OTT releases this week: 16ಕ್ಕೂ ಅಧಿಕ ಸಿನಿಮಾ, ವೆಬ್‌ ಸೀರಿಸ್ ಈ ವಾರ ಸ್ಟ್ರೀಮಿಂಗ್

ಎಲೆಕ್ಷನ್ ಕಾವು ತಾರಕಕ್ಕೇರಿದೆ. ದೇಶಾದ್ಯಂತ ಹಲವೆಡೆ ವಿವಿಧ ಹಂತಗಳಲ್ಲಿ ಚುನಾವಣೆ ನಡೀತಿದೆ. ಹಾಗಾಗಿ ದೊಡ್ಡ ಸಿನಿಮಾಗಳು ಥಿಯೇಟರ್‌ ಕಡೆ ಮುಖ ಮಾಡುತ್ತಿಲ್ಲ. ಜನ ಮನರಂಜನೆಗಾಗಿ ಓಟಿಟಿಯಲ್ಲಿ ಹುಡುಕಾಡುವಂತಾಗಿದೆ. ಈ ವಾರ 16ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿವೆ.

ಸ್ಯಾಂಡಲ್‌ವುಡ್‌ನಲ್ಲಿ ಶುಕ್ರವಾರ(ಮೇ 10)ದಿಂದಲೇ ಹೊಸ ಹೊಸ ಸಿನಿಮಾಗಳು ತೆರೆಗೆ ಬರ್ತಿವೆ. 'ರಾಮನ ಅವತಾರ', 'ಗ್ರೇ ಗೇಮ್ಸ್' ಜೊತೆಗೆ ಪುನೀತ್ ರಾಜ್‌ಕುಮಾರ್ ನಟನೆಯ 2 ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. 'ಅಂಜನಿಪುತ್ರ' ಹಾಗೂ 'ಪವರ್' ಚಿತ್ರಗಳು ತೆರೆಗಪ್ಪಳಿಸುತ್ತಿವೆ.

From Aavesham to the Goat new OTT releases this week

ಥಿಯೇಟರ್‌ಗಳಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಕಥೆ ಇದಾದರೆ ಓಟಿಟಿಯಲ್ಲಿ ಕೂಡ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್‌ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಈ ವಾರ ಓಟಿಟಿ ರಿಲೀಸ್ ಡಿಟೈಲ್ಸ್ ಮುಂದೆ ಓದಿ.

ಅಮೇಜಾನ್ ಪ್ರೈಂ

1. ಆವೇಶಂ

ಫಹಾದ್ ಫಾಸಿಲ್ ನಟನೆಯ ಮಲಯಾಳಂ 'ಆವೇಶಂ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಾಕಷ್ಟು ಕನ್ನಡ ಡೈಲಾಗ್ಸ್ ಕೂಡ ಚಿತ್ರದಲ್ಲಿದೆ. ಜಿತು ಮಾಧವನ್ ನಿರ್ದೇಶನದ ಈ ಆಕ್ಷನ್ ಕಾಮಿಡಿ ಸಿನಿಮಾ ಏಪ್ರಿಲ್ 11ರಂದು ತೆರೆಗೆ ಬಂದಿತ್ತು. ಅಮೇಜಾನ್ ಪ್ರೈಂನಲ್ಲಿ ಮೇ 10ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎಂದು ಹೇಳಲಾಗುತ್ತಿದೆ.

2. ಮ್ಯಾಕ್ಸ್‌ಟನ್ ಹಾಲ್(ಜರ್ಮನ್ ಸೀರಿಸ್) ಮೇ 9

3. ದ ಗೋಟ್(ಇಂಗ್ಲೀಷ್ ಸೀರಿಸ್) ಮೇ 9

ಜೀ-5

1. 8 ಎ.ಎಂ ಮೆಟ್ರೊ

ರಾಜ್‌ ರಾಚಕೊಂಡ ನಿರ್ದೇಶನದ '8 ಎ.ಎಂ ಮೆಟ್ರೊ' ಮೇ 10ಕ್ಕೆ ಸ್ಟ್ರೀಮಿಂಗ್ ಆಗುತ್ತಿದೆ. ಗುಲ್ಶನ್ ದೇವಯ್ಯ ಮತ್ತು ಸೈಯಾಮಿ ಖೇರ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಮೇ 19ಕ್ಕೆ ಸಿನಿಮಾ ತೆರೆಕಂಡಿತ್ತು. 4 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಸನ್ನಿ ಕುರುಪಾಟಿ ಛಾಯಾಗ್ರಹಣ, ಮಾರ್ಕ್ ಕೆ. ರಾಬಿನ್ ಸಂಗೀತ ಈ ಚಿತ್ರಕ್ಕಿದೆ.

2. ಪಾಶ್ಬಾಲಿಷ್ (ಬೆಂಗಾಲಿ ವೆಬ್‌ ಸೀರಿಸ್) ಮೇ 10

ಜಿಯೋ ಸಿನಿಮಾ

1. ಮರ್ಡರ್ ಇನ್ ಮಹಿಮ್(ಹಿಂದಿ ಸೀರಿಸ್) ಮೇ 10

ಸನ್ ನೆಕ್ಸ್ಟ್

1. ಫ್ಯೂಚರ್ ಪಂಡಾಟಿ(ತಮಿಳು ಸೀರಿಸ್) ಮೇ 10

ಆಪಿಲ್ ಪ್ಲಸ್ ಟಿವಿ

1. ಹಾಲಿವುಡ್ ಕೆನ್‌ ಕ್ವೀನ್(ಇಂಗ್ಲೀಷ್ ಸೀರಿಸ್) ಮೇ 8
2. ಡಾರ್ಕ್ ಮೇಟರ್(ಇಂಗ್ಲೀಷ್ ಸೀರಿಸ್) ಮೇ 8

ಡಿಸ್ನಿ ಹಾಟ್‌ಸ್ಟರ್

1. ಆಲ್ ಆಫ್ ಅಸ್ ಸ್ಟೇಂಜರ್ಸ್(ಇಂಗ್ಲೀಷ್ ಸಿನಿಮಾ) ಮೇ 8

ನೆಟ್‌ಫ್ಲಿಕ್ಸ್

1. ಬೋಡ್ಕಿನ್(ಇಂಗ್ಲೀಷ್ ಸೀರಿಸ್) ಮೇ 9

2. ದಿ ರೋಸ್ಟ್ ಆಫ್ ಟಾಮ್ ಬ್ರಾಡಿ(ಇಂಗ್ಲೀಷ್ ಸಿನಿಮಾ) ಮೇ 6

3. ಮದರ್ ಆಫ್ ದಿ ಬ್ರೈಡ್(ಇಂಗ್ಲೀಷ್ ಸಿನಿಮಾ) ಮೇ 9

4. ಥ್ಯಾಂಕ್ಯೂ ನೆಕ್ಸ್ಟ್(ಟರ್ಕಿಷ್ ಸೀರಿಸ್) ಮೇ 9

5. ಲಿವಿಂಗ್ ವಿತ್ ಲಿಪಾರ್ಡ್ಸ್(ಇಂಗ್ಲೀಷ್ ಸಿನಿಮಾ) ಮೇ 10

More from Filmibeat

English summary
Checkout The List Of This Week OTT Releases
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X