OTT Releases This Week; ಓಟಿಟಿಯಲ್ಲಿ ಈ ವಾರ ಬ್ಲಾಕ್‌ಬಸ್ಟರ್ ಚಿತ್ರಗಳು ರಿಲೀಸ್
ದೀಪಾವಳಿ ವೀಕೆಂಡ್ ಕಳೆದು ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಚಿತ್ರಮಂದಿರದಲ್ಲಿ ಕಳೆದ ವಾರ ಬಿಡುಗಡೆಯಾದ ಚಿತ್ರಗಳೇ ಉತ್ತಮ ಪ್ರದರ್ಶನ ಕಾಣುತ್ತಿವೆ. ಕನ್ನಡದ 'ಬಘೀರ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಹಿಂದಿಯಲ್ಲಿ 'ಸಿಂಗಂ ಅಗೇನ್' ಹಾಗೂ 'ಬೂಲ್ ಭೂಲಯ್ಯ'-3 ಚಿತ್ರಗಳ ದರ್ಬಾರ್ ಜೋರಾಗಿದೆ.
ತಮಿಳಿನಲ್ಲಿ 'ಅಮರನ್' ಹಾಗೂ 'ಬ್ರದರ್' ಚಿತ್ರಗಳು ತೆರೆಗೆ ಬಂದಿದೆ. ತೆಲುಗಿನಲ್ಲಿ 'ಲಕ್ಕಿ ಭಾಸ್ಕರ್' ಹಾಗೂ 'ಕ' ಸಿನಿಮಾಗಳು ಸಿನಿರಸಿಕರನ್ನು ರಂಜಿಸುತ್ತಿವೆ. ಇನ್ನು ಓಟಿಟಿಯಲ್ಲಿ ಈ ವಾರ ಬ್ಲಾಕ್‌ಬಸ್ಟರ್ ಸಿನಿಮಾಗಳು ಹಾಗೂ ವೆಬ್ ಸೀರಿಸ್ ಬಿಡುಗಡೆ ಆಗುತ್ತಿದೆ. ಒಂದೇ ದಿನ ಸ್ಟಾರ್ ನಟರ ಸೂಪರ್ ಹಿಟ್ ಚಿತ್ರಗಳು ತೆರೆಗೆ ಬರ್ತಿರೋದು ವಿಶೇಷ.

ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಚಿತ್ರಗಳು ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿವೆ. ಇನ್ನು ಸಮಂತಾ ನಟನೆಯ 'ಸಿಟಾಡೆಲ್' ವೆಬ್ ಸೀರಿಸ್ ಕೂಡ ಈ ವಾರವೇ ವೀಕ್ಷಣೆಗೆ ಸಿಗಲಿದೆ. ಒಟ್ಟಾರೆ ಈ ವಾರ ಓಟಿಟಿ ವೀಕ್ಷಕರಿಗೆ ಹಬ್ಬವೋ ಹಬ್ಬ.
ನೆಟ್‌ಫ್ಲಿಕ್ಸ್
1. ದೇವರ
ಕೊರಟಾಲ ಶಿವ ನಿರ್ದೇಶನದ 'ದೇವರ' ಸಿನಿಮಾ ಸೆಪ್ಟೆಂಬರ್ 27ಕ್ಕೆ ತೆರೆಗೆ ಬಂದಿತ್ತು. ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಜ್ಯೂ. ಎನ್‌ಟಿಆರ್ ಹಾಗೂ ಜಾನ್ವಿ ಕಪೂರ್ ಚಿತ್ರದಲ್ಲಿ ಮಿಂಚಿದ್ದಾರೆ. ಡಬಲ್ ರೋಲ್‌ನಲ್ಲಿ ತಾರಕ್ ತಂದೆ ಮಗನಾಗಿ ಅಬ್ಬರಿಸಿದ್ದಾರೆ. ಚಿತ್ರಕ್ಕೆ ನಿರೀಕ್ಷಿತಮಟ್ಟದಲ್ಲಿ ರೆಸ್ಪಾನ್ಸ್ ಸಿಗಲಿಲ್ಲ. ತಕ್ಕಮಟ್ಟಿಗೆ ಸಿನಿಮಾ ಕಲೆಕ್ಷನ್ ಮಾಡಿದ್ದು ಸುಳ್ಳಲ್ಲ. ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್ 8ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.
2. ಬ್ಯಾಕ್ ಅಂಡರ್ ಸೀಜ್ (ಸ್ಪ್ಯಾನಿಷ್ ವೆಬ್ ಸೀರಿಸ್) - ನವೆಂಬರ್ 8
3. ಇನ್ವೆಸ್ಟಿಗೇಶನ್ ಏಲಿಯನ್ (ಇಂಗ್ಲಿಷ್ ವೆಬ್ ಸೀರಿಸ್) - ನವೆಂಬರ್ 8
4. ಮಿ. ಪ್ಲಾಂಕ್ಟನ್ (ಕೊರಿಯನ್ ವೆಬ್ ಸೀರಿಸ್) - ನವೆಂಬರ್ 8
5. ಅನ್ಝೋಲೋ: ದಿ ಗಾನ್ ಗರ್ಲ್ (ಇಂಗ್ಲಿಷ್ ಸಿನಿಮಾ) - ನವೆಂಬರ್ 8
6. ಇಟ್ ಎಂಡ್ಸ್ ವಿತ್ ಅಸ್(ಇಂಗ್ಲಿಷ್ ಸಿನಿಮಾ)- ನವೆಂಬರ್ 9
7. 10 ಡೇಸ್ ಆಫ್ ಎ ಕ್ಯೂರಿಯಸ್ ಮ್ಯಾನ್ (ಟರ್ಕಿಶ್ ಸಿನಿಮಾ)- ನವೆಂಬರ್ 7
8. ಕೌಂಟ್‌ಡೌನ್: ಪಾಲ್ ವಿರುದ್ಧ ಟೈಸನ್ (ಇಂಗ್ಲಿಷ್ ವೆಬ್ ಸೀರಿಸ್) - ನವೆಂಬರ್ 7
9. ವಿಜಯ್ 69 (ಹಿಂದಿ ಸಿನಿಮಾ) ನವೆಂಬರ್ 8
10. ಲವ್ ವಿಲೇಜ್ ಸೀಸನ್-2 (ಜಪನೀಸ್ ವೆಬ್ ಸೀರಿಸ್) ನವೆಂಬರ್ 5
11. ಮೀಟ್ ಮಿ ನೆಕ್ಸ್ಟ್ ಕ್ರಿಸ್‌ಮಸ್(ಇಂಗ್ಲೀಷ್ ಸಿನಿಮಾ) ನವೆಂಬರ್ 6
12. ಲವ್ ಈಸ್ ಬ್ಲೈಂಡ್; ಅರ್ಜೆಂಟಿನಾ(ಸ್ಪ್ಯಾನಿಷ್ ವೆಬ್ ಸೀರಿಸ್) ನವೆಂಬರ್ 6

ಡಿಸ್ನಿ ಹಾಟ್‌ಸ್ಟರ್
1. ARM
ಮಲಯಾಳಂನಲ್ಲಿ ಟೊವಿನೊ ಥಾಮಸ್ ಹಾಗೂ ಕೃತಿ ಶೆಟ್ಟಿ ನಟನೆಯ 'ಅಜಾಯನ್ತೇ ರಂದಂ ಮೋಷನಮ್' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಈ ಆಕ್ಷನ್ ಅಡ್ವೆಂಚರ್ಸ್ ಸಿನಿಮಾ ಕನ್ನಡಕ್ಕೂ ಡಬ್ ಆಗಿ ತೆರೆಗೆ ಬಂದಿತ್ತು. ಓಣಂ ಸಂಭ್ರಮದಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ನವೆಂಬರ್ 8ಕ್ಕೆ ಸ್ಟ್ರೀಮಿಂಗ್ ಆರಂಭಿಸಲಿದೆ.
ಅಮೇಜಾನ್ ಪ್ರೈಂ
1. ವೆಟ್ಟೆಯಾನ್
ರಜನಿಕಾಂತ್ ನಟನೆಯ ಆಕ್ಷನ್ ಥ್ರಿಲ್ಲರ್ 'ವೆಟ್ಟೆಯಾನ್' ಚಿತ್ರ ಈ ವಾರ ಓಟಿಟಿಗೆ ಎಂಟ್ರಿ ಕೊಡಲಿದೆ. ಜ್ಞಾನವೇಲ್ ನಿರ್ದೇಶನದ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್‌ರಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ತಕ್ಕಮಟ್ಟಿಗೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಕನ್ನಡಕ್ಕೂ ಡಬ್ ಆಗಿ ನವೆಂಬರ್ 8ಕ್ಕೆ ಪ್ರೈಂ ವೀಡಿಯೋದಲ್ಲಿ ರಿಲೀಸ್ ಆಗಲಿದೆ.
2. ಸಿಟಾಡೆಲ್
ವರುಣ್ ಧವನ್ ಹಾಗೂ ಸಮಂತಾ ನಟನೆಯ ಬಹುನಿರೀಕ್ಷಿತ 'ಸಿಟಾಡೆಲ್' ವೆಬ್ ಸೀರಿಸ್ ಸಹ ಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 8ಕ್ಕೆ ಸ್ಪೈ ಆಕ್ಷನ್ ಸೀರಿಸ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ರಾಜ್ & ಡಿಕೆ ಜೋಡಿ ಇದಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಬುಕ್ ಮೈ ಶೋ
1. ಟ್ರಾನ್ಸ್‌ಫಾರ್ಮರ್ಸ್ ವನ್(ಇಂಗ್ಲೀಷ್ ಸಿನಿಮಾ) ನವೆಂಬರ್ 6
ಜಿಯೋ ಸಿನಿಮಾ
1. ಡೆಸ್ಪಿಕಬಲ್ ಮಿ -4( ಇಂಗ್ಲೀಷ್ ಸಿನಿಮಾ) ನವೆಂಬರ್ 5


Click it and Unblock the Notifications











