OTT Release This Week: 'ಧುರಂಧರ್- 2' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್
ಚಿತ್ರಮಂದಿರಗಳಲ್ಲಿ ದೊಡ್ಡ ಸಿನಿಮಾಗಳ ಬರ ಎದುರಿಸುವಂತಾಗಿದೆ. ಐಪಿಎಲ್ ಮುಗಿಯುವರೆಗೂ ಸ್ಟಾರ್ ನಟರ ಸಿನಿಮಾಗಳು ತೆರೆಗಪ್ಪಳಿಸುವುದು ಕಷ್ಟ ಕಷ್ಟ. ಈ ವಾರ ತಮಿಳಿನ 'ಕರುಪ್ಪು' ಸಿನಿಮಾ ಬಿಡುಗಡೆ ಆಗುತ್ತಿದೆ. ಜೂನ್ 4ರಂದು ರಾಮ್‌ಚರಣ್ ನಟನೆಯ 'ಪೆದ್ದಿ' ತೆರೆಗಪ್ಪಳಿಸುವುದು ಖಚಿತವಾಗಿದೆ. ಇನ್ನುಳಿದಂತೆ ಯಾವುದೇ ಸಿನಿಮಾ ನಿರೀಕ್ಷೆ ಮೂಡಿಸಿಲ್ಲ.
ಇತ್ತ ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಈ ವಾರ ಸ್ಟ್ರೀಮಿಂಗ್ ಆಗುತ್ತಿವೆ. ಹೆಚ್ಚು ಕಮ್ಮಿ 2 ತಿಂಗಳ ಬಳಿಕ 'ಧುರಂಧರ್-2' ಸಿನಿಮಾ ಡಿಜಿಟಲ್ ರಿಲೀಸ್‌ಗೆ ಅಣಿಯಾಗಿದೆ. ಕಳೆದ ವಾರ ಒಂದಷ್ಟು ಕನ್ನಡ ಸಿನಿಮಾಗಳು ಓಟಿಟಿಗೆ ಬಂದಿದ್ದವು. ಈ ವಾರ ಸದ್ಯಕ್ಕೆ ಯಾವುದೇ ಕನ್ನಡ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

'ರಕ್ಕಸಪುರದೋಳ್', 'ದಿ ರೈಸ್ ಆಫ್ ಅಶೋಕ' ಹಾಗೂ 'ಪೀಟರ್' ಸಿನಿಮಾಗಳನ್ನು ಓಟಿಟಿಯಲ್ಲಿ ವೀಕ್ಷಿಸಲು ಸಿನಿರಸಿಕರು ಕಾಯುತ್ತಿದ್ದಾರೆ. ಆದರೆ ಅದಕ್ಕೆ ಇನ್ನು ಸಮಯ ನಿಗದಿಯಾಗಿಲ್ಲ.
ಧುರಂಧರ್-2
ಬಾಲಿವುಡ್ ಸ್ಪೈ ಥ್ರಿಲ್ಲರ್ 'ಧುರಂಧರ್-2' ಸಿನಿಂಆ ಅಂತೂ ಇಂತೂ ಈ ವಾರ ಓಟಿಟಿಗೆ ಬರ್ತಿದೆ. ಮೇ 15ರಂದು ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಅನ್ ಕಟ್ ವರ್ಷನ್ ಬಿಡುಗಡೆ ಆಗಲಿದ್ದು ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ವಿದೇಶಗಳಲ್ಲಿ ಇರುವ ನೆಟ್‌ಫ್ಲಿಕ್ಸ್ ಚಂದಾದಾರರು ಕುಳಿತಲ್ಲೇ ಸಿನಿಮಾ ನೋಡಬಹುದು.

ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಹಾಟ್‌ಸ್ಟರ್ ಈ ಬಗ್ಗೆ ಅಧಿಕೃತವಾಗಿ ಹೇಳಿಲ್ಲ. ರಣ್ವೀರ್ ಸಿಂಗ್ ನಟನೆಯ 'ಧುರಂಧರ್-2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆದಿತ್ಯಧರ್ ನಿರ್ದೇಶನದ ಸಿನಿಮಾ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.
ಕರ್ತವ್ಯ
ಸೈಫ್ ಅಲಿಖಾನ್ ಹಾಗೂ ರಾಶಿಕ ದುಗಲ್ ನಟನೆಯ ಕ್ರೈಂ ಥ್ರಿಲ್ಲರ್ ಸಿನಿಮಾ 'ಕರ್ತವ್ಯ' ನೇರವಾಗಿ ಓಟಿಟಿಗೆ ಬರ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಮೇ 15ರಿಂದ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ದಕ್ಷಿಣದ ಭಾಷೆಗಳಿಗೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ.
'ಕರ್ತವ್ಯ' ಚಿತ್ರಕ್ಕೆ ಪುಲ್ಕಿತ್ ಆಕ್ಷನ್ ಕಟ್ ಹೇಳಿದ್ದಾರೆ. ಸಂಜಯ್ ಮಿಶ್ರಾ, ಸೌರಬ್ ದ್ವಿವೇದಿ, ಜಾಕಿರ್ ಹುಸೇನ್, ಮನೀಷ್ ಚೌಧರಿ ಚಿತ್ರದ ತಾರಾಗಣದಲ್ಲಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇನ್ಸ್‌ಪೆಕ್ಟರ್ ಅವಿನಾಶ್; ಸೀಸನ್-2
ಹಿಂದಿ ಕ್ರೈಂ ಆಕ್ಷನ್ ಥ್ರಿಲ್ಲರ್ ವೆಬ್ ಸೀರಿಸ್ ಇದು. ನೀರನ್ ಪಾಠಕ್ ನಿರ್ದೇಶನದ 'ಇನ್ಸ್‌ಪೆಕ್ಟರ್ ಅವಿನಾಶ್; ಸೀಸನ್-2' ಮೇ 18ರಂದು ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ರಣ್‌ದೀಪ್ ಹೂಡಾ, ಊರ್ವಶಿ ರೌಟೇಲಾ, ಅಮಿತ್ ಸೈಲ್, ಜಾಕೀರ್ ಹುಸೇನ್ ತಾರಾಗಣದಲ್ಲಿದ್ದಾರೆ.
ಮೊದಲ ಸೀಸನ್ 8 ಎಪಿಸೋಡ್‌ಗಳಾಗಿ ಸ್ಟ್ರೀಮಿಂಗ್ ಆಗಿತ್ತು. 2ನೇ ಸೀಸನ್ ಕೂಡ 8 ಭಾಗಗಳಾಗಿ ವೀಕ್ಷಣೆಗ ಲಭ್ಯವಾಗಲಿದೆ. ಉತ್ತರಪ್ರದೇಶದ ಪೊಲೀಸ್ ಅಧಿಕಾರಿ ಅವಿನಾಶ್ ಸುತ್ತಾ ಈ ವೆಬ್ ಸೀರಿಸ್ ಕಥೆ ಸುತ್ತಲಿದೆ. ಬೇರೆ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಈ ವಾರ ಓಟಿಟಿಗೆ ಬರುತ್ತೆ ಮುಂದೆ ಓದಿ.
ಹಾಟ್‌ಸ್ಟರ್
1. ತುಖ್ರಾ ಕಾ ಮೇರೆ ಪ್ಯಾರ್ ಸೀಸನ್-2(ಹಿಂದಿ ವೆಬ್ ಸೀರಿಸ್) ಮೇ 12
2. ದಿ ಪನೀಷರ್; ವನ್ ಲಾಸ್ಟ್ ಕಿಲ್(ಇಂಗ್ಲೀಷ್ ಸಿನಿಮಾ) ಮೇ 12
ಪ್ರೈಂ ವಿಡಿಯೋ
1. ಎಕ್ಸಾಮ್ (ತಮಿಳು ವೆಬ್ ಸೀರಿಸ್) ಮೇ 15
2. ಆಫ್ ಕ್ಯಾಂಪಸ್(ಇಂಗ್ಲೀಷ್ ವೆಬ್ ಸೀರಿಸ್) ಮೇ 13
ಸನ್ ನೆಕ್ಸ್ಟ್
1. ಕಾಳಿದಾಸ್-2 (ತಮಿಳು ಸಿನಿಮಾ) ಮೇ 12
ಅಹಾ ಓಟಿಟಿ
1. ತಿಮ್ಮರಾಜುಪಲ್ಲಿ ಟಿವಿ(ತೆಲುಗು ಸಿನಿಮಾ) ಮೇ 15
ನೆಟ್‌ಫ್ಲಿಕ್ಸ್
1. ಬೆರ್ಲಿನ್ ಅಂಡ್ ದಿ ಲೇಡಿ ವಿತ್ ಎರ್ಮಿನ್(ಇಂಗ್ಲೀಷ್ ವೆಬ್ ಸೀರಿಸ್) ಮೇ 15
2. ಒರು ದುರೂಹ ಸಾಹಸಾಚಾರ್ಯತಿಲ್ (ಮಲಯಾಳಂ ಸಿನಿಮಾ) ಮೇ 13
3. ನೇಮಿಸಿಸ್(ಇಂಗ್ಲೀಷ್ ಸೀರಿಸ್) ಮೇ 14


Click it and Unblock the Notifications