OTT Releases This Week; ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳು, ಒಂದು ಬ್ಲಾಕ್‌ಬಸ್ಟರ್ ಚಿತ್ರವೂ ಲಿಸ್ಟ್‌ನಲ್ಲಿದೆ
ಫೆಬ್ರವರಿ ಕೊನೆ ವಾರ ಬಂದೇ ಬಿಡ್ತು. ಈ ವಾರ ಚಿತ್ರಮಂದಿರಗಳಲ್ಲಿ ಒಂದಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಮತ್ತೊಂದು ಕಡೆ ಓಟಿಟಿಯಲ್ಲಿ ಕೆಲ ಚಿತ್ರಗಳು ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಒಂದು ಬ್ಲಾಕ್‌ಬಸ್ಟರ್ ಚಿತ್ರವೂ ಈ ಲಿಸ್ಟ್‌ನಲ್ಲಿರುವುದು ವಿಶೇಷ.
ಈ ವಾರ ಕನ್ನಡದಲ್ಲಿ 'ರಾಕ್ಷಸ', 'ಶಭಾಷ್ ಬಡ್ಡಿ ಮಗ್ನೆ' ಹಾಗೂ 'ಎಫ್‌ಐಆರ್' ಸೇರಿ ಏಳೆಂಟು ಕನ್ನಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಪ್ರಜ್ವಲ್ ದೇವರಾಜ್ ನಟನೆಯ 'ರಾಕ್ಷಸ' ಬಿಟ್ಟರೆ ಯಾವುದೇ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿಲ್ಲ. ಇನ್ನು ಈ ಚಿತ್ರ ಪ್ರಚಾರ ಕೊರತೆ ಎದುರಿಸುತ್ತಿದೆ.

ಇತ್ತ ಓಟಿಟಿಯಲ್ಲಿ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ದರ್ಬಾರ್ ಮುಂದುವರೆದಿದೆ. ಮೂರು ದಿನಗಳ ಹಿಂದೆ ಸಸ್ಪೆನ್ಸ್ ಥ್ರಿಲ್ಲರ್ 'ಟೆನೆಂಟ್' ಸಿನಿಮಾ ಸನ್‌ನೆಕ್ಸ್ಟ್‌ಗೆ ಬಂದಿತ್ತು. ಈ ವಾರವೂ ಯಾವುದೇ ಕನ್ನಡ ಸಿನಿಮಾ ಓಟಿಟಿಗೆ ಬರುವ ಸುಳಿವು ಸಿಗುತ್ತಿಲ್ಲ. 'ಯುಐ' ಚಿತ್ರಕ್ಕಾಗಿ ಕಾದು ಕಾದು ಓಟಿಟಿ ಚಂದಾದಾರರು ಸುಸ್ತಾಗಿದ್ದಾರೆ.
ಅಮೇಜಾನ್ ಪ್ರೈಂ
1. ಸುಡಾಲ್ ಸೀಸನ್-2
ತಮಿಳು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರಿಸ್ ಸುಡಾಲ್ ಸೀಸನ್- 2 ಇದೇ ಶುಕ್ರವಾರ(ಫೆಬ್ರವರಿ 28) ರಿಲೀಸ್ ಆಗಲಿದೆ. ಈ ಹಿಂದೆ ಬಂದಿದ್ದ ಮೊದಲ ಸೀಸನ್ ಸೂಪರ್ ಹಿಟ್ ಆಗಿತ್ತು. ಕದಿರ್, ಐಶ್ವರ್ಯ ರಾಜೇಶ್, ಶರವಣನ್ ನಟನೆಯ ಈ ವೆಬ್ ಸೀರಿಸ್ ಕನ್ನಡಕ್ಕೂ ಡಬ್ ಆಗಿ ಅಮೇಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಸಿಗಲಿದೆ. ಬ್ರಹ್ಮ ಹಾಗೂ ಸಾರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

2. ಜಿದ್ದಿ ಗರ್ಲ್ಸ್(ಹಿಂದಿ ಸೀರಿಸ್) ಫೆಬ್ರವರಿ 27
3. ಸೂಪರ್ ಬಾಯ್ಸ್ ಆಫ್ ಮಾಲೆಗಾವ್(ಹಿಂದಿ ಸಿನಿಮಾ) ಫೆಬ್ರವರಿ 28
4. ಹೌಸ್ ಆಫ್ ಡೇವಿಡ್(ಇಂಗ್ಲೀಷ್ ಸೀರಿಸ್) ಫೆಬ್ರವರಿ 27
ನೆಟ್‌ಫ್ಲಿಕ್ಸ್
1. ಡಬ್ಬಾ ಕಾರ್ಟೆಲ್(ಕನ್ನಡ ಡಬ್ ಸೀರಿಸ್)
ಮಹಿಳಾ ಪಾತ್ರಗಳನ್ನು ಕೇಂದ್ರವಾಗಿಟ್ಟಕೊಂಡು ಹಿಂದಿಯಲ್ಲಿ ನಿರ್ಮಾಣವಾಗಿರುವ ವೆಬ್ ಸೀರಿಸ್ 'ಡಬ್ಬಾ ಕಾರ್ಟೆಲ್'. 60ರ ದಶಕದ ಕಥೆ ಇಲ್ಲಿ ಹೇಳಲಾಗುತ್ತಿದೆ. ಐವರು ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಹಾಗೂ ಅವರ ಮಕ್ಕಳು ಸೇರಿ ಊಟದ ಬಾಕ್ಸ್ ಉದ್ಯಮ ಆರಂಭಿಸುತ್ತಾರೆ. ಆದರೆ ಮುಂದೆ ಆ ಉದ್ಯಮಕ್ಕೆ ದೊಡ್ಡ ತಿರುವು ಸಿಗುತ್ತದೆ. ಆ ಊಟದ ಡಬ್ಬಿಗಳಲ್ಲಿ ಡ್ರಗ್ಸ್ ಸರಬರಾಜು ನಡೆದು ಇಕ್ಕಟ್ಟಿಗೆ ಸಿಲುಕುವಂತಾಗುತ್ತದೆ. ಮುಂದೆ ಅದರಿಂದ ಹೇಗೆ ಹೊರ ಬರುತ್ತಾರೆ ಎನ್ನುವುದು ಇನ್ನುಳಿದ ಕಥೆ. ಕನ್ನಡಕ್ಕೂ ಡಬ್ ಆಗಿ ಫೆಬ್ರವರಿ 28ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಜೀ5 ತೆಲುಗು
ಈ ವರ್ಷ ಸುಗ್ಗಿ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದೀಗ ಟಿವಿ ಹಾಗೂ ಓಟಿಟಿಯಲ್ಲಿ ಏಕಕಾಲಕ್ಕೆ ಸಿನಿಮಾ ಪ್ರಸಾರ ಆಗಲಿದೆ. ಶನಿವಾರ(ಮಾರ್ಚ್ 1) ಸಂಜೆ 6 ಗಂಟೆಗೆ ಜೀ ತೆಲುಗು ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ. ಅದೇ ದಿನ ಜೀ-5 ಓಟಿಟಿ ಪ್ಲಾಟ್‌ಫಾರ್ಮ್‌ಗೆ ಬರಲಿದೆ. ವಿಕ್ಟರಿ ವೆಂಟಕೇಶ್ ಜೊತೆ ಐಶ್ವರ್ಯ ರಾಜೇಶ್, ಮೀನಾಕ್ಷಿ ಚೌಧರಿ ನಾಯಕಿಯರಾಗಿ ನಟಿಸಿದ್ದಾರೆ. ಅನಿಲ್ ರಾವಿಪುಡಿ ನಿರ್ದೇಶನದ ಕಾಮೆಡಿ ಎಂಟರ್‌ಟೈನರ್ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು.
ಹಾಟ್‌ಸ್ಟರ್
1. ಬಿಟಿಲ್ ಜ್ಯೂಸ್(ಹಾಲಿವುಡ್ ಸಿನಿಮಾ) ಫೆಬ್ರವರಿ 28
2. ಸೂಟ್ಸ್: ಲಾಸ್ ಏಂಜಲ್ಸ್(ಇಂಗ್ಲೀಷ್ ಸೀರಿಸ್) ಫೆಬ್ರವರಿ 24
3. ದಿ ವಾಸ್ಪ್(ಹಾಲಿವುಡ್ ಸಿನಿಮಾ) ಫೆಬ್ರವರಿ 28
4. ಲವ್ ಅಂಡರ್ ಕನ್‌ಸ್ಟ್ರಕ್ಷನ್(ಮಲಯಾಳಂ ಸೀರಿಸ್) ಫೆಬ್ರವರಿ 28


Click it and Unblock the Notifications











