'ಅನಿಮಲ್' ನೋಡಿದ್ರಾ..?: ಬರ್ಫಿ, ರಾಕ್‌ಸ್ಟಾರ್ ಸೇರಿದಂತೆ ರಣಬೀರ್ ಕಪೂರ್ ಅವರ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ

ಸದ್ಯ ಎಲ್ಲಾ ಕಡೆ 'ಅನಿಮಲ್' ಸಿನಿಮಾದ್ದೇ ಹವಾ. ಕೆಲವರು ಪಾಸಿಟಿವ್ ರಿವ್ಯೂ ಕೊಟ್ರೆ ಮತ್ತೆ ಕೆಲವರು ನೆಗೆಟಿವ್ ರಿವ್ಯೂ ಕೊಟ್ಟಿದ್ದಾರೆ. ಅತಿಯಾದ ರಕ್ತಪಾತ, ಹಿಂಸೆ, ಹೆಣ್ಣು ಮಕ್ಕಳ ಕಡೆಗಣನೆ, ಅತೀಯಾದ ಬೋಲ್ಡ್ ದೃಶ್ಯಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ, ಇವೆಲ್ಲದರ ನಡುವೆ ನಟ ರಣಬೀರ್ ಕಪೂರ್ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇದು ರಣಬೀರ್ ಕಪೂರ್ ಜೀವನದ ಅತ್ಯುತ್ತಮ ನಟನೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಮಾತಿನ ಹಿನ್ನಲೆಯಲ್ಲಿ ನೋಡುವುದಾದರೇ ನಟ ರಣಬೀರ್ ಕಪೂರ್ ಅವರ ಹಳೆಯ ಸಿನಿಮಾಗಳು ಕೂಡ ಅತ್ಯುತ್ತಮವಾಗಿವೆ. ಅಂತಹ ಕೆಲವು ಸಿನಿಮಾಗಳ ಪಟ್ಟಿ ಇಲ್ಲಿದೆ. ಈ ಎಲ್ಲಾ ಸಿನಿಮಾಗಳು ಕೂಡ ಓಟಿಟಿ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ನೋಡಬಹುದು.

 From Barfi to tamasha: Ranbir Kapoor best movies, you can watch in ott

ರಣಬೀರ್ ಕಪೂರ್ ಬೆಸ್ಟ ಸಿನಿಮಾಗಳ ಪಟ್ಟಿ

ರಣಬೀರ್ ಕಪೂರ್ 2007 ರಲ್ಲಿ ಬಂದ 'ಸಾವರಿಯಾ' ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದವರು. ಅಂದಿನಿಂದ ಹಿಂಸಿ ಸಿನಿಮಾ ರಂಗದ ಪ್ರಮುಖ ತಾರೆಯಾಗಿದ್ದಾರೆ. ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಜನರ ಗಮನ ಸೆಳೆದಿದ್ದಾರೆ. ಬರ್ಫಿ, ಯೇ ಜವಾನಿ ಹೈ ದೀವಾನಿ, ತಮಾಷಾ ಸೇರಿದಂತೆ ಹಲವು ಸಿನಿಮಾಗಳು ಆ ಸಾಲಿಗೆ ಬಂದಿವೆ.

ಬರ್ಫಿ (2012)

2012ರಲ್ಲಿ ಬಿಡುಗಡೆಯಾದ ಬರ್ಫಿ ಸಿನಿಮಾ ರಬೀರ್ ಕಪೂರ್ ಅಭಿನಯದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ. ಪ್ರಿಯಾಂಕಾ ಚೋಪ್ರಾ, ಇಲಿಯಾನಾ ಡಿಕ್ರೂಜ್, ಆಶಿಶ್ ವಿದ್ಯಾರ್ಥಿ, ಸೌರಭ್ ಶುಕ್ಲಾ, ಸುಮೋನಾ ಚಕ್ರವರ್ತಿ, ಜಿಶು ಸೇನ್‌ಗುಪ್ತಾ, ಅರುಣ್ ಬಾಲಿ ನಟಿಸಿರುವ ಈ ಸಿನಿಮಾಕ್ಕೆ ಅನುರಾಗ್ ಬಸು ಆಕ್ಷನ್ ಕಟ್ ಹೇಳಿದ್ದಾರೆ.

ಕಿವುಡ, ಮೂಕ ವ್ಯಕ್ತಿ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಯುವತಿಯ ನಡುವಿನ ಹೃದಯಸ್ಪರ್ಶಿ ಪ್ರೇಮಕಥೆಯಾಗಿದೆ. ರಣಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ಇಲಿಯಾನಾ ಡಿಕ್ರೂಜ್‌ರ ಟ್ರಯಾಂಗಲ್ ಲವ್ ಸ್ಟೋರಿ ಇಲ್ಲಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.

ತಮಾಶಾ (2015)

2015ರಲ್ಲಿ ಬಿಡುಗಡೆಯಾದ 'ತಮಾಶಾ' ಸಿನಿಮಾದಲ್ಲಿನ ರಣಬೀರ್ ಕಪೂರ್ ನಿರ್ವಹಿಸಿದ ಮುಖ್ಯ ಪಾತ್ರ ವೇದ್ ವರ್ಧನ್ ಸಾಹ್ನಿ ಇವತ್ತಿಗೂ ಯುವಜನರನ್ನು ಕಾಡುವಂತಿದೆ. ಈ ಚಿತ್ರ ರಣಬೀರ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ನಾಯಕಿಯಾಗಿ ದೀಪಿಕಾ ಪಡುಕೋಣೆ, ಹಿಮಾಂಶು ಶರ್ಮಾ, ಪಿಯೂಷ್ ಮಿಶ್ರಾ ನಟಿಸಿದ್ದು, ಇಮ್ತಿಯಾಜ್ ಅಲಿ ನಿರ್ದೇಶನವಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.

3.ಯೇ ಜವಾನಿ ಹೈ ದೀವಾನಿ (2013)

ಯೇ ಜವಾನಿ ಹೈ ದೀವಾನಿ ಸಿನಿಮಾ ಸ್ನೇಹಿತರ ನಡುವೆ ನಡೆಯುವ ಕಥೆ. ಪ್ರಯಾಣದ ಸಮಯದಲ್ಲಿ ಅವರ ಜೀವನವು ಹೇಗೆ ಬದಲಾಗುತ್ತದೆ ಮತ್ತು ದಾರಿಯುದ್ದಕ್ಕೂ ಅವರು ಎದುರಿಸುವ ಸವಾಲುಗಳ ಬಗ್ಗೆ ಸಿನಿಮಾ ಮಾತನಾಡುತ್ತದೆ. ಸ್ನೇಹಿತರ ಎಂಟು ವರ್ಷಗಳ ನಂತರ ಭೇಟಿಯಾದಾಗ ಅವರ ನಡುವಿನ ಸಂಬಂಧ, ಬದಲಾವಣೆಗಳ ಬಗ್ಗೆ ತಿಳಿಸುತ್ತದೆ.

ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಆದಿತ್ಯ ರಾಯ್ ಕಪೂರ್, ಮಾಧುರಿ ದೀಕ್ಷಿತ್ ನೆನೆ, ರಾಣಾ ದಗ್ಗುಬಾಟಿ, ಕಲ್ಕಿ ಕೋಚ್ಲಿನ್, ಪೂರ್ಣಾ ಜಗನ್ನಾಥನ್, ತನ್ವಿ ಅಜ್ಮಿ, ಎವೆಲಿನ್ ಶರ್ಮಾ, ಕುನಾಲ್ ರಾಯ್ ಕಪೂರ್, ಫಾರೂಕ್ ಶೇಖ್, ಡಾಲಿ ಅಹ್ಲುವಾಲಿಯಾ, ಅನಿಸಾ ನಟಿಸಿದ್ದಾರೆ. ಅಯನ್ ಮುಖರ್ಜಿ ನಿರ್ದೇಶಿಸಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.

 From Barfi to tamasha: Ranbir Kapoor best movies, you can watch in ott

4. ರಾಜನೀತಿ (2010)

ರಾಜಕೀಯ ಥ್ರಿಲ್ಲರ್ ಸಿನಿಮಾ ರಾಜನೀತಿ. 2010ರಲ್ಲಿ ಬಿಡುಗಡೆಯಾದ ಈ ಸಿನಿಮಾ ರಣಬೀರ್ ಕಪೂರ್ ಅವರ ಅತ್ಯುತ್ತಮ ರಾಜಕೀಯ ಸಿನಿಮಾಗಳಲ್ಲಿ ಒಂದು. ಎರಡು ಪ್ರತಿಸ್ಪರ್ಧಿ ರಾಜಕೀಯ ಕುಟುಂಬಗಳ ನಡುವಿನ ಅಧಿಕಾರದ ಹೋರಾಟದ ಬಗ್ಗೆ ವಿಸ್ತಾರವಾದ ಕಥೆಯನ್ನು ಹೇಳುತ್ತದೆ. ಪ್ರಕಾಶ್ ಝಾ ಬರೆದು ನಿರ್ದೇಶಿಸಿದ ಈ ಚಲನಚಿತ್ರವು ಮಹಾಭಾರತದಿಂದ ನೇರವಾಗಿ ಪ್ರೇರಿತವಾಗಿದೆ.

ರಣಬೀರ್ ಕಪೂರ್, ಕತ್ರಿನಾ ಕೈಫ್, ಅಜಯ್ ದೇವಗನ್, ಪ್ರಕಾಶ್ ಝಾ, ಅರ್ಜುನ್ ರಾಂಪಾಲ್, ಮನೋಜ್ ಬಾಜಪೇಯಿ, ನಾನಾ ಪಾಟೇಕರ್ ನಟಿಸಿರುವ ಈ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿದೆ.

5. ರಾಕ್‌ಸ್ಟಾರ್ (2011)

ರಾಕ್‌ಸ್ಟಾರ್ ಸಿನಿಮಾ ಜಿಮ್ ಮಾರಿಸನ್ ಅವರಂತೆ ರಾಕ್‌ಸ್ಟಾರ್ ಆಗಬೇಕೆಂದು ಕನಸು ಕಾಣುವ ದೆಹಲಿ ಮೂಲದ ಮಧ್ಯಮ ವರ್ಗದ ಹುಡುಗ 'ಜನಾರ್ದನ್' ಎಂಬುವವರ ಕಥೆಯನ್ನು ಹೇಳುತ್ತದೆ. ಇಮ್ತಿಯಾಜ್ ಅಲಿ ನಿರ್ದೇಶಿಸಿರುವ ಸಿನಿಮಾದಲ್ಲಿ ರಣಬೀರ್ ಕಪೂರ್, ನರ್ಗೀಸ್ ಫಕ್ರಿ, ಜೈದೀಪ್ ಅಹ್ಲಾವತ್, ಸಂಜನಾ ಸಂಘಿ, ಅದಿತಿ ರಾವ್ ಹೈದರಿ, ಶಮ್ಮಿ ಕಪೂರ್, ಪಿಯೂಷ್ ಮಿಶ್ರಾ ನಟಿಸಿದ್ದಾರೆ. ಎಆರ್ ರೆಹಮಾನ್ ಸಂಗೀತವಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ಲಭ್ಯವಿದೆ.

6. ಸಂಜು (2018)

ಸಂಜು ಸಿನಿಮಾ ಬಾಲಿವುಡ್ ನಟ 'ಸಂಜಯ್ ದತ್' ಅವರ ಜೀವನಾಧಾರಿತ ಚಿತ್ರವಾಗಿದೆ. ಚಲನಚಿತ್ರವು ಅವರ ಜೀವನದ ಕೆಲವು ಮಹತ್ವದ ಘಟನೆಗಳನ್ನು ತೋರಿಸುತ್ತದೆ. ಖ್ಯಾತ ನಟ ಸುನಿಲ್ ದತ್ ಅವರ ಪುತ್ರ ಸಂಜಯ್ ದತ್ ಪಾತ್ರವನ್ನು ರಣಬೀರ್ ಕಪೂರ್ ನಿರ್ವಹಿಸಿದ್ದರು. ಸಿನಿಮಾಕ್ಕೆ ರಾಜ್‌ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳಿದ್ದು, ವಿಕ್ಕಿ ಕೌಶಲ್, ಸೋನಮ್ ಕಪೂರ್, ಅನುಷ್ಕಾ ಶರ್ಮಾ, ಸಂಜಯ್ ದತ್, ಟಬು, ಮನೀಶಾ ಕೊಯಿರಾಲಾ ಸೇರಿ ಹಲವರು ಸಿನಿಮಾದಲ್ಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಲಭ್ಯವಿದೆ.

More from Filmibeat

English summary
Bollywood actor Ranbir Kapoor best movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X