OTT Releases This Week: ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾ, ಸೀರಿಸ್ ಪಟ್ಟಿ ಇಲ್ಲಿದೆ ನೋಡಿ
ಎಲೆಕ್ಷನ್, ಐಪಿಎಲ್ ಭರಾಟೆ ಬಳಿಕ ಚಿತ್ರರಂಗ ಮತ್ತೆ ಕಳೆ ಕಟ್ಟಿದೆ. ನಿಧಾನವಾಗಿ ಒಂದಷ್ಟು ಸಿನಿಮಾಗಳು ತೆರೆಗೆ ಬರ್ತಿವೆ. ಕಳೆದ ಶುಕ್ರವಾರ ಕನ್ನಡದಲ್ಲಿ 'ಕೋಟಿ', 'ಲವ್‌ಲೀ', 'ಶಿವಮ್ಮ', 'ಶೆಫ್ ಚಿದಂಬರ' ಸಿನಿಮಾಗಳು ತೆರೆಕಂಡು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿವೆ. ಮತ್ತಷ್ಟು ಸಿನಿಮಾಗಳು ಈ ವಾರ ತೆರೆಗೆ ಬರ್ತಿದೆ.
ಇತ್ತ ಓಟಿಟಿಯಲ್ಲಿ ಒಂದಷ್ಟು ಸಿನಿಮಾ, ವೆಬ್ ಸೀರಿಸ್ ಕೂಡ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಕನ್ನಡ ಕಂಟೆಂಟ್ ಕಮ್ಮಿ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಪ್ಯಾನ್ ಇಂಡಿಯಾ ಗುಂಗಿನಲ್ಲಿ ಸಣ್ಣ ಸಿನಿಮಾಗಳು ಅತ್ತ ಥಿಯೇಟರ್, ಇತ್ತ ಓಟಿಟಿ ಎರಡೂ ಕಡೆ ಸದ್ದು ಮಾಡುತ್ತಿಲ್ಲ.

ಈ ವಾರ ಅಂದ್ರೆ ಜೂನ್ 17 ರಿಂದ 23 ರವರೆಗೆ ಓಟಿಟಿಯಲ್ಲಿ ಒಟ್ಟು 20 ಸಿನಿಮಾ ಹಾಗೂ ವೆಬ್ ಸೀರಿಸ್ ಬಿಡುಗಡೆ ಆಗುತ್ತಿದೆ.
ಅಮೇಜಾನ್ ಪ್ರೈಂ
1. ಬ್ಲಿಂಕ್
ಈ ವರ್ಷ ಕನ್ನಡದಲ್ಲಿ ಸದ್ದು ಮಾಡಿದ ಕೆಲವೇ ಸಿನಿಮಾಗಳಲ್ಲಿ 'ಬ್ಲಿಂಕ್' ಸಹ ಒಂದು. 3 ವಾರಗಳ ಹಿಂದೆಯೇ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿತ್ತು. ವೀಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಆದರೆ ತಾಂತ್ರಿಕ ಕಾರಣದಿಂದ 3 ವಾರಗಳಿಂದ ಸಿನಿಮಾ ಲಭ್ಯವಿರಲಿಲ್ಲ. ಇದೀಗ ಮತ್ತೆ ಸ್ಟ್ರೀಮಿಂಗ್ ಶುರುವಾಗಿದೆ. ಅಡಚಣೆಗೆ ಕ್ಷಮಿಸಿ ಎಂದು ಚಿತ್ರತಂಡ ಮಾಹಿತಿ ನೀಡಿದ್ದಾರೆ. ದೀಕ್ಷಿತ್ ಶೆಟ್ಟಿ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ.
2. ಇಂಡಸ್ಟ್ರಿ(ಹಿಂದಿ ಸೀರಿಸ್) ಜೂನ್ 19
ನೆಟ್‌ಫ್ಲಿಕ್ಸ್
1. ಏಜೆಂಟ್ಸ್ ಆಫ್ ಮಿಸ್ಟರಿ(ಕೊರಿಯನ್ ವೆಬ್ ಸೀರಿಸ್)ಜೂನ್ 18
2. ಔಟ್ ಸ್ಟ್ಯಾಂಡಿಂಗ್; ಎ ಕಾಮೆಡಿ ರೆವಲ್ಯೂಷನ್(ಇಂಗ್ಲೀಷ್ ಸಿನಿಮಾ) ಜೂನ್ 18
3. ಮಹಾರಾಜ್(ಹಿಂದಿ ಸಿನಿಮಾ) ಜೂನ್ 19
4. ಲವ್ ಈಸ್ ಬ್ಲೈಂಡ್ ಬ್ರೆಜಿಲ್ ಸೀಸನ್-4(ಪೋರ್ಚುಗೀಸ್) ಸೀರಿಸ್
5. ಅಮೆರಿಕನ್ ಸ್ವೀಟ್ ಹಾರ್ಟ್ಸ್(ಇಂಗ್ಲೀಷ್ ಸೀರಿಸ್) ಜೂನ್ 20
6. ಗ್ಯಾಂಗ್ಸ್ ಆಫ್ ಗಲಿಷಿಯಾ(ಸ್ಪ್ಯಾನಿಷ್ ಸೀರಿಸ್) ಜೂನ್ 21
7. ದಿ ವಿಕ್ಟಿಮ್ಸ್ ಗೇಮ್ ಸೀಸನ್-2(ಮಾಂಡರಿನ್ ಸೀರಿಸ್) ಜೂನ್ 21
8. ಟ್ರಿಗ್ಗರ್ ವಾರ್ನಿಂಗ್ (ಇಂಗ್ಲೀಷ್ ಸಿನಿಮಾ) ಜೂನ್ 21
9. ರೈಸಿಂಗ್ ಇಂಪ್ಯಾಕ್ಟ್(ಜಪನೀಸ್ ಸೀರಿಸ್) ಜೂನ್ 22
10. ಕ್ಲೆಕ್ಸ್ ಅಕಾಡಮಿ(ಪೊಲೀಶ್ ಸಿನಿಮಾ) ಜೂನ್ 19

ಜಿಯೋ ಸಿನಿಮಾ
1. ಹೌಸ್ ಆಫ್ ಡ್ರ್ಯಾಗನ್ ಸೀಸನ್-2 (ಸೀರಿಸ್) ಜೂನ್ 17
ಅಹಾ
1. ಸಿರಗನ್(ತಮಿಳು ಸಿನಿಮಾ) ಜೂನ್ 18
ಹಾಟ್‌ಸ್ಟರ್
1. ಅರಣ್ಮನೈ
ತಮಿಳಿನ ಸೂಪರ್ ಹಿಟ್ ಹಾರರ್ ಥ್ರಿಲ್ಲರ್ ಸರಣಿಯ 'ಅರಣ್ಮನೈ'-4 ಸಿನಿಮಾ ಈ ವಾರವೇ ಓಟಿಟಿಗೆ ಬರ್ತಿದೆ. ಸುಂದರ್ ಸಿ ನಿರ್ದೇಶನದ ಚಿತ್ರದಲ್ಲಿ ತಮನ್ನಾ ಬಾಟಿಯಾ ಹಾಗೂ ರಾಶಿ ಖನ್ನಾ ಕೂಡ ಮಿಂಚಿದ್ದಾರೆ. ತಮಿಳು ಮಾತ್ರವಲ್ಲದೇ ತೆಲುಗು, ಕನ್ನಡಕ್ಕೂ ಸಿನಿಮಾ ಡಬ್ ಆಗಿ ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಬಿಡುಗಡೆ ಆಗಲಿದೆ. ಜೂನ್ 21ರಿಂದ ಸಿನಿಮಾ ಲಭ್ಯವಾಗಲಿದೆ.
2. ಬ್ಯಾಡ್ ಕಾಪ್(ಹಿಂದಿ ಸೀರಿಸ್) ಜೂನ್ 21
3. ದಿ ಬೇರ್ ಸೀಸನ್-3(ಸೀರಿಸ್) ಜೂನ್ 21
ಬುಕ್‌ಮೈ ಶೋ
1. ಲಾಸ್ಟ್ ನೈಟ್ ಆಫ್ ಅಮೋರ್(ಇಟಾಲಿಯನ್ ಸಿನಿಮಾ) ಜೂನ್ 21


Click it and Unblock the Notifications











