ಹೊಂಬಾಳೆ ಫಿಲ್ಮ್ಸ್ 'ಧೂಮಮ್' ಸಿನಿಮಾ ಎಲ್ಲಿ? ಯಾವಾಗ ಸ್ಟ್ರೀಮಿಂಗ್?

ಹೊಂಬಾಳೆ ಸಂಸ್ಥೆ ನಿರ್ಮಾಣದ 'ಧೂಮಮ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚಿಗೆ ಸಿನಿಮಾ ಟ್ರೈಲರ್ ಕೂಡ ರಿಲೀಸ್ ಆಗಿ ಸದ್ದು ಮಾಡ್ತಿದೆ. ಧೂಮಪಾನ, ಪಾನ್, ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಸಂದೇಶವನ್ನು ಹೊತ್ತು ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಸದ್ಯ ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಭಾರೀ ಚರ್ಚೆ ಆಗ್ತಿದೆ.

'ಲೂಸಿಯಾ', 'ಯೂಟರ್ನ್' ನಂತರ ಪವನ್ ಕುಮಾರ್ ನಿರ್ದೇಶನದ ಸಿನಿಮಾ ಎನ್ನುವ ಕಾರಣಕ್ಕೆ 'ಧೂಮಮ್' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಹೊಂಬಾಳೆ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿರುವುದು ಮತ್ತಷ್ಟು ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಇದೆಲ್ಲದರ ಜೊತೆ ಮಾಲಿವುಡ್ ಪ್ರತಿಭಾನ್ವಿತ ಕಲಾವಿದರಾದ ಫಹಾದ್ ಫಾಸಿಲ್ ಹಾಗೂ ಅಪರ್ಣಾ ಬಾಲಮುರಳಿ ಮುಖ್ಯಭೂಮಿಕೆಯಲ್ಲಿರೋದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.

Fahadh Faasil starrer Dhoomam OTT release: Date, time, where to watch

ರೋಷನ್ ಮ್ಯಾಥ್ಯೂವ್, ವಿನೀತ್ ರಾಧಾಕೃಷ್ಣನ್, ಅನು ಮೋಹನ್ ಹಾಗೂ ಅಚ್ಯುತ್ ಕುಮಾರ್ 'ಧೂಮಮ್' ತಾರಾಗಣದಲ್ಲಿದ್ದಾರೆ. ಟ್ರೈಲರ್‌ನಲ್ಲಿ ಸಿನಿಮಾ ಕಥೆ ಬಗ್ಗೆ ಯಾವುದೇ ಸುಳಿವು ಸಿಗುವುದಿಲ್ಲ. ಆದರೆ ಕುತೂಹಲಭರಿತವಾದ ಟ್ರೈಲರ್ ಸಿನಿಮಾ ನೋಡಲೇಬೇಕು ಎನ್ನುವ ಕಾತರತೆ ಹುಟ್ಟುಹಾಕಿರುವುದು ಸುಳ್ಳಲ್ಲ. ಪೂರ್ಣಚಂದ್ರ ತೇಜಸ್ವಿ ಸಂಗೀತ ಈ ಚಿತ್ರಕ್ಕಿದೆ.

ಅಮೇಜಾನ್ ಪ್ರೈಂನಲ್ಲಿ 'ಧೂಮಮ್'

ಸದ್ಯ 'ಧೂಮಮ್' ಚಿತ್ರದ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಸಿನಿಮಾ ಇದೇ ತಿಂಗಳ 23ಕ್ಕೆ ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಆ ನಂತರ ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಯಾವಾಗ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ನಿರೀಕ್ಷೆಯಿದೆ. ಅಮೇಜಾನ್ ಪ್ರೈಂ ವಿಡಿಯೋಗೆ ಚಿತ್ರದ ಡಿಜಿಟಲ್ ರೈಟ್ಸ್ ಮಾರಾಟವಾಗಿರುವುದಾಗಿ ಹೇಳಲಾಗ್ತಿದೆ. ಕ್ರೇಜ್‌ಗೆ ತಕ್ಕಂತೆ ಭಾರೀ ಮೊತ್ತಕ್ಕೆ ರೈಟ್ಸ್ ಬಿಕರಿಯಾಗಿದೆ ಎನ್ನಲಾಗ್ತಿದೆ.

ಆಗಸ್ಟ್‌ನಲ್ಲಿ 'ಧೂಮಮ್' ಸ್ಟ್ರೀಮಿಂಗ್

ಯಾವುದೇ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾದ 47 ದಿನಗಳ ನಂತರ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದವಾಗುತ್ತದೆ. ಕೆಲವೊಮ್ಮೆ ಅದಕ್ಕಿಂತ ಬೇಗ ಸಿನಿಮಾಗಳು ಸ್ಮಾಲ್‌ಸ್ಟ್ರೀನ್‌ಗೆ ಬಂದ ಉದಾಹರಣೆಗಳಿವೆ. ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಕಾಣಿಸಿಕೊಳ್ತಿದೆ. 'ಧೂಮಮ್' ಸಿನಿಮಾ ಆಗಸ್ಟ್ ಕೊನೆ ವಾರದಲ್ಲಿ ಪ್ರೈಂ ವಿಡಿಯೋಗೆ ಬರುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಬಂದರೂ ಅಚ್ಚರಿಪಡಬೇಕಿಲ್ಲ.

Fahadh Faasil starrer Dhoomam OTT release: Date, time, where to watch

ಸಿನಿಮಾ ಕಥೆಯೇನು?

ಟ್ರೈಲರ್‌ನಲ್ಲಿ ಸಿನಿಮಾ ಕಥೆ, ನಾಯಕನ ಪಾತ್ರ ಅಷ್ಟಾಗಿ ರಿವೀಲ್ ಮಾಡಿಲ್ಲ. ಬಹುತೇಕ ಫ್ರೇಮ್‌ಗಳಲ್ಲಿ ಸಿಗರೇಟ್, ಹೊಗೆಯನ್ನು ಕಾಣಬಹುದು. ನಾಯಕ ದುಡ್ಡು ಮಾಡುವ ಆಸೆ. ಅದಕ್ಕಾಗಿ ನಾನಾ ಕಸರತ್ತು ನಡೆಸುತ್ತಿರ್ತಾನೆ. ಆ ಹಾದಿಯಲ್ಲಿ ಏನೇನೋ ಕೆಲಸಗಳನ್ನು ಮಾಡೋಕೆ ಹೋಗ್ತಿರ್ತಾನೆ. ಒಮ್ಮೆ ಟ್ರ್ಯಾಪ್ ಆಗ್ತಾನೆ ಅಲ್ಲಿಂದ ಮುಂದೆ ಅವನ ಲೈಫ್ ಬದಲಾಗುತ್ತದೆ. ಮುಂದೆ ಏನಾಗುತ್ತದೆ ಅನ್ನೋದನ್ನು ತೆರೆಮೇಲೆಯೇ ನೋಡಬೇಕು.

ಕನ್ನಡಕ್ಕೆ ಡಬ್ ಆಗಿ ರಿಲೀಸ್

ಮೊದಲಿಗೆ 'ಧೂಮಮ್' ಕನ್ನಡ ಸಿನಿಮಾ ಅಂತ್ಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಟ್ರೈಲರ್ ನೋಡಿದ ಮೇಲೆ ಇದು ಮಲಯಾಳಂನಲ್ಲಿ ನಿರ್ಮಾಣವಾಗಿರುವ ಸಿನಿಮಾ ಅನ್ನೋದು ಅರ್ಥವಾಗ್ತಿದೆ. ಇನ್ನುಳಿದಂತೆ ಕನ್ನಡ, ತೆಲುಗು, ಹಿಂದಿ, ತಮಿಳಿಗೆ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಪವನ್- ಪುನೀತ್ ಕಾಂಬಿನೇಷನ್‌ನಲ್ಲಿ ಬರಬೇಕಿದ್ದ 'ದ್ವಿತ್ವ' ಸಿನಿಮಾ ನಿಂತು ಹೋಗಿತ್ತು. ಆ ಸಿನಿಮಾ ಬದಲು ಪವನ್ 'ಧೂಮಮ್' ಸಿನಿಮಾ ತೆರೆಗೆ ತರುತ್ತಿದ್ದಾರೆ.

More from Filmibeat

English summary
Fahadh Faasil starrer Dhoomam OTT release: Date, time, where to watch. Lucia Pawan kumar directed suspense thriller film bankrolled by Hombale films Releasing on jun 23rd. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X