OTT Releases This Week: ಈ ವಾರ 15 ಚಿತ್ರಗಳು ಓಟಿಟಿಗೆ ಎಂಟ್ರಿ; ನಿಮ್ಮ ಆಯ್ಕೆ ಯಾವ್ದು?

ಓಟಿಟಿ ಪ್ಲಾಟ್‌ಫಾರ್ಮ್‌ಗಳ ಭರಾಟೆ ಶುರುವಾದ ಬಳಿಕ ವಾರಾಂತ್ಯಗಳಲ್ಲಿ ಮನೆಯಲ್ಲಿ ಕೂಡ ಸಿನಿಮಾ, ವೆಬ್ ಸೀರಿಸ್ ನೋಡುವ ಅವಕಾಶ ಸಿಗುತ್ತಿದೆ. ಈ ವಾರ ಚಿತ್ರಮಂದಿರಗಳಲ್ಲಿ 'ಸೀಟ್‌ ಎಡ್ಜ್', 'ರಕ್ತಕಾಶ್ಮೀರ' ಹಾಗೂ 'ಚೌಕಿದಾರ್' ಚಿತ್ರಗಳು ಬಿಡುಗಡೆ ಆಗ್ತಿದೆ. ಇತ್ತ ಓಟಿಟಿಯಲ್ಲಿ ಕೂಡ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸಲಿದೆ.

ಕಳೆದ ವಾರ ಕನ್ನಡದ 2 ದೊಡ್ಡ ಸಿನಿಮಾಗಳು ಓಟಿಟಿಗೆ ಬಂದಿದ್ದವು. ಸುದೀಪ್ ನಟನೆಯ 'ಮಾರ್ಕ್' ಜೊತೆಗೆ ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರಗಳು ಓಟಿಟಿಗೆ ಬಂದು ಸಿನಿರಸಿಕರನ್ನು ರಂಜಿಸುತ್ತಿವೆ. ಆದರೆ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಇನ್ನು ಯಾಕೆ ಓಟಿಟಿಗೆ ಬಂದಿಲ್ಲ ಎನ್ನುವ ಚರ್ಚೆ ಶುರುವಾಗಿದೆ.

From Dhurandhar to Sarvam Maya This week Ott Release Movies list

ಫೆಬ್ರವರಿ 16ರಂದು ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಡೆವಿಲ್' ಸಿನಿಮಾ ಓಟಿಟಿಗೆ ಬರುವ ನಿರೀಕ್ಷೆಯಿದೆ. ಇನ್ನುಳಿದಂತೆ ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಂ, ಜೀ5 ಸೇರಿದಂತೆ ಓಟಿಟಿಯಲ್ಲಿ ಈ ವಾರ ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗಲಿವೆ ಮುಂದೆ ಓದಿ.

ಗತವೈಭವ

ಸಿಂಪಲ್ ಸುನಿ ನಿರ್ದೇಶನದಲ್ಲಿ ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ನಟಿಸಿದ್ದ 'ಗತವೈಭವ' ಸಿನಿಮಾ ಓಟಿಟಿಗೆ ಬಂದಿದೆ. ಕಳೆದ ವರ್ಷ ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. 4 ಬೇರೆ ಬೇರೆ ಕಥೆಗಳು ಒಂದೇ ಚಿತ್ರದಲ್ಲಿ ಇರುವಂತೆ ಸುನಿ ವಿಭಿನ್ನ ರೀತಿಯಲ್ಲಿ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಧುರಂಧರ್

ಬಾಲಿವುಡ್ ಬ್ಲಾಕ್‌ಬಸ್ಟರ್ ಸಿನಿಮಾ 'ಧುರಂಧರ್' ಈ ವಾರವೇ ಓಟಿಟಿಗೆ ಬಂದಿದೆ. ಭಾರೀ ಮೊತ್ತಕ್ಕೆ ನೆಟ್‌ಫ್ಲಿಕ್ಸ್ ರೈಟ್ಸ್ ಕೊಂಡುಕೊಂಡಿದೆ. ಸಿನಿಮಾ ಈಗಾಗಲೇ 8 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ಹಾಗಾಗಿ ಸಹಜವಾಗಿಯೇ ಓಟಿಟಿಗೆ ಬರುವಂತಾಗಿದೆ.

1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 'ಧುರಂಧರ್' ಸಿನಿಮಾ ಸದ್ದು ಮಾಡಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ ನಟನೆಯ ಸಿನಿಮಾ ಹೊಸ ದಾಖಲೆ ಬರೆದಿದೆ. 2025ರಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿತ್ತು. ಜನವರಿ 30ರಂದು ಸಿನಿಮಾ ಓಟಿಟಿಗೆ ಬಂದಿದೆ.

ವಾ ವಾಥಿಯರ್

ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ತಮಿಳಿನ 'ವಾ ವಾಥಿಯರ್' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬಂದಿದೆ. ಪ್ರೈಂ ವಿಡಿಯೋದಲ್ಲಿ ಸಿನಿಮಾ ಈಗಾಗಲೇ ಪ್ರದರ್ಶನ ಆರಂಭಿಸಿದೆ. ಕಾರ್ತಿ ಹಾಗೂ ಕೃತಿ ಶೆಟ್ಟಿ ನಟನೆಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಹಾಗಾಗಿ ಬಹಳ ಬೇಗ ಓಟಿಟಿಗೆ ಬಂದಿದೆ. ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿದೆ.

ಸರ್ವಂ ಮಾಯ

ನಿವಿನ್ ಪೌಲಿ ನಿರ್ದೇಶನದ ಸೂಪರ್ ನ್ಯಾಚುಲರ್ ಕಾಮಿಡಿ ಸಿನಿಮಾ 'ಸರ್ವಂ ಮಾಯ' ಹಾಟ್‌ಸ್ಟರ್‌ಗೆ ಬರ್ತಿದೆ. ಜನವರಿ 30ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಅಖಿಲ್ ಸತ್ಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದಿತ್ತು.

ಕಮ್ಮಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಕ್ರಿಸ್‌ಮಸ್ ಸಂಭ್ರಮದಲ್ಲೇ ಬಂದಿದ್ದ ಮೋಹನ್ ಲಾಲ್ ನಟನೆಯ 'ವೃಷಭ' ಸಿನಿಮಾ ಕೂಡ 'ಸರ್ವಂ ಮಾಯ' ಸಿನಿಮಾ ಮುಂದೆ ಡಲ್ ಆಗಿತ್ತು. ಕನ್ನಡಕ್ಕೂ ಡಬ್ ಆಗಿ ಈ ಸಿನಿಮಾ ವೀಕ್ಷಣೆಗೆ ಸಿಗಲಿದೆ.

ಅಮೇಜಾನ್ ಪ್ರೈಂ

1. ದಿ ರೇಕಿಂಗ್ ಕ್ರೂ(ಇಂಗ್ಲೀಷ್ ಸಿನಿಮಾ) ಜನವರಿ 30

2. ದಲ್ ದಲ್(ಹಿಂದಿ ಸೀರಿಸ್) ಜನವರಿ 30

ಹಾಟ್‌ಸ್ಟರ್

1. ಗುಸ್ತಾಕ್ ಇಷ್ಟ್(ಹಿಂದಿ ಸಿನಿಮಾ) ಜನವರಿ 27

ಸನ್ ನೆಕ್ಸ್ಟ್

1. ಪತಂಗ್(ತೆಲುಗು ಸಿನಿಮಾ) ಜನವರಿ 30

ಜೀ-5

1. ದೇವ್‌ಕೇಳ್(ಮರಾಠಿ ಸೀರಿಸ್) ಜನವರಿ 30

ನೆಟ್‌ಫ್ಲಿಕ್ಸ್

1. ಚಾಂಪಿಯನ್ (ತೆಲುಗು ಸಿನಿಮಾ) ಜನವರಿ 29

2. ಟೇಕ್ ದಟ್(ಇಂಗ್ಲೀಷ್ ಸೀರಿಸ್) ಜನವರಿ 27

3. ಮೈಕ್ಸ್ ಏಪ್ಸ್: ಡೆಲ್ಯೂಷನಲ್(ಇಂಗ್ಲೀಷ್ ಸಿನಿಮಾ) ಜನವರಿ 27

4. ಮಿರಾಕಿಲ್: ದಿ ಬಾಯ್ ಆಫ್ 80ಸ್‌(ಇಂಗ್ಲೀಷ್‌ ಸಿನಿಮಾ) ಜನವರಿ 30

5. ಬ್ರಿಡ್ಜರೇಟನ್ ಸೀಸನ್-4 (ಇಂಗ್ಲೀಷ್ ಸೀರಿಸ್) ಜನವರಿ 26

More from Filmibeat

Read more about: ranveer singh bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X