ಟ್ರೇಲರ್ ಬಿಡುಗಡೆ: ರುಚಿಯಾದ 'ಫ್ರೆಂಚ್ ಬಿರಿಯಾನಿ' ಸವಿಯಲು ರೆಡಿಯಾಗಿ!
ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆಯ ಸಿನಿಮಾ 'ಫ್ರೆಂಚ್ ಬಿರಿಯಾನಿ' ಯ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಕುತೂಹಲ, ಹಾಸ್ಯ, ಸೆಂಟಿಮೆಂಟ್ ಎಲ್ಲವನ್ನೂ ಹದವಾಗಿ ಒಳಗೊಂಡ ಸಿನಿಮಾ ಇದೆಂಬುದನ್ನು ಟ್ರೇಲರ್ ಖಾತ್ರಿಪಡಿಸುತ್ತಿದೆ.
Recommended Video
ದಾನಿಶ್ ಸೇಠ್, ರಂಗಾಯಣ ರಘು, ಸಲ್ ಯೂಸುಫ್, ದಿಶಾ ಮದನ್, ನಾಗಭೂಷಣ್, ಸಂಪತ್ ಇನ್ನೂ ಹಲವರು ನಟಿಸಿರುವ ಈ ಸಿನಿಮಾ ಫ್ರೆಂಚ್ ಪ್ರಜೆ ಹಾಗೂ ಆಟೋ ಡ್ರೈವರ್ ಒಬ್ಬನ ನಡುವೆ ನಡೆಯುವ ಕತೆಯಾಗಿದೆ.
ಸಿನಿಮಾವೊಂದು ಹಾಸ್ಯಮಯ ಪಯಣ ಆಗಿರಲಿದೆ ಎಂಬುದು ಟ್ರೇಲರ್‌ನಲ್ಲಿ ಗೊತ್ತಾಗುತ್ತಿದೆ. ಮುಸ್ಲಿಂ ಆಟೋ ಡ್ರೈವರ್ ಆಗಿ ದಾನಿಶ್ ಸೇಠ್ ಕಾಣಿಸಿಕೊಂಡಿದ್ದಾರೆ. ಅವರು ತಮಾಷೆ ಕರೆ (ಫ್ರಾಂಕ್ ಕಾಲ್ಸ್) ಮಾಡುವಾಗ ಅವರೇ ಸೃಷ್ಟಿಸಿದ್ದ ಅಜ್ಗರ್ ಪಾತ್ರವನ್ನು ಸಿನಿಮಾದಲ್ಲಿ ಅವರು ನಿರ್ವಹಿಸುತ್ತಿದ್ದಾರೆ.

ನಟನೆಯಲ್ಲಿ ಸುಧಾರಿಸಿರುವ ದಾನಿಶ್ ಸೇಠ್
'ಹಂಬಲ್ ಪೊಲಿಟೀಶಿಯನ್ ನಾಗರಾಜ್' ಸಿನಿಮಾದಲ್ಲಿನ ದಾನಿಶ್ ಸೇಠ್ ನಟನೆಗೂ ಫ್ರೆಂಚ್ ಬಿರಿಯಾನಿ ಸಿನಿಮಾದ ನಟನೆಗೂ ಸಾಕಷ್ಟು ಸುಧಾರಿಸಿರುವುದು ಹೊಂದಿರುವುದು ಟ್ರೇಲರ್‌ನಲ್ಲಿಯೇ ಗೊತ್ತಾಗುತ್ತಿದೆ.

ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಂಗಾಯಣ ರಘು
ರಂಗಾಯಣ ರಘು ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಡ್ರಗ್ ಮಾಫಿಯಾದ ಹಿಂದೆ ಬಿದ್ದಿದ್ದಾರೆ. ಸಿನಿಮಾದ ಕತೆ ಬೆಂಗಳೂರು ಕೇಂದ್ರಿತವಾಗಿದ್ದು, ಅದರಲ್ಲಿಯೂ ಶಿವಾಜಿನಗರ ಸುತ್ತಮುತ್ತಣ ಚಿತ್ರಣ ಸಿನಿಮಾದಲ್ಲಿದೆ.

ಕುತೂಹಲಕಾರಿ ಕತೆ ಹೊಂದಿರುವ ಸಿನಿಮಾ
ಫ್ರಾನ್ಸ್ ನಿಂದ ಆ ವ್ಯಕ್ತಿ ಏಕೆ ಬರುತ್ತಾನೆ? ದಾನಿಶ್ ಸೇಠ್ ಹೇಗೆ ಮಾಫಿಯಾದ ಒಳಗೆ ಸಿಕ್ಕಿಕೊಳ್ಳುತ್ತಾನೆ? ಫ್ರೆಂಚ್ ವ್ಯಕ್ತಿಗೂ ಶಿವಾಜಿನಗರಕ್ಕೂ ಏನು ಸಂಬಂಧ? ಹೀಗೆ ಹಲವು ಕುತೂಹಲಭರಿತ ಅಂಶಗಳು ಸಿನಿಮಾದಲ್ಲಿ ಇದೆ. ಈ ಕುತೂಹಲ ಭರಿತ ಕತೆಗೆ ಹಾಸ್ಯದ ಹೊದಿಕೆ ಹೊದಿಸಲಾಗಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಪಕಿ
ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಿಂದ ಹೊರಬರುತ್ತಿರುವ ಈ ಸಿನಿಮಾದ ನಿರ್ಮಾಪಕಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ ಎ ತಲ್ವಾರ್. ನಿರ್ದೇಶನ ನಾಘಾಭರಣ ಪುತ್ರ ಪನ್ನಗಾಭರಣ. ಸಿನಿಮಾವು ಅಮೆಜಾನ್ ಪ್ರೈಂ ನಲ್ಲಿ ಜುಲೈ 24 ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











