Ott Releases this week: ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾ, ವೆಬ್ ಸೀರಿಸ್ ಲಿಸ್ಟ್‌ ಇಲ್ಲಿದೆ

ಎಲೆಕ್ಷನ್, ಐಪಿಎಲ್‌ ಭರಾಟೆ ನಡುವೆ ದೊಡ್ಡ ಸಿನಿಮಾಗಳು ಬಿಡುಗಡೆ ಆಗದೇ ಚಿತ್ರಮಂದಿರಗಳನ್ನೇ ಮುಚ್ಚಲಾಗುತ್ತಿದೆ. ತೆಲಂಗಾಣದಲ್ಲಿ 400ಕ್ಕೂ ಅಧಿಕ ಸಿಂಗಲ್‌ಸ್ಕ್ರೀನ್‌ ಚಿತ್ರಮಂದಿರಗಳ ಬಾಗಿಲು ಬಂದ್ ಆಗಿದೆ. ಕರ್ನಾಟಕದಲ್ಲೂ ಇಂತದ್ದೇ ಚಿಂತನೆ ನಡೀತಿದೆ.

ಸದ್ಯಕ್ಕೆ ಜನ ಮನರಂಜನೆಗಾಗಿ ಓಟಿಟಿ ಮೊರೆ ಹೋಗುವಂತಾಗಿದೆ. ಹೊಸದಾಗಿ ಯಾವ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತದೆ ಎಂದು ಕಾದು ಕೂತು ನೋಡುವಂತಾಗಿದೆ. ಹಾಗ್ ನೋಡಿದ್ರೆ ಮಲಯಾಳಂ ಬಿಟ್ಟು ಈ ವರ್ಷ ಯಾವ ಭಾಷೆಯಲ್ಲೂ ದೊಡ್ಡದಾಗಿ ಸಿನಿಮಾಗಳು ಸದ್ದು ಮಾಡಲಿಲ್ಲ. ಜೂನ್ ಬಳಿಕವೇ ಬಹುನಿರೀಕ್ಷಿತ ಸಿನಿಮಾಗಳು ತೆರೆಗಪ್ಪಳಿಸಲಿವೆ.

From Aadujeevitham to Garuda purana ott releases this week May 20th to May 26th

ಇನ್ನು ಈ ವಾರ ಓಟಿಟಿಯಲ್ಲಿ ಒಂದಷ್ಟು ಸಿನಿಮಾ, ವೆಬ್‌ ಸೀರಿಸ್ ಸ್ಟ್ರೀಮಿಂಗ್ ಆಗಲಿವೆ. ಬಹುನಿರೀಕ್ಷಿತ 'ಆಡುಜೀವಿತಂ'(ಗೋಟ್‌ಲೈಫ್) ಸಿನಿಮಾ ಕೂಡ ಬರುತ್ತದೆ ಎನ್ನುವ ನಿರೀಕ್ಷೆಯಿದೆ. ಹಾಗಾದರೆ ಈ ವಾರ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಪ್ರೈಂ ವೀಡಿಯೋ, ನೆಟ್‌ಫ್ಲಿಕ್ಸ್, ಜೀ5, ಜಿಯೋ ಸಿನಿಮಾದಲ್ಲಿ ರಿಲೀಸ್ ಆಗುತ್ತದೆ ಅಂತ ಮುಂದೆ ಓದಿ.

ಡಿಸ್ನಿ ಹಾಟ್‌ಸ್ಟರ್

1. ಆಡು ಜೀವಿತಂ

ಪೃಥ್ವಿರಾಜ್ ಸುಕುಮಾರನ್ ನಟನೆಯ 'ಆಡು ಜೀವಿತಂ' ಸಿನಿಮಾ ಈ ವರ್ಷ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ನೈಜ ಘಟನೆಗಳನ್ನು ಆಧರಿಸಿ ಬೆನ್ಯಮಿನ್ ಬರೆದ ಕಾದಂಬರಿಯನ್ನು ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಬ್ಲೆಸ್ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಈ ಸಿನಿಮಾ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಮೇ 26ಕ್ಕೆ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ.

2. ಡೋರಾಮ್ಯಾನ್ ಸೀಸನ್ -19 (ಮಕ್ಕಳ ಆನಿಮೇಷನ್ ಸೀರಿಸ್) ಮೇ 20

3. ಷಿನ್‌ಚಿನ್ ಸೀಸನ್-16 (ಮಕ್ಕಳ ಆನಿಮೇಷನ್ ಸೀರಿಸ್) ಮೇ 20

4. ದಿ ಕರ್ದಾಷಿಯನ್ಸ್, ಸೀಸನ್-5(ಇಂಗ್ಲೀಷ್ ಸಿನಿಮಾ) ಮೇ 23

5. ದಿ ಬೀಚ್ ಬಾಯ್ಸ್(ಇಂಗ್ಲೀಷ್ ಡಾಕ್ಯುಮೆಂಟರಿ) ಮೇ 24

6. ರೋಲಾಂಡ್ ಗಾರೋಸ್(ಇಂಗ್ಲೀಷ್ ಸ್ಪೋರ್ಟ್ಸ್ ಸಿನಿಮಾ) ಮೇ 26

7. ಮಾರ್ವೆಲ್ ಸ್ಟುಡಿಯೋಸ್: ಅಸೆಂಬುಲ್ಡ್: ದಿ ಕಿಂಗ್ ಆಫ್ ಎಕ್ಸ್‌ಮನ್(ಇಂಗ್ಲೀಷ್ ಡಾಕ್ಯುಮೆಂಟರಿ) ಮೇ 22

8. ಪಾಲೈನ್(ಜರ್ಮನ್ ಸಿನಿಮಾ) ಮೇ 22

From Aadujeevitham to Garuda purana ott releases this week May 20th to May 26th

ನೆಟ್‌ಫ್ಲಿಕ್ಸ್

1. ಇಲ್ಲೂಜನ್ಸ್ ಫರ್ ಸೇಲ್(ಡಾಕ್ಯುಮೆಂಟರಿ ಸಿನಿಮಾ) ಮೇ 23

2. ಫ್ರಾಂಕೋ ಎಸ್ಕಾಮಿಲ್ಲಾ: ಲೇಡಿಸ್‌ಮ್ಯಾನ್(ಇಂಗ್ಲೀಷ್ ಸೀರಿಸ್) ಮೇ 23

3. ಇನ್ ಗುಡ್ ಹ್ಯಾಂಡ್ಸ್-2 (ಇಂಗ್ಲೀಷ್ ಸಿನಿಮಾ) ಮೇ 23

4. ಅಟ್ಲಾಸ್(ಸೈನ್ಸ್ ಫಿಕ್ಷನ್ ಥ್ರಿಲ್ಲರ್) ಮೇ 24

5. ಗಾಡೋಡೆನ್ನ್ ದಿ ವೇ ಆಫ್ ಲೋನ್ ಊಲ್ಫ್(ಆನಿಮೇಷನ್) ಮೇ 23

6. ಮೈ ಓನ್ಲಿ ಗರ್ಲ್(ಆನಿಮೇಷನ್ ಸಿನಿಮಾ) ಮೇ 26

7. ಮುಲ್ಲಿಗನ್ ಪಾರ್ಟ್-2 (ಆನಿಮೇಷನ್ ಸಿಟ್‌ಕಾಮ್) ಮೇ-24

ಅಮೇಜಾನ್ ಪ್ರೈಂ

1. ಗರುಡ ಪುರಾಣ

ಮಂಜುನಾಥ್ ಬಿ. ನಾಗಬಾ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ನಟಿಸಿರುವ ಕನ್ನಡ ಸಿನಿಮಾ 'ಗರುಡ ಪುರಾಣ'. ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸದ್ಯ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 79 ರೂ. ಪಾವತಿಸಿ ಚಂದಾದಾರರು ಸಿನಿಮಾ ವೀಕ್ಷಿಸಬಹುದಾಗಿದೆ. ಮಂಜುನಾಥ್ ಜೋಡಿಯಾಗಿ ದಿಶಾ ಶೆಟ್ಟಿ ನಟಿಸಿದ್ದಾರೆ.

2. ದಿ ವನ್ ಪರ್ಸೆಂಟ್ ಕ್ಲಬ್ ಸೀಸನ್-1 ಮೇ 24

3. ಡಿಓಎಂ ಸೀಸನ್-2(ವೆಬ್ ಸೀರಿಸ್) ಮೇ 24

4. ದಿ ಬ್ಲೂ ಏಂಜಲ್ಸ್ (ಡಾಕ್ಯೂಮೆಂಟರಿ ಸಿನಿಮಾ) ಮೇ 23

5. ಬಾಂಬ್‌ಸೆಲ್- ಮೇ 25

More from Filmibeat

English summary
new OTT releases this week on Netflix, Prime Video, zee 5 and Disney+ Hotstar;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X