Ott Releases this week: ಈ ವಾರ ಓಟಿಟಿ ಸಿನಿಮಾಗಳ ಪಟ್ಟಿ; ಕನ್ನಡ ಚಿತ್ರವೂ ಇದೆ ಮಿಸ್ ಮಾಡ್ಬೇಡಿ
ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಇತ್ತ ಥಿಯೇಟರ್ ಅತ್ತ ಓಟಿಟಿಯಲ್ಲಿ ಹೊಸ ಹೊಸ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿದೆ. ಈ ವಾರ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಓಟಿಟಿಗೆ ಎಂಟ್ರಿ ಕೊಡುತ್ತಿದೆ.
ಚಿತ್ರಮಂದಿಗಳಲ್ಲಿ ಯಾವುದೇ ದೊಡ್ಡ ಸಿನಿಮಾಗಳಿಲ್ಲ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಸಿನಿಮಾ ರೀ-ರಿಲೀಸ್ ಆಗಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ತೆಲುಗಿನ 'ಸಲಾರ್' ಸಿನಿಮಾ ದೊಡ್ಡಮಟ್ಟದಲ್ಲಿ ಈ ವಾರ ರೀ-ರಿಲೀಸ್ ಆಗುತ್ತಿದೆ.

ಓಟಿಟಿಯಲ್ಲಿ ತಮಿಳು, ಮಲಯಾಳಂ, ತೆಲುಗು ಸಿನಿಮಾಗಳ ಜೊತೆಗೆ ಒಂದು ಕನ್ನಡ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಇಂಗ್ಲೀಷ್ ವೆಬ್ ಸೀರಿಸ್‌ಗಳು ಲಿಸ್ಟ್‌ನಲ್ಲಿವೆ. ಮುಂದೆ ಓದಿ.
ಅಮೇಜಾನ್ ಪ್ರೈಂ
1. ನೋಡಿದವರು ಏನಂತಾರೆ
ನವೀನ್ ಶಂಕರ್ ಹಾಗೂ ಅಪೂರ್ವ ಭಾರಧ್ವಜ್ ನಟನೆಯ 'ನೋಡಿದವರು ಏನಂತಾರೆ' ಸಿನಿಮಾ ಜನವರಿ 31ಕ್ಕೆ ತೆರೆಗೆ ಬಂದಿತ್ತು. ಕುಲದೀಪ್ ಕಾರ್ಯಪ್ಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿಲ್ಲ.
ಟೈಟಲ್ ಹೇಳುವಂತೆ ನಾವು ಏನೇ ನಿರ್ಧಾರ ತೆಗೆದುಕೊಳ್ಳಲು ಹೋದರೂ ನೋಡಿದವರು ಏನಂತಾರೆ ಎಂದು ಯೋಚಿಸುತ್ತೇವೆ. ಈ ಚಿತ್ರದ ನಾಯಕ ಸಿದ್ದಾರ್ಥ್ ಕಥೆ ಕೂಡ ಅದೇ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವ ನಾಯಕನಿಗೆ ಲವ್ ಬ್ರೇಕಪ್ ಆಗಿರುತ್ತದೆ. ತಾಯಿ ಚಿಕ್ಕಂದಿನಲ್ಲೇ ಬಿಟ್ಟು ಹೋದಳೆಂದು ಸ್ತ್ರೀ ಕುಲದ ಬಗ್ಗೆ ದ್ವೇಷ ಬೆಳೆಸಿಕೊಂಡಿರುತ್ತಾನೆ. ಮುಂದೆ ಆತನ ಬಾಳಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ. ವಾಸ್ತವಕ್ಕೆ ಹತ್ತಿರ ಎನಿಸುವ ಈ ಸಿನಿಮಾ ಮಾರ್ಚ್ 21ಕ್ಕೆ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸುತ್ತಿದೆ.
2. ಸ್ಕೈ ಫೋರ್ಸ್(ಹಿಂದಿ ಸಿನಿಮಾ) ಮಾರ್ಚ್ 21
3. ಡೂಪ್ಲಿಸಿಟಿ(ಸಿನಿಮಾ) ಮಾರ್ಚ್ 21
ಅಮೇಜಾನ್ ಎಂಎಕ್ಸ್ ಪ್ಲೇಯರ್
1. ಲೂಟ್ ಕಾಂಡ್(ವೆಬ್ ಸೀರಿಸ್) ಮಾರ್ಚ್ 20

ನೆಟ್‌ಫ್ಲಿಕ್ಸ್
1. ಡ್ರ್ಯಾಗನ್
ತಮಿಳಿನ ಸೂಪರ್ ಹಿಟ್ 'ಡ್ರ್ಯಾಗನ್' ಸಿನಿಮಾ ಮಾರ್ಚ್ 21ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಶ್ವಥ್ ಮಾರಿಮುತ್ತು ನಿರ್ದೇಶನದ ಈ ಕಾಮಿಡಿ ಡ್ರಾಮಾ ಭರ್ಜರಿ ಸಕ್ಸಸ್ ಕಂಡಿದೆ. 'ಲವ್ ಟುಡೇ' ಸಿನಿಮಾ ಖ್ಯಾತಿಯ ಪ್ರದೀಪ್ ರಂಗನಾಥನ್ ಹೀರೊ ಆಗಿ ನಟಿಸಿರುವ 2ನೇ ಸಿನಿಮಾ ಇದು.
ಅನುಪಮಾ ಪರಮೇಶ್ವರನ್ ಹಾಗೂ ಕಯಾದು ಲೋಹರ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಇಂಜಿನಿಯರಿಂಗ್ ಪಾಸ್ ಮಾಡದೇ ಫೇಕ್ ಸರ್ಟಿಫಿಕೇಟ್ ಮಾಡಿಕೊಂಡು ಕೆಲಸ ಗಿಟ್ಟಿಸಿಕೊಂಡ ನಾಯಕ ಏನೆಲ್ಲಾ ಪರಿಪಾಟಲು ಪಡುತ್ತಾನೆ ಎನ್ನುವುದು ಚಿತ್ರದ ಕಥೆ. ರಜನಿಕಾಂತ್ ಕೂಡ ಸಿನಿಮಾ ನೋಡಿ ಮೆಚ್ಚಿದ್ದರು. ಅಂದಾಜು 30 ಕೋಟಿ ಬಜೆಟ್ ಸಿನಿಮಾ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬರ್ತಿದೆ.
2. ಆಫೀಸರ್ ಆನ್ ಡ್ಯೂಟಿ
ಮಲಯಾಳಂನಲ್ಲಿ ಇತ್ತೀಚೆಗೆ ತೆರೆಕಂಡಿದ್ದ ಆಕ್ಷನ್ ಥ್ರಿಲ್ಲರ್ 'ಆಫೀಸರ್ ಆನ್ ಡ್ಯೂಟಿ' ಸಿನಿಮಾ ಮಾರ್ಚ್ 20ಕ್ಕೆ ಓಟಿಟಿಗೆ ಬರ್ತಿದೆ. ಜಿತು ಅಶ್ರಫ್ ನಿರ್ದೇಶನದ ಚಿತ್ರದಲ್ಲಿ ಕುಂಚಕೊ ಬೊಬನ್ ಹಾಗೂ ಪ್ರಿಯಾಮಣಿ ನಟಿಸಿದ್ದಾರೆ.
3. ವುಮೆನ್ ಆಫ್ ದಿ ಡೆಡ್-2(ವೆಬ್ ಸೀರಿಸ್) ಮಾರ್ಚ್ 19
4. ಬೆಟ್ ಯುವರ್ ಲೈಫ್(ಕಾಮಿಡಿ ಸೀರಿಸ್) ಮಾರ್ಚ್ 20
5. ಖಾಕಿ: ದಿ ಬೆಂಗಾಳ್ ಚಾಪ್ಟರ್(ವೆಬ್ ಸೀರಿಸ್) ಮಾರ್ಚ್ 20
6. ದಿ ರೆಸಿಡೆನ್ಸ್ (ವೆಬ್ ಸೀರಿಸ್) ಮಾರ್ಚ್ 20
ಜಿಯೋ ಹಾಟ್‌ಸ್ಟರ್
1. ಗುಡ್ ಅಮೇರಿಕನ್ ಫ್ಯಾಮಿಲಿ (ವೆಬ್ ಸೀರಿಸ್) ಮಾರ್ಚ್ 19
2. ಅನೋರಾ(ಸಿನಿಮಾ) ಮಾರ್ಚ್ 17
ಅಹಾ ಓಟಿಟಿ
1. ಬ್ರಹ್ಮ ಆನಂದಂ(ತೆಲುಗು ಸಿನಿಮಾ) ಮಾರ್ಚ್ 19


Click it and Unblock the Notifications











