ಶುಕ್ರವಾರ(ಏಪ್ರಿಲ್ 25) ಒಂದೇ ದಿನ ಓಟಿಟಿಗೆ ಬಂದಿವೆ 20 ಸಿನಿಮಾಗಳು
ಪ್ರತಿ ಶುಕ್ರವಾರ ಚಿತ್ರಮಂದಿರಗಳಲ್ಲಿ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತವೆ. ಅದೇ ರೀತಿ ಓಟಿಟಿಯಲ್ಲಿ ಕೂಡ ಶುಕ್ರವಾರವೇ ಹೆಚ್ಚು ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸುತ್ತವೆ. ಪ್ರತಿ ವಾರದಂತೆ ಈ ಶುಕ್ರವಾರ ಕೂಡ ಓಟಿಟಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಸಿಗುತ್ತಿದೆ.
ಸದ್ಯ ಐಪಿಎಲ್ ಫೀವರ್ ಜೋರಾಗಿದೆ. ಹಾಗಾಗಿ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಫಿಲ್ಮ್ ಮೇಕರ್ಸ್ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಧೈರ್ಯ ಮಾಡಿ ಬಿಡುಗಡೆ ಮಾಡಿದರೂ ಆದಷ್ಟು ಬೇಗ ಓಟಿಟಿಗೆ ರೈಟ್ಸ್ ಮಾರಾಟ ಮಾಡುತ್ತಿದ್ದಾರೆ. ಐಪಿಎಲ್ ಹಿನ್ನೆಲೆ ಫಸ್ಟ್ ಶೋ ಹಾಗೂ ಸೆಕೆಂಡ್ ಶೋಗೆ ಪ್ರೇಕ್ಷಕರು ಬರ್ತಿಲ್ಲ.

ಐಪಿಎಲ್ ನಡುವೆ ಕೆಲವರು ಓಟಿಟಿಯಲ್ಲಿ ಸಿನಿಮಾ, ವೆಬ್ ಸೀರಿಸ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಇವತ್ತು(ಏಪ್ರಿಲ್ 25) ಒಂದೇ ದಿನ 20ಕ್ಕೂ ಹೆಚ್ಚು ಸಿನಿಮಾ, ವೆಬ್ ಸೀರಿಸ್ ರಿಲೀಸ್ ಆಗಿದೆ.
ಅಮೇಜಾನ್ ಪ್ರೈಂ
1. ವೀರ ಧೀರ ಶೂರನ್
ವಿಕ್ರಂ ನಟನೆಯ 'ವೀರ ಧೀರ ಶೂರನ್' ಸಿನಿಮಾ ಈಗಾಗಲೇ ಸ್ಟ್ರೀಮಿಂಗ್ ಆರಂಭಿಸಿದೆ. ಪ್ರೈಂ ವೀಡಿಯೋದಲ್ಲಿ ಈಗಾಗಲೇ ಸಾಕಷ್ಟು ಜನ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಓಟಿಟಿಗೆ ಬಂದಿದೆ. ಅರುಣ್ ಕುಮಾರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾರ್ಚ್ 27ಕ್ಕೆ ತೆರೆಗೆ ಬಂದಿತ್ತು. ವಿಕ್ರಂ ಜೊತೆಗೆ ಎಸ್. ಜೆ ಸೂರ್ಯ, ದಶಾರ ವಿಜಯನ್, ಪೃಥ್ವಿ ರಾಜ್ ಚಿತ್ರದಲ್ಲಿ ನಟಿಸಿದ್ದಾರೆ.
2. ಮಜಾಕ(ತೆಲುಗು ಸಿನಿಮಾ)
3. ಫ್ಲೋ(ಇಂಗ್ಲೀಷ್ ಸಿನಿಮಾ)
4. ಕಲ್ಲು ಕಾಂಪೌಂಡ್(ತೆಲುಗು ಸಿನಿಮಾ)
5. ಲ್ಯಾಂಡ್‌ಲೈನ್(ಇಂಗ್ಲೀಷ್ ಸಿನಿಮಾ)
6. ವಿವಾಹ ಆಹ್ವಾನಂ(ಮಲಯಾಳಂ ಸಿನಿಮಾ)
7. ಸೂಪರ್ ಬಾಯ್ಸ್ ಮಾಲೆಂಗಾವ್
8. ಇರವಿನಿಲ್ ಆಟಮ್ ಪರ್(ತಮಿಳು ಸಿನಿಮಾ)
ಹಾಟ್‌ಸ್ಟರ್
1. ಎಂಪುರಾನ್
ಮೋಹನ್ ಲಾಲ್ ನಟನೆಯ 'ಎಂಪುರಾನ್' ಸಿನಿಮಾ 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ಸಿನಿಮಾ ಹಾಟ್‌ಸ್ಟರ್ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಸೂಪರ್ ಹಿಟ್ 'ಲೂಸಿಫರ್' ಸೀಕ್ವೆಲ್ ಇದಾಗಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ.
2. ಫ್ರಾನ್ಸಿಸ್ ದಿ ಪೀಪಲ್ ಪೋಪ್(ಇಂಗ್ಲೀಷ್ ಡಾಕ್ಯುಮೆಂಟರಿ)

ಜೀ-5
1. ಅಯ್ಯನ ಮನೆ
ಕನ್ನಡದ ಮೊದಲ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರಿಸ್ 'ಅಯ್ಯನ ಮನೆ' ರಿಲೀಸ್ ಆಗಿದೆ. ಜೀ5ನಲ್ಲಿ ಸದ್ಯ ಮೊದಲ ಎಪಿಸೋಡ್ ಸ್ಟ್ರೀಮಿಂಗ್ ಆಗುತ್ತಿದೆ. ದಿಯಾ ಖುಷಿ ಹಾಗೂ ಮಾನ್ಸಿ ಇದರಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಕ್ಷಯ್ ನಾಯಕ್, ಹಿತಾ ಚಂದ್ರಶೇಖರ್, ಅನಿರುದ್ಧ್ ಆಚಾರ್ಯ, ಅರ್ಚನಾ ಕೊಟ್ಟಿಗೆ ಸೇರಿ ದೊಡ್ಡ ತಾರಾಗಣವಿದೆ. ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದು ಶ್ರುತಿ ನಾಯ್ಡು ಬಂಡವಾಳ ಹೂಡಿದ್ದಾರೆ.
2. ಎಸ್‌ಎಫ್8(ಕೊರಿಯನ್ ವೆಬ್ ಸೀರಿಸ್)
ಸನ್ ನೆಕ್ಸ್ಟ್
1. ಲಾಫಿಂಗ್ ಬುದ್ಧ
ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಸಿನಿಮಾ ಈಗಾಗಲೇ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ರಿಲೀಸ್ ಆಗಿತ್ತು. ಇದೀಗ ಸನ್ ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಕೂಡ ಎಂಟ್ರಿ ಕೊಟ್ಟಿದೆ. ಪ್ರಮೋದ್ ಶೆಟ್ಟಿ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಶಿವಮೊಗ್ಗದ ನೀರೂರಿನ ಪೊಲೀಸ್ ಕಾನ್‌ಸ್ಟೆಬಲ್ ಪಾತ್ರದಲ್ಲಿ ಅವರು ನಟಿಸಿದ್ದಾರೆ.
2. ನಿರಮ್ ಮರುಮ್ ಉಳಗಿಲ್(ತಮಿಳು ಸಿನಿಮಾ)
ನೆಟ್‌ಫ್ಲಿಕ್ಸ್
1. ಮ್ಯಾಡ್ ಸ್ಕ್ವೇರ್
ಕಲ್ಯಾಣ್ ಶಂಕರ್ ನಿರ್ದೇಶನದ ತೆಲುಗು ಆಕ್ಷನ್ ಕಾಮಿಡಿ ಸಿನಿಮಾ 'ಮ್ಯಾಡ್ ಸ್ಕ್ವೇರ್' ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ರಾಮ್ ನಿತಿನ್, ಸಂಗೀತ ಶೋಭನ್, ನರ್ನೆ ನಿತಿನ್ ಚಿತ್ರದ ತಾರಾಗಣದಲ್ಲಿದ್ದಾರೆ. ಮಾರ್ಚ್ 28ರಂದು ಸಿನಿಮಾ ತೆರೆಗೆ ಬಂದಿತ್ತು.
2. ಜ್ಯುವೆಲ್ ಥೀಫ್(ಕನ್ನಡ ಡಬ್ಬಿಂಗ್ ಸಿನಿಮಾ)


Click it and Unblock the Notifications











