OTT releases this week: ದೀಪಾವಳಿಗೂ ಮುನ್ನ ಓಟಿಟಿಯಲ್ಲಿ ಸಿನಿಮಾ ಹಬ್ಬ.. ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಹಬ್ಬದ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುವುದು ಮಾಮೂಲಿ. ಈ ಬಾರಿ ದೀಪಾವಳಿ ಹಬ್ಬಕ್ಕೆ ಹಿಂದಿಯ 'ಟೈಗರ್- 3', ತಮಿಳಿನ 'ಜಪಾನ್', 'ಜಿಗರ್‌ಥಾಂಡ ಡಬಲ್ ಎಕ್ಸ್', ಕನ್ನಡದ 'ಗರಡಿ' ಸೇರಿದಂತೆ ಒಂದಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ಇನ್ನು ಓಟಿಟಿಯಲ್ಲೂ ಸಾಕಷ್ಟು ಸಿನಿಮಾಗಳು, ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್‌ಗೆ ರೆಡಿಯಾಗಿವೆ.
ಈಗಾಗಲೇ ಓಟಿಟಿಗೆ ಬಂದಿರುವ 'ಜವಾನ್' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಶಾರುಖ್ ಖಾನ್ ಬರ್ತ್‌ಡೇ ಸಂಭ್ರಮದಲ್ಲೇ ಈ ಆಕ್ಷನ್ ಎಂಟರ್‌ಟೈನ್ ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿತ್ತು. ಇನ್ನು ಈ ವಾರ ಮತ್ತಷ್ಟು ಸಿನಿಮಾಗಳು, ವೆಬ್ ಸೀರಿಸ್‌ಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ವೀಕ್ಷಕರು ವೀಕೆಂಡ್‌ನಲ್ಲಿ ಭರ್ಜರಿ ಮನರಂಜನೆ ಸವಿಯಬಹುದಾಗಿದೆ.

ಓಟಿಟಿಗೆ ಕನ್ನಡ ಕಂಟೆಂಟ್ ಕಮ್ಮಿ ಅನ್ನೋದು ಬೇಸರದ ಸಂಗತಿ. ಆಗೊಂದು ಈಗೊಂದು ದೊಡ್ಡ ದೊಡ್ಡ ಸಿನಿಮಾ ತೆರೆಗೆ ಬರುತ್ತವೆ. ಬಳಿಕ ಅವು ಓಟಿಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇನ್ನುಳಿದಂತೆ ಸಣ್ಣ ಸಿನಿಮಾಗಳನ್ನು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಖರೀದಿಸುತ್ತಿಲ್ಲ. ಇನ್ನು ನೇರವಾಗಿ ಓಟಿಟಿಗಂತ್ಲೇ ಕನ್ನಡದಲ್ಲಿ ಹೆಚ್ಚು ಕಂಟೆಂಟ್ ಕ್ರಿಯೇಟ್ ಆಗುತ್ತಿಲ್ಲ. ಬೆಂಗಳೂರಿನಲ್ಲೇ ಅತಿ ಹೆಚ್ಚು ಓಟಿಟಿ ಚಂದಾದಾರರೂ ಇದ್ದರೂ ಕೂಡ ಕನ್ನಡ ಕಂಟೆಂಟ್ ಮಾತ್ರ ಸಿಗುತ್ತಿಲ್ಲ.
ಅಮೇಜಾನ್ ಪ್ರೈಂ
1. ಪಿಪ್ಪಾ(ಹಿಂದಿ ಸಿನಿಮಾ)- ನವೆಂಬರ್ 10
2. ರೆಯಿನ್ ಬೋ ರಿಷ್ಟಾ(ಇಂಗ್ಲೀಷ್ ಡಾಕ್ಯುಮೆಂಟರಿ)- ನವೆಂಬರ್ 7
3. ಬಿಟಿಎಸ್: ಎಟ್ ಟೂ ಕಮ್(ಕೊರಿಯಾ ಸಿನಿಮಾ)- ನವೆಂಬರ್ 9
4. 007: ರೋಡ್ ಟು ಎ ಮಿಲಿಯನ್(ಗೇಮ್ ಶೋ)- ನವೆಂಬರ್ 10
5. ದಿನಾ ಹಶೆಮ್: ಡಾರ್ಕ್ ಲಿಟಲ್ ವಿಸ್ಪರ್ಸ್(ಶೋ)- ನವೆಂಬರ್ 10
ಹಾಟ್‌ಸ್ಟರ್
1. ವಿಜಿಲಾಂಟಿ(ಕೊರಿಯಾ ವೆನ್ ಸೀರಿಸ್)- ನವೆಂಬರ್ 8
2. ಲೇಬುಲ್ (ತೆಲುಗು ವೆಬ್ ಸೀರಿಸ್)- ನವೆಂಬರ್ 10
3. ದಿ ಸಾಂತಾಕ್ಲಾಸ್(ವೆಬ್ ಸೀರಿಸ್)- ನವೆಂಬರ್ 8
ನೆಟ್‌ಫ್ಲಿಕ್ಸ್
1. ಎಸ್ಕೇಪಿಂಗ್ ಟ್ವಿನ್ ಫ್ಲೆಮ್ಸ್(ವೆಬ್ ಸೀರಿಸ್)- ನವೆಂಬರ್ 8
2. ಇರುಗುಪಟ್ರು (ತಮಿಳು ಸಿನಿಮಾ)- ನವೆಂಬರ್ 6
3. ರಿಕ್ ಅಂಡ್ ಮಾರ್ಟಿ ಸೀಸನ್-7
4. ಸೈಬರ್ ಬಂಕರ್: ದ ಕ್ರಿಮಿನಲ್ ಅಂಡರ್‌ವರ್ಲ್ಡ್(ಡಾಕ್ಯುಮೆಂಟರಿ)- ನವೆಂಬರ್ 8
5. ರಾಬಿ ವಿಲಿಯಮ್ಸ್ (ವೆಬ್ ಸೀರಿಸ್)- ನವೆಂಬರ್ 8
6. ಅಟ್ ದ ಮೊಮೆಂಟ್(ವೆಬ್ ಸೀರಿಸ್)- ನವೆಂಬರ್ 10
7. ಅಕುಮಾ ಕುನ್ (ಆನಿಮೇಷನ್ ಸೀರಿಸ್)- ನವೆಂಬರ್ 9
8. ದ ಕ್ಲಾಸ್ ಫ್ಯಾಮಿಲಿ ಸೀಸನ್-3 (ನವೆಂಬರ್ 8)
9. ದಿ ಕಿಲ್ಲರ್ (ಹಾಲಿವುಡ್ ಸಿನಿಮಾ)- ನವೆಂಬರ್ 10
10. ಫೇಮ್ ಆಫ್ಟರ್ ಫೇಮ್ (ವೆಬ್ ಸೀರಿಸ್)- ನವೆಂಬರ್ 10
ಬುಕ್ ಮೈ ಶೋ
1. ದಿ ವ್ರಾತ್ ಆಫ್ ಬೆಕ್ಕೇ(ಹಾಲಿವುಡ್ ಸಿನಿಮಾ)- ನವೆಂಬರ್ 7
2. ಯು ಹರ್ಟ್ ಮೈ ಫೀಲಿಂಗ್ಸ್ (ಹಾಲಿವುಡ್ ಸಿನಿಮಾ)- ನವೆಂಬರ್ 7
3. ದಿ ಅಡಲ್ಟ್ಸ್(ಹಾಲಿವುಡ್ ಸಿನಿಮಾ)- ನವೆಂಬರ್ 10
ಜೀ 5
1. ಘೂಮರ್(ಹಿಂದಿ ಸಿನಿಮಾ)- ನವೆಂಬರ್ 10


Click it and Unblock the Notifications











