Ott Releases This week: ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ; ಕನ್ನಡ ಚಿತ್ರಗಳು ಇವೆ
ಸದ್ಯ ಚಿತ್ರಮಂದಿರಗಳಲ್ಲಿ 'ಕಾಂತಾರ- 1' ಚಿತ್ರದ ಆರ್ಭಟವೇ ಮುಂದುವರೆದಿದೆ. ತಮಿಳಿನ ಇಡ್ಲಿ ಕಡೇ, ತೆಲುಗಿನ ಓಜಿ ಹಾಗೂ ಹಿಂದಿಯ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ಸಿನಿಮಾಗಳ ಆರ್ಭಟ ಕಮ್ಮಿ ಆಗಿದೆ. ದೀಪಾವಳಿ ಸಂಭ್ರಮದಲ್ಲಿ ಕೂಡ ರಿಷಬ್ ಶೆಟ್ಟಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಲೆಕ್ಕಾಚಾರ ಶುರುವಾಗಿದೆ.
ಕನ್ನಡದ 'ಮಾರ್ನಮಿ', ತಮಿಳಿನ 'ಡ್ಯೂಡ್' ಸೇರಿ ಕೆಲ ಸಿನಿಮಾಗಳು ಚಿತ್ರಮಂದಿರಗಳಿಗೆ ಲಗ್ಗೆ ಇರುತ್ತಿವೆ. ಇತ್ತ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಬಿಡುಗಡೆಗೆ ಸಜ್ಜಾಗಿವೆ. ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ' ಕನ್ನಡ ಸಿನಿಮಾ ಕೂಡ ಈ ವಾರ ಓಟಿಟಿ ವೀಕ್ಷಕರ ಮುಂದೆ ಬರಲಿದೆ.

1. 'ಏಳುಮಲೆ'
ರಕ್ಷಿತಾ ಸಹೋದರ ರಾಣ ಹಾಗೂ ಪ್ರಿಯಾಂಕ ಆಚಾರ್ ನಟನೆಯ 'ಏಳುಮಲೆ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಆದರ ದೊಡ್ಡಮಟ್ಟದಲ್ಲಿ ಈ ರೊಮ್ಯಾಂಟಿಕ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸದ್ದು ಮಾಡಲಿಲ್ಲ. ಅಟ್ಲಾಂಟ ನಾಗೇಂದ್ರ ಜೊತೆ ಸೇರಿ ತರುಣ್ ಸುಧೀರ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಜಗಪತಿ ಬಾಬು, ಕಿಶೋರ್, ನಾಗಾಭರಣ ಚಿತ್ರದಲ್ಲಿ ನಟಿಸಿದ್ದಾರೆ.
ಒಂದು ರಾತ್ರಿಯಲ್ಲಿ ನಡೆಯುವ ಇಂಟ್ರೆಸ್ಟಿಂಗ್ ಕಥೆ ಚಿತ್ರದಲ್ಲಿದೆ. ಮಾದೇಶ್ವರ ಬೆಟ್ಟದ ಭಾಗದಲ್ಲಿ ವೀರಪ್ಪನ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಈ ಹರೀಶ್ ಹಾಗೂ ರೇವತಿ ಪ್ರೇಮಕಥೆಯನ್ನು ಸೆರೆಹಿಡಿಯಲಾಗಿದೆ. ಪುನೀತ್ ರಂಗಸ್ವಾಮಿ ನಿರ್ದೇಶನದ ಈ ಸಿನಿಮಾ ಸೆಪ್ಟೆಂಬರ್ 5ರಂದು ತೆರೆಗೆ ಬಂದಿತ್ತು. ಜೀ5ನಲ್ಲಿ ಅಕ್ಟೋಬರ್ 17ರಿಂದ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.
2. ಕಿಷ್ಕಿಂಧಪುರಿ
ಕೌಶಿಕ್ ಪೇಗಲಪಟ್ಟಿ ನಿರ್ದೇಶನದ 'ಕಿಷ್ಕಿಂಧಪುರಿ' ತೆಲುಗು ಸಿನಿಮಾ ಕೂಡ ಜೀ5ನಲ್ಲಿ ಬಿಡುಗಡೆ ಆಗ್ತಿದೆ. ಬೆಲ್ಲಂಕೊಂಡ ಸಾಯಿ ಹಾಗೂ ಅನುಪಮಾ ಪರಮೇಶ್ವರನ್ ಈ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 12ಕ್ಕೆ ತೆರೆಗೆ ಬಂದಿದ್ದ ಸಿನಿಮಾ ತಿಂಗಳು ಬಳಿಕ ಅಕ್ಟೋಬರ್ 17ರಂದು ಓಟಿಟಿಗೆ ಲಗ್ಗೆ ಇಡ್ತಿದೆ.

3. ಅಭ್ಯಂತರ ಕುಟ್ಟವಾಲಿ
ಮಲಯಾಳಂ ಕಾಮಿಡಿ ಸಿನಿಮಾ 'ಅಭ್ಯಂತರ ಕುಟ್ಟವಾಲಿ' ಜೂನ್ 6ಕ್ಕೆ ತೆರೆಗೆ ಬಂದಿತ್ತು. ಈ ವಾರ ಸಿನಿಮಾ ಜೀ5ಗೆ ಎಂಟ್ರಿ ಕೊಡುತ್ತಿದೆ. ಆಸಿಫ್ ಅಲಿ, ತುಳಸಿ, ಜಗದೀಶ್, ಪ್ರೇಮ್ ಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ. ಸೇತುನಾಥ್ ಪದ್ಮಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬೇರೆ ಯಾವೆಲ್ಲಾ ಸಿನಿಮಾಗಳು ಈ ವಾರ ಓಟಿಟಿಗೆ ಬರ್ತಿವೆ ಇಲ್ಲಿದೆ ಲಿಸ್ಟ್.
4. ಅಂದೊಂದಿತ್ತು ಕಾಲ
ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ ನಟನೆಯ 'ಅಂದೊಂದಿತ್ತು ಕಾಲ' ಸಿನಿಮಾ ಕೊನೆಗೂ ಓಟಿಟಿಗೆ ಬರ್ತಿದೆ. ಅಕ್ಟೋಬರ್ 17ರಂದು ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆಗಸ್ಟ್ 29ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಕೀರ್ತಿ ಕೃಷ್ಣಪ್ಪ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ರೊಮ್ಯಾಂಟಿಕ್ ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಇದೀಗ ಓಟಿಟಿಯಲ್ಲೇ ನೋಡಬಹುದು.
ನೆಟ್‌ಫ್ಲಿಕ್ಸ್
1. ಬ್ಯಾಡ್ ಷಬ್ಬೋಸ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 16
2. ದ ಟ್ವಿಟ್ಸ್(ಇಂಗ್ಲೀಷ್ ಆನಿಮೇಷನ್ ಸಿನಿಮಾ) ಅಕ್ಟೋಬರ್ 16
3. ದ ಟೈಮ್ ದಟ್ ರಿಮೇನ್ಸ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 16
4. ದ ಪರ್ಫೆಕ್ಟ್ ನೈಬರ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 17
ಹಾಟ್‌ಸ್ಟರ್
1. ಹೌ ಟು ಟ್ರೈನ್ ಯುವರ್ ಡ್ರ್ಯಾಗನ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 13
2. ಫೈನಲ್ ಡೆಸ್ಟಿನೇಷನ್: ಬ್ಲಡ್ ಲೈನ್ಸ್ ಅಕ್ಟೋಬರ್ 16
ಜೀ-5
1. ಮೇಡಮ್ ಸೇನಾ ಗುಪ್ತಾ(ಬೆಂಗಾಲಿ ಸಿನಿಮಾ) ಅಕ್ಟೋಬರ್ 17
2. ಭಗವಾನ್ ಚಾಪ್ಟರ್-1: ರಾಕ್ಷಸ್(ಹಿಂದಿ ಸಿನಿಮಾ) ಅಕ್ಟೋಬರ್ 17
ಸನ್ ನೆಕ್ಸ್ಟ್
1. ಇಂಬಮ್(ಮಲಯಾಳಂ ಸಿನಿಮಾ) ಅಕ್ಟೋಬರ್ 17


Click it and Unblock the Notifications











