OTT Releases This Week: ಶುಕ್ರವಾರ ಒಂದೇ ದಿನ 3 ಕನ್ನಡ ಸೇರಿ 20 ಚಿತ್ರಗಳು ಓಟಿಟಿಗೆ ಎಂಟ್ರಿ

ಎಲ್ಲೆಲ್ಲೂ 'ಕಾಂತಾರ- 1' ಕ್ರೇಜ್ ಶುರುವಾಗಿದೆ. ಮುಂದಿನ ವಾರ ಸಿನಿಮಾ ತೆರೆಗೆ ಬರ್ತಿದೆ. ಜೊತೆಗೆ ತಮಿಳಿನ 'ಇಡ್ಲಿ ಕಡೇ' ಚಿತ್ರವೂ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಇತ್ತ ಪವನ್ ಕಲ್ಯಾಣ್ ನಟನೆಯ 'OG' ಸಿನಿಮಾ ಬಿಡುಗಡೆಯಾಗಿ ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ಇದೆಲ್ಲದರ ನಡುವೆ ಈ ವಾರ ಇಂಟ್ರೆಸ್ಟಿಂಗ್ ಸಿನಿಮಾಗಳು ಈ ವೀಕೆಂಡ್ ಓಟಿಟಿಗೆ ಬರ್ತಿದೆ.

ಶುಕ್ರವಾರ(ಸೆಪ್ಟೆಂಬರ್ 25) ಒಂದೇ ದಿನ 20ಕ್ಕೂ ಅಧಿಕ ಸಿನಿಮಾಗಳು ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಇದರಲ್ಲಿ ಕನ್ನಡ ಸಿನಿಮಾಗಳು ಇರುವುದು ವಿಶೇಷ. ಇನ್ನು ಪರಭಾಷೆಯ ಕೆಲ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಓಟಿಟಿ ವೀಕ್ಷಕರನ್ನು ರಂಜಿಸಲಿದೆ. ಆ ಬಗ್ಗೆ ಮಾಹಿತಿ ಮುಂದೆ ಓದಿ.

From Ghaati To Doora Theera Yaana this week Release movies and web series list

ಘಾಟಿ

ಅನುಷ್ಕಾ ಶೆಟ್ಟಿ ನಟನೆಯ 'ಘಾಟಿ' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಕ್ರಿಶ್ ಜಗರ್ಲಮುಡಿ ನಿರ್ದೇಶನದ ಈ ಆಕ್ಷನ್ ಕ್ರೈಮ್ ಡ್ರಾಮಾ ಸಿನಿಮಾ ಸೆಪ್ಟೆಂಬರ್ 5ರಂದು ತೆರೆಗೆ ಬಂದಿತ್ತು. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆ ಹುಟ್ಟಾಕ್ಕಿತ್ತು.

ವಿಕ್ರಂ ಪ್ರಭು, ಚೈತನ್ಯಾ ರಾವ್, ಜಗಪತಿ ಬಾಬು, ಜಾನ್ ವಿಜಯ್ ಸೇರಿ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಫಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ನಿರ್ಮಾಣದ ಸಿನಿಮಾ ಸೆಪ್ಟೆಂಬರ್ 26ರಂದು ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಬಿಡುಗಡೆ ಆಗಲಿದೆ. ಯಶ್ ತಾಯಿ ಪುಷ್ಪಾ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿ ಕೈಸುಟ್ಟುಕೊಂಡಿದ್ದರು. ಇದೀಗ ಕನ್ನಡಕ್ಕೂ ಡಬ್ ಆಗಿ ಸಿನಿಮಾ ಓಟಿಟಿಗೆ ಬರ್ತಿದೆ.

From Ghaati To Doora Theera Yaana this week Release movies and web series list

ಹೃದಯಪೂರ್ವಂ

ಮಲಯಾಳಂ ನಟ ಮೋಹನ್ ಲಾಲ್ ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದರ ಬೆನ್ನಲ್ಲೇ ಅವರ 'ದೃಶ್ಯಂ- 3' ಸಿನಿಮಾ ಸೆಟ್ಟೇರಿದೆ. ಇದೆಲ್ಲದರ ನಡುವೆ ಅವರ 'ಹೃದಯಪೂರ್ವಂ' ಸಿನಿಮಾ ಓಟಿಟಿಗೆ ಬರ್ತಿದೆ. ಆಗಸ್ಟ್ 28ರಂದು ಬಿಡುಗಡೆಯಾಗಿದ್ದ ಸಿನಿಮಾ ತಿಂಗಳಿಗೂ ಮುನ್ನ ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ. ಸತ್ಯನ್ ಅಂತಿಕಾಡ್ ನಿರ್ದೇಶನದ ಚಿತ್ರದಲ್ಲಿ ಮಾಳವಿಕಾ ಮೋಹನನ್ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ.

ಮಾದೇವ

ವಿನೋದ್ ಪ್ರಭಾಕರ್ ನಟನೆಯ 'ಮಾದೇವ' ಸಿನಿಮಾ ಓಟಿಟಿ ರಿಲೀಸ್ ಗೊಂದಲಕ್ಕೀಡಾಗಿದೆ. ಇತ್ತೀಚೆಗೆ ಸಿನಿಬಜಾರ್ ಓಟಿಟಿ ಆಪ್‌ನಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಆದರೆ HD ಪ್ರಿಂಟ್ ಇರಲಿಲ್ಲ. ಇದರ ನಡುವೆ ಚಿತ್ರವನ್ನು ಮರುಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಶುಕ್ರವಾರ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಕೂಡ ಸಿನಿಮಾ ಓಟಿಟಿ ವೀಕ್ಷಕರಿಗೆ ಲಭ್ಯವಾಗುತ್ತದೆ ಎನ್ನಲಾಗ್ತಿದೆ.

ದೂರತೀರಯಾನ

ಮಂಸೋರೆ ನಿರ್ದೇಶನದ ರೊಮ್ಯಾಂಟಿ ಸಿನಿಮಾ 'ದೂರ ತೀರ ಯಾನ' ಸಿನಿಮಾ ಸನ್ ನೆಕ್ಸ್ಟ್ ಓಟಿಟಿಗೆ ಬರ್ತಿದೆ. ವಿನಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ನಟನೆಯ ಚಿತ್ರದಲ್ಲಿ ಶ್ರುತಿ ಹಾಸನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಜುಲೈ 11ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಇನ್ನುಳಿದಂತೆ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಶುಕ್ರವಾರ ಸ್ಟ್ರೀಮಿಂಗ್ ಆರಂಭಿಸುತ್ತವೆ ಎನ್ನುವ ಲಿಸ್ಟ್ ಇಲ್ಲಿದೆ.

ನೆಟ್‌ ಫ್ಲಿಕ್ಸ್

1. ಒಡುಮ್ ಕುತಿರಾ ಚಡುಮ್ ಕುತಿತರಾ(ಮಲಯಾಳಂ ಸಿನಿಮಾ)

2. ಧಡಕ್-2 (ಹಿಂದಿ ಸಿನಿಮಾ)

3. ಫ್ರೆಂಚ್ ಲವರ್ (ಇಂಗ್ಲೀಷ್ ಸಿನಿಮಾ)

4. ಸನ್ ಆಫ್ ಸರ್ದಾರ್ (ಹಿಂದಿ ಸಿನಿಮಾ)

5. ರುತ್ ಅಂಡ್ ಬೋಜ್(ಇಂಗ್ಲೀಷ್ ಸಿನಿಮಾ)

ಸನ್ ನೆಕ್ಸ್ಟ್

1. ಮೇಘಲು ಚೆಪ್ಪಿನ ಪ್ರೇಮಕಥ(ತೆಲುಗು ಸಿನಿಮಾ)

ಜೀ-5

1. ಜನಾವರ್: ದಿ ಬೀಸ್ಟ್ ವಿಥಿನ್(ಹಿಂದಿ ಸೀರಿಸ್)

ಪ್ರೈಂ ವೀಡಿಯೋ

1. ಅನ್ನ(ಕನ್ನಡ ಸಿನಿಮಾ)

More from Filmibeat

English summary
This week, Ghaati, Son of Sardar 2, Hridayapoorvam, and several other movies are releasing on OTT platforms
Read more about: anushka shetty sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X