OTT Releases This Week: ವರ್ಷದ ಮೊದಲ ವಾರ ಯಾವೆಲ್ಲಾ ಚಿತ್ರಗಳು ಓಟಿಟಿಗೆ ಬಂದಿವೆ?
2025ರ ವರ್ಷ ಕಳೆದು ಹೊಸ ವರ್ಷ ಆರಂಭವಾಗಿದೆ. ವರ್ಷದ ಮೊದಲ ವಾರ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬಂದಿಲ್ಲ. ಈಗಾಗಲೇ ಬಿಡುಗಡೆ ಆಗಿರುವ 'ಧುರಂಧರ್', 'ಮಾರ್ಕ್', '45', 'ಡೆವಿಲ್' ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣ್ತಿವೆ. ಮುಂದಿನ ವಾರ ಸಂಕ್ರಾಂತಿ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ.
ಪ್ರಭಾಸ್ ನಟನೆಯ ತೆಲುಗಿನ 'ದಿ ರಾಜಾಸಾಬ್', ಚಿರಂಜೀವಿ- ಅನಿಲ್ ರಾವಿಪುಡಿ ಜೋಡಿಯ 'ಮನ ಶಂಕರವರಪ್ರಸಾದ್ ಗಾರು' ಜೊತೆಗೆ ತಮಿಳಿನ 'ಜನನಾಯಗನ್' ಸಿನಿಮಾ ಮುಂದಿನ ವಾರ ಬಿಡುಗಡೆ ಆಗ್ತಿದೆ. 'ಪರಶಕ್ತಿ', 'ಅನಗನಗ ಒಕ ರೋಜು', 'ಭರ್ತ ಮಾಹಾಶಯಲಕು ವಿಜ್ಞಪ್ತಿ' ಹೀಗೆ ಸಂಕ್ರಾಂತಿ ರಿಲೀಸ್ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಕನ್ನಡದಲ್ಲಿ 'ಮ್ಯಾಂಗೋ ಪಚ್ಚ' ಸಿನಿಮಾ ಕೂಡ ಸುಗ್ಗಿ ಸಂಭ್ರಮಕ್ಕೆ ತೆರೆಗೆ ಬರುಬ ನಿರೀಕ್ಷೆಯಿದೆ.

ಚಿತ್ರಮಂದಿರಕ್ಕೆ ಬರುವ ಸಿನಿಮಾಗಳ ಕಥೆ ಇದು. ಇನ್ನು ಓಟಿಟಿಯಲ್ಲಿ ಈ ವಾರ ಕೂಡ ಸಾಕಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ರಿಲೀಸ್ ಆಗ್ತಿದೆ. ಕನ್ನಡದ ಎರಡು ಸಿನಿಮಾಗಳು ಈ ಲಿಸ್ಟ್‌ನಲ್ಲಿದೆ. ಹಾಗಾಗಿ ಓಟಿಟಿ ಚಂದಾದಾರರು ಮನೆಯಲ್ಲೇ ಕೂತು ಸಿನಿಮಾ, ವೆಬ್ ಸೀರಿಸ್ ನೋಡಿ ಎಂಜಾಯ್ ಮಾಡಬಹುದು.
1. ಫುಲ್ ಮೀಲ್ಸ್
ಲಿಖಿತ್ ಶೆಟ್ಟಿ, ಖುಷೀ ರವಿ, ತೇಜಸ್ವಿನಿ ಶರ್ಮ ನಟನೆಯ 'ಫುಲ್ ಮೀಲ್ಸ್' ಸಿನಿಮಾ ನವೆಂಬರ್ 21ಕ್ಕೆ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಸಿನಿಮಾ ಬಹಳ ದಿನ ಚಿತ್ರಮಂದಿರಗಳಲ್ಲಿ ಉಳಿಯಲಿಲ್ಲ. ಇದೀಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಸ್ವತಃ ನಾಯಕ ನಟ ಲಿಖಿತ್ ಶೆಟ್ಟಿ ಚಿತ್ರಕ್ಕೆ ಹಣ ಹೂಡಿದ್ದರು. ಎನ್. ವಿನಾಯಕ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

2. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ
ಫುಲ್ ಮೀಲ್ಸ್ ಸಿನಿಮಾ ಬಿಡುಗಡೆಯಾಗಿ ವಾರದ ಬಳಿಕ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಸಿನಿಮಾ ಬಿಡುಗಡೆ ಆಗಿತ್ತು. ದೀಕ್ಷಿತ್ ಶೆಟ್ಟಿ ಹಾಗೂ ಬೃಂದಾ ಆಚಾರ್ಯ ಈ ಕ್ರೈಂ ಕಾಮಿಡಿ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ಈಗ ಅಮೇಜಾನ್ ಪ್ರೈಂ ವೀಡಿಯೋಗೆ ಎಂಟ್ರಿ ಕೊಟ್ಟಿದೆ. ಸದ್ಯಕ್ಕೆ ಯುಕೆ ಚಂದಾದಾದರು ಸಿನಿಮಾ ವೀಕ್ಷಿಸುವ ಅವಕಾಶ ಸಿಕ್ಕಿದೆ. ಈ ವಾರವೇ ಭಾರತದಲ್ಲಿ ಕೂಡ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.
3. ಹಕ್
ಹಿಂದಿ ಕೋರ್ಟ್ ರೂಂ ಡ್ರಾಮಾ 'ಹಕ್' ಸಿನಿಮಾ ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಸುಪಮ್ ವರ್ಮಾ ನಿರ್ದೇಶನದ ಚಿತ್ರದಲ್ಲಿ ಯಾಮಿ ಗೌತಮ್, ಇಮ್ರಾನ್ ಹಶ್ಮಿ, ವರ್ತಿಕಾ ಸಿಂಗ್, ಶೀಬಾ ಚಡ್ಡಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜನವರಿ 2ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ನೆಟ್‌ಫ್ಲಿಕ್ಸ್
1. ಎಕೊ(ಮಲಯಾಳಂ ಸಿನಿಮಾ) ಡಿಸೆಂಬರ್ 31
2. ಮೆಂಬರ್ಸ್ ಒನ್ಲಿ(ಇಂಗ್ಲೀಷ್ ಶೋ) ಜನವರಿ 29
3. ಸ್ಟ್ರೇಂಜರ್ ಥಿಂಗ್ಸ್ ಸೀಸನ್ 5 ವಾಲ್ಯೂಮ್ 3(ವೆಬ್ ಸೀರಿಸ್) ಜನವರಿ 1
4. ಲ್ಯೂಪಿನ್ ಸೀಸನ್ 4(ವೆಬ್ ಸೀರಿಸ್) ಜನವರಿ 1
ಹಾಟ್‌ಸ್ಟರ್
1. ಎಲ್‌ಬಿಡಬ್ಲ್ಯೂ(ತಮಿಳು ವೆಬ್ ಸೀರಿಸ್) ಜನವರಿ 1
ಸನ್ ನೆಕ್ಸ್ಟ್
1. ಇತಿರಿ ನೇರಂ(ಮಲಯಾಳಂ ಸಿನಿಮಾ)ಜನವರಿ 1
ಪ್ರೈಂ ವೀಡಿಯೋ
1. ಸಿಗೆ ಮಿ ವೋಸ್ (ಇಂಗ್ಲೀಷ್ ಸಿನಿಮಾ) ಜನವರಿ 2
2. ಸೂಪರ್ ನೋವಾ(ನೈಜೀರಿಯಾ ಸಿನಿಮಾ) ಡಿಸೆಂಬರ್ 29


Click it and Unblock the Notifications











