For Quick Alerts
  ALLOW NOTIFICATIONS  
  For Daily Alerts

  ಒಟಿಟಿಯಲ್ಲಿ ಸಿನಿಮಾಗಳ ಬಿಡುಗಡೆ ವಿರೋಧಿಸಿ ಪ್ರಧಾನಿ ಮೋದಿಗೆ ಪ್ರದರ್ಶಕರ ಪತ್ರ

  |

  ಲಾಕ್ ಡೌನ್ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಏಕ ಪರದೆಯ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ತೆರೆಯುವುದು ಕಷ್ಟ. ಹೀಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿ ವೇದಿಕೆಯ ಮೂಲಕ ಬಿಡುಗಡೆ ಮಾಡಲು ಬಯಸುತ್ತಿದ್ದಾರೆ.

  ನಿರ್ಮಾಪಕರ ನಿರ್ಧಾರವನ್ನು ಪ್ರದರ್ಶಕರು ವಿರೋಧಿಸುತ್ತಿದ್ದಾರೆ. ಈಸ್ಟರ್ನ್ ಇಂಡಿಯಾ ಮೋಷನ್ ಪಿಕ್ಚರ್ಸ್ ಆಫ್ ಇಂಡಿಯಾದ ಕೆಲವು ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲೆಂದೇ ಉದ್ದೇಶಿಸಿದ್ದ ಚಿತ್ರಗಳನ್ನು ನೇರವಾಗಿ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಬಿಡುಗಡೆ ಮಾಡುವುದನ್ನು ತಡೆಯುವಂತೆ ಕೋರಿದ್ದಾರೆ. ಮುಂದೆ ಓದಿ...

  ಮತ್ತಷ್ಟು ನಷ್ಟ ಉಂಟಾಗಲಿದೆ

  ಮತ್ತಷ್ಟು ನಷ್ಟ ಉಂಟಾಗಲಿದೆ

  'ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್‌ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ನಿರ್ಮಾಪಕರಿಗೆ ಓವರ್ ದಿ ಟಾಪ್ ತಾಣಗಳಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡಬಾರದು. ಇದರಿಂದ ಈಗಾಗಲೇ ನಷ್ಟದಲ್ಲಿರುವ ಚಿತ್ರಮಂದಿರಗಳ ಮಾಲೀಕರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ಉಂಟಾಗಲಿದೆ' ಎಂದು ಪತ್ರದಲ್ಲಿ ಹೇಳಲಾಗಿದೆ.

  ಓಟಿಟಿ ನಲ್ಲಿ ಸಿನಿಮಾ ರಿಲೀಸ್ ಮಾಡಿದರೆ ತಪ್ಪೆನ್ನಲಾಗದು: ಓಟಿಟಿ ಪರ ಸತೀಶ್ ನಿಲವುಓಟಿಟಿ ನಲ್ಲಿ ಸಿನಿಮಾ ರಿಲೀಸ್ ಮಾಡಿದರೆ ತಪ್ಪೆನ್ನಲಾಗದು: ಓಟಿಟಿ ಪರ ಸತೀಶ್ ನಿಲವು

  ಒಟಿಟಿ ಬಿಡುಗಡೆಗೆ ತಯಾರಿ

  ಒಟಿಟಿ ಬಿಡುಗಡೆಗೆ ತಯಾರಿ

  ಮಾರ್ಚ್ ಮಧ್ಯದಿಂದಲೂ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರಪ್ರದರ್ಶನಗಳು ಸ್ಥಗಿತಗೊಂಡಿವೆ. ಬಂಗಾಳ ಸಿನಿಮಾ ಉದ್ಯಮದಲ್ಲಿ ಅನೇಕ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.

  ವಿದೇಶಿ ಕಂಪೆನಿಗಳಿಗೆ ಲಾಭ

  ವಿದೇಶಿ ಕಂಪೆನಿಗಳಿಗೆ ಲಾಭ

  'ಕೆಲವು ನಿರ್ಮಾಪಕರು ತಮ್ಮ ವೈಯಕ್ತಿಕ ಲಾಭಕ್ಕಾಗಿ ವಿದೇಶಿ ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಇದು ಇಡಿಯ ಭಾರತೀಯ ಚಿತ್ರರಂಗಕ್ಕೆ ಮಾರಕವಾಗಲಿದೆ' ಎಂದು ವಿವರಿಸಲಾಗಿದೆ.

  'ರಾಬರ್ಟ್' ಸಿನಿಮಾಕ್ಕೆ ಕೋಟಿ-ಕೋಟಿ ಆಫರ್: ಡೀಲ್ ಬೇಡವೆಂದ ನಿರ್ಮಾಪಕ'ರಾಬರ್ಟ್' ಸಿನಿಮಾಕ್ಕೆ ಕೋಟಿ-ಕೋಟಿ ಆಫರ್: ಡೀಲ್ ಬೇಡವೆಂದ ನಿರ್ಮಾಪಕ

  ಚಿತ್ರಮಂದಿರಗಳನ್ನು ಮುಚ್ಚಬೇಕಾಗುತ್ತದೆ

  ಚಿತ್ರಮಂದಿರಗಳನ್ನು ಮುಚ್ಚಬೇಕಾಗುತ್ತದೆ

  ಈ ಪರಿಸ್ಥಿತಿ ಮುಂದುವರಿದರೆ 9,000ಕ್ಕೂ ಅಧಿಕ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ವ್ಯವಹಾರವಿಲ್ಲದೆ ಮುಚ್ಚುವ ಸ್ಥಿತಿ ಬರುತ್ತದೆ. ಇದರಿಂದ ಅವುಗಳನ್ನು ನೆಚ್ಚಿಕೊಂಡ ಸಾವಿರಾರು ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗುತ್ತದೆ ಎಂದು ಸಂಸ್ಥೆ ಪತ್ರದಲ್ಲಿ ತಿಳಿಸಿದೆ.

  ನಿರ್ಮಾಣ ಸಂಸ್ಥೆಗಳು ನಿಯಮ ಪಾಲಿಸುತ್ತಿಲ್ಲ

  ನಿರ್ಮಾಣ ಸಂಸ್ಥೆಗಳು ನಿಯಮ ಪಾಲಿಸುತ್ತಿಲ್ಲ

  ಸಿನಿಮಾಗಳು ಮೊದಲು ಚಿತ್ರಮಂದಿರದಲ್ಲಿ ತೆರೆಕಾಣುತ್ತವೆ. 60 ದಿನಗಳ ನಂತರ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಸಹೋಗುತ್ತವೆ. ಆದರೆ ಈ ಸಂಕಷ್ಟದ ಸಮಯದಲ್ಲಿ ಚಿತ್ರಮಂದಿರಗಳ ಮಾಲೀಕರು ಥಿಯೇಟರ್‌ಗಳನ್ನು ಮುಚ್ಚುವ ಮೂಲಕ ನಿಮಗೆ ಬೆಂಬಲ ನೀಡುತ್ತಿದ್ದಾರೆ. ಆದರೆ ಇಲ್ಲಿನ ರೀತಿ ರಿವಾಜುಗಳನ್ನು ಪಾಲಿಸದೆ ಕೆಲವು ನಿರ್ಮಾಣ ಸಂಸ್ಥೆಗಳು ಒಟಿಟಿ ಬಿಡುಗಡೆಗೆ ಮುಂದಾಗುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

  ಆನ್ ಲೈನ್ ನಲ್ಲಿ ನೇರವಾಗಿ ಬಿಡುಗೆಯಾಗುತ್ತಿದೆ ಅಮಿತಾಬ್ ಬಹು ನಿರೀಕ್ಷೆಯ ಸಿನಿಮಾಆನ್ ಲೈನ್ ನಲ್ಲಿ ನೇರವಾಗಿ ಬಿಡುಗೆಯಾಗುತ್ತಿದೆ ಅಮಿತಾಬ್ ಬಹು ನಿರೀಕ್ಷೆಯ ಸಿನಿಮಾ

  English summary
  Some exhibitors urged PM Narendra Modi's help to stop OTT release of movies which are meant for theatre release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X