ಹಾರರ್ ಪ್ರಿಯರಿಗೆ ಸಿಹಿಸುದ್ದಿ; ಬೆಚ್ಚಿ ಬೀಳಿಸೋ 4 ಚಿತ್ರಗಳು ಈ ವಾರ ಓಟಿಟಿಗೆ ಎಂಟ್ರಿ
ಎಲ್ಲರಿಗೂ ಹಾರರ್ ಸಿನಿಮಾಗಳು ಇಷ್ಟವಾಗುವುದಿಲ್ಲ. ಆದರೆ ಕೆಲವರು ಮಾತ್ರ ಮೈಜುಮ್ ಎನಿಸುವ ಸಿನಿಮಾಗಳನ್ನು ನೋಡಲು ಹಾತೊರೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹಾರರ್ ಸಿನಿಮಾಗಳ ಹಾವಳಿ ಕಮ್ಮಿ ಆಗಿದೆ. ಇನ್ನು ಹಾರರ್ ಜೊತೆಗೆ ಕಾಮೆಡಿ ಬೆರೆಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ.
ಓಟಿಟಿಯಲ್ಲಿ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತಿದೆ. ಸೂಪರ್ ಹಿಟ್ 'ಛಾವ' ಸಿನಿಮಾ ಕೂಡ ಓಟಿಟಿಗೆ ಬರುವ ನಿರೀಕ್ಷೆಯಿದೆ. ಇನ್ನು ಕನ್ನಡದ 2 ಸಿನಿಮಾಗಳು ಲಿಸ್ಟ್‌ನಲ್ಲಿವೆ. ತೆಲುಗು, ತಮಿಳು, ಹಿಂದಿ ಜೊತೆಗೆ ಹಾಲಿವುಡ್ ಸಿನಿಮಾಗಳು ಓಟಿಟಿ ವೀಕ್ಷಕರನ್ನು ರಂಜಿಸಲು ಸಜ್ಜಾಗಿವೆ. ಈ ವಾರ ಡಿಜಿಟಲ್ ಎಂಟ್ರಿಗೆ ಸಿದ್ಧವಾಗಿರುವ ಹಾರರ್ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ.

ಚೋರಿ-2
ವಿಶಾಲ್ ಫುರಿಯ ನಿರ್ದೇಶನದ ಬಾಲಿವುಡ್ ಹಾರರ್ ಥ್ರಿಲ್ಲರ್ 'ಚೋರಿ-2' ಸಿನಿಮಾ ನೇರವಾಗಿ ಓಟಿಟಿಗೆ ಬರ್ತಿದೆ. ಅಮೇಜಾನ್ ಪ್ರೈಂನಲ್ಲಿ ಏಪ್ರಿಲ್ 11ರಿಂದ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಟಿ-ಸೀರೀಸ್ ಫಿಲ್ಮ್ಸ್, ಅಬುಂಡಾಂಟಿಯಾ ಎಂಟರ್ಟೈನ್ಮೆಂಟ್, ಸೈಚ್ ಫಿಲ್ಮ್ ಹಾಗೂ ಟ್ಯಾಮರಿಸ್ಕ್ ಲೇನ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ. ನುಶ್ರತ್ ಭರುಚ್ಚ, ಸೋಹಾ ಅಲಿ ಖಾನ್, ಗಶ್ಮೀರ್ ಮಹಾಜನಿ ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ.
ಕಿಂಗ್ಸ್‌ಸ್ಟನ್
ಸಂಗೀತ ನಿರ್ದೇಶಕ ಜಿ. ವಿ ಪ್ರಕಾಶ್ ಕುಮಾರ್ ನಟಿಸಿರುವ 25ನೇ ಸಿನಿಮಾ 'ಕಿಂಗ್ಸ್‌ಸ್ಟನ್'. ಕಮಲ್ ಪ್ರಕಾಶ್ ನಿರ್ದೇಶನದ ಈ ಹಾರರ್ ಫ್ಯಾಂಟಸಿ ಸಿನಿಮಾ ಮಾರ್ಚ್ 7ಕ್ಕೆ ತೆರೆಗೆ ಬಂದಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಈ ವಾರ ಸಿನಿಮಾ ಓಟಿಟಿಗೆ ಬರ್ತಿದೆ. ಜೀ-5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ದಿವ್ಯಾ ಭಾರತಿ, ಚೇತನ್, ನಿತಿನ್ ಸತ್ಯಾ, ಅಳಗಂ ಪೆರುಮಾಳ್ ಸೇರಿದಂತೆ ದೊಡ್ಡ ತಾರಾಗಣ 'ಕಿಂಗ್ಸ್‌ಸ್ಟನ್' ಚಿತ್ರದಲ್ಲಿದೆ.

ಟುಕ್ ಟುಕ್
ತೆಲುಗಿನ ಹಾರರ್ ಕಾಮಿಡಿ ಸಿನಿಮಾ 'ಟುಕ್ ಟುಕ್' ಕೂಡ ಈ ವಾರ ಓಟಿಟಿಗೆ ಎಂಟ್ರಿ ಕೊಡ್ತಿದೆ. ಇದೊಂದು ಟೀನೇಜ್ ಹುಡುಗರ ಕಥೆ ಆಗಿದ್ದು ಕಾಮಿಡಿ ಜೊತೆಗೆ ಹಾರರ್ ಟಚ್ ಕೂಡ ಚಿತ್ರಕ್ಕಿದೆ. ಈಟಿವಿ ವಿನ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಹರ್ಷ್ ರೋಷನ್, ಕಾರ್ತಿಕೇಯ ದೇವ್, ಸ್ಟೀವನ್ ಮಧು, ಸಾನ್ವೀ ಮೇಘನಾ, ನಿಹಾಲ್ ಕೋಧಾಟಿ ಚಿತ್ರದ ತಾರಾಗಣದಲ್ಲಿದ್ದಾರೆ.
ರಾಕ್ಷಸ
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾಗಳು ಸಾಲು ಸಾಲಾಗಿ ಪ್ರೇಕ್ಷಕರ ಮುಂದೆ ಬರ್ತಿವೆ. ಆದರೆ ಯಾವುದು ಕೂಡ ಗೆಲ್ಲುತ್ತಿಲ್ಲ. ಫೆಬ್ರವರಿ 28ಕ್ಕೆ 'ರಾಕ್ಷಸ' ಸಿನಿಮಾ ತೆರೆಗಪ್ಪಳಿಸಿತ್ತು. ಆದರೆ ದೊಡ್ಡದಾಗಿ ಸದ್ದು ಮಾಡಲಿಲ್ಲ. ಇದೀಗ ಈ ಹಾರರ್ ಸಿನಿಮಾ ಸನ್ ನೆಕ್ಸ್ಟ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗ್ತಿದೆ.
ಲೋಹಿತ್ 'ರಾಕ್ಷಸ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾರರ್ ಜೊತೆಗೆ ಟೈಮ್ ಲೂಪ್ ಟ್ವಿಸ್ಟ್ ಕೂಡ ಈ ಸಿನಿಮಾದಲ್ಲಿದೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಪ್ರಜ್ವಲ್ ನಟಿಸಿದ್ದಾರೆ. ಈ ಹಿಂದೆ 'ಮಮ್ಮಿ', 'ದೇವಕಿ' ರೀತಿಯ ಹಾರರ್ ಸಿನಿಮಾ ಮಾಡಿದ್ದ ಲೋಹಿತ್ ಈ ಬಾರಿ ಟೈಮ್ ಲೂಪ್ ಎಳೆಯನ್ನು ಸೇರಿಸಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಪ್ರಕರಣವೊಂದರ ಆರೋಪಿಯನ್ನು ಇನ್ಸ್‌ಪೆಕ್ಟರ್ ಸತ್ಯ(ಪ್ರಜ್ವಲ್) ಬಂಧಿಸಿ ಠಾಣೆಯಲ್ಲಿ ಇಡುತ್ತಾನೆ. ಆದರೆ ಆ ಠಾಣೆಯಲ್ಲಿ ಬ್ರಹ್ಮ ರಾಕ್ಷಸನ ಕಾಟ ಶುರುವಾಗುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಸಿನಿಮಾ ಕಥೆ.


Click it and Unblock the Notifications











