Ott Releases this week: ಒಟ್ಟು 10 ಸಿನಿಮಾಗಳು ಈ ವಾರ ಓಟಿಟಿಯಲ್ಲಿ ರಿಲೀಸ್, ಇಲ್ಲಿದೆ ಲಿಸ್ಟ್
ಚಿತ್ರರಂಗದಲ್ಲಿ ಕಳೆದ ವರ್ಷದ ಅಂತ್ಯ ಜೋರಾಗಿತ್ತು. ಆದರೆ ಹೊಸ ವರ್ಷದ ಆರಂಭ ಹೇಳಿಕೊಳ್ಳುವಂತೆ ಇರಲಿಲ್ಲ. ಸಂಕ್ರಾಂತಿಗೆ ಬಂದ ಕೆಲ ಸಿನಿಮಾಗಳು ಕೊಂಚಮಟ್ಟಿಗೆ ಸದ್ದು ಮಾಡುತ್ತಿವೆ. ಕನ್ನಡದ 'ಛೂ ಮಂತರ್' ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
'ಸಂಜು ವೆಡ್ಸ್ ಗೀತಾ- 2' ಸಿನಿಮಾ ನಿರಾಸೆ ಮೂಡಿಸಿದೆ. ಇನ್ನು ಸುಗ್ಗಿ ಸಂಭ್ರಮದಲ್ಲಿ ಬಂದಿದ್ದ 'ಸಂಕ್ರಾಂತಿಕಿ ವಸ್ತುನ್ನಾಂ' ತೆಲುಗು ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ವಿಕ್ಟರಿ ವೆಂಕಟೇಶ್- ಅನಿಲ್ ರಾವಿಪುಡಿ ಕಾಂಬಿನೇಷನ್ ಮತ್ತೆ ಸದ್ದು ಮಾಡ್ತಿದೆ. ಇನ್ನುಳಿದಂತೆ 'ಗೇಮ್ ಚೇಂಜರ್' ಹಾಗೂ 'ಡಾಕು ಮಹಾರಾಜ್' ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ.

ಇತ್ತ ಓಟಿಟಿಯಲ್ಲಿ ಈ ವರ್ಷ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗಲಿಲ್ಲ. ಕಳೆದ ವಾರ 'ವಿಡುತಲೈ- 2' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿತ್ತು. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಪ್ರೈಂ ವೀಡಿಯೋಗೆ ಬಂದಿದೆ. ಕನ್ನಡದಲ್ಲಿ 'ಮರ್ಯಾದೆ ಪ್ರಶ್ನೆ', 'ಆರಾಮ್ ಅರವಿಂದ ಸ್ವಾಮಿ', 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳು ಓಟಿಟಿಗೆ ಬರಬೇಕಿದೆ. ಆದರೆ ಯಾವಾಗ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಇನ್ನು ಈ ವಾರ ಯಾವೆಲ್ಲಾ ಸಿನಿಮಾಗಳು ಓಟಿಟಿಗೆ ಬರ್ತಿವೆ ಬನ್ನಿ ನೋಡೋಣ.
ಡಿಸ್ನಿ ಹಾಟ್‌ಸ್ಟರ್
1. ಬರೋಜ್
ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ 'ಬರೋಜ್' ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಆದರೆ ಭಾರೀ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಫ್ಯಾಂಟಸಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಮೋಹನ್ ಲಾಲ್ ಸ್ವತಃ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ತ್ರೀಡಿಯಲ್ಲಿ ಸಿನಿಮಾ ತೆರೆಗೆ ಬಂದಿತ್ತು. ತಾಂತ್ರಿಕವಾಗಿ ಚಿತ್ರ ಚೆನ್ನಾಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಡಿಸೆಂಬರ್ 22ಕ್ಕೆ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
2. ಸ್ವೀಟ್ ಡ್ರೀಮ್ಸ್(ಹಿಂದಿ ಸಿನಿಮಾ) ಜನವರಿ 24
ಅಹಾ ಓಟಿಟಿ
1. ರಜಾಕರ್(ಕನ್ನಡ ಡಬ್ಬಿಂಗ್)
ಕಳೆದ ವರ್ಷ ಭಾರೀ ವಿವಾದ ಹುಟ್ಟುಹಾಕಿದ್ದ 'ರಜಾಕರ್' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಈ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ಪ್ರೇಮಾ, ಅನಸೂಯಾ ಭಾರಧ್ವಜ್, ಬಾಬಿ ಸಿಂಹ, ಮಕರಂದ್ ದೇಶಪಾಂಡೆ, ವೇದಿಕಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಯೆಟ ಸತ್ಯನಾರಾಯಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಗುಡೂರ್ ನಾರಾಯಣ ರೆಡ್ಡಿ ಬಂಡವಾಳ ಹೂಡಿದ್ದರು. ಜನವರಿ 24ಕ್ಕೆ ಅಹಾ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಕನ್ನಡಕ್ಕೂ ಡಬ್ ಆಗಿ 'ರಜಾಕರ್' ಸಿನಿಮಾ ಬರಲಿದೆ.

2. ಸ್ಮೈಲ್ ಮ್ಯಾನ್
ತಮಿಳಿನ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ 'ಸ್ಮೈಲ್ ಮ್ಯಾನ್' ಸಿನಿಮಾ ಕೂಡ ಜನವರಿ 24ಕ್ಕೆ ಅಹಾ ಓಟಿಟಿಗೆ ಬರ್ತಿದೆ. ಶರತ್ ಕುಮಾರ್ ನಟನೆಯ ಈ ಸಿನಿಮಾ ಡಿಸೆಂಬರ್ 27ಕ್ಕೆ ತೆರೆಗೆ ಬಂದಿತ್ತು. ಆದರೆ ದೊಡ್ಡಮಟ್ಟದಲ್ಲಿ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಇದೀಗ ಓಟಿಟಿ ವೀಕ್ಷಕರ ಮುಂದೆ ಬರಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಒಳ್ಳೆ ಕ್ರೇಜ್ ಇದೆ.
ಜಿಯೋ ಸಿನಿಮಾ
1. ದಿದಿ(ಹಾಲಿವುಡ್ ಸಿನಿಮಾ) ಜನವರಿ 26
ಜೀ-5
1. ಹಿಸಾಬ್ ಬರಾಬರ್
ಮಾಧವನ್ ಹಾಗೂ ನೀಲ್ ನಿತಿನ್ ಮುಖೇಶ್ ನಟನೆಯ ವಿಡಂಬನಾತ್ಮಕ ಥ್ರಿಲ್ಲರ್ ಸಿನಿಮಾ 'ಹಿಸಾಬ್ ಬರಾಬರ್' ನೇರವಾಗಿ ಓಟಿಟಿಗೆ ಬರಲಿದೆ. ಅಶ್ವಿನ್ ಧೀರ್ ನಿರ್ದೇಶನದ ಚಿತ್ರವನ್ನು ಜಿಯೋ ಸ್ಟುಡಿಯೋಸ್ ಹಾಗೂ ಎಸ್.ಪಿ ಸಿನಿಕ್ರಾಪ್ ಸಂಸ್ಥೆಗಳು ನಿರ್ಮಿಸಿವೆ. ಬ್ಯಾಂಕ್ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಸುತ್ತಾ ಈ ಸಿನಿಮಾ ಕಥೆ ಸುತ್ತುತ್ತದೆ. ಜೀ-5ನಲ್ಲಿ ಜನವರಿ 24ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ನೆಟ್‌ಫ್ಲಿಕ್ಸ್
1. ಶಫ್ಟೆಡ್(ವೆಬ್ ಸೀರಿಸ್) ಜನವರಿ 24
2. ದಿ ನೈಟ್ ಏಜೆಂಟ್- ಸೀಸನ್-2(ವೆಬ್ ಸೀರಿಸ್) ಜನವರಿ 23
3. ದಿ ಸ್ಯಾಂಡ್ ಕ್ಯಾಸ್ಟಲ್(ಹಾಲಿವುಡ್ ಸಿನಿಮಾ) ಜನವರಿ 24


Click it and Unblock the Notifications











