸೀಸನ್-2 (ವೆಬ್ ಸೀರಿಸ್) ಫೆಬ್ರವರಿ 15

10. ಕ್ರಾಸ್ ರೋಡ್ಸ್(ಹಾಲಿವುಡ್ ಸಿನಿಮಾ) ಫೆಬ್ರವರಿ 15

11. ದಿ ಅಬೀಸ್- ಫೆಬ್ರವರಿ 16

12. ಹೌಸ್ ಆಫ್ ನಿಂಜಾಸ್(ವೆಬ್ ಸೀರಿಸ್) ಫೆಬ್ರವರಿ 15

ಅಮೇಜಾನ್ ಪ್ರೈಂ

1. ಲವ್‌ಸ್ಟೋರಿ ಯಾನ್ (ಹಿಂದಿ ವೆಬ್ ಸೀರಿಸ್) ಫೆಬ್ರವರಿ 14

2. ಅಮಾವಾಸ್(ಹಿಂದಿ ಸಿನಿಮಾ) ಫೆಬ್ರವರಿ 16

3. ರೂಟ್ ನಂ. 17 (ತಮಿಳು ಸಿನಿಮಾ) ಫೆಬ್ರವರಿ 15

More from Filmibeat

English summary
20 Movies And Series Releasing on Ott this week;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X