OTT Releses This Week: ಶುಕ್ರವಾರ(ಡಿಸೆಂಬರ್ 12) ಒಂದೇ 15ಕ್ಕೂ ಹೆಚ್ಚು ಚಿತ್ರಗಳು ಓಟಿಟಿಗೆ ಎಂಟ್ರಿ

ಡಿಸೆಂಬರ್ ತಿಂಗಳ ಎರಡು ವಾರ ಕಳೆಯುತ್ತಾ ಬಂತು. ಚಿತ್ರಮಂದಿರಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ಕಳೆದ ವಾರ ತೆರೆಗೆ ಬಂದ ಬಾಲಿವುಡ್ 'ಧುರಂಧರ್' ಸಿನಿಮಾ ಬ್ಲಾಕ್‌ಬಸ್ಟರ್ ರೆಸ್ಪಾನ್ಸ್ ಪಡೆದುಕೊಂಡಿದೆ. ಕನ್ನಡದ 'ಡೆವಿಲ್' ಹಾಗೂ ತೆಲುಗಿನ 'ಅಖಂಡ- 2' ಚಿತ್ರಗಳು ಈ ವಾರ ಪ್ರೇಕ್ಷಕರ ಮುಂದೆ ಬಂದಿವೆ.

ಹಾಲಿವುಡ್‌ನ 'ಅವತಾರ್- 3', ಕನ್ನಡದ 'ಮಾರ್ಕ್' ಹಾಗೂ '45', ಮಲಯಾಳಂನ 'ವೃಷಭ' ಚಿತ್ರಗಳು ಇದೇ ತಿಂಗಳು ತೆರೆಗೆ ಬರ್ತಿವೆ. ಇನ್ನುಳಿದಂತೆ ಒಂದಷ್ಟು ಸಣ್ಣಪುಟ್ಟ ಚಿತ್ರಗಳು ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ. ಇತ್ತ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ. ಈಗಾಗಲೇ ಒಂದಷ್ಟು ಸಿನಿಮಾಗಳು ವೀಕ್ಷಕರನ್ನು ರಂಜಿಸುತ್ತಿವೆ.

Friday December 12 marked the digital release of over 15 movies on OTT

ಚಿತ್ರಮಂದಿರಗಳಲ್ಲಿ ಸೋಲುಂಡ ಸಿನಿಮಾಗಳು ಓಟಿಟಿಗೆ ಬಂದು ವೀಕ್ಷಕರ ಮನಗೆದ್ದ ಉದಾಹರಣೆಗಳಿವೆ. ಇಂತಹ ಚಿತ್ರವನ್ನು ಬೆಳ್ಳಿ ತೆರೆಯಲ್ಲಿ ಮಿಸ್ ಮಾಡಿಕೊಂಡೆ ಎಂದು ಪ್ರೇಕ್ಷಕರು ಬೇಸರಗೊಂಡಿರುವುದನ್ನು ನೋಡಿದ್ದೇವೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಈ ಶುಕ್ರವಾರ ನೆಟ್‌ಫ್ಲಿಕ್ಸ್, ಪ್ರೈಂ ವೀಡಿಯೋ, ಜಿಯೋ ಹಾಟ್‌ಸ್ಟರ್, ಜೀ-5, ಅಹಾ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸಲಿವೆ.

1. ಬ್ರ್ಯಾಟ್

ಕನ್ನಡದ 'ಬ್ರ್ಯಾಟ್' ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. 30 ದಿನಕ್ಕೆ ಸಿನಿಮಾ ಓಟಿಟಿಗೆ ಬಂದಿತ್ತು. ತೆಲುಗು, ತಮಿಳಿನಲ್ಲಿ ಕೂಡ ಚಿತ್ರವನ್ನು ರಿಲೀಸ್ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಆದರೆ ಓಟಿಟಿಯಲ್ಲಿ ಈಗ ತೆಲುಗು, ತಮಿಳು ವರ್ಷನ್ ಸ್ಟ್ರೀಮಿಂಗ್ ಆರಂಭಿಸಿದೆ. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಕೆಲವೇ ಗಂಟೆಗಳ ಮುನ್ನ ರಿಲೀಸ್ ಆಗಿದೆ.

Friday December 12 marked the digital release of over 15 movies on OTT

2. ಕಾಂತ

ತಿಂಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗಿನ 'ಕಾಂತ' ಸಿನಿಮಾ ಡಿಸೆಂಬರ್ 12ಕ್ಕೆ ಓಟಿಟಿಗೆ ಬರ್ತಿದೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ ಈ ಪ್ರೀರಿಯಡ್ ಮಿಸ್ಟರಿ ಕ್ರೈಂ ಥ್ರಿಲ್ಲರ್ ಸಿನಿಮಾ ನಿರಾಸೆ ಮೂಡಿಸಿತ್ತು. ದುಲ್ಕರ್ ಸಲ್ಮಾನ್ ಹಾಗೂ ರಾಣ ದಗ್ಗುಬಾಟಿ ನಟನೆಯ ಸಿನಿಮಾ ವಿಭಿನ್ನ ಪ್ರಯತ್ನ ಎನಿಸಿಕೊಂಡಿತ್ತು. ಸಿನಿಮಾದೊಳಗಿನ ಸಿನಿಮಾ ನಿರ್ಮಾಣದ ಕಥೆ ಚಿತ್ರದಲ್ಲಿದೆ. ಫಿಲ್ಮ್ ಮೇಕರ್ಸ್, ಫಿಲ್ಮ್ಸ್ ಸ್ಟಾರ್ಸ್ ನೋವು ನಲಿವಿನ ಕಥೆಯನ್ನು ಕಟ್ಟಿಕೊಡಲಾಗಿದೆ. ಕನ್ನಡಕ್ಕೂ ಡಬ್ ಆಗಿ ನೆಟ್‌ಫ್ಲಿಕ್ಸ್‌ಗೆ ಬರ್ತಿದೆ.

3. ಆರೋಮಲೆ

ತಮಿಳು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಆರೋಮಲೆ' ಡಿಸೆಂಬರ್ 12ರಂದೇ ಓಟಿಟಿಗೆ ಬರುತ್ತದೆ ಎನ್ನಲಾಗ್ತಿದೆ. ಸಾರಂಗ್ ಥೈಗು ನಿರ್ದೇಶನದ ಚಿತ್ರದಲ್ಲಿ ಕಿಶೇನ್ ದಾಸ್, ಸಿವಿತ್‌ಮಿಕಾ ರಾಜಶೇಖರ್ ಸೇರಿ ದೊಡ್ಡ ತಾರಾಗಣವಿದೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇನ್ನು ಯಾವೆಲ್ಲಾ ಸಿನಿಮಾ, ವೆಬ್‌ ಸೀರಿಸ್ ರಿಲೀಸ್ ಆಗುತ್ತದೆ ಎನ್ನುವ ಲಿಸ್ಟ್ ಇಲ್ಲಿದೆ.

ಅಮೇಜಾನ್ ಪ್ರೈಂ

1. ಟೆಲ್‌ ಮಿ ಸಾಫ್ಟಿ(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 12

ಹಾಟ್‌ಸ್ಟರ್

1. ಟೇಲರ್ ಸ್ವಿಫ್ಟ್‌- ದಿ ಎರಾಸ್ ಟೂರ್(ಡಾಕ್ಯುಮೆಂಟರಿ) ಡಿಸೆಂಬರ್ 12

2. ದಿ ಗ್ರೇಟ್ ಷಂಷುದ್ದೀನ್ ಫ್ಯಾಮಿಲಿ(ವೆಬ್ ಸಿರಿಸ್) ಡಿಸೆಂಬರ್ 12

ಅಹಾ ಓಟಿಟಿ

1. 3 ರೋಸಸ್- ಸೀಸನ್ -2(ತೆಲುಗು ವೆಬ್ ಸೀರಿಸ್) ಡಿಸೆಂಬರ್ 12

ಸನ್ ನೆಕ್ಸ್ಟ್

1. ಅಂಧಕಾರ(ಮಲಯಾಳಂ ಸಿನಿಮಾ) ಡಿಸೆಂಬರ್ 12

ನೆಟ್‌ಫ್ಲಿಕ್ಸ್

1. ಗುಡ್‌ಬೈ ಜೂನ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 12

2. ವೇಕ್ ಅಪ್ ಡೆಡ್‌ ಮ್ಯಾನ್- ಎ ನೈಸ್ ಅವುಟ್ ಮಿಸ್ಟರಿ (ಇಂಗ್ಲೀಷ್ ಸಿನಿಮಾ) ಡಿಸೆಂಬರ್ 12

3. ಸಿಂಗಲ್ ಪಾಪ(ಹಿಂದಿ ಸೀರಿಸ್) ಡಿಸೆಂಬರ್ 12

ಜೀ-5

1. ಸಾಲಿ ಮೊಹಬ್ಬತ್(ಹಿಂದಿ ಸಿನಿಮಾ) ಡಿಸೆಂಬರ್ 12

More from Filmibeat

Read more about: kannada tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X