ಫಿಲ್ಮ್ ಫೇರ್ ಓಟಿಟಿ ಅವಾರ್ಡ್ಸ್: ನಾಮಿನೇಟ್ ಆದ ಕನ್ನಡದ ಆಧ್ಯಾ

By ಕಾರವಾರ ಪ್ರತಿನಿಧಿ

ಫಿಲ್ಮ್ ಫೇರ್ ಓಟಿಟಿ ಅವಾರ್ಡ್ಸ್ ನಾಮಿನೇಟೆಡ್ ಸಿರೀಸ್ ಹಾಗೂ ನಟ- ನಟಿಯರ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿಯ ಅವಾರ್ಡ್ಸ್ ಗೆ ಕನ್ನಡದ ಕುವರಿ, 'ಕ್ರಷ್ಡ್' ಸಿರೀಸ್ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿದ್ದ ಆದ್ಯಾ ಆನಂದ್ ನಾಮಿನೇಟ್ ಆಗುವ ಮೂಲಕ ಈ ಅವಾರ್ಡ್‌ಗೆ ನಾಮಿನೇಟ್ ಆದ ಅತಿ ಕಿರಿಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾರೆ.

2021ರ ಆಗಸ್ಟ್ 1 ರಿಂದ 2022ರ ಜುಲೈ 31ರ ಒಳಗೆ ಬಿಡುಗಡೆಯಾದ ಹಿಂದಿ ವೆಬ್ ಒರಿಜಿನಲ್ಸ್ ಗಳನ್ನ ಫಿಲ್ಮ್ ಫೇರ್ ಓಟಿಟಿ ಅವಾರ್ಡ್ಸ್‌ಗೆ ನಾಮಿನೇಟ್ ಮಾಡಲಾಗುತ್ತದೆ. ಅದರಂತೆ ಈ ವರ್ಷದ ಜನವರಿಯಲ್ಲಿ 'ಅಮೆಜಾನ್ ಮಿನಿ ಟಿವಿ'ಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿದ್ದ ರೊಮ್ಯಾಂಟಿಕ್ ಮತ್ತು ಕಾಮಿಡಿ ಕಥಾ ಹಂದರದ 'ಕ್ರಷ್ಡ್' ಸಿರೀಸ್ ಈ ಬಾರಿಯ ಫಿಲ್ಮ್ ಫೇರ್ ಓಟಿಟಿ ಅವಾರ್ಡ್ಸ್‌ನ 'ಬೆಸ್ಟ್ ಸಿರೀಸ್' ವಿಭಾಗದಲ್ಲಿ ನಾಮಿನೇಟ್ ಆಗಿದ್ದು, ಜೊತೆಗೆ ಈ ಸಿರೀಸ್‌ನ ಲೀಡ್ ರೋಲ್‌ನಲ್ಲಿ ನಟಿಸಿದ್ದ ಆದ್ಯಾ ಆನಂದ್ ಕೂಡ 'ಬೆಸ್ಟ್ ಆಕ್ಟರ್ ಫೀಮೇಲ್' ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

ಮಥುರಾ ಪಾತ್ರದಲ್ಲಿ ಆಧ್ಯಾ

ಮಥುರಾ ಪಾತ್ರದಲ್ಲಿ ಆಧ್ಯಾ

'ಬಾಂಬೆ ಬೇಗಮ್' ವೆಬ್ ಸಿರೀಸ್ ಮೂಲಕ ಭಾರತೀಯ ಕಿರುತೆರೆ ಪ್ರವೇಶಿಸಿದ್ದ ಆದ್ಯಾ, 'ಕ್ರಷ್ಡ್' ಸಿರೀಸ್‌ನಲ್ಲಿ ಮುದ್ದು ಮುದ್ದಾಗಿ ಮಥುರ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈಕೆಯ ನಟನೆಗೆ ಯುವಕರು ಫಿದಾ ಆಗಿದ್ದರು. ಟಾಕ್ ಆಫ್ ದಿ ಟೌನ್ ಆಗಿದ್ದ 'ಕ್ರಷ್ಡ್'ನಲ್ಲಿನ ತಮ್ಮ ನಟನೆಯಿಂದಾಗಿ ಆದ್ಯಾ ಇಂಟರ್ನೆಟ್ ಸೆನ್ಸೇಶನ್ ಕೂಡ ಆಗಿದ್ದರು.

ರೊಮ್ಯಾಂಟಿಕ್ ಪ್ರೇಮ ಕಥನ 'ಕ್ರಷ್ಡ್'

ರೊಮ್ಯಾಂಟಿಕ್ ಪ್ರೇಮ ಕಥನ 'ಕ್ರಷ್ಡ್'

'ಕ್ರಶ್ಡ್', ಶಾಲಾ ದಿನಗಳಲ್ಲಿ ಅನುಭವಕ್ಕೆ ಬರುವ ರೊಮ್ಯಾಂಟಿಕ್ ಪ್ರೇಮ ಕಥನವಾಗಿದ್ದು, ಎಲ್ಲಾ ವಯಸ್ಸಿನವರಿಗೂ ಒಗ್ಗುವ ಸುಂದರ ಕಥೆಯನ್ನು ಹೊಂದಿದೆ. ಹೀನಾ ಡಿಸೋಜಾ ಮತ್ತು ಮಂದರ್ ಕುರುಂಡ್ಕರ್ ನಿರ್ದೇಶನದ ಈ ಸರಣಿಯಲ್ಲಿ ರುದ್ರಾಕ್ಷ್ ಜೈಸ್ವಾಲ್ ಮತ್ತು ಆದ್ಯಾ ಆನಂದ್ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಡಿಸೆಂಬರ್ 1ರಂದು 'ಕ್ರಷ್ಡ್'ನ ಸಿರೀಸ್- 2 ಕೂಡ ಬಿಡುಗಡೆಯಾಗಿದ್ದು, ಇದರ ನಡುವೆಯೇ ಮೊದಲ ಸಿರೀಸ್‌ನಲ್ಲಿ ಆದ್ಯಾ ಬೆಸ್ಟ್ ಆಕ್ಟರ್ ಅವಾರ್ಡ್ಸ್ ಗೆ ನಾಮಿನೇಟ್ ಆಗಿರುವುದು ಚಿತ್ರ ತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಮೂಲದ ಆಧ್ಯಾ

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಮೂಲದ ಆಧ್ಯಾ

ಇನ್ನು ಸಿಂಗಾಪುರದಲ್ಲಿ ನೆಲೆಸಿರುವ ಆಧ್ಯಾ, ಉತ್ತರ ಕನ್ನಡ ಅಂಕೋಲಾ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಮಗಳು. ಮಡಿಕೇರಿಯಲ್ಲಿ ಹುಟ್ಟಿದ್ದಾದರೂ ಸಿಂಗಾಪುರದಲ್ಲಿಯೇ ಬೆಳೆದವರು. ತಮ್ಮ 7ನೇ ವಯಸ್ಸಿನಲ್ಲೇ ಅಭಿನಯ, ಮಾಡೆಲಿಂಗ್, ಡ್ಯಾನ್ಸಿಂಗ್ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ತೋರಿದ ಈಕೆ, ಸಿಂಗಾಪುರದಲ್ಲಿ ರಂಗಭೂಮಿ ತರಬೇತಿ ಹಾಗೂ ಬಾಲಿವುಡ್​ನ ಅನುಪಮ್ ಖೇರ್ ಮತ್ತು ಅತುಲ್ ಮೊಂಗಿಯಾ ಅವರ ಇನ್​ಸ್ಟಿಟ್ಯೂಟ್​ನಲ್ಲೂ ತರಬೇತಿ ಪಡೆದಿದ್ದಾರೆ. ಪ್ರತಿಷ್ಠಿತ ಕೇನ್ ಇಂಟರ್​ ನ್ಯಾಷನಲ್​ ಫಿಲಂ ಫೆಸ್ಟಿವಲ್- 2017ರಲ್ಲಿ ಪ್ರದರ್ಶನ ಕಂಡಿದ್ದ 'ಎ ಯೆಲ್ಲೋ ಬರ್ಡ್' ಸಿನಿಮಾ, 'ಒನ್ ಅವರ್ ಟು ಡೇಲೈಟ್', 'ಸ್ಕೈಸಿಟಿ'ಯಂಥ ಕಿರುಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.

ಕನ್ನಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ

ಕನ್ನಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ

ಸೋನಿ ಟಿವಿಯ ಸೂಪರ್ ಡ್ಯಾನ್ಸ್ ಸಿಂಗಾಪುರ ಸ್ಪರ್ಧೆಯ ವಿಜೇತೆಯಾಗಿರುವ ಆಧ್ಯಾ, ಸಿಂಗಾಪುರದಲ್ಲಿ 'ವ್ಹೂಪೀಸ್ ವರ್ಲ್ಡ್' ಸೀಸನ್ 1, 2, 3, 4, 'ಲಯನ್ ಮಮ್ಸ್' 2, 3, 'ವರ್ಲ್ಡ್ ವಿಜ್ಜ್ ಸ್ಲೈಮ್ ಪಿಟ್', 'ಮೆನಂತು ಇಂಟರ್​ನ್ಯಾಷನಲ್' 2 ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕಿರುತೆರೆ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ಸದ್ಯ ಫಿಲ್ಮ್‍ಫೇರ್ ಜೊತೆಗೆ ಇನ್ನೂ ಎರಡು ಅವಾರ್ಡ್ಸ್ ಗೆ ನಾಮಿನೇಟ್ ಆಗಿರುವ ಆಧ್ಯಾ ಈ ಬಗ್ಗೆ ಖುಷಿ ಹಂಚಿಕೊಂಡಿದ್ದು, ಕನ್ನಡದಲ್ಲೂ ನಟನೆಗೆ ಅವಕಾಶಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾಳೆ.

More from Filmibeat

English summary
Filmfare OTT Awards: Karawar origin actress Adhya nominated for best actress. She acted in crushed web series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X