For Quick Alerts
  ALLOW NOTIFICATIONS  
  For Daily Alerts

  ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ಜನ ನೋಡಿದ ಕನ್ನಡ ಸಿನಿಮಾ ಇದು

  |

  ಈಗೇನಿದ್ದರೂ ಒಟಿಟಿಗಳ ಕಾಲ. ಸಿನಿಮಾ ನಿರ್ಮಿಸು ಒಟಿಟಿಗೆ ಕೊಟ್ಟುಬಿಡು, ನಿರ್ಮಾಪಕನಿಗೂ ನೋ ಟೆನ್ಶನ್, ನಿರ್ದೇಶಕನಿಗೂ ನೋ ಟೆನ್ಶನ್.

  ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಬಂದ್ ಆದಮೇಲಂತು ದೊಡ್ಡ-ದೊಡ್ಡ ಸ್ಟಾರ್ ನಟರುಗಳೇ ತಮ್ಮ ಸಿನಿಮಾವನ್ನು ಒಟಿಟಿಗೆ ಮಾರಿ ನೆಮ್ಮದಿಯಾಗುತ್ತಿದ್ದಾರೆ.

  ಕೊರೊನಾ ಲಾಕ್‌ಡೌನ್ ತರುವಾಯ ಕೆಲವು ಕನ್ನಡ ಸಿನಿಮಾಗಳು ಒಟಿಟಿಗೆ ನೇರವಾಗಿ ಹಾಗೂ ಇನ್ನು ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ಒಟಿಟಿಗೆ ನೀಡಲ್ಪಟ್ಟಿವೆ. ಒಟ್ಟಾರೆಯಾಗಿ ಹಲವು ಕನ್ನಡ ಸಿನಿಮಾಗಳು ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿವೆ. ಇದರಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಣೆಗೆ ಒಳಪಟ್ಟ ಕನ್ನಡ ಸಿನಿಮಾ ಯಾವುದು ಗೊತ್ತೆ?

  ಫ್ರೆಂಚ್ ಬಿರಿಯಾನಿ ಸಿನಿಮಾವನ್ನು ಹೆಚ್ಚು ಮಂದಿ ನೋಡಿದ್ದಾರೆ

  ಫ್ರೆಂಚ್ ಬಿರಿಯಾನಿ ಸಿನಿಮಾವನ್ನು ಹೆಚ್ಚು ಮಂದಿ ನೋಡಿದ್ದಾರೆ

  ಪುನೀತ್ ರಾಜ್‌ಕುಮಾರ್ ನಿರ್ಮಿಸಿರುವ, ಪಿಆರ್‌ಕೆ ಪ್ರೊಡಕ್ಷನ್‌ನ 'ಫ್ರೆಂಚ್ ಬಿರಿಯಾನಿ' ಅತಿ ಹೆಚ್ಚು ಮಂದಿಯಿಂದ ನೋಡಲ್ಪಟ್ಟ ಕನ್ನಡ ಸಿನಿಮಾ ಅಂತೆ. ಫ್ರೆಂಚ್ ಬಿರಿಯಾನಿಯಷ್ಟು ಇನ್ನಾವ ಕನ್ನಡ ಸಿನಿಮಾವನ್ನೂ ಸಹ ಅಮೆಜಾನ್‌ನಲ್ಲಿ ನೋಡಿಲ್ಲವಂತೆ.

  'ಲಾ' ಸಿನಿಮಾಗಿಂತಲೂ ಹೆಚ್ಚು ಮಂದಿ ನೋಡಿದ್ದಾರೆ'

  'ಲಾ' ಸಿನಿಮಾಗಿಂತಲೂ ಹೆಚ್ಚು ಮಂದಿ ನೋಡಿದ್ದಾರೆ'

  ಹೀಗೆಂದು ಚಿತ್ರತಂಡ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದೆ. ಪಿಆರ್‌ಕೆ ಪ್ರೊಡಕ್ಷನ್‌ನ 'ಲಾ' ಸಿನಿಮಾಗಿಂತಲೂ ಹೆಚ್ಚು ಮಂದಿ 'ಫ್ರೆಂಚ್ ಬಿರಿಯಾನಿ' ಸಿನಿಮಾವನ್ನು ನೋಡಿದ್ದಾರಂತೆ. ಕನ್ನಡದ 'ಲವ್ ಮಾಕ್ಟೆಲ್, ದಿಯಾಗಿಂತಲೂ ಹೆಚ್ಚಿನ ಜನ ಫ್ರೆಂಚ್ ಬಿರಿಯಾನಿ ನೋಡಿದ್ದಾರೆ.

  ಲವ್ ಮಾಕ್ಟೆಲ್, ದಿಯಾ ಸಿನಿಮಾಗಳು ಹಿಟ್ ಆಗಿದ್ದವು

  ಲವ್ ಮಾಕ್ಟೆಲ್, ದಿಯಾ ಸಿನಿಮಾಗಳು ಹಿಟ್ ಆಗಿದ್ದವು

  ಕೊರೊನಾ ಲಾಕ್‌ಡೌನ್ ನಂತರ ಅಮೆಜಾನ್ ಪ್ರೈಂ ನಲ್ಲಿ ಮೊದಲಿಗೆ ಹಿಟ್ ಆದ ಕನ್ನಡ ಸಿನಿಮಾಗಳೆಂದರೆ ಲವ್ ಮಾಕ್ಟೆಲ್ ಮತ್ತು ದಿಯಾ ಸಿನಿಮಾ. ಈ ಎರಡೂ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಮಾಡಿದ್ದ ಸದ್ದಿಗಿಂತಲೂ ಹೆಚ್ಚು ಸದ್ದು ಒಟಿಟಿಯಲ್ಲಿ ಮಾಡಿದವು.

  ಪಿಆರ್‌ಕೆ ಮುಂದಿನ ಸಿನಿಮಾ ಓ2

  ಪಿಆರ್‌ಕೆ ಮುಂದಿನ ಸಿನಿಮಾ ಓ2

  ಆದರೆ ದಾನಿಶ್ ಸೇಠ್, ರಂಗಾಯಣ ರಘು ನಟನೆಯ ಫ್ರೆಂಚ್ ಬಿರಿಯಾನಿ ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿದು, ಒಟಿಟಿಯಲ್ಲಿ ನಂಬರ್ 1 ಕನ್ನಡ ಸಿನಿಮಾ ಆಗಿದೆ. ಪಿಆರ್‌ಕೆ ಪ್ರೊಡಕ್ಷನ್ 'ಓ2' ಎಂಬ ಹೊಸ ಥ್ರಿಲ್ಲರ್ ಸಿನಿಮಾ ನಿರ್ಮಿಸುತ್ತಿದ್ದು, ಅದನ್ನೂ ಸಹ ಒಟಿಟಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

  English summary
  PRK productions French Biriyani movie is the most watched Kannada movie in OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X