OTT Releases This Week: ಕ್ರಿಸ್‌ಮಸ್ ವೀಕೆಂಡ್‌ನಲ್ಲಿ 15 ಸಿನಿಮಾಗಳು ಓಟಿಟಿಗೆ ಎಂಟ್ರಿ

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ಕನ್ನಡದಲ್ಲಿ 'ಮಾರ್ಕ್' ಹಾಗೂ '45' ಸಿನಿಮಾಗಳ ಜೊತೆಗೆ ಮಲಯಾಳಂ ಸಿನಿಮಾ 'ವೃಷಭ' ತೆರೆಗಪ್ಪಳಿಸ್ತಿದೆ. ಹಾಲಿವುಡ್ ಸಿನಿಮಾ 'ಅನಕೊಂಡ' ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ.

ಕಳೆದ ವಾರ ಬಿಡುಗಡೆ ಆಗಿರುವ 'ಅವತಾರ್: ಫೈರ್ & ಆಷ್' ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದ್ದೆ. ದರ್ಶನ್ ನಟನೆಯ 'ಡೆವಿಲ್' ಸಿನಿಮಾ 3ನೇ ವಾರಕ್ಕೆ ಕಾಲಿಡುತ್ತಿದೆ. ಇದೆಲ್ಲದರ ನಡುವೆ ಓಟಿಟಿಯಲ್ಲಿ ಒಂದಷ್ಟು ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸಲಿದೆ. ಕ್ರಿಸ್‌ಮಸ್, ಹೊಸ ವರ್ಷದ ರಜೆಯಲ್ಲಿ ಮನೆಯಲ್ಲೇ ಕೂತು ಸಿನಿಮಾ ನೋಡಬಹುದು.

From Andhra King Taluka and Revolver Rita this Ott Release movies Web Series list

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ದೊಡ್ಡಮಟ್ಟದಲ್ಲಿ ಗೆಲ್ಲದ ಸಿನಿಮಾಗಳು ಓಟಿಟಿಗೆ ಬರ್ತಿವೆ. ಇನ್ನುಳಿದಂತೆ ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಂ, ಹಾಟ್‌ಸ್ಟರ್ ಸೇರಿದಂತೆ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವೆಲ್ಲಾ ಸಿನಿಮಾಗಳು ಬರ್ತಿವೆ ಮುಂದೆ ಓದಿ.

ಆಂಧ್ರಕಿಂಗ್ ತಾಲೂಕ

ರಾಮ್ ಪೋನಿನೇನಿ ಹಾಗೂ ಉಪೇಂದ್ರ ನಟನೆಯ 'ಆಂಧ್ರಕಿಂಗ್ ತಾಲೂಕ' ಸಿನಿಮಾ ಕಳೆದ ತಿಂಗಳು ತೆರೆಗೆ ಬಂದಿತ್ತು. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಪ್ರೇಕ್ಷಕರನ್ನು ರಂಜಿಸಿತ್ತು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ.

From Andhra King Taluka and Revolver Rita this Ott Release movies Web Series list

ಡಿಸೆಂಬರ್ 25ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ 'ಆಂಧ್ರಕಿಂಗ್ ತಾಲೂಕ' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಚಿತ್ರದಲ್ಲಿ ಸ್ಟಾರ್ ನಟನಾಗಿ ಉಪೇಂದ್ರ ನಟಿಸಿದ್ದು ಆತನ ಅಭಿಮಾನಿ ಪಾತ್ರದಲ್ಲಿ ರಾಮ್ ಮಿಂಚಿದ್ದಾರೆ. ಒಬ್ಬ ನಟನಿಗಾಗಿ ಅಭಿಮಾನಿ ನಡೆಸುವ ಹೋರಾಟ ಹಾಗೂ ಅದೇ ಅಭಿಮಾನಿಗಾಗಿ ಸ್ಟಾರ್ ನಟನೇ ಇಳಿದು ಬರುವ ಕಥೆ ಚಿತ್ರದಲ್ಲಿದೆ.

ರಿವಾಲ್ವರ್ ರೀಟಾ

ತಿಂಗಳಿಗೂ ಮುನ್ನ ಕೀರ್ತಿ ಸುರೇಶ್ ನಟನೆಯ 'ರಿವಾಲ್ವರ್ ರೀಟಾ' ಸಿನಿಮಾ ಓಟಿಟಿಗೆ ಬರ್ತಿದೆ. ನವೆಂಬರ್ 28ರಂದು ತೆರೆಗೆ ಬಂದಿದ್ದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಜೆ. ಕೆ ಚಂದ್ರು ನಿರ್ದೇಶನದ ಈ ಕ್ರೈಂ ಕಾಮಿಡಿ ಸಿನಿಮಾ ಡಿಸೆಂಬರ್ 26ರಂದು ನೆಟ್‌ಫ್ಲಿಕ್ಸ್‌ಗೆ ಬರ್ತಿದೆ.

ಕನ್ನಡಕ್ಕೂ ಡಬ್ ಆಗಿ 'ರಿವಾಲ್ವರ್ ರೀಟಾ' ಸಿನಿಮಾ ಓಟಿಟಿಯಲ್ಲಿ ವೀಕ್ಷಣೆಗೆ ಸಿಗಲಿದೆ. ರಾಧಿಕಾ ಶರತ್‌ಕುಮಾರ್, ಸುನೀಲ್, ಅಜಯ್ ಘೋಷ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಮಿಡ್ಲ್‌ ಕ್ಲಾಸ್

ಮುನಿಕಾಂತ್, ರಾಧಾ ರವಿ, ಕಾಳಿ ವೆಂಕಟ್, ಮಾಳವಿಕಾ ಅವಿನಾಶ್ ನಟನೆಯ 'ಮಿಡ್ಲ್‌ ಕ್ಲಾಸ್' ಎಂಬ ತಮಿಳು ಸಿನಿಮಾ ಕೂಡ ಓಟಿಟಿಗೆ ಬರ್ತಿದೆ. ಕಿಶೋರ್ ಎಂ. ರಾಮಲಿಂಗಂ ಆಕ್ಷನ್ ಕಟ್ ಹೇಳಿದ್ದು ಟೈಟಲ್‌ಗೆ ತಕ್ಕಂತೆ ಮಧ್ಯಮ ವರ್ಗದ ಕುಟುಂಬದ ನೋವು ನಲಿವಿನ ಕಥೆ ಚಿತ್ರದಲ್ಲಿದೆ. ಜೀ5ನಲ್ಲಿ ಡಿಸೆಂಬರ್ 24ರಂದು ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

ಬಾಹುಬಲಿ: ದಿ ಎಪಿಕ್

ಎರಡು ಭಾಗಗಳಾಗಿ ಬಂದಿದ್ದ 'ಬಾಹುಬಲಿ' ಚಿತ್ರವನ್ನು ಒಂದೇ ಸಿನಿಮಾ ಆಗಿ ಎಡಿಟ್ ಮಾಡಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. 'ಬಾಹುಬಲಿ: ದಿ ಎಪಿಕ್' ಹೆಸರಿನಲ್ಲಿ 3 ಗಂಟೆ 40 ನಿಮಿಷದ ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಕ್ರಿಸ್‌ಮಸ್ ಸಂಭ್ರಮದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಹಾಟ್‌ಸ್ಟರ್

1. ಒಸಿರಿಸ್(ಹಿಂದಿ ವೆಬ್ ಸೀರಿಸ್) ಡಿಸೆಂಬರ್ 22

2. ಅಮಡ್(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 22

3. ನೋಬಡಿ-2(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 22

4. ದಿ ಬ್ಯಾಡ್ ಬಾಯ್ ಅಂಡ್ ಮಿ(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 22

ನೆಟ್‌ಫ್ಲಿಕ್ಸ್

1. ಗುಡ್‌ಬೈ ಜೂನ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 24

2. ಪ್ಯಾರಡೈಸ್(ಮಲಯಾಳಂ ಸಿನಿಮಾ) ಡಿಸೆಂಬರ್ 24

3. ಸ್ಟೇಂಜರ್ ಥಿಂಗ್ಸ್ ಸೀಸನ್ 5 ವಾಲ್ಯೂಮ್-2 (ಇಂಗ್ಲಿಷ್ ವೆಬ್ ಸೀರಿಸ್) ಡಿಸೆಂಬರ್ 26

ಪ್ರೈಂ ವಿಡಿಯೋ

1. ಐ ವಿಶ್ ಯು ಆಲ್‌ದಿ ಬೆಸ್ಟ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 22

2. ಸೂಪರ್ ನ್ಯಾಚುರಲ್(ಇಂಗ್ಲೀಷ್ ಸೀರಿಸ್) ಡಿಸೆಂಬರ್ 22

3. ಲವ್‌ ಯು ಮುದ್ದು(ಕನ್ನಡ ಸಿನಿಮಾ) ಡಿಸೆಂಬರ್ 25

ಜೀ-5

1. ಏಕ್ ದಿವಾನೆ ಕಿ ದಿವಾನಿಯತ್(ಹಿಂದಿ ಸಿನಿಮಾ) ಡಿಸೆಂಬರ್ 26

ಸನ್ ನೆಕ್ಸ್ಟ್

1. ಐ ಯಾಮ್ ಗಾಡ್- (ಕನ್ನಡ ಸಿನಿಮಾ) ಡಿಸೆಂಬರ್ 24

2. ನಿಧಿಯಂ ಭೂತವುಂ(ಮಲಯಾಳಂ ಸಿನಿಮಾ) ಡಿಸೆಂಬರ್ 24

More from Filmibeat

Read more about: kannada upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X