OTT releases this week: 'ಬ್ಲಿಂಕ್' ಜೊತೆ ಈ ವಾರ ಓಟಿಟಿಗೆ ಬರುತ್ತಿರುವ ಸಿನಿಮಾ, ಸೀರಿಸ್ ಲಿಸ್ಟ್

ದೊಡ್ಡ ಸಿನಿಮಾಗಳು ಬಿಡುಗಡೆ ಆಗದೇ ಚಿತ್ರಮಂದಿರಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಐಪಿಎಲ್, ಎಲೆಕ್ಷನ್ ರಿಸಲ್ಟ್ ಬರುವ ತನಕ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲ್ಲ ಎನ್ನುವುದು ಸ್ಪಷ್ಟವಾಗಿದೆ. ಸ್ಟಾರ್ ನಟರಂತೂ ಸೈಲೆಂಟ್ ಆಗಿಬಿಟ್ಟಿದ್ದಾರೆ.

ನೋಡ ನೋಡುತ್ತಲೇ ಮತ್ತೊಂದು ವಾರ ಕಳೆದು ಹೋಗಿದೆ. ಓಟಿಟಿಯಲ್ಲಿ ಒಂದಷ್ಟು ಹೊಸ ಕಂಟೆಂಟ್ ಬಂದಿದೆ. ಇನ್ನೆರಡು ದಿನಗಳಲ್ಲಿ ಮತ್ತಷ್ಟು ಬರಲಿದೆ. ಕಳೆದರಡು ತಿಂಗಳಲ್ಲಿ ತೆರೆಗಪ್ಪಳಿಸಿದ್ದ ಸಿನಿಮಾಗಳ ಜೊತೆಗೆ ಹೊಸ ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆಗ್ತಿವೆ. ಸಾಮಾನ್ಯವಾಗಿ ಓಟಿಟಿಯಲ್ಲಿ ಕನ್ನಡ ಸಿನಿಮಾ, ಸೀರಿಸ್ ಕಮ್ಮಿ ಎನ್ನುವ ವಾದ ಇದೆ. ಆದರೆ ಸದ್ಯಕ್ಕೆ ಒಂದೆರಡು ಸಿನಿಮಾಗಳು ಲಭ್ಯವಿದೆ.

From Blink to Bastar The Naxal Story this week ott releases movies shows list

ಈ ವಾರ 22ಕ್ಕೂ ಅಧಿಕ ಸಿನಿಮಾ ಹಾಗೂ ವೆಬ್ ಸೀರಿಸ್ ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ದರ್ಶನ ಕೊಡ್ತಿದೆ. ಮನೆಯಲ್ಲೇ ಕೂತು ಜನ ತಮ್ಮಿಷ್ಟದ ಸಿನಿಮಾ, ಸೀರಿಸ್ ನೋಡಬಹುದು. ಹಾಗಾದರೆ ನೆಟ್‌ಫ್ಲಿಕ್ಸ್, ಅಮೇಜಾನ್, ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಯಾವೆಲ್ಲಾ ಬರ್ತಿರೋ ಹೊಸ ಕಂಟೆಟ್ ಮಾಹಿತಿ ಮುಂದೆ ಓದಿ.

ಅಮೇಜಾನ್ ಪ್ರೈಂ

1. ಬ್ಲಿಂಕ್

ಬಹಳ ದಿನಗಳಿಂದ ಕನ್ನಡ ಪ್ರೇಕ್ಷಕರು ಕಾಯುತ್ತಿದ್ದ 'ಬ್ಲಿಂಕ್' ಸಿನಿಮಾ ಸದ್ದಿಲ್ಲದೇ ಪ್ರೈಂ ವಿಡಿಯೋಗೆ ಬಂದಿದೆ. ಕಳೆದ ವಾರವೇ ಯುಎಸ್, ಯುಕೆ ಪ್ರೈಂ ಚಂದಾದಾರರು ಹಣ ನೀಡಿ ಸಿನಿಮಾ ವೀಕ್ಷಿಸಲು ಆರಂಭಿಸಿದರು. ಇದೀಗ ಭಾರತದಲ್ಲಿರುವವ ಚಂದಾದಾರರಿಗೆ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಾಡುತ್ತಿದ್ದಾರೆ. ಇಂತಹ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸ್ತಿದ್ದಾರೆ.

2. 99 (ಇಂಗ್ಲೀಷ್ ಸೀರಿಸ್) - ಮೇ 17

3. ಔಟರ್ ರೇಂಜ್ ಸೀಸನ್-2( ಇಂಗ್ಲೀಷ್ ಸೀರಿಸ್) ಮೇ 16

ಡಿಸ್ನಿ ಹಾಟ್‌ಸ್ಟರ್

1. ಬಾಹುಬಲಿ: ಕ್ರೌನ್ ಆಫ್ ಬ್ಲಡ್

ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳು ಗೆದ್ದಿದ್ದು ಗೊತ್ತೇಯಿದೆ. ಅದೇ ಕಥೆಯ ಪಾತ್ರಗಳನ್ನು ಬಳಸಿಕೊಂಡು ಇದೀಗ ಆನಿಮೇಷನ್ ಸೀರಿಸ್ ಮಾಡಲಾಗಿದೆ. ಅದರ ಮೊದಲ ಭಾಗ 'ಬಾಹುಬಲಿ: ಕ್ರೌನ್ ಆಫ್ ಬ್ಲಡ್' ಮೇ 17ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ನಿರ್ದೇಶಕ ರಾಜಮೌಳಿ ಕೂಡ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಈಗಾಗಲೇ ಸರಣಿಯ ಟ್ರೈಲರ್ ರಿಲೀಸ್ ಆಗಿ ಕುತೂಹಲ ಮೂಡಿಸಿದೆ. ಮೌಳಿ 'ಬಾಹುಬಲಿ'ಯ ಹೊಸ ಹೊಸ ಕಥೆಗಳು ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸಿಗಲಿದೆ.

From Blink to Bastar The Naxal Story this week ott releases movies shows list

2. ಕ್ರ್ಯಾಷ್(ಕೊರಿಯನ್ ಸೀರಿಸ್) ಮೇ 13
3. ಚೋರುಡು(ತೆಲುಗು ಡಬ್ ಸಿನಿಮಾ) ಮೇ 14
4. ಅಂಕುಲ್ ಸಂಷಿಕ್(ಕೊರಿಯನ್ ಸೀರಿಸ್) ಮೇ 15

ಜೀ5

1. ಬಸ್ತಾರ್: ನಕ್ಸಲ್ ಸ್ಟೋರಿ

ಸುದೀಪ್ತೋ ಸೆನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅದಾ ಶರ್ಮಾ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಹೆಚ್ಚು ಕಮ್ಮಿ ಅದೇ ತಂಡ ಮಾಡಿದ್ದ 'ಬಸ್ತಾರ್: ನಕ್ಸಲ್ ಸ್ಟೋರಿ' ಸಿನಿಮಾ ಈ ವರ್ಷ ತೆರೆಗೆ ಬಂದಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಲಿಲ್ಲ. ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಮೇ 17ಕ್ಕೆ ಜೀ5ಗೆ ಬರಲಿದೆ.

2. ತಳಮೇ ಸೆಯಲಗಮ್(ತಮಿಳು ಸೀರಿಸ್) ಮೇ 17

ನೆಟ್‌ಫ್ಲಿಕ್ಸ್

1. ಬ್ಲಡ್ ಆಫ್ ಜ್ಯೂಷ್ ಸೀಸನ್-2(ಇಂಗ್ಲೀಷ್ ಸೀರಿಸ್) ಮೇ 15

2. ಬ್ರಿಡ್ಜರ್ಟನ್ ಸೀಸನ್-2 ಪಾರ್ಟ್-1(ಇಂಗ್ಲೀಷ್ ಸೀರಿಸ್) ಮೇ 16

3. ಆಷ್ಲೆ ಮ್ಯಾಡಿಸನ್; ಸೆಕ್ಸ್, ಲೈಸ್ & ಸ್ಕ್ಯಾಂಡಲ್(ಇಂಗ್ಲೀಷ್ ಸೀರಿಸ್) ಮೇ 15

4. ಮೇಡಮ್ ವೆಬ್ (ಇಂಗ್ಲೀಷ್ ಸಿನಿಮಾ) ಮೇ 16

5. ಪವರ್ (ಇಂಗ್ಲೀಷ್ ಸಿನಿಮಾ) ಮೇ 17

6. ದಿ 8 ಶೋ(ಕೊರಿಯನ್ ಸೀರಿಸ್) ಮೇ 17

7. ಥೆಲ್ಮಾ ದಿ ಯುನಿಕಾರ್ನ್(ಇಂಗ್ಲೀಷ್ ಸಿನಿಮಾ) ಮೇ 17

ಜಿಯೋ ಸಿನಿಮಾ

1. ಜರಾ ಹಟ್ಕೆ ಜರಾ ಬಚ್ಕೆ

ಲಕ್ಷ್ಮಣ್ ಉಟೆಕರ್ ನಿರ್ದೇಶನದ ಹಿಂದಿ ಸಿನಿಮಾ 'ಜರಾ ಹಟ್ಕೆ ಜರಾ ಬಚ್ಕೆ' ಕಳೆದ ವರ್ಷ ತೆರೆಗೆ ಬಂದಿತ್ತು. ವಿಕ್ಕಿ ಕೌಶಲ್, ಸಾರಾ ಅಲಿಖಾನ್ ನಟನೆಯ ರೊಮ್ಯಾಂಟಿಕ್ ಕಾಮೆಡಿ ಸಿನಿಮಾ ಮೇ 17ಕ್ಕೆ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗಲಿದೆ.

2. ಡಿಮಾನ್ ಸ್ಲೆಯರ್(ಜಪಾನೀಸ್ ಸೀರಿಸ್) ಮೇ 13

3. C.H.U.E.C.O ಸೀಸನ್-2(ಸ್ಪ್ಯಾನಿಶ್ ಸೀರಿಸ್) ಮೇ 14

ಬುಕ್‌ ಮೈ ಶೋ

1. ಗಾಡ್ಜಿಲ್ಲಾ X ಕಾಂಗ್: ದಿ ನ್ಯೂ ಎಂಫೈರ್(ಮೇ 13)

More from Filmibeat

English summary
New OTT shows and movie releases to watch from May 13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X