OTT Releases This Week: ಈ ವಾರ ಓಟಿಟಿಯಲ್ಲಿ 20 ಚಿತ್ರಗಳು; ಶಿವಣ್ಣನ ಕನ್ನಡ ಸಿನಿಮಾ ಕೂಡ ಇದೆ
ಐಪಿಎಲ್ ಮುಗೀಲಿಲ್ಲ. ದೊಡ್ಡ ಸಿನಿಮಾಗಳು ಥಿಯೇಟರ್ ಕಡೆ ಬರ್ತಿಲ್ಲ. ಜನ ಈಗ ಮನರಂಜನೆಗೆ ಓಟಿಟಿಯನ್ನೇ ಆಧರಿಸುವಂತಾಗಿದೆ. ಮತ್ತೊಂದು ವಾರ ಕಳೆದು ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಈ ವಾರ ಯಾವೆಲ್ಲಾ ಸಿನಿಮಾಗಳು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿದೆ.
ಕನ್ನಡದಲ್ಲಿ ಈ ವಾರ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ಮಾತ್ರ ತೆರೆಗೆ ಬರ್ತಿದೆ. ಬಾಲಿವುಡ್‌ನಲ್ಲಿ 'ಕೇಸರಿ-2', ತಮಿಳಿನ 'ಏಸ್' ಚಿತ್ರಗಳು ಬಿಡುಗಡೆ ಆಗುತ್ತಿದೆ. ಇನ್ನುಳಿದಂತೆ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಸಿನಿಮಾಗಳ ಬಗ್ಗೆ ಖಚಿತ ಮಾಹಿತಿ ಇಲ್ಲ. ಈ ವರ್ಷ ತೆರೆಗೆ ಬಂದಿದ್ದ ಒಂದಷ್ಟು ಸಿನಿಮಾ ಓಟಿಟಿಯಲ್ಲಿ ವೀಕ್ಷಿಸಲು ಜನ ಕಾಯುತ್ತಿದ್ದಾರೆ.

ಇಂಗ್ಲೀಷ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಈ ವಾರವೂ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲು ಸಜ್ಜಾಗಿವೆ. ಕೆಲ ಪರಭಾಷಾ ಸಿನಿಮಾ ಹಾಗೂ ವೆಬ್ ಸೀರಿಸ್ ಕನ್ನಡಕ್ಕೆ ಡಬ್ ಆಗಿ ಬರ್ತಿದೆ.
ಪ್ರೈಂ ವೀಡಿಯೋ
1. ಫೈರ್ ಫ್ಲೈ
ಶಿವಣ್ಣನ ಮಗಳು ನಿವೇದಿತಾ ನಿರ್ಮಾಣದ 'ಫೈರ್ ಫ್ಲೈ' ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದಿದೆ. ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ವಂಶಿಕೃಷ್ಣ ಶ್ರೀನಿವಾಸ್ ನಿರ್ದೇಶಿಸಿ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಏಪ್ರಿಲ್ 25ಕ್ಕೆ ತೆರೆಗೆ ಬಂದಿದ್ದ ಸಿನಿಮಾ ತಿಂಗಳಿಗೂ ಮುನ್ನ ಪ್ರೈಂ ವೀಡಿಯೋಗೆ ಬಂದಿದೆ. ಅಚ್ಯುತ್ ಕುಮಾರ್, ಸುಧಾರಾಣಿ ಚಿತ್ರದ ತಾರಾಗಣದಲ್ಲಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ.
2. ಅಭಿಲಾಷಂ(ಮಲಯಾಳಂ ಸಿನಿಮಾ) ಮೇ 23
3. ಮೋಟಾರ್ ಹೆಡ್ಸ್(ವೆಬ್ ಸೀರಿಸ್) ಮೇ 20
ನೆಟ್‌ಫ್ಲಿಕ್ಸ್
1. ಎಯಿರ್ ಫೋರ್ಸ್ ಎಲೈಟ್(ಇಂಗ್ಲೀಷ್ ಸಿನಿಮಾ) ಮೇ 23
2. ಬಿಗ್ ಮೌತ್ ಸೀಸನ್-8 (ವೆಬ್ ಸೀರಿಸ್) ಮೇ 23
3. ಅನ್ ಟೋಲ್ಡ್: ದಿ ಫಾಲ್ ಆಫ್ ಫರ್ವ್(ಇಂಗ್ಲಿಷ್ ಸಿನಿಮಾ) ಮೇ 23
4. ಸಾಲಾ ಸಿಲ್ವರ್ ಮನ್: ಪೋಸ್ಟ್ ಮಾರ್ಟಮ್(ಇಂಗ್ಲೀಷ್ ಸಿನಿಮಾ) ಮೇ 20
5. ಅವರ್ ಆನ್ ರೊಟೀನ್ ಸಿಯೋಲ್ (ಕೊರಿಯನ್ ಸೀರಿಸ್) ಮೇ 24
6. ದಿ ವೈಲ್ಡ್ ರೋಬೊ(ಇಂಗ್ಲೀಷ್ ಸಿನಿಮಾ) ಮೇ 23
7. ಸಿಕಂದರ್
ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ತಮಿಳು ನಿರ್ದೇಶಕ ಎ. ಆರ್ ಮುಗರುದಾಸ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೇ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಬಿಡುಗಡೆಗೂ ಮುನ್ನ ಸಿನಿಮಾ ಪೈರಸಿ ಆಗಿ ಭಾರೀ ಸದ್ದು ಮಾಡಿತ್ತು.

ಹಾಟ್‌ಸ್ಟರ್
1. ಟಕ್ಕಿ ಇನ್ ಇಟಲಿ(ಇಂಗ್ಲೀಷ್ ವೆಬ್ ಸೀರಿಸ್) ಮೇ 19
2. ಟ್ರೂತ್ ಆರ್ ಟ್ರಬಲ್(ಹಿಂದಿ ಶೋ) ಮೇ 19
3. ಲ್ಯಾಂಡ್‌ಮ್ಯಾನ್(ಇಂಗ್ಲೀಷ್ ಸೀರಿಸ್) ಮೇ 21
4. ಹಾರ್ಟ್ ಬೀಟ್ ಸೀಸನ್-2 (ತೆಲುಗು ವೆಬ್ ಸೀರಿಸ್) ಮೇ 22
5. ಫೈಂಡ್ ದಿ ಫರ್ಜಿ(ಹಿಂದಿ ವೆಬ್ ಸೀರಿಸ್) ಮೇ 23
ಆಫಲ್ ಪ್ಲಸ್ ಟಿವಿ
1. ಫೌಂಟೆನ್ ಆಫ್ ಯೂತ್(ಇಂಗ್ಲೀಷ್ ಸಿನಿಮಾ) ಮೇ 23
ಸಿಂಪ್ಲಿ ಸೌತ್
1. ಮೇಘ(ಕನ್ನಡ ಸಿನಿಮಾ) ಮೇ 21
ಅಹಾ ಓಟಿಟಿ
1. ಅರ್ಜುನ್ ಸನ್ ಆಫ್ ವೈಜಯಂತಿ
ತಿಂಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಆಕ್ಷನ್ ಸಿನಿಮಾ 'ಅರ್ಜುನ್ ಸನ್ ಆಫ್ ವೈಜಯಂತಿ' ಈ ವಾರ ಓಟಿಟಿಗೆ ಬರ್ತಿದೆ. ಮೇ 23ರಂದು ಅಹಾ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಪ್ರದೀಪ್ ಚಿಲುಕುರಿ ನಿರ್ದೇಶನದ ಈ ಚಿತ್ರದಲ್ಲಿ ವಿಜಯಶಾಂತಿ ಹಾಗೂ ಕಲ್ಯಾಣ್ ರಾಮ್ ತಾಯಿ ಮಗನ ಪಾತ್ರಗಳಲ್ಲಿ ನಟಿಸಿದ್ದಾರೆ.
ಬಹಳ ನಿರೀಕ್ಷೆ ಹುಟ್ಟಾಕ್ಕಿದ್ದ 'ಅರ್ಜುನ್ ಸನ್ ಆಫ್ ವೈಜಯಂತಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಇದೀಗ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು ವೀಕೆಂಡ್‌ಗೆ ಒಳ್ಳೆ ಎಂಟರ್‌ಟೈನರ್ ಎಂದು ಸಿನಿರಸಿಕರು ಭಾವಿಸುತ್ತಿದ್ದಾರೆ. ಚಿತ್ರದಲ್ಲಿ ವೈಜಯಂತಿ ಐಪಿಎಸ್ ಆಗಿ ವಿಜಯಶಾಂತಿ ಅಬ್ಬರಿಸಿದ್ದಾರೆ. ಮಗ ಅರ್ಜುನ್ ಪಾತ್ರದಲ್ಲಿ ಕಲ್ಯಾಣ್ ಮಿಂಚಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ.
ಎನ್‌ಟಿಆರ್ ಆರ್ಟ್ಸ್ ಹಾಗೂ ಅಶೋಕ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಹೀರೊ ಆಗಿ ನಟಿಸುವುದರ ಜೊತೆಗೆ ಕಲ್ಯಾಣ್ ರಾಮ್ ಹಣ ಹೂಡಿದ್ದರು. ವಿಜಯಶಾಂತಿ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ. ರಾಜಕೀಯರಂಗದಲ್ಲಿ ಸಕ್ರಿಯರಾಗಿದ್ದಾರೆ. 'ಸರಿಲೇರು ನೀಕೆವ್ವರು' ಚಿತ್ರದ ಬಳಿಕ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











