Ott Releases This Week: ಈ ವಾರ ಓಟಿಟಿ ರಿಲೀಸ್ ಚಿತ್ರಗಳು; ಇಂಟ್ರೆಸ್ಟಿಂಗ್ ಯಾವ್ದು ಅಂದ್ರೆ?

ಪ್ರತಿವಾರದಂತೆ ಈ ವಾರವೂ ಒಂದಷ್ಟು ಸಿನಿಮಾ ಹಾಗೂ ವೆಬ್ ಸೀರಿಸ್ ಓಟಿಟಿಗೆ ಎಂಟ್ರಿ ಕೊಡ್ತಿದೆ. ಐಪಿಎಲ್ ದರ್ಬಾರ್ ನಡುವೆ ಚಿತ್ರಮಂದಿರಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿಲ್ಲ. ಬೇಸಿಗೆ ಬಿಸಿಲ ಝಳಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಓಟಿಟಿಯಲ್ಲೇ ಮನರಂಜನೆ ಬಯಸುತ್ತಿದ್ದಾರೆ.

ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಕನ್ನಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿದೆ. ಧನ್ವೀರ್ ಗೌಡ ನಟನೆಯ 'ವಾಮನ', ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಅಜ್ಞಾತವಾಸಿ', ಧನಂಜಯ್ ನಿರ್ಮಾಣದ 'ವಿದ್ಯಾಪತಿ' ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿದೆ.

From Court to Chhorii 2 this week Ott releases movies and web series list

ಕಳೆದ ವಾರ ಓಟಿಟಿಯಲ್ಲಿ 3 ಕನ್ನಡ ಸಿನಿಮಾಗಳು ಬಿಡುಗಡೆ ಆಗಿದ್ದರು. ಸನ್‌ ನೆಕ್ಸ್ಟ್‌ನಲ್ಲಿ 'ಶಿವಮ್ಮ' ಹಾಗೂ ಅಮೇಜಾನ್ ಪ್ರೈಂ ವೀಡಿಯೋದಲ್ಲಿ 'ಪಾರು ಪಾರ್ವತಿ' ಮತ್ತು 'ಗೌರಿ' ಚಿತ್ರಗಳು ಸ್ಟ್ರೀಮಿಂಗ್ ಆರಂಭಿಸಿದ್ದವು. ಇಂದ್ರಜಿತ್ ಲಂಕೇಶ್ ನಿರ್ಮಿಸಿ ನಿರ್ದೇಶಿಸಿದ 'ಗೌರಿ' ಚಿತ್ರವನ್ನು 99 ರೂ. ಪಾವತಿಸಿ ವೀಕ್ಷಿಸಬಹುದು. ಈ ಶುಕ್ರವಾರದಿಂದ ಸಿನಿಮಾ ಉಚಿತವಾಗಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಳಿದಂತೆ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಈ ವಾರ ಓಟಿಟಿಗೆ ಬರ್ತಿದೆ. ಇಲ್ಲಿದೆ ನೋಡಿ ಲಿಸ್ಟ್.

ಸನ್‌ ನೆಕ್ಸ್ಟ್

1. ರಾಕ್ಷಸ

ಪ್ರಜ್ವಲ್ ದೇವರಾಜ್ ನಟನೆಯ 'ರಾಕ್ಷಸ' ಸಿನಿಮಾ ತೆರೆಕಂಡ 40 ದಿನಕ್ಕೆ ಓಟಿಟಿಗೆ ಬರ್ತಿದೆ. ಏಪ್ರಿಲ್ 11ರಂದು ಸಿನಿಮಾ ಸನ್‌ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಸಿಗಲಿದೆ. ಲೋಹಿತ್ ಆಕ್ಷನ್ ಕಟ್ ಹೇಳಿದ್ದ ಸಿನಿಮಾ ಫೆಬ್ರವರಿ 28ಕ್ಕೆ ತೆರೆಗೆ ಬಂದಿತ್ತು. ಅಜನೀಶ್ ಲೋಕನಾಥ್ ಸಂಗೀತದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಆದರೂ ಸಿನಿರಸಿಕರು ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಕಾಯುತ್ತಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.

ಅಮೇಜಾನ್ ಪ್ರೈ

1. ಚೋರಿ-2

ವಿಶಾಲ್ ಫುರಿಯಾ ನಿರ್ದೇನದ ಹಾರರ್ ಥ್ರಿಲ್ಲರ್ 'ಚೋರಿ-2' ಸಿನಿಮಾ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗ್ತಿದೆ. ಪ್ರೈಂ ವೀಡಿಯೋದಲ್ಲಿ ಏಪ್ರಿಲ್ 11ರಂದು ಸಿನಿಮಾ ಬಿಡುಗಡೆ ಆಗಲಿದೆ. ನುಶ್ರತ್ ಭರುಚ್ಚ, ಸೊಹಾ ಅಲಿಖಾನ್, ಸೌರಬ್ ಗೋಯಲ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ.

2. ಇನ್‌ ದಿ ಲಾಸ್ಟ್ ಲ್ಯಾಂಡ್ಸ್(ಹಾಲಿವುಡ್ ಸಿನಿಮಾ) ಏಪ್ರಿಲ್ 8

3. ಜಿ20 ಏಪ್ರಿಲ್(ಹಾಲಿವುಡ್ ಸಿನಿಮಾ) ಏಪ್ರಿಲ್ 10

From Court to Chhorii 2 this week Ott releases movies and web series list

ನೆಟ್‌ಫ್ಲಿಕ್ಸ್

1. ಛಾವ

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಛಾವ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಈ ಐತಿಹಾಸಿಕ ಕಥಾಹಂದರದ ಸಿನಿಮಾ ಯಾವಾಗ ಓಟಿಟಿಗೆ ಬರುತ್ತದೆ ಎಂದು ಸಿನಿರಸಿಕರು ಕಾಯುತ್ತಿದ್ದಾರೆ. ನೆಟ್‌ಫ್ಲಿಕ್ಸ್ ಸಂಸ್ಥೆ ಚಿತ್ರದ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಏಪ್ರಿಲ್ 11ರಂದು ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಈಗಾಗಲೇ ಸಿನಿಮಾ 700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಛತ್ರಪತಿ ಶಿವಾಜಿ ಮಗ ಸಾಂಬಾಜಿ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಲಕ್ಷ್ಮಣ್ ಉಟೆಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಔರಂಗಜೇಬ್ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಸಾಂಬಾಜಿ ಕಥೆ ಪ್ರೇಕ್ಷಕರ ಮನಗೆದ್ದಿದೆ. ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಕನ್ನಡಕ್ಕೂ ಡಬ್ ಆಗಿ ಓಟಿಟಿಗೆ ಬರುವ ನಿರೀಕ್ಷೆಯಿದೆ.

2. ಕಿಲ್ ಟೋನಿ: ಕಿಲ್ ಆರ್‌ ಬಿ ಕಿಲ್ಡ್‌(ಇಂಗ್ಲೀಷ್ ಕಾಮೆಡಿ ಶೋ) ಏಪ್ರಿಲ್-7

3. ಕೋರ್ಟ್(ತೆಲುಗು ಸಿನಿಮಾ)ಏಪ್ರಿಲ್ 11

4. ಪೆರುಸು(ತಮಿಳು ಅಡಲ್ಟ್ ಕಾಮೆಡಿ ಸಿನಿಮಾ) ಏಪ್ರಿಲ್ 11

5. ಚೇಸಿಂಗ್ ದಿ ವಿಂಡ್(ಹಾಲಿವುಡ್ ಸಿನಿಮಾ) ಏಪ್ರಿಲ್ 11

ಜೀ-5

1. ಕಿಂಗ್ಸ್‌ಸ್ಟನ್(ತಮಿಳು ಆಕ್ಷನ್ ಸಿನಿಮಾ) ಏಪ್ರಿಲ್ 13


ಜಿಯೋ ಹಾಟ್‌ಸ್ಟರ್

1. ಹ್ಯಾಕ್ಸ್(ಇಂಗ್ಲೀಷ್ ವೆಬ್ ಸೀರಿಸ್) ಏಪ್ರಿಲ್ 11

2. ರೆಸ್ಕೂ ಹೈ ಸರ್ಫ್(ಹಾಲಿವುಡ್ ವೆಬ್ ಸೀರಿಸ್) ಏಪ್ರಿಲ್ 11

3. ಪೆಟ್ಸ್(ಇಂಗ್ಲೀಷ್ ಡಾಕ್ಯುಮೆಂಟರಿ) ಏಪ್ರಿಲ್ 11

4. ದಿ ಲಾಸ್ಟ್ ಆಫ್ ಅಜ್ ಸೀಸನ್-2(ವೆಬ್ ಸೀರಿಸ್) ಏಪ್ರಿಲ್ 14

More from Filmibeat

English summary
Ott Releases This Week; interesting movies and web series streaming in digital platforms;
Read more about: sandalwood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X