ತಿಂಗಳಿಗೂ ಮುನ್ನ 'ಕಾಂತಾರ- 1' ಓಟಿಟಿ ರಿಲೀಸ್ ಯಾಕೆ? ನಿರ್ಮಾಪಕರು ಪ್ರತಿಕ್ರಿಯೆ

'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 25 ದಿನ ಪೂರೈಸಿ 50ನೇ ದಿನದತ್ತ ಕಾಲಿಟ್ಟಿದೆ. ಆದರೆ ಅಷ್ಟರಲ್ಲೇ ಓಟಿಟಿ ರಿಲೀಸ್ ಡೇಟ್ ಘೋಷಣೆಯಾಗಿದೆ. 4 ವಾರಕ್ಕೆ ಚಿತ್ರವನ್ನು ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದೀಗ ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

ಚಿತ್ರಮಂದಿರಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ಓಟಿಟಿಗೆ ತರುವುದು ಸರಿಯಲ್ಲ. 26ನೇ ದಿನ 80 ಸಾವಿರಕ್ಕೂ ಅಧಿಕ ಜನ ಸಿನಿಮಾ ನೋಡಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಕ್ರೇಜ್ ಉಳಿಸಿಕೊಂಡಿದೆ. 3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ಅಚ್ಚರಿಯ ಗೆಲುವು ಕಂಡಿತ್ತು. ಆಗ ಓಟಿಟಿ ರಿಲೀಸ್ ಡೇಟ್ ಅನಿವಾರ್ಯವಾಗಿ ಮುಂದೂಡಿದ್ದರು. 50 ದಿನಗಳ ಬಳಿಕ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆಗಿತ್ತು. ಆದರೆ ಈ ಬಾರಿ 29 ದಿನಕ್ಕೆ ಓಟಿಟಿಯಲ್ಲಿ ಸಿಕ್ತಿದೆ.

Early OTT Release of Kantara-1 Uproar Hombale Films co-founder Cheluve Gowda reacts

ಅಕ್ಟೋಬರ್ 31ರಂದು 'ಕಾಂತಾರ- 1' ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಹಿಂದಿ ವರ್ಷನ್ ಮಾತ್ರ 8 ವಾರಗಳ ಬಳಿಕ ಅಂದ್ರೆ ನವೆಂಬರ್ ಕೊನೆ ವಾರದಲ್ಲಿ ಸ್ಮಾಲ್‌ ಸ್ಕ್ರೀನ್‌ಗೆ ಬರಲಿದೆ. ಇಷ್ಟು ಬೇಗ ಓಟಿಟಿ ರಿಲೀಸ್ ಯಾಕೆ ಎನ್ನುವ ಪ್ರಶ್ನೆಗೆ ಹೊಂಬಾಳೆ ಫಿಲ್ಮ್ಸ್‌ನ ಸಹ-ಸಂಸ್ಥಾಪಕರಾದ ಚೆಲುವೇಗೌಡ ಉತ್ತರಿಸಿದ್ದಾರೆ. ಇಂಡಿಯಾ ಟುಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

"ಕನ್ನಡ, ತೆಲುಗು, ತಮಿಳು, ಮಲಯಾಳಂ ವರ್ಷನ್‌ಗಳು ಮಾತ್ರ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಹಿಂದಿ ವರ್ಷನ್ 8 ವಾರಗಳ ನಂತರ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. 3 ವರ್ಷಗಳ ಹಿಂದೆ ಅಮೇಜಾನ್ ಪ್ರೈಂ ಜೊತೆ ಓಟಿಟಿ ರೈಟ್ಸ್ ಒಪ್ಪಂದವಾಗಿತ್ತು. ಆದ್ದರಿಂದ ಅದು ನಮ್ಮ ಬಾಧ್ಯತೆ. ಆದರೆ ಹಿಂದೆ ಈ ರೀತಿ ಇರಲಿಲ್ಲ" ಎಂದು ಚೆಲುವೇ ಗೌಡ ಹೇಳಿದ್ದಾರೆ.

Early OTT Release of Kantara-1 Uproar Hombale Films co-founder Cheluve Gowda reacts

ದಕ್ಷಿಣದಲ್ಲಿ ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಳು 4 ವಾರಕ್ಕೆ ಓಟಿಟಿಗೆ ಬರ್ತಿದೆ ಎಂದು ಚೆಲುವೇ ಗೌಡ ಮಾತನಾಡಿದ್ದಾರೆ. "ಕೆಲ ಸಿನಿಮಾಗಳು ಹೆಚ್ಚು ದಿನ ಉತ್ತಮ ಪ್ರದರ್ಶನ ಕಂಡರೆ ಮತ್ತೆ ಕೆಲವು ಚಿತ್ರಗಳು ಮೂರರಿಂದ ನಾಲ್ಕು ವಾರಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಗಿಸುತ್ತವೆ. ಪ್ರತಿಯೊಂದು ಚಿತ್ರಕ್ಕೂ ತನ್ನದೇ ಆದ ಓಟಿಟಿ ಒಪ್ಪಂದ ಮತ್ತು ಸಮಯವಿದೆ. ಕೋವಿಡ್‌ಗಿಂತ ಮೊದಲು, ಎಲ್ಲಾ ಚಿತ್ರಗಳು 8 ವಾರದ ಬಳಿಕ ಓಟಿಟಿ ಸ್ಟ್ರೀಮಿಂಗ್ ಒಪ್ಪಂದ ಆಗ್ತಿತ್ತು. ಕೋವಿಡ್‌ ನಂತರ, 'ಕೂಲಿ'ಯಂತಹ ದೊಡ್ಡ ಚಿತ್ರಗಳು ಸಹ ನಾಲ್ಕು ವಾರಗಳ ನಂತರ ಹಿಂದಿ ಸೇರಿ ಎಲ್ಲಾ ಭಾಷೆಗಳಲ್ಲಿ ಓಟಿಟಿಗೆ ಬರ್ತಿವೆ. ಆದ್ದರಿಂದ ಆಯಾ ಸಮಯಕ್ಕೆ ಯಾವುದು ವರ್ಕ್ ಆಗುತ್ತದೆ ಆ ರೀತಿ ನಿರ್ಧರಿಸಲಾಗುತ್ತದೆ" ಎಂದು ವಿವರಿಸಿದ್ದಾರೆ.

ಅಕ್ಟೋಬರ್ 2ರಂದು ತೆರೆಗೆ ಬಂದಿದ್ದ 'ಕಾಂತಾರ-1' ಸಿನಿಮಾ ಪ್ರೀಮಿಯರ್ ಶೋಗಳಿಂದಲೇ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ವಿಶ್ವದಾದ್ಯಂತ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಲಿವುಡ್ 'ಛಾವ' ಚಿತ್ರದ ದಾಖಲೆ ಮುರಿದಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ವರ್ಷದ ಅತಿ ದೊಡ್ಡ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ. ಸಿನಿಮಾ ಓಟಿಟಿಗೆ ಬಂದರೂ ಬೇಡಿಕೆಗೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಚೆಲುವೇ ಗೌಡ ಮಾಹಿತಿ ನೀಡಿದ್ದಾರೆ.

More from Filmibeat

Read more about: kantara chapter 1 hombale films
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X