ಒಂದೇ ದಿನ 21 ಸಿನಿಮಾ, ಸೀರಿಸ್ ಓಟಿಟಿಗೆ ಎಂಟ್ರಿ; ಯಾವ್ದು ನೋಡೋದು? ಯಾವ್ದು ಬಿಡೋದು?

ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾದ ಸಿನಿಮಾಗಳು ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡದ 'ಕಾಟೇರ' ಸಿನಿಮಾ 25ನೇ ದಿನದತ್ತ ಮುನ್ನುಗ್ಗುತ್ತಿದೆ. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ 'ಗುಂಟೂರು ಖಾರಂ' ಫಸ್ಟ್ ವೀಕೆಂಡ್ ಭರ್ಜರಿ ಕಲೆಕ್ಷನ್ ಮಾಡಿದೆ. 'ಹನುಮಾನ್' ಎಲ್ಲರ ನಿರೀಕ್ಷೆ ಮೀರಿ ಸದ್ದು ಮಾಡ್ತಿದೆ.

'ಅನಿಮಲ್', 'ಡಂಕಿ' ಸಿನಿಮಾಗಳ ಯಶಸ್ವಿ ಓಟ ಮುಂದುವರೆದಿದೆ. ಈ ಮೂರು ಸಿನಿಮಾಗಳು ಯಾವಾಹ ಓಟಿಟಿಗೆ ಬರುತ್ತವೆ? ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. 'ಪುಷ್ಪ'-2, 'ದೇವರ', 'ಇಂಡಿಯನ್' ರೀತಿಯ ದೊಡ್ಡ ದೊಡ್ಡ ಚಿತ್ರಗಳ ಪೋಸ್ಟ್ ಓಟಿಟಿ ಸ್ಟ್ರೀಮಿಂಗ್ ಬಗ್ಗೆಯೂ ಅಪ್‌ಡೇಟ್ ಸಿಗುತ್ತಿದೆ. ದಿಢೀರನೆ 'ಸಲಾರ್' ಓಟಿಟಿ ರಿಲೀಸ್ ಡೇಟ್ ಘೋಷಣೆ ಆಗಿದೆ. ಈ ವಾರ ಡಿಜಿಟಲ್ ಫ್ಲಾಟ್‌ಪಾರ್ಮ್‌ಗಳಲ್ಲಿ ದೊಡ್ಡ ದೊಡ್ಡ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತಿದೆ.

Extra Ordinary Man to Indian Police Force: january 19th, 2024 OTT streaming films, web series

ಶುಕ್ರವಾರ(ಜನವರಿ 19) ಒಂದೇ ದಿನ 20ಕ್ಕೂ ಅಧಿಕ ಸಿನಿಮಾ ಹಾಗೂ ವೆಬ್‌ ಸೀರಿಸ್ ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್ ಆಗಲಿದೆ. ಕನ್ನಡದ ಸಿನಿಮಾ, ವೆಬ್‌ ಸೀರಿಸ್‌ಗಳು ಇಲ್ಲದಿದ್ದರೂ ಇಂಟ್ರೆಸ್ಟಿಂಗ್ ಕಂಟೆಂಟ್ ಅಂತೂ ಅಪ್‌ಲೋಡ್ ಆಗುತ್ತಿದೆ.

ಹಾಟ್‌ಸ್ಟಾರ್

1. ಎಕ್ಸ್‌ಟ್ರಾಡಿನರಿ ಮ್ಯಾನ್

ತೆಲುಗಿನಲ್ಲಿ ನಿತಿನ್ ಹಾಗೂ ಶ್ರೀಲೀಲಾ ನಟನೆಯ 'ಎಕ್ಸ್‌ಟ್ರಾಡಿನರಿ ಮ್ಯಾನ್' ಸಿನಿಮಾ ಓಟಿಟಿಗೆ ಬರ್ತಿದೆ. ಕಳೆದ ವರ್ಷದ ಕೊನೆಗೆ ಬಿಡುಗಡೆಯಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ವಕಂತಂ ವಂಶಿ ನಿರ್ದೇಶನದ ಸಿನಿಮಾ ಅಷ್ಟಾಗಿ ಪ್ರೇಕ್ಷಕರ ಮನ ಗೆಲ್ಲಲಿಲ್ಲ. ಓಟಿಟಿಯಲ್ಲಿ ಚಿತ್ರಕ್ಕೆ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತೋ ಕಾದು ನೋಡಬೇಕಿದೆ.

2. ಬ್ರೌನ್: ದಿ ಇಂಪಾಸಿಬಲ್ ಫಾರ್ಮುಲಾ 1 ಸ್ಟೋರಿ- ಇಂಗ್ಲೀಷ್ ವೆಬ್ ಸೀರಿಸ್

3. ಕುಲಿನ್ ರೂನಿ: ದಿ ರಿಯಲ್ ವಕ್ತಾ ಸ್ಟೋರಿ- ಇಂಗ್ಲೀಷ್ ವೆಬ್ ಸೀರಿಸ್

4. ಕ್ರಿಸ್ಟೊಬಲ್ ಬಲನ್ಸಿಯಾ- ಸ್ಪಾನಿಷ್ ವೆಬ್ ಸೀರಿಸ್

5. ಸ್ನೇಕ್ಸ್ SOS: ಗೋವಾದ ವೈಲ್ಡೆಸ್ಟ್ ಸೀಸನ್ 4 - ಇಂಗ್ಲೀಷ್ ವೆಬ್ ಸೀರಿಸ್

Extra Ordinary Man to Indian Police Force: january 19th, 2024 OTT streaming films, web series

ಅಮೇಜಾನ್ ಪ್ರೈಂ

1. ಇಂಡಿಯನ್ ಪೊಲೀಸ್ ಫೋರ್ಸ್

ಬಾಲಿವುಡ್‌ನ ಬಹುನಿರೀಕ್ಷಿತ ವೆಬ್‌ ಸೀರಿಸ್ 'ಇಂಡಿಯನ್ ಪೊಲೀಸ್ ಫೋರ್ಸ್' ಶುಕ್ರವಾರವೇ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ರೋಹಿತ್ ಶೆಟ್ಟಿ ನಿರ್ಮಿಸಿ ನಿರ್ದೇಶನ ಮಾಡಿರುವ ಈ ಆಕ್ಷನ್ ಥ್ರಿಲ್ಲರ್ ಸೀರಿಸ್ ಬಹಳ ಕುತೂಹಲ ಮೂಡಿಸಿದೆ. ಸಿದ್ದಾರ್ಥ್ ಮಲ್ಹೋತ್ರಾ, ಶಿಲ್ಪಾ ಶೆಟ್ಟಿ, ವಿವೇಕ್ ಒಬೆರಾಯ್ ತಾರಾಗಣದಲ್ಲಿದ್ದಾರೆ.

2. ಫಿಲಿಪ್ಸ್- ಮಲಯಾಳಂ ಸಿನಿಮಾ

3. ಹಜ್ಬಿನ್ ಹೋಟೆಲ್- ಇಂಗ್ಲಿಷ್ ಸೀರಿಸ್

4. LOL: ಲಾಸ್ಟ್‌ ವನ್ ಲಾಫಿಂಗ್ ಐರ್ಲೆಂಡ್- ಇಂಗ್ಲಿಷ್ ಸೀರಿಸ್

5. ಜೋರ್ರೋ- ಸ್ಪಾನಿಷ್ ಸೀರಿಸ್

ನೆಟ್‌ಫ್ಲಿಕ್ಸ್

1. ಸಲಾರ್

ಸೂಪರ್ ಹಿಟ್ 'ಸಲಾರ್' ಮೊದಲ ಭಾಗವೂ ಶುಕ್ರವಾರವೇ ಓಟಿಟಿಗೆ ಬರ್ತಿದೆ. ದಿಢೀರನೇ ಸ್ಟ್ರೀಮಿಂಗ್ ಡೇಟ್ ಘೋಷಿಸಿ ನೆಟ್‌ಫ್ಲಿಕ್ಸ್ ಶಾಕ್ ಕೊಟ್ಟಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಇತ್ತೀಚೆಗೆ ಭರ್ಜರಿ ಸಕ್ಸಸ್ ಪಾರ್ಟಿ ಸಹ ನಡೆದಿತ್ತು.

2. ಲವ್ ಆನ್‌ ದಿನ ಸ್ಪೆಕ್ಟ್ರಮ್ ಯುಎಸ್ ಸೀಸನ್ 2- ಇಂಗ್ಲೀಷ್ ಸೀರಿಸ್

3. ಫುಲ್ ಸರ್ಕಿಲ್- ಇಂಗ್ಲೀಷ್ ಸಿನಿಮಾ

4. ದ ಬೆಕ್‌ತೆಡ್- ಕೊರಿಯನ್ ಸೀರಿಸ್

5. ಮಿ ಸೊಲೆದೆಡ್ ಟಿಯನ್ ಅಲಾಸ್- ಸ್ಪಾನಿಷ್ ಸಿನಿಮಾ

6. ಸಿಕ್ಸ್‌ಟಿ ಮಿನಿಟ್ಸ್- ಜರ್ಮನ್ ಸಿನಿಮಾ

7. ದಿ ಗ್ರೇಟೆಸ್ಟ್ ನೈಟ್ ಇನ್ ಪಾಪ್- ಇಂಗ್ಲೀಷ್ ಸಿನಿಮಾ

8. ದಿ ಚಿಚನ್- ಇಂಗ್ಲೀಷ್ ಸಿನಿಮಾ

9. ಕೆಪ್ಟಿವೆಟಿಂಗ್ ದಿ ಕಿಂಗ್- ಕೊರಿಯನ್ ಸೀರಿಸ್

ಜಿಯೋ ಸಿನಿಮಾ

1. ಲಾ & ಆರ್ಡರ್: ಸ್ಪೆಷಲ್ ವಿಕ್ಟಿಮ್ಸ್ ಯೂನಿಟ್ ಸೀಸನ್ 25- ಇಂಗ್ಲೀಷ್ ಸೀರಿಸ್

ಬುಕ್‌ ಮೈ ಶೋ

1. ಒಡವುಂ ಮುದಿಯಾದು ಒಲಿಯವುಂ ಮುದಿಯಾದು- ತಮಿಳು ಸಿನಿಮಾ

2. ಆಲ್ ಫನ್ ಅಂಡ್ ಗೇಮ್ಸ್- ಇಂಗ್ಲೀಷ್ ಸಿನಿಮಾ

More from Filmibeat

English summary
January 19th 2024 OTT streaming films and web series list;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X