OTT Releases This Week: 'ಗುಡ್ ಬ್ಯಾಡ್ ಅಗ್ಲಿ' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳು
ಈ ವಾರ ಚಿತ್ರಮಂದರಿಗಳಲ್ಲಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಆದರೆ ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆಗಲು ಸಜ್ಜಾಗಿವೆ. ಅಜಿತ್ ನಟನೆಯ ಬ್ಲಾಕ್‌ಬಸ್ಟರ್ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಕೂಡ ಈ ಲಿಸ್ಟ್‌ನಲ್ಲಿದೆ.
ಚಿತ್ರಮಂದಿರಗಳಲ್ಲಿ 'ಥುಡಾರಮ್', 'ರೆಟ್ರೋ' ಹಾಗೂ 'ಹಿಟ್-3' ಸಿನಿಮಾಗಳ ಆರ್ಭಟ ಮುಂದುವರೆದಿದೆ. ಐಪಿಎಲ್ ಆರ್ಭಟದ ನಡುವೆಯೂ ಈ ಚಿತ್ರಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿವೆ. ಇನ್ನು ಕೆಲವರು ಈ ವೀಕೆಂಡ್ ಓಟಿಟಿಯಲ್ಲೇ ಸಿನಿಮಾ ವೀಕ್ಷಿಸಲು ಬಯಸುತ್ತಿದ್ದಾರೆ.

ಈ ವಾರ ಕನ್ನಡ, ತೆಲುಗು, ತಮಿಳು, ಮಲಯಾಳಂನ ಯಾವೆಲ್ಲಾ ಸಿನಿಮಾಗಳು ಓಟಿಟಿಗೆ ಬರ್ತಿದೆ. ಯಾವುದು ಇಂಟ್ರೆಸ್ಟಿಂಗ್ ಮುಂದೆ ಓದಿ.
ನೆಟ್‌ಫ್ಲಿಕ್ಸ್
1. ಗುಡ್ ಬ್ಯಾಡ್ ಅಗ್ಲಿ
ತಮಿಳಿನ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಆದರೆ ಸಿನಿಮಾ ತೆರೆಕಂಡ 27 ದಿನಕ್ಕೆ ಓಟಿಟಿಗೆ ಬರುವಂತಾಗಿದೆ. ಮೇ 8ಕ್ಕೆ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಅದಿಕ್ ರವಿಚಂದ್ರನ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಅಜಿತ್ ರೆಡ್ ಡ್ರ್ಯಾಗನ್ ಆಗಿ ಅಬ್ಬರಿಸಿದ್ದಾರೆ. ತ್ರಿಶಾ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಎರಡು ತಿಂಗಳ ಹಿಂದೆ ಬಂದಿದ್ದ 'ವಿಡಾಮುಯರ್ಚಿ' ಚಿತ್ರದಲ್ಲೂ ಅಜಿತ್- ತ್ರಿಷಾ ಒಟ್ಟಿಗೆ ತೆರೆಹಂಚಿಕೊಂಡಿದ್ದರು.
ಪ್ರಭು, ಅರ್ಜುನ್ ದಾಸ್, ಪ್ರಸನ್ನ, ಜಾಕಿ ಶ್ರಾಫ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣದ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಮಿಶ್ರಪ್ರತಿಕ್ರಿಯೆ ಸಿಕ್ಕರೂ ವಿಂಟೇಜ್ ಅಜಿತ್ ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಮೋಡಿ ಮಾಡಿದ್ದಾರೆ. ಇದು ಅಜಿತ್ ಚಿತ್ರ ಜೀವನದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ಕನ್ನಡದಕ್ಕೂ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಈ ಬ್ಲಾಕ್‌ಬಸ್ಟರ್ ಸಿನಿಮಾವನ್ನು ಓಟಿಟಿಯಲ್ಲಿ ವೀಕ್ಷಿಸಲು ಬಹಳ ಜನ ಕಾಯುತ್ತಿದ್ದಾರೆ.
2. ಇನ್‌ಸೈಡ್ ಮ್ಯಾನ್(ಇಂಗ್ಲೀಷ್ ಸಿನಿಮಾ) ಮೇ 5
3. ಬ್ರಿಟನ್ ಮತ್ತು ಬ್ಲಿಟ್ಜ್(ಇಂಗ್ಲೀಷ್ ಡಾಕ್ಯುಮೆಂಟರಿ) ಮೇ 5
4. ಅನ್‌ಟೋಲ್ಡ್: ಶೂಟಿಂಗ್ ಗಾರ್ಡ್ಸ್(ಇಂಗ್ಲೀಷ್ ಡಾಕ್ಯುಮೆಂಟರಿ) ಮೇ 6
5. ದಿ ಮ್ಯಾಚ್(ಕೊರಿಯನ್ ಸಿನಿಮಾ) ಮೇ 7
6. ಫಾರ್‌ಎವರ್(ಇಂಗ್ಲೀಷ್ ವೆಬ್ ಸೀರಿಸ್) ಮೇ 8
7. ಹಾರ್ಟ್ ಐಸ್(ಇಂಗ್ಲೀಷ್ ಸಿನಿಮಾ) ಮೇ 8
8. ದಿ ರಾಯಲ್ಸ್(ಹಿಂದಿ ವೆಬ್ ಸೀರಿಸ್) ಮೇ 9
9. ಎ ಡೆಡ್ಲಿ ಅಮೇರಿಕನ್ ಮ್ಯಾರೇಜ್ (ಡಾಕ್ಯುಮೆಂಟರಿ) ಮೇ 9
10. ಜಾಕ್
ಬೊಮ್ಮರಿಲ್ಲು ಭಾಸ್ಕರ್ ನಿರ್ದೇಶನದ ಸ್ಪೈ ಆಕ್ಷನ್ ಕಾಮಿಡಿ ಸಿನಿಮಾ 'ಜಾಕ್' ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡ್ತಿದೆ. ಸಿದ್ದು ಜೊನ್ನಲಗಡ್ಡ, ವೈಷ್ಣವಿ ಚೈತನ್ಯಾ ಹಾಗೂ ಪ್ರಕಾಶ್ ರಾಜ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನೆಗೆಟಿವ್ ರಿವ್ಯೂಸ್ ಬಂದಿತ್ತು. ಆದರೆ ವೀಕೆಂಡ್ ಮನೆಯಲ್ಲೇ ಕೂತು ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಬಹುದು.
11. ದಿ ಡಿಪ್ಲೋಮ್ಯಾಟ್
12. ಫುಲ್ ಸ್ಪೀಡ್: ಸೀಸನ್-2(ವೆಬ್ ಸೀರಿಸ್) ಮೇ 7
13. ನಾನ್ನಸ್(ಇಂಗ್ಲೀಸ್ ಸಿನಿಮಾ) ಮೇ 9

ಜಾನ್ ಅಬ್ರಹಾಂ ನಿರ್ಮಿಸಿ ನಟಿಸಿದ 'ದಿ ಡಿಪ್ಲೋಮ್ಯಾಟ್' ಸಿನಿಮಾ ಮಾರ್ಚ್ 14ಕ್ಕೆ ತೆರೆಗೆ ಬಂದಿತ್ತು. ಈ ವಾರ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಪೊಲಿಟಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಕುಮುದ್ ಮಿಶ್ರಾ, ಅಶ್ವಥ್ ಭಟ್, ವಿಶಾಲ್ ವಶಿಸ್ಠ ಸೇರಿ ದೊಡ್ಡ ತಾರಾಗಣವಿದೆ. 20 ಕೋಟಿ ರೂ. ಬಜೆಟ್ ಸಿನಿಮಾ 52 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು.
ಪ್ರೈಂ ವೀಡಿಯೋ
1. ವಾಮನ
ಕನ್ನಡದ 'ವಾಮನ' ಸಿನಿಮಾ ಈಗಾಗಲೇ ಪ್ರೈಂ ವೀಡಿಯೋಗೆ ಬಂದಿದೆ. ಆದರೆ ಸದ್ಯಕ್ಕೆ ಯುಕೆ ಚಂದಾದಾರರು ಮಾತ್ರ ನೋಡಲು ಸಾಧ್ಯವಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಿನಿಮಾ ಭಾರತದ ಪ್ರೈಂ ಚಂದಾದಾರರಿಗೂ ಸಿಗುವ ನಿರೀಕ್ಷೆಯಿದೆ. ಧನ್ವೀರ್ ಗೌಡ ಹಾಗೂ ರೀಷ್ಮಾ ನಾಣಯ್ಯ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದಾರೆ.
ಸಂಪತ್ ರಾಜ್, ತಾರಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಗ್ಯಾಂಗ್‌ಸ್ಟರ್ ಹಾಗೂ ಮೆಕ್ಯಾನಿಕ್ ನಡುವಿನ ಪೈಪೋಟಿ ಕಥೆ ಚಿತ್ರದಲ್ಲಿದೆ. ಇತ್ತೀಚೆಗೆ 'ವಾಮನ' ಸಿನಿಮಾ 25 ದಿನ ಪೈರೈಸಿತ್ತು. ಅದರ ಬೆನ್ನಲ್ಲೇ ಸಿನಿಮಾ ಓಟಿಟಿಗೆ ಬರ್ತಿದೆ. ನಟ ದರ್ಶನ್ ಸಹ ಸಿನಿಮಾ ನೋಡಿ ಮೆಚ್ಚಿದ್ದರು. ದರ್ಶನ್ ಅಭಿಮಾನಿಗಳು ಚಿತ್ರದ ಬೆಂಬಲಕ್ಕೆ ನಿಂತಿದ್ದರು.
2. ಅಮೃತಮತಿ
ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಸಿನಿಮಾ ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತ್ತು. ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಜನ್ನ ಕವಿಯ 'ಯಶೋಧರ ಚರಿತೆ' ಆಧರಿಸಿ ಸಿನಿಮಾ ನಿರ್ಮಾಣವಾಗಿದೆ. ಹರಿಪ್ರಿಯಾ ಹಾಗೂ ಕಿಶೋರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಚಿತ್ರ ತೆರೆಗೆ ಬರದೇ ನೇರವಾಗಿ ಪ್ರೈಂ ವೀಡಿಯೋಗೆ ಬಂದಿದೆ. ಸದ್ಯಕ್ಕೆ 349 ರೂ. ಕೊಟ್ಟು ಸಿನಿಮಾ ವೀಕ್ಷಿಸಲು ಅವಕಾಶವಿದೆ.
ಅಮೆರಿಕದ ಅಟ್ಲಾಂಟಾ ಅಂತಾರಾಷ್ಟ್ರೀಯ ಚಿತ್ರೋತ್ಸವ, 11ನೇ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ 'ಅಮೃತಮತಿ' ಸಿನಿಮಾ ಗಮನ ಸೆಳೆದಿತ್ತು. ಅಮೃತಮತಿ ಮತ್ತು ಅಷ್ಟಾವಕ್ರರ ಕಥೆ ಚಿತ್ರದಲ್ಲಿದೆ. ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಅಂಬರೀಶ್ ಸಾರಂಗಿ, ವತ್ಸಲಾ ಮೋಹನ್ ಚಿತ್ರದ ತಾರಾಗಣದಲ್ಲಿದ್ದಾರೆ. ಪುಟ್ಟಣ್ಣ ಎಂಬುವವರು ಚಿತ್ರ ನಿರ್ಮಿಸಿದ್ದು ನಾಗರಾಜ್ ಅದವನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ಚಿತ್ರಕ್ಕಿದೆ.
3. ಗ್ರಾಮ ಚಿಕಿತ್ಸಾಯಲ್(ಹಿಂದಿ ವೆಬ್ ಸೀರಿಸ್) ಮೇ 9
4. ಕ್ವೀನ್ ಆಫ್ ದಿ ರಿಂಗ್(ಇಂಗ್ಲೀಷ್ ಸಿನಿಮಾ ಬಾಡಿಗೆಗೆ ಲಭ್ಯ) ಮೇ 9
5. ಟೆನ್ ಅವರ್ಸ್
ಇಳಯರಾಜ ಕಲಿಯಪೆರುಮಾಳ್ ನಿರ್ದೇಶನ ತಮಿಳು ಥ್ರಿಲ್ಲರ್ ಸಿನಿಮಾ 'ಟೆನ್ ಅವರ್ಸ್' ಸಿನಿಮಾ ಈ ವಾರ ಪ್ರೈಂ ವಿಡಿಯೋಗೆ ಬರ್ತಿದೆ. ಸಿಬಿ ಸತ್ಯರಾಜ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಏಪ್ರಿಲ್ 18ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರು ಈ ಚಿತ್ರ ಓಟಿಟಿಯಲ್ಲಿ ನೋಡಬಹುದು.
ಜೀ-5
1. ರಾಬಿನ್‌ಹುಡ್
ತೆಲುಗಿನಲ್ಲಿ ನಿತಿನ್ ಹಾಗೂ ಶ್ರೀಲೀಲಾ ನಟನೆಯ 'ರಾಬಿನ್‌ಹುಡ್' ಸಿನಿಮಾ ಹೀನಾಯವಾಗಿ ಸೋತಿತ್ತು. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅತಿಥಿ ಪಾತ್ರದಲ್ಲಿ ನಟಿಸಿದ್ದು ಪ್ರಯೋಜನವಾಗಿರಲಿಲ್ಲ. ಮೇ 10ರಂದು ಸಿನಿಮಾ ಜೀ-5ನಲ್ಲಿ ರಿಲೀಸ್ ಆಗಲಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣದ ಚಿತ್ರಕ್ಕೆ ವೆಂಕಿ ಕುಡುಮುಲ ಆಕ್ಷನ್ ಕಟ್ ಹೇಳಿದ್ದಾರೆ.
ಮೊದಲಿಗೆ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಬಳಿಕ ಆಕೆ ಕಾರಣಾಂತರಗಳಿಂದ ಹೊರ ಬಂದಿದ್ದರು. ಬಳಿಕ ನಾಯಕಿ ಅವಕಾಶ ಶ್ರೀಲೀಲಾಗೆ ಸಿಕ್ಕಿತ್ತು. ಇನ್ನು ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಕೆತಿಕಾ ಶರ್ಮಾ ಹೆಜ್ಜೆ ಹಾಕಿದ್ಧಾರೆ. ಆದರೆ ಸಾಂಗ್‌ನಲ್ಲಿರುವ ಹುಕ್ ಸ್ಟೆಪ್ಸ್ ವಿವಾದಕ್ಕೆ ಕಾರಣವಾಗಿತ್ತು. ಇನ್ನು ಏಕಕಾಲಕ್ಕೆ ಓಟಿಟಿ ಜೊತೆಗೆ ಜೀ ತೆಲುಗು ಕಿರುತೆರೆ ವಾಹಿನಿಯಲ್ಲಿ ಕೂಡ 'ರಾಬಿನ್‌ಹುಡ್' ಸಿನಿಮಾ ಪ್ರಸಾರವಾಗಲಿದೆ.
ಹಾಟ್‌ಸ್ಟರ್
1. ಯೆಲ್ಲೋ ಸ್ಟೋನ್ ಸೀಸನ್-5 (ವೆಬ್ ಸೀರಿಸ್) ಮೇ 5
2. ಯುವ ಕ್ರೈಂ ಫೈಲ್ಸ್ ಸೀಸನ್-1 (ಹಿಂದಿ ವೆಬ್ ಸೀರಿಸ್) ಮೇ 5
3. ಪೋಕರ್ ಫೇಸ್(ಇಂಗ್ಲೀಷ್ ವೆಬ್ ಸೀರಿಸ್) ಮೇ 9
ಈಟಿವಿ-ವಿನ್
1. ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ(ತೆಲುಗು ಸಿನಿಮಾ) ಮೇ 8


Click it and Unblock the Notifications











