OTT Releases this week: ಅಕ್ಟೋಬರ್ ಮೊದಲ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ ನೋಡಿ

ಚಿತ್ರಮಂದಿರಗಳಲ್ಲಿ 'ದೇವರ' ಸಿನಿಮಾ ಆರ್ಭಟ ಮುಂದುವರೆದಿದೆ. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದಿಲ್ಲ. ಈ ಶುಕ್ರವಾರ ರಾಧಿಕಾ ಕುಮಾರಸ್ವಾಮಿ ನಟನೆಯ 'ಭೈರಾದೇವಿ' ಹಾಗೂ 'ಗೋಪಿಲೋಲ' ಸಿನಿಮಾಗಳು ತೆರೆಗೆ ಬರ್ತಿವೆ.

ಮುಂದಿನ ವಾರ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಹಾಗೂ ರಜನಿಕಾಂತ್- ಬಿಗ್‌ಬಿ ಜುಗಲ್ಬಂದಿಯ 'ವೆಟ್ಟೆಯಾನ್' ಬಿಡುಗಡೆಗೆ ಸಜ್ಜಾಗ್ತಿದೆ. ಹಾಗಾಗಿ ಸಣ್ಣ ಸಿನಿಮಾಗಳಿಗೆ ಥಿಯೇಟರ್‌ಗಳನ್ನು ಉಳಿಸಿಕೊಳ್ಳುವ ಭಯ ಕಾಡುತ್ತಿದೆ. ಇದೆಲ್ಲದರ ನಡುವೆ ಈ ವಾರವೂ ಒಂದಷ್ಟು ಸಿನಿಮಾ ಹಾಗೂ ವೆಬ್‌ ಸೀರಿಸ್ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.

from CTRL to boat OTT releases this week

ಕನ್ನಡದಲ್ಲಿ ಮತ್ತೆ ದೊಡ್ಡ ಸಿನಿಮಾಗಳ ಬರ ಎದ್ದು ಕಾಣುತ್ತಿದೆ. 'ಮಾರ್ಟಿನ್', 'ಭೈರತಿ ರಣಗಲ್' ಬಿಟ್ಟು ಸ್ಟಾರ್ ನಟರ ಸಿನಿಮಾಗಳ ಬಿಡುಗಡೆಗೆ ಮೀನಾಮೇಷ ಎದುರಿಸುವಂತಾಗಿದೆ. ಇತ್ತ ಓಟಿಟಿಯಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ದೊಡ್ಡ ಸಿನಿಮಾಗಳು ಬರ್ತಿಲ್ಲ, ಸಣ್ಣ ಸಿನಿಮಾಗಳನ್ನು ಕೊಂಡುಕೊಳ್ತಿಲ್ಲ ಎನ್ನುವಂತಾಗಿದೆ. ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಯಾವಾಗ ಓಟಿಟಿಗೆ ಬರುತ್ತೆ ಎಂದು ವೀಕ್ಷಕರು ಕಾದು ಕೂತಿದ್ದಾರೆ.

ಅಮೇಜಾನ್ ಪ್ರೈಂ ವೀಡಿಯೋ

1. ಪುರುಷೋತ್ತಮನ ಪ್ರಸಂಗ

ದೇವದಾಸ್ ಕಾಪಿಕಾಡ್ ನಿರ್ದೇಶನದ ಕನ್ನಡ ಸಿನಿಮಾ 'ಪುರುಷೋತ್ತಮನ ಪ್ರಸಂಗ' ಸಿನಿಮಾ ಸದ್ದಿಲ್ಲದೇ ಸ್ಟ್ರೀಮಿಂಗ್ ಆರಂಭಿಸಿದೆ. ನೈಜ ಘಟನೆ ಆಧರಿಸಿ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ನಾಯಕ ಅಜಯ್ ಜೊತೆ ರಿಷಿಕಾ ನಾಯ್ಕ್ ಹಾಗೂ ದೀಪಿಕಾ ನಾಯಕಿಯರಾಗಿ ನಟಿಸಿದ್ದಾರೆ. ಸದ್ಯಕ್ಕೆ ಪ್ರೈಂ ಚಂದಾದಾರರು 99 ರೂ. ಪಾವತಿಸಿ ಸಿನಿಮಾ ವೀಕ್ಷಿಸಬಹುದಾಗಿದೆ.

2. ಬೋಟ್

ತಮಿಳಿನ 'ಬೋಟ್' ಸಿನಿಮಾ ಓಟಿಟಿಗೆ ಬಂದಿದೆ. ಚಿಂಬು ದೇವನ್ ನಿರ್ದೇಶನದ ಈ ಸರ್ವೈವರ್ ಡ್ರಾಮಾ ಚಿತ್ರದಲ್ಲಿ ಯೋಗಿ ಬಾಬು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಗೌರಿ, ಎಂ. ಎಸ್ ಭಾಸ್ಕರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಆಗಸ್ಟ್ ಮೊದಲ ವಾರ ತೆರೆಗೆ ಬಂದಿದ್ದ ಸಿನಿಮಾ ತಿಂಗಳಿಗೆ ಓಟಿಟಿಗೆ ಬಂದಿದೆ. ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.

3. ದಿ ಟ್ರೈಬ್ (ಹಿಂದಿ ರಿಯಾಲಿಟಿ ಸೀರಿಸ್) - ಅಕ್ಟೋಬರ್ 04

4. ದಿ ಲೆಜೆಂಡ್ ಆಫ್ ವ್ಯಾಕ್ಸ್ ಮಚಿನಾ ಸೀಸನ್ 3 (ಇಂಗ್ಲಿಷ್ ಸೀರಿಸ್) - ಅಕ್ಟೋಬರ್ 03

5. ಹೌಸ್ ಆಫ್ ಸ್ಪಾಯ್ಲ್ಸ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 03

ನೆಟ್‌ಫ್ಲಿಕ್ಸ್

1. GOAT

ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ 'ಗೋಟ್' (GOAT) ಸಿನಿಮಾ ಇದೇ ಗುರುವಾರ(ಅಕ್ಟೋಬರ್ 3) ಓಟಿಟಿಗೆ ಬರ್ತಿದೆ. ನೆಟ್‌ಫ್ಲಿಕ್ಸ್ ಅಧಿಕೃತವಾಗಿ ಈ ವಿಚಾರ ಹಂಚಿಕೊಂಡಿದೆ. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಪ್ರಭುದೇವ, ಸ್ನೇಹಾ ಸೇರಿ ದೊಡ್ಡ ತಾರಾಗಣವಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

2. CTRL

ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ 'CTRL' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಅನನ್ಯಾ ಪಾಂಡೆ ಹಾಗೂ ವಿಹಾನ್ ಸಮರ್ಥ್ ಈ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ಧಾರೆ. ನೇರವಾಗಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಅಕ್ಟೋಬರ್ 4ರಿಂದ ನೆಟ್‌ಫ್ಲಿಕ್‌ನಲ್ಲಿ ನೋಡುವ ಅವಕಾಶ ಸಿಗಲಿದೆ.

3. ಟಿಮ್ ದಿಲ್ಲನ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 01

4. ಚೆಫ್ಸ್ ಟೇಬಲ್ (ಇಂಗ್ಲಿಷ್ ವೆಬ್ ಸೀರಿಸ್) - ಅಕ್ಟೋಬರ್ 02

5. ಲವ್ ಈಸ್ ಬ್ಲೈಂಡ್ ಸೀಸನ್- 7 (ಇಂಗ್ಲಿಷ್ ವೆಬ್ ಸೀರಿಸ್) - ಅಕ್ಟೋಬರ್ 02

6. ಹಾರ್ಟ್ ಸ್ಟಾಪರ್ ಸೀಸನ್ 3 (ಇಂಗ್ಲಿಷ್ ವೆಬ್ ಸೀರಿಸ್) - ಅಕ್ಟೋಬರ್ 03

7. ಅನ್‌ಸಾಲ್ವ್ಡ್‌ ಮಿಸ್ಟರೀಸ್ ವಾಲ್ಯೂಮ್ 5 (ಇಂಗ್ಲಿಷ್ ವೆಬ್ ಸೀರಿಸ್) - ಅಕ್ಟೋಬರ್ 02

8. ಇಟ್ಸ್ ವಾಟ್ಸ್ ಇನ್‌ಸೈಡ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 04

ಅಹಾ ಓಟಿಟಿ

1. 35 ಚಿನ್ನ ಕಥಕಾದು

ತೆಲುಗಿನ '35 ಚಿನ್ನ ಕಥಕಾದು' ಸಿನಿಮಾ ಓಟಿಟಿ ಎಂಟ್ರಿಗೆ ಸಜ್ಜಾಗಿದೆ. ಅಹಾ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮಧ್ಯರಾತ್ರಿಯಿಂದಲೇ ಸಿನಿಮಾ ವೀಕ್ಷಣೆಗೆ ಸಿಗಲಿದೆ. ನಿವೇತಾ ಥಾಮಸ್ ಹಾಗೂ ಪ್ರಿಯದರ್ಶಿ ಪುಲಿಕೊಂಡ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಒಂದು ಮಧ್ಯಮವರ್ಗದ ಕುಟುಂಬದ ನೋವು ನಲಿವಿನ ಕಥೆ ಚಿತ್ರದಲ್ಲಿದೆ. ನಂದ್ ಕಿಶೋರ್ ಎಮನಿ ಆಕ್ಷನ್ ಕಟ್ ಹೇಳಿದ್ದಾರೆ.

2. ಬಾಲುಗಾನಿ ಟಾಕೀಸ್(ತೆಲುಗು ಸಿನಿಮಾ) ಅಕ್ಟೋಬರ್ 4

ಜಿಯೋ ಸಿನಿಮಾ

1. ಅಮರ್‌ ಪ್ರೇಮ್‌ ಕಿ ಪ್ರೇಮ್ ಕಹಾನಿ(ಹಿಂದಿ ಸಿನಿಮಾ) ಅಕ್ಟೋಬರ್ 4

2. ಅರಣ್ಮನೈ-4(ಹಿಂದಿಗೆ ಡಬ್ ಆಗಿ ಸ್ಟ್ರೀಮಿಂಗ್) ಅಕ್ಟೋಬರ್ 1

ಜೀ-5

1. ಕಲರ್ಸ್ ಆಫ್ ಲವ್ (ಹಿಂದಿ ಸಿನಿಮಾ) ಅಕ್ಟೋಬರ್ 4

2. ದಿ ಸಿಗ್ನೇಚರ್ (ಹಿಂದಿ ಸಿನಿಮಾ) ಅಕ್ಟೋಬರ್ 4

More from Filmibeat

English summary
October first week ott release streaming movies and web series list
Read more about: ott kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X