ಓಟಿಟಿಯಲ್ಲಿ ಶುರುವಾಗಲಿದೆ ಉಡಾಳ ಹವಾ; ಉತ್ತರ ಕರ್ನಾಟಕದ ಸೊಗಡಿನ ಸಿನಿಮಾವನ್ನು ಎಲ್ಲಿ ನೋಡಬಹುದು? ಇಲ್ಲಿದೆ ಮಾಹಿತಿ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಕುಳಿತು ಚಿತ್ರ ನೋಡಿದಾಗಲೇ ಮನರಂಜನೆಯ ಕಿಕ್ಕೇರುತ್ತಿತ್ತು. ಇನ್ನು ಚಿತ್ರತಂಡಕ್ಕೆ ಕೂಡ ಆ ಕಾಲದಲ್ಲಿ ನೂರು ದಿನ ಚಿತ್ರಮಂದಿರದಲ್ಲಿ ತಮ್ಮ ಚಿತ್ರ ಪ್ರದರ್ಶನ ಕಂಡರೆ ಅದೇ ದೊಡ್ಡ ಸಾಧನೆಯಾಗಿತ್ತು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಓಟಿಟಿ ವೇದಿಕೆಗಳ ಹಾವಳಿ ಹೆಚ್ಚಾಗಿದೆ. ಚಿತ್ರಮಂದಿರಗಳ ಅಳಿವು ಉಳಿವಿನ...

ವಿಚಾರದಲ್ಲಿ ಆತಂಕ ಶುರುವಾಗಿದೆ. ಯಾಕೆಂದರೆ ಚಿತ್ರವೊಂದು ತೆರೆಗೆ ಬಂದು ಒಂದು ತಿಂಗಳು ಕೂಡ ಆಗಿರುವುದಿಲ್ಲ. ಆಗಲೇ ಓಟಿಟಿಗೆ ಆ ಚಿತ್ರ ಬಂದು ಬಿಡುತ್ತೆ. ಇದರಿಂದ ಪ್ರೇಕ್ಷಕ ಹೇಗಿದ್ದರೂ ತಿಂಗಳೊಳಗೆ ಫೋನ್ ಅಥವಾ ಟಿವಿಯಲ್ಲಿ ಸಿನಿಮಾ ಬಂದೇ ಬರುತ್ತದೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಚಿತ್ರಮಂದಿರಕ್ಕೆ ಯಾಕೆ ಹೋಗಬೇಕು? ಎಂಬ ಯೋಚನೆ ಮಾಡುತ್ತಿದ್ದಾನೆ. ಚಿತ್ರಮಂದಿರಕ್ಕೆ ಹೋಗದೇ ಮನೆಯಲ್ಲಿಯೇ ಕಾಯುತ್ತಿದ್ದಾನೆ.

From Bijapur with Love Where And When to Watch the Hilarious Udaala Yogaraj Bhat s Latest

ಪ್ರೇಕ್ಷಕ ಮಹಾಪ್ರಭುವಿನ ಈ ''ವೇಯ್ಟಿಂಗ್ ಪಾಲಿಸಿ''ಯಿಂದಾಗಿ ಹಲವು ಚಿಕ್ಕ-ಪುಟ್ಟ ಚಿತ್ರಗಳು ನೆಲಕಚ್ಚುತ್ತಿವೆ. ಇನ್ನೂ ಕೆಲ ಚಿತ್ರಕ್ಕೆ ಚಿತ್ರಮಂದಿರದಲ್ಲಿ ಸಿಗಬೇಕಾದ ಜನಮನ್ನಣೆ ಸಿಗುತ್ತಿಲ್ಲ. ಇದೆಲ್ಲಾ ಏನೇ ಇರಲಿ ಸದ್ಯ ಇದೇ ಓಟಿಟಿಗೆ ಕನ್ನಡದ ಮತ್ತೊಂದು ಹೊಸ ಚಿತ್ರ ಬಂದಿದೆ. ಆ ಚಿತ್ರದ ಹೆಸರು ''ಉಡಾಳ''.

ಹೌದು, ''ಉಡಾಳ''.. ರವಿ ಶಾಮನೂರು ಅವರ ಜೊತೆ ಸೇರಿ ಯೋಗರಾಜ್ ಭಟ್ ನಿರ್ಮಾಣ ಮಾಡಿದ್ದ ಸಿನಿಮಾ. ಕಳೆದ ವರ್ಷದ ನವೆಂಬರ್ 14ರಂದು ತೆರೆಗೆ ಬಂದಿದ್ದ ಈ ಚಿತ್ರವನ್ನು ಯೋಗರಾಜ್ ಭಟ್ ಅವರ ಶಿಷ್ಯ ಅಮೋಲ್ ಪಾಟೀಲ್ ಪಾಟೀಲ್ ನಿರ್ದೇಶನ ಇತ್ತು. ಇನ್ನು ಈ ಹಿಂದೆ ಪದವಿಪೂರ್ವ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ರವಿ ಶಾಮನೂರು ಅವರ ಮಗ ಪೃಥ್ವಿ ಶಾಮನೂರು ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದರೆ ಹೃತಿಕಾ ಶ್ರೀನಿವಾಸ್ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು.

ಕಥಾಹಂದರವೇನು ?

ಉಡಾಳ ಕಥೆ ಬಿಜಾಪುರದ ಹಿನ್ನೆಲೆ ಸಾಗುತ್ತೆ. ಗೋಲ್‌ಗುಂಬಜ್‌ನ ಟೂರ್ ಗೈಡ್ ಮತ್ತು ಆಟೋ ಡ್ರೈವರ್ ಪ್ರಕಾಶ್ ಬಿಜಾಪುರ ಅಲಿಯಾಸ್ ಪಕ್ಯಾ (ಪೃಥ್ವಿ ಶಾಮನೂರು) ಮತ್ತು ಒಣ ಮೆಣಸಿನಕಾಯಿಯಷ್ಟೇ ಖಾರದ ಹುಡುಗಿ ಪಿಂಕಿ (ಹೃತಿಕಾ ) ನಡೆಯುವ ತರಲೆ, ತಮಾಷೆಯ ಜೊತೆ ಪಿಸ್ತೂಲ್ ದಂಧೆ ಇಟ್ಕೊಂಡು ಇಲ್ಲಿ ಕಥೆಯನ್ನು ಹೆಣೆಯಲಾಗಿದೆ. ಒಂದು ಸಮಸ್ಯೆಯಿಂದ ಪಾರಾಗಲು ಇಬ್ಬರು ಇನ್ನೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಮುಂದೇನು ಆಗುತ್ತೆ ಎನ್ನುವುದು ಚಿತ್ರದ ಕಥಾವಸ್ತು.

ಬೇರೆ ಯಾರೆಲ್ಲಾ ಇದ್ದಾರೆ ?

ಪೃಥ್ವಿ ಮತ್ತು ಹೃತಿಕಾ ಅವರನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ವೈಜನಾಥ್ ಬಿರಾದಾರ್, ಹರೀಶ್ ಹಿರಿಯೂರು, ಸುಮಿತ್ ಸಂಕೋಜಿ, ವಾದಿರಾಜ್ ಬಬ್ಲಾಡಿ, ಪ್ರವೀಣ್ ಗಸ್ತಿ, ಗೋವಿಂದೇಗೌಡ, ದಯಾನಂದ ಬೀಳಗಿ, ರೇಣುಕಾ, ಶ್ರೀಧರ್, ದಾನಪ್ಪ, ಸೋನಿಯಾ ಮುಂತಾದವರು ಇದ್ದಾರೆ. ಶಿವಶಂಕರ್‍ ನೂರಾಂಬಡ ಛಾಯಾಗ್ರಹಣ ಮತ್ತು ಚೇತನ್‍-ಡ್ಯಾವಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಇನ್ನು ಯಾವ ಚಿತ್ರದಲ್ಲಿ ಕೂಡ ಬಿಜಾಪುರವನ್ನು ಇಷ್ಟೊಂದು ವಿಸ್ತೃತವಾಗಿ ತೋರಿಸುವ ಪ್ರಯತ್ನವಾಗಿರಲಿಲ್ಲ. ಆ ಪ್ರಯತ್ನವನ್ನು ನಿರ್ದೇಶಕ ಅಮೋಲ್ ಇಲ್ಲಿ ಮಾಡಿದ್ದು ವಿಶೇಷ.

From Bijapur with Love Where And When to Watch the Hilarious Udaala Yogaraj Bhat s Latest

ಎಲ್ಲಿ ನೋಡಬಹುದು ?

ಚಿತ್ರಮಂದಿರಕ್ಕೆ ಬಂದು 56 ದಿನಗಳಾದ ನಂತರ ''ಉಡಾಳ'' ಇದೇ ಜನವರಿ 9ರಂದು ಓಟಿಟಿಗೆ ಬರುತ್ತಿದೆ. ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗಲಿದೆ. ಓಟಿಟಿಯಲ್ಲಿ ಉತ್ತರ ಕರ್ನಾಟಕದ ಸೊಗಡಿನ ಈ ಚಿತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಆಸಕ್ತರು ಇದೇ ಜನವರಿ 9ರಿಂದ ಚಿತ್ರವನ್ನು ಮನೆಯಲ್ಲಿಯೇ ಕುಳಿತು ನೋಡಬಹುದು.

More from Filmibeat

English summary
Experience the Bijapur magic! Find out when and where to watch Udaala, the hilarious new hit from Yogaraj Bhat starring Pruthvi Shamanur and Hrithika Srinivas
Read more about: yogaraj bhat filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X