ತಿಂಗಳಿಗೂ ಮೊದ್ಲೆ ಓಟಿಟಿಗೆ 'ಧೂಮಮ್'? ಎಲ್ಲಿ, ಯಾವಾಗ ಸ್ಟ್ರೀಮಿಂಗ್?

ಫಹಾದ್ ಫಾಸಿಲ್ ನಟನೆಯ 'ಧೂಮಮ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡ್ತಿಲ್ಲ. ಸದ್ಯ ಬೆಂಗಳೂರಿನಲ್ಲಿ ಬೆರಳೆಣಿಕೆ ಶೋಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹೊಂಬಾಳೆ ಸಂಸ್ಥೆಯ ಯಾವುದೇ ಸಿನಿಮಾ ಸೋತಿರಲಿಲ್ಲ. ಆದರೆ ಮಲಯಾಳಂ ಸಿನಿಮಾ 'ಧೂಮಮ್' ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ. ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆದರೂ ಪ್ರಯೋಜನವಾಗಲಿಲ್ಲ.

ಲೂಸಿಯಾ ಪವನ್ ಕುಮಾರ್ ಬಹಳ ಹಿಂದೆ ಮಾಡಿಕೊಂಡಿದ್ದ ಕಥೆಯನ್ನು ಇದೀಗ ಪ್ರೇಕ್ಷಕರ ಮುಂದೆ ತಂದಿದ್ದರು. ಮಲಯಾಳಂ ನಟ ಫಹಾದ್ ಫಾಸಿಲ್‌, ಅಪರ್ಣ ಬಾಲಮುರಳಿ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿತ್ತು. ಆದರೆ ಹೆಚ್ಚು ಪ್ರಚಾರ ಇಲ್ಲದೇ 'ಧೂಮಮ್' ಸಿನಿಮಾ ಥಿಯೇಟರ್‌ಗಳಿಗೆ ಬಂದಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದರಿಂದ ಮೌತ್‌ ಟಾಕ್‌ ಮೂಲಕ ಪ್ರೇಕ್ಷಕರು ಬರ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಶುರುವಾಯಿತು.

 Fahadh Faasil Starrer Dhoomam to premiere on ott Soon

'ಧೂಮಮ್' ಕನ್ನಡ ಡಬ್ಬಿಂಗ್ ಗುಣಮಟ್ಟ ಚೆನ್ನಾಗಿತ್ತು. ಒಳ್ಳೆ ಕಥೆಯನ್ನೇ ಪವನ್ ಕುಮಾರ್ ಆರಿಸಿಕೊಂಡಿದ್ದರು. ಆದರೆ ಅದನ್ನು ಸ್ಟ್ರಿಪ್ಟ್ ಮಾಡಿ ಪರಿಣಾಮಕಾರಿಯಾಗಿ ನಿರೂಪಿಸುವಲ್ಲಿ ವಿಫಲವಾಗಿದ್ದರು. ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಸಿನಿಮಾದಲ್ಲಿ ಚರ್ಚಿಸಲಾಗಿದೆ. ಚಿತ್ರದಲ್ಲಿ ಒಂದೊಳ್ಳೆ ಸಂದೇಶ ಕೂಡ ಇತ್ತು. ಆದರೆ 'ಧೂಮಮ್' ಥಿಯೇಟರ್‌ಗಳಲ್ಲಿ ಸದ್ದು ಮಾಡಲಿಲ್ಲ.

 Fahadh Faasil Starrer Dhoomam to premiere on ott Soon

ಜುಲೈ 21ಕ್ಕೆ ಓಟಿಟಿಯಲ್ಲಿ 'ಧೂಮಮ್'

ಥಿಯೇಟರ್‌ಗಳಲ್ಲಿ ಅಷ್ಟಾಗಿ ಸದ್ದು ಮಾಡದ 'ಧೂಮಮ್' ಚಿತ್ರವನ್ನು ಈಗ ಓಟಿಟಿಗೆ ತರುವ ತಯಾರಿ ನಡೆದಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಜುಲೈ 21ಕ್ಕೆ ಸಿನಿಮಾ ಡಿಜಿಟಲ್ ಫ್ಲಾಟ್‌ಪಾರ್ಮ್‌ನಲ್ಲಿ ಸಿಗುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ. ಗುರುದೇವ್ ಹೊಯ್ಸಳ ಹಾಗೂ ರಾಘವೇಂದ್ರ 'ಸ್ಟೋರ್ಸ್‌' ಸಿನಿಮಾಗಳು ತಿಂಗಳಿಗೂ ಮೊದ್ಲೆ ಓಟಿಟಿಗೆ ಬಂದಿತ್ತು. ಹಾಗಾಗಿ 'ಧೂಮಮ್' ಇದಕ್ಕಿಂತ ಬೇಗ ಪ್ರೈಮ್‌ ವಿಡಿಯೋಗೆ ಬಂದರೆ ಅಚ್ಚರಿಪಡಬೇಕಿಲ್ಲ.

ಬೆಂಗಳೂರಿನಲ್ಲಿ 11 ಶೋ

ರಾಜ್ಯಾದ್ಯಂತ 'ಧೂಮಮ್' ಕನ್ನಡ ವರ್ಷನ್ 150ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಆದರೆ ಒಂದೇ ವಾರಕ್ಕೆ ಬಹುತೇಕ ಥಿಯೇಟರ್‌ಗಳಿಂದ ಸಿನಿಮಾ ತೆಗೆಯಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಕೇವಲ 11 ಶೋಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನವಾಗುತ್ತಿದೆ. ಮಲಯಾಳಂ 3 ಹಾಗೂ ಕನ್ನಡದ 8 ಶೋ ಮಾತ್ರ ಸಿಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಹಳ ಬೇಗ ಥಿಯೇಟರ್‌ಗಳಲ್ಲಿ ಆಟ ಮುಗಿಸಿದೆ.

ನೆಗೆಟಿವ್ ವಿಮರ್ಶೆಗೆ ಪವನ್ ಬೇಸರ

'ಧೂಮಮ್' ಚಿತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟಾಕ್ ಕ್ರಿಯೇಟ್ ಆಗಿತ್ತು. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಚೆನ್ನಾಗಿಲ್ಲ ಎಂದು ಬಹುತೇಕ ಸೋಶಿಯಲ್ ಮೀಡಿಯಾದಲ್ಲಿ ಬರೆಯಲು ಆರಂಭಿಸಿದರು. ಅಷ್ಟು ಬೇಗ ತಮ್ಮ ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಬಂದಿದ್ದಕ್ಕೆ ನಿರ್ದೇಶಕ ಪವನ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದರು. ಈ ರೀತಿ ನೆಗೆಟಿವ್ ವಿಮರ್ಶೆ ಮಾಡಬೇಡಿ. ಎಲ್ಲರೂ ಸಿನಿಮಾ ನೋಡಲು ಬಿಡಿ, ನಿಮ್ಮ ಅಭಿಪ್ರಾಯ ಬೇಕಿದ್ದರೆ ನನಗೆ ಮೆಸೇಜ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

ಬೇರೆ ಭಾಷೆಗಳಲ್ಲಿ ರಿಲೀಸ್ ಆಗಲ್ವಾ?

5 ಭಾಷೆಗಳಲ್ಲಿ 'ಧೂಮಮ್' ಸಿನಿಮಾ ನಿರ್ಮಾಣವಾಗಿತ್ತು. ಟ್ರೈಲರ್ ಸಹ ಬಿಡುಗಡೆಯಾಗಿತ್ತು. ಆದರೆ ಮೊದಲಿಗೆ ಮಲಯಾಳಂ ಹಾಗೂ ಕನ್ನಡದಲ್ಲಿ ಸಿನಿಮಾ ರಿಲೀಸ್‌ಗೆ ಚಿತ್ರತಂಡ ಪ್ಲ್ಯಾನ್ ಮಾಡಿತ್ತು. 2 ವಾರದ ನಂತರ ತೆಲುಗು, ತಮಿಳು, ಹಿಂದಿ ವರ್ಷನ್ ತೆರೆಗೆ ತರಲು ಚಿತ್ರತಂಡ ಮುಂದಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಬೇರೆ ಭಾಷೆಗಳಲ್ಲಿ ಸಿಲ್ವರ್‌ ಸ್ಕ್ರೀನ್‌ಗೆ ಬರುವ ಅನುಮಾನ ಶುರುವಾಗಿದೆ. ನೇರವಾಗಿ ಓಟಿಟಿಗೆ ಬರುವ ಸಾಧ್ಯತೆಯಿದೆ.

More from Filmibeat

English summary
Fahadh Faasil Starrer Dhoomam to premiere on ott Soon. Directed by Pawan Kumar Dhoomam is bankrolled by Hombale films. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X