Happy Friendship Day 2025: ಸ್ನೇಹದ ಮಹತ್ವ ಸಾರುವ ಈ ಸಿನಿಮಾಗಳು ಯಾವ ಓಟಿಟಿಯಲ್ಲಿದೆ?

ಪ್ರತಿ ವರ್ಷ ಆಗಸ್ಟ್‌ ಮೊದಲ ಭಾನುವಾರ (ಇಂದು.. ಆಗಸ್ಟ್ 3) ಸ್ನೇಹಿತರ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ನೋವು, ಖುಷಿ ಎಲ್ಲವನ್ನು ಹಂಚಿಕೊಳ್ಳಲು ಜೊತೆಯಾಗುವವರು ಸ್ನೇಹಿತರು ಮಾತ್ರ. ಮಡದಿ ಬಳಿ ಮುಚ್ಚಿಟ್ಟ ಗುಟ್ಟನ್ನು ಸ್ನೇಹಿತರ ಬಳಿ ಹಂಚಿಕೊಳ್ಳುವವರು ಇದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ ಒಂದೊಳ್ಳೆ ಸ್ನೇಹ, ಸ್ನೇಹಿತರು ಇದ್ದೇ ಇದ್ದಾರೆ.

ಒಮ್ಮೆ ಹುಟ್ಟಿದ ಸ್ನೇಹವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಅದಕ್ಕಾಗಿ ಒಬ್ಬರಿಗೊಬ್ಬರು ತ್ಯಾಗ ಬಲಿದಾನ ಮಾಡಲು ಸಿದ್ಧರಿರಬೇಕು. ಸ್ನೇಹ ಕಡಲಲ್ಲಿ ಆಳಕ್ಕೆ ಇಳಿದಷ್ಟು ನೆಮ್ಮದಿ ಸಂತೋಷ ಸಿಗುತ್ತದೆ. ಬಡವ ಶ್ರೀಮಂತ, ಮೇಲು ಕೀಳು ಎಲ್ಲವನ್ನು ಮೀರಿದ್ದು ಸ್ನೇಹ. ಕನ್ನಡ ಸಿನಿಮಾಗಳಲ್ಲಿ ಕೂಡ ನಾವು ಅಪರೂಪದ ಸ್ನೇಹಿತರನ್ನು ನೋಡಿದ್ದೇವೆ. ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್- ಚಿ. ಉದಯಶಂಕರ್, ವಿಷ್ಣು- ಅಂಬಿ, ಶಿವಣ್ಣ- ಉಪೇಂದ್ರ, ನಂದ ಕಿಶೋರ್- ಶರಣ್ ಹೀಗೆ ಹಲವರು ಆತ್ಮೀಯ ಸ್ನೇಹಿತರಾಗಿ ಗುರ್ತಿಸಿಕೊಂಡಿದ್ದಾರೆ.

Friendship Day 2024 5 Evergreen Kannada Friendship Movies to Stream on OTT

ಸ್ನೇಹದ ಮಹತ್ವ ಸಾರುವ ಸಾಕಷ್ಟು ಕನ್ನಡ ಸಿನಿಮಾಗಳು ಕನ್ನಡದಲ್ಲಿವೆ. ಸ್ನೇಹಿತರ ಬಗ್ಗೆ ಬೊಂಬಾಟ್ ಹಾಡುಗಳಿವೆ. ಕನ್ನಡದ ಎವರ್‌ಗ್ರೀನ್ ಫ್ರೆಂಡ್‌ಶಿಪ್ ಸಿನಿಮಾಗಳನ್ನು ಈಗ ಓಟಿಟಿಯಲ್ಲೇ ನೋಡಬಹುದು.

1. ದಿಗ್ಗಜರು

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ದಿಗ್ಗಜರು' ಸಿನಿಮಾ ಮರೆಯೋಕೆ ಸಾಧ್ಯವಿಲ್ಲ. ಚಿತ್ರದಲ್ಲಿ ನಿಜ ಜೀವನದ ಆತ್ಮೀಯ ಸ್ನೇಹಿತರಾದ ವಿಷ್ಣುವರ್ಧನ್ ಹಾಗೂ ಅಂಬರೀಶ್ ತೆರೆಮೇಲೆ ಕೂಡ ಆಪ್ತ ಸ್ನೇಹಿತರಾಗಿ ನಟಿಸಿದ್ದಾರೆ. ತಮಿಳಿನ 'ನಟ್ಪುಕಾಕ್ಕ' ಚಿತ್ರದ ರೀಮೆಕ್ ಇದು. ಚಿತ್ರಕ್ಕೆ ಹಂಸಲೇಖ ಸಂಗೀತವಿದೆ. 'ಕುಚಿಕು ಕುಚಿಕು' ಹಾಡನ್ನು ಕನ್ನಡ ಸಿನಿರಸಿಕರು ಎಂದೂ ಮರೆಯುವುದಿಲ್ಲ. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಈ ಸಿನಿಮಾ ವೀಕ್ಷಿಸಬಹುದು.

Friendship Day 2024 5 Evergreen Kannada Friendship Movies to Stream on OTT

2. ಸಿಪಾಯಿ

ಪ್ರೈಂ ವೀಡಿಯೋದಲ್ಲಿ ರವಿಚಂದ್ರನ್ ನಿರ್ದೇಶಿಸಿ ನಟಿಸಿದ್ದ 'ಸಿಪಾಯಿ' ಸಿನಿಮಾ ಕೂಡ ಇದೆ. 1996ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಸಿಪಾಯಿ ಶಿವನ ಆತ್ಮೀಯ ಗೆಳೆಯ ಮೇಜರ್ ಚಂದ್ರಕಾಂತ್ ಆಗಿ ಮಿಂಚಿದ್ದರು. ಚಿತ್ರದ 'ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ' ಹಾಡನ್ನು ಮರೆಯುವವರುಂಟೆ. ಈ ಚಿತ್ರದಲ್ಲೂ ಹಂಸಲೇಖ ಸಾಹಿತ್ಯ, ಸಂಗೀತದ ಶಕ್ತಿ ಇತ್ತು.

3. ಕಾಮನಬಿಲ್ಲು

ಅಶ್ವಿನಿ ಅವರು ಬರೆದ ಮ್ರಿಗತೃಷ್ಣಾ ಕಾದಂಬರಿ ಆಧರಿಸಿ ಚಿ. ದತ್ತರಾಜ್ ನಿರ್ದೇಶಿಸಿದ ಸಿನಿಮಾ ಇದು. ಡಾ. ರಾಜ್‌ಕುಮಾರ್ ಹಾಗೂ ಅನಂತ್ ನಾಗ್ ಚಿತ್ರದಲ್ಲಿ ಸ್ನೇಹಿತರಾಗಿ ನಟಿಸಿದ್ದರು. ಜೆ. ಜಯಮ್ಮ ಸಿನಿಮಾ ನಿರ್ಮಾಣ ಮಾಡಿದ್ದರು. ಉಪೇಂದ್ರ ಕುಮಾರ್ ಸಂಗೀತ, ಚಿ. ಉದಯಶಂಕರ್ ಸಾಹಿತ್ಯ ಚಿತ್ರಕ್ಕಿದೆ. ಕುವೆಂಪು ಅವರ ಸಾಹಿತ್ಯದಲ್ಲಿ ಸಿ. ಅಶ್ವಥ್ ಹಾಡಿರುವ 'ನೇಗಿಲ ಹಿಡಿದ ಹೊಲದೊಳು ಹಾಡುವ ಉಳುವ ಯೋಗಿಯ ನೋಡಲ್ಲಿ' ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಸನ್ ನೆಕ್ಸ್ಟ್ ಓಟಿಟಿಯಲ್ಲಿ ಈ ಸಿನಿಮಾ ನೋಡಬಹುದು.

4. ಆಪ್ತಮಿತ್ರ

ಮಲಯಾಳಂನ 'ಮಣಿ ಚಿತ್ರತ್ತಾಳ್' ರೀಮೆಕ್ 'ಆಪ್ತಮಿತ್ರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್ ಸ್ನೇಹಿತರಾಗಿ ನಟಿಸಿದ್ದರು. ದ್ವಾರಕೀಶ್ ನಿರ್ಮಾಣದ ಚಿತ್ರವನ್ನು ಪಿ. ವಾಸು ಕಟ್ಟಿಕೊಟ್ಟಿದ್ದರು. ಜಿಯೋ ಟಿವಿ ಓಟಿಟಿ ಹಾಗೂ ಯೂಟ್ಯೂಬ್‌ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

5. ಅರಸು

ಸ್ನೇಹಿತೆಯರಿಬ್ಬರು ಒಂದೇ ಹುಡುಗನ ಪ್ರೀತಿಯಲ್ಲಿ ಬೀಳುವ ಕಥೆ 'ಅರಸು' ಚಿತ್ರದಲ್ಲಿದೆ. ಪುನೀತ್ ರಾಜ್‌ಕುಮಾರ್ ಜೊತೆಗೆ ರಮ್ಯಾ ಹಾಗೂ ಮೀರಾ ಜಾಸ್ಮಿನ್ ನಟಿಸಿದ್ದ ಚಿತ್ರಕ್ಕೆ ಮಹೇಶ್ ಬಾಬು ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ಕೊನೆಗೆ ನಾಯಕ ಇಬ್ಬರನ್ನು ಯಾರನ್ನು ಮದುವೆ ಆಗಬೇಕು ಎಂದು ಗೊಂದಲಕ್ಕೆ ಸಿಲುಕಿದಾಗ ಸ್ನೇಹಿತರೇ ಬಂದು ಸಹಾಯ ಮಾಡು ಕಥೆ ಇದರಲ್ಲಿದೆ. ದರ್ಶನ್ ಹಾಗೂ ಆದಿತ್ಯಾ ಚಿತ್ರದಲ್ಲಿ ಪುನೀತ್ ಸ್ನೇಹಿತರ ಪಾತ್ರದಲ್ಲಿ ಮಿಂಚಿದ್ದರು. ಸನ್‌ ನೆಕ್ಸ್ಟ್‌ನಲ್ಲಿ ಈ ಸಿನಿಮಾ ವೀಕ್ಷಿಸಬಹುದು.

More from Filmibeat

English summary
Celebrate Friendship Day by watching Kannada classics like Diggajaru, Sipai, Kamanabillu, Apthamitra, and Arasu on OTT
Read more about: friendship day kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X