twitter
    For Quick Alerts
    ALLOW NOTIFICATIONS  
    For Daily Alerts

    ಫ್ರೆಂಚ್ ಬಿರಿಯಾನಿ: ಗೊಂದಲಗಳ ಕೊಲಾಜು, ಅಲ್ಲಲ್ಲಿ ನಾನ್‌ವೆಜ್ಜು

    |

    ಯಾವುದೋ ವ್ಯಕ್ತಿಯನ್ನು ಇನ್ನಾವುದೋ ವ್ಯಕ್ತಿಯೆಂದುಕೊಳ್ಳುವುದು. ಗೊಂದಲದಿಂದಾಗಿ ಅಮಾಯಕನೊಬ್ಬ ದೊಡ್ಡ ಇಕ್ಕಟ್ಟಿಗೆ ಸಿಲುಕುವುದು ಇಂಥಹಾ ಕತೆ ಸಿನಿಮಾಗಳಿಗೆ ಹೊಸದಲ್ಲ. 'ಫ್ರೆಂಚ್ ಬಿರಿಯಾನಿ' ಇಂಥಹುದೇ ಕತೆಯಾದರೂ ಈ ಸಿನಿಮಾ ಎಲ್ಲೋ ನೋಡಿದ ಭಾವ ಮೂಡಿಸುವುದಿಲ್ಲ.

    Rating:
    3.0/5

    ಸಿನಿಮಾ ಪ್ರಾರಂಭವಾದ ಕೂಡಲೇ ಕೆಲ ಹೊತ್ತಿನಲ್ಲೇ 'ಸುಲೇಮಾನ್‌ಗೆ ಹೇಳು ಸೋಲೊಮನ್ ಸಾಮಾನ್ ತರ್ತಿದ್ದಾನೆ ಅಂತ' ಸಂಭಾಷಣೆ ಕೇಳುತ್ತದೆ ಅಲ್ಲಿಂದಲೇ ಪ್ರಾರಂಭ ಅದಲು-ಬದಲು ವ್ಯವಹಾರ ಹಾಗೂ ಅದು ಹುಟ್ಟಿಸುವ ಹಾಸ್ಯ.

    ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರಾ ಪುನೀತ್ ರಾಜ್ ಕುಮಾರ್-ಯಶ್?ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರಾ ಪುನೀತ್ ರಾಜ್ ಕುಮಾರ್-ಯಶ್?

    ಸಿನಿಮಾ ಪೂರ್ತಿ ಬೆಂಗಳೂರಿನಲ್ಲಿಯೇ ನಡೆಯುತ್ತದೆ, ಆದರೆ ಇಲ್ಲಿ ಐಟಿಯವರ ಐಶಾರಾಮಿ ಕಚೇರಿಗಳು, ವಿಧಾನಸೌಧ, ಟಾಪ್‌ ಆಂಗಲ್‌ನಲ್ಲಿ ಮೆಟ್ರೋ ಲೇನ್‌ಗಳು ಕಾಣುವುದಿಲ್ಲ. ಬದಲಿಗೆ ಬೆಂಗಳೂರಿನ ಭಾಗವೇ ಆಗಿರುವ ಸ್ಲಂ, ಟ್ರಾಫಿಕ್, ಚಿತ್ರ ವಿಚಿತ್ರ ಜನಗಳು ಕಾಣಿಸುತ್ತಾರೆ. ಅದರಲ್ಲಿಯೂ ಶಿವಾಜಿನಗರದ ಸುತ್ತಲೇ ಇಡೀಯ ಸಿನಿಮಾ ನಡೆಯುತ್ತದೆ.

    ಹಾಸ್ಯಕ್ಕಾಗಿ ದಡ್ಡರನ್ನಾಗಿಸಿದ್ದಾರೆ ನಿರ್ದೇಶಕ

    ಹಾಸ್ಯಕ್ಕಾಗಿ ದಡ್ಡರನ್ನಾಗಿಸಿದ್ದಾರೆ ನಿರ್ದೇಶಕ

    ಆಟೋ ಡ್ರೈವರ್, ಫ್ರಾನ್ಸ್ ವ್ಯಕ್ತಿ, ಮರಿ ಡಾನ್, ಪೊಲೀಸ್ ಇನ್‌ಪೆಕ್ಟರ್, ನವವಿವಾಹಿತ ಜೋಡಿ, ಒಬ್ಬ ಪತ್ರಕರ್ತೆ ಇವರ ಮಧ್ಯೆಯೇ ಕತೆ ನಡೆಯುತ್ತದೆ. ಹಾಸ್ಯಕ್ಕಾಗಿ ಕೆಲವು ಪಾತ್ರಗಳನ್ನು ಉದ್ದೇಶಪೂರ್ವಕವಾಗಿ ದಡ್ಡರನ್ನಾಗಿ ಮಾಡಿದ್ದಾರೆ ನಿರ್ದೇಶಕ ಪನ್ನಗಭರಣ.

    ಡಬಲ್ ಮೀನಿಂಗ್ ಡೈಲಾಗ್ ತುರುಕಿಲ್ಲ

    ಡಬಲ್ ಮೀನಿಂಗ್ ಡೈಲಾಗ್ ತುರುಕಿಲ್ಲ

    ಸಿನಿಮಾದಲ್ಲಿ ಎಲ್ಲಾ ದೃಶ್ಯಗಳು ನಗು ಉಕ್ಕಿಸುತ್ತವೆ ಎಂದೇನು ಇಲ್ಲ. ನಗೆ ಉಕ್ಕಿಸಲು ಪಾತ್ರಗಳು ಕೆಲವೆಡೆ ಹರಸಾಹಸ ಪಡುತ್ತವೆ. ಅತಿಯಾದ ಆಂಗಿಕ ಅಭಿನಯ ಮಾಡುತ್ತವೆ. ಸಂಭಾಷಣೆ ಸಹ ಕೆಲವೆಡೆ ನಗುಬರಿಸಲು ಸೋಲುತ್ತದೆ. ಸಮಾಧಾನಕರ ಅಂಶವೆಂದರೆ ಸಿನಿಮಾದಲ್ಲಿ ಹಾಸ್ಯದ ನೆಪದಲ್ಲಿ ಡಬಲ್ ಮೀನಿಂಗ್ ಡೈಲಾಗ್‌ಳನ್ನು ತುರುಕಿಲ್ಲ.

    ಪಾಪ ದಾನಿಶ್ ಸೇಠ್‌ಗೆ ಹೀಗಾ ಬಯ್ಯೋದು ಪುನೀತ್ ರಾಜ್‌ಕುಮಾರ್ಪಾಪ ದಾನಿಶ್ ಸೇಠ್‌ಗೆ ಹೀಗಾ ಬಯ್ಯೋದು ಪುನೀತ್ ರಾಜ್‌ಕುಮಾರ್

    ಗಮನ ಸೆಳೆಯುವ ಕೆಲವು ನಟರು

    ಗಮನ ಸೆಳೆಯುವ ಕೆಲವು ನಟರು

    ಮುಖ್ಯ ಪಾತ್ರ ದಾನಿಶ್ ಸೇಠ್ ತಮ್ಮ ಮೊದಲ ಸಿನಿಮಾಕ್ಕಿಂತಲೂ ಅಭಿನಯದಲ್ಲಿ ಹೆಚ್ಚು ಸುಧಾರಿಸಿದ್ದಾರೆ. ಸಲ್ ಯೂಸಫ್ ಅಭಿನಯ ಸಮಾಧಾನಕರ, ರಂಗಾಯಣ ರಘು ತಮ್ಮ ಮ್ಯಾನರಿಸಂ ನಟನೆ ಮುಂದುವರೆಸಿದ್ದಾರೆ. ಸಂಪತ್‌ ಕುಮಾರ್, ಸಿಂಧು ಶ್ರೀನಿವಾಸಮೂರ್ತಿ, ಡಾನ್ ಮಣಿ ಪಾತ್ರದಾರಿ ಮಹಾಂತೇಶ್ ಹಿರೇಮಠ್ ಗಮನ ಸೆಳೆಯುತ್ತಾರೆ.

    ಅತಿಯಾದ ನಿರೀಕ್ಷೆಗಳಿಲ್ಲದೆ ನೋಡಿ ನಗಬಹುದಾದ ಸಿನಿಮಾ

    ಅತಿಯಾದ ನಿರೀಕ್ಷೆಗಳಿಲ್ಲದೆ ನೋಡಿ ನಗಬಹುದಾದ ಸಿನಿಮಾ

    ಒಂದು ದೃಶ್ಯಕ್ಕಾಗಿ ಬರುವ ಚಿಕ್ಕಣ್ಣ ನಗು ಉಕ್ಕಿಸಲು ವಿಫಲರಾಗುತ್ತಾರೆ. ಚಿಕ್ಕಣ್ಣ ಕಾಣಿಸಿಕೊಂಡಿದ್ದು ಏಕೆಂದು ಅರ್ಥವೇ ಆಗುವುದಿಲ್ಲ. ಪನ್ನಗಭರಣ ಸಹ ಹಾಡೊಂದರಲ್ಲಿ ಕಾಣಿಸಿಕೊಂಡು ಚೆನ್ನಾಗಿಯೇ ಡಾನ್ಸ್ ಮಾಡಿದ್ದಾರೆ. ಅತಿಯಾದ ನಿರೀಕ್ಷೆಯಿಟ್ಟುಕೊಳ್ಳದೆ ಒಮ್ಮೆ ನೋಡಿ ನಕ್ಕು ಹಗುರಾಗಲು ಅಡ್ಡಿಯಿಲ್ಲದ ಸಿನಿಮಾ 'ಫ್ರೆಂಚ್ ಬಿರಿಯಾನಿ'.

    ಪುನೀತ್ ರಾಜ್‌ಕುಮಾರ್ ಹಾಡಿದ ಹೊಸ ಹಾಡು ಕೇಳಲು ಮಜವೋ ಮಜಪುನೀತ್ ರಾಜ್‌ಕುಮಾರ್ ಹಾಡಿದ ಹೊಸ ಹಾಡು ಕೇಳಲು ಮಜವೋ ಮಜ

    English summary
    Danish Sait's French Biriyani kannada movie review. PRK productions.
    Monday, July 27, 2020, 14:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X