Ott Releases This Week; ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ, ಈ 3 ಸಿನಿಮಾ ಮಿಸ್ ಮಾಡ್ಕೊಬೇಡಿ

ಈ ವಾರ ಚಿತ್ರಮಂದಿರದಲ್ಲಿ ಕನ್ನಡದ 'ಕೆಡಿ' ಸಿನಿಮಾ ಬಿಡುಗಡೆ ಆಗ್ತಿದೆ. ಧನುಷ್ ನಟನೆಯ ತಮಿಳಿನ 'ಕಾರ' ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ಎರಡೂ ಸಿನಿಮಾಗಳು ತಕ್ಕಮಟ್ಟಿಗೆ ನಿರೀಕ್ಷೆ ಮೂಡಿಸಿವೆ. ಐಪಿಎಲ್ ಆರ್ಭಟದ ನಡುವೆಯೂ ಈ ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ಮಾಡಲಾಗ್ತಿದೆ.

ಸಿನಿಮಾ ಬಿಡುಗಡೆ ಮೇಲೆ ಈಗ ಐಪಿಎಲ್ ಕಾರ್ಮೋಡ ಕವಿದಿದೆ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಅಷ್ಟು ಸುಲಭವಲ್ಲ ಎನ್ನುವಂತಾಗಿದೆ. ಸಂಜೆ ಆಗುತ್ತಿದ್ದಂತೆ ಐಪಿಎಲ್ ಪಂದ್ಯಗಳನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ. ಮತ್ತೊಂದು ಕಡೆ ಓಟಿಟಿಯಲ್ಲಿ ಸಿನಿಮಾ, ವೆಬ್ ಸೀರಿಸ್ ವೀಕ್ಷಿಸಲು ಮನಸ್ಸು ಮಾಡುತ್ತಿದ್ದಾರೆ.

From Biker to Aadu-3 This week ott Release movies and web series list

ಕಳೆದ ವಾರ ಬಿಡುಗಡೆ ಆಗಿದ್ದ ಕನ್ನಡದ 'ಜೆರಾಕ್ಸ್' ವೆಬ್ ಸೀರಿಸ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ವಾರ ಕೂಡ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲು ಸಜ್ಜಾಗ್ತಿದೆ.

ಬೈಕರ್

ಶರ್ವಾನಂದ್ ಹಾಗೂ ರಾಜಶೇಖರ್ ನಟನೆಯ 'ಬೈಕರ್' ಸಿನಿಮಾ ಏಪ್ರಿಲ್ 3ರಂದು ತೆರೆಕಂಡು ಸದ್ದು ಮಾಡಿತ್ತು. ಆದರೆ ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬರ್ತಿದೆ. ಮೇ 1ರಂದು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವುದು ಖಚಿತವಾಗಿದೆ.

From Biker to Aadu-3 This week ott Release movies and web series list

ಅಭಿಲಾಷ್ ರೆಡ್ಡಿ ಕನ್ಕಾರ ಈ ಸ್ಪೋರ್ಟ್ಸ್ ಡ್ರಾಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಾಳವಿಕಾ ನಾಯರ್ ನಾಯಕಿಯಾಗಿ ಮಿಂಚಿದ್ದಾರೆ. ಅತುಲ್ ಕುಲಕರ್ಣಿ, ಬ್ರಹ್ಮಾಜಿ ಕೂಡ 'ಬೈಕರ್' ಚಿತ್ರದ ತಾರಾಗಣದಲ್ಲಿದ್ದಾರೆ. ಮೊದಲ ವಾರವೇ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿತ್ತು.

ರಾಕಾಸ

ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ನಿರ್ಮಾಣದ 'ರಾಕಾಸ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಏಪ್ರಿಲ್ ಮೊದಲ ವಾರ ತೆರೆಗೆ ಬಂದಿದ್ದ ಈ ಹಾರರ್ ಕಾಮಿಡಿ ಸಿನಿಮಾ ಮೇ 1ಕ್ಕೆ ಓಟಿಟಿಗೆ ಬರ್ತಿದೆ. ಚಿತ್ರದ ಹಾಡೊಂದರಲ್ಲಿ ನಿಹಾರಿಕಾ ಹೆಜ್ಜೆ ಹಾಕಿದ್ದಾರೆ.

15 ಕೋಟಿ ರೂ. ಬಜೆಟ್ 'ರಾಕಾಸ' ಸಿನಿಮಾ 27 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಗೆಲುವಿನ ದಡ ಸೇರಿತ್ತು. ನೆಟ್‌ಫ್ಲಿಕ್ಸ್ 10 ಕೋಟಿ ರೂ.ಗೆ ಓಟಿಟಿ ರೈಟ್ಸ್ ಖರೀದಿಸಿದೆ ಎನ್ನಲಾಗ್ತಿದೆ.

ದಿ ಕೇರಳ ಸ್ಟೋರಿ-2

ಭಾರೀ ವಿವಾದಕ್ಕೆ ಕಾರಣವಾಗಿದ್ದ 'ದಿ ಕೇರಳ ಸ್ಟೋರಿ-2' ಸಿನಿಮಾ ಕೊನೆಗೂ ಓಟಿಟಿಗೆ ಬರ್ತಿದೆ. ಜೀ5ನಲ್ಲಿ ಮೇ 8ರಂದು ಬರಬೇಕಿದ್ದ ಸಿನಿಮಾ ಒಂದು ವಾರ ಮುನ್ನ ಅಂದರೆ ಮೇ 1ರಂದು ಸ್ಟ್ರೀಮಿಂಗ್ ಆರಂಭಿಸಲಿದೆ. ಕಾಮಾಕ್ಯ ನಾರಾಯಣ್ ಸಿಂಗ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಹೋಲಿಸಿದರೆ 2ನೇ ಭಾಗ ಅಷ್ಟಾಗಿ ಪ್ರೇಕ್ಷಕರನ್ನು ಸೆಳೆಯಲಿಲ್ಲ. ವಿವಾದಗಳಿಂದಲೇ ಸಿನಿಮಾ ಭಾರೀ ಸುದ್ದಿಗೆ ಗ್ರಾಸವಾಯಿತು.

ಆಡು- 3

ಮಲಯಾಳಂ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡುತ್ತಲೇ ಇವೆ. ಗುರುತು ಪರಿಚಯ ಇಲ್ಲದ ಕಲಾವಿದರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡ್ತಿವೆ. 'ಆಡು- 3' ಎಂಬ ಸಿನಿಮಾ 120 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿತ್ತು. ಈ ಫ್ಯಾಂಟಸಿ ಕಾಮಿಡಿ ಸಿನಿಮಾ ಈ ವಾರವೇ ಓಟಿಟಿಗೆ ಬರ್ತಿದೆ. ಮೇ 1ರಂದು ಸಿನಿಮಾ ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಪ್ರೈಂ ವಿಡಿಯೋ

1. ಸಪ್ನೆ vs ಎವರ್ರಿವನ್ ಸೀಸನ್-2 (ಹಿಂದಿ ವೆಬ್ ಸೀರಿಸ್) ಮೇ 1

2. ದಿ ಹೌಸ್ ಆಫ್ ದಿ ಸ್ಪಿರಿಟ್ಸ್(ಸ್ಪ್ಯಾಷಿನ್ ಸೀರಿಸ್) ಏಪ್ರಿಲ್ 29

ಹಾಟ್‌ಸ್ಟರ್

1. ಬ್ಯಾಚ್‌ಮೇಟ್ಸ್(ತೆಲುಗು ಸೀರಿಸ್) ಏಪ್ರಿಲ್ 30

ನೆಟ್‌ಫ್ಲಿಕ್ಸ್

1. ಮ್ಯಾನ್ ಆನ್ ಫೈಯರ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 30

2. ಗ್ಲೋರಿ(ಹಿಂದಿ ಸೀರಿಸ್) ಏಪ್ರಿಲ್ 30

3. ಶುಡ್ ಐ ಮ್ಯಾರಿ ಎ ಮರ್ಡರರ್(ಇಂಗ್ಲೀಷ್ ಸೀರಿಸ್) ಏಪ್ರಿಲ್ 29

Read more about: tollywood kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X