OTT Releases this week: ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಈ ವಾರ ಸ್ಟ್ರೀಮಿಂಗ್: ಮಿಸ್ ಮಾಡಿಕೊಳ್ಳಬೇಡಿ
ಹೊಸ ವರ್ಷ ಹತ್ತಿರವಾಗುತ್ತಿದ್ದಂತೆ ವಾರಗಳು ಕಳೆಯೋದೇ ಗೊತ್ತಾಗುತ್ತಿಲ್ಲ. ಇದೀಗ ಮತ್ತೊಂದು ವಾರ ಕಳೆದು ಡಿಸೆಂಬರ್ ಮೊದಲ ವಾರಕ್ಕೆ ಕಾಲಿಟ್ಟಿದ್ದೀವಿ. ಸಿಕ್ಕಾಪಟ್ಟೆ ಚಳಿ. ಥಿಯೇಟರ್‌ಗೆ ಹೋಗಿ ಸಿನಿಮಾ ನೋಡೋಕೆ ಕೆಲವರು ಸಿದ್ಧರಿಲ್ಲ. ಓಟಿಟಿಯಲ್ಲಿ ಒಂದಷ್ಟು ಸಿನಿಮಾ, ಸೀರಿಸ್‌ಗಳನ್ನು ನೋಡಿಬಿಡೋಣ ಎಂದುಕೊಳ್ಳುತ್ತಿದ್ದಾರೆ.
ಈ ವೀಕೆಂಡ್‌ನಲ್ಲೂ ಓಟಿಟಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಸಿದ್ಧವಾಗಿದೆ. ಹೊಸ ಹೊಸ ಸಿನಿಮಾಗಳು ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಬಾಕ್ಸಾಫೀಸ್‌ನಲ್ಲಿ ರಣ್‌ಬೀರ್ ಕಪೂರ್ 'ಅನಿಮಲ್' ಸಿನಿಮಾ ಆರ್ಭಟ ಜೋರಾಗಿದೆ. 2 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 236 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹಾಗಾಗಿ ಸದ್ಯ ಬಾಕ್ಸಾಫೀಸ್‌ನಲ್ಲಿ 'ಅನಿಮಲ್' ಆರ್ಭಟವೇ ಜೋರಾಗಿದೆ. ಸಿನಿಮಾ ಸಿಕ್ಕಾಪಟ್ಟೆ ವೈಲೆಂಟ್ ಆಗಿದೆ. ಮಕ್ಕಳಿಗೆ ತೋರಿಸುವಂತಹ ಸಿನಿಮಾ ಅಲ್ಲ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿ ಎಂಜಾಯ್ ಮಾಡಿದೆ.

ತಿಂಗಳಾಂತ್ಯಕ್ಕೆ ಸಲಾರ್, ಡಂಕಿ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ವರ್ಷದ ಕೊನೆ ವಾರದಲ್ಲಿ ಕನ್ನಡದ 'ಕಾಟೇರ' ಸಿನಿಮಾ ರಿಲೀಸ್ ಆಗಲಿದೆ. ಅಲ್ಲಿಯವರೆಗೆ ಯಾವುದೇ ದೊಡ್ಡ ಸಿನಿಮಾ ಥಿಯೇಟರ್ ಕಡೆ ಮುಖ ಮಾಡುತ್ತಿಲ್ಲ. ಹಾಗಾಗಿ 'ಅನಿಮಲ್' ಬಳಿಕ 'ಸಲಾರ್', 'ಡಂಕಿ' ಸಿನಿಮಾಗಳಿಗೆ ಪ್ರೇಕ್ಷಕರು ಕಾಯುವಂತಾಗಿದೆ. ಇನ್ನು ಈ ವಾರ ಓಟಿಟಿಯಲ್ಲಿ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತೆ ಮುಂದೆ ಓದಿ.
ನೆಟ್‌ಫ್ಲಿಕ್ಸ್
1. ಜಿಗರ್‌ತಾಂಡ ಡಬಲ್ ಎಕ್ಸ್
9 ವರ್ಷಗಳ ಹಿಂದೆ ಬಂದಿದ್ದ ತಮಿಳಿನ 'ಜಿಗರ್‌ತಾಂಡ' ಸಿನಿಮಾ ಹಿಟ್ ಆಗಿತ್ತು. ಕನ್ನಡ, ತೆಲುಗು, ಮಲಯಾಳಂ ಭಾಷೆಗಳಿಗೆ ಸಿನಿಮಾ ರೀಮೆಕ್ ಆಗಿತ್ತು. ಇತ್ತೀಚಿಗೆ ಆ ಚಿತ್ರದ ಪ್ರೀಕ್ವೆಲ್ ಬಂದು ಪ್ರೇಕ್ಷಕರ ಮನಗೆದ್ದಿತ್ತು. ಚಿತ್ರದಲ್ಲಿ ಎಸ್. ಜೆ ಸೂರ್ಯ, ರಾಘವ ಲಾರೆನ್ಸ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಡಿಸೆಂಬರ್ 8ಕ್ಕೆ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
2. ದ ಆರ್ಚೀಸ್(ಹಿಂದಿ ಸಿನಿಮಾ)
ಜೋಯಾ ಅಖ್ತರ್ ನಿರ್ದೇಶನದ ಟೀನ್ ಮ್ಯೂಸಿಕಲ್ ಕಾಮಿಡಿ ಡ್ರಾಮಾ 'ದ ಆರ್ಚೀಸ್' ಡಿಸೆಂಬರ್ 7ಕ್ಕೆ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಅಗಸ್ತ್ಯ ನಂದಾ, ಖುಷಿ ಕಪೂರ್, ಸುಹಾನಾ ಖಾನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಾರುಖ್ ಖಾನ್ ಪುತ್ರಿ ಸುಹಾನಾಗೆ ಇದು ಚೊಚ್ಚಲ ಪ್ರಯತ್ನ. ಹಾಗಾಗಿ ಸಿನಿಮಾ ಬಗ್ಗೆ ಕೊಂಚ ನಿರೀಕ್ಷೆಯಿದೆ. ಮುಂದೆ ತಂದೆ ಜೊತೆಗೂ ನಟಿಸೋಕೆ ಸುಹಾನಾ ಸಿದ್ಧಳಾಗುತ್ತಿದ್ದಾಳೆ.
3. ಅನಲಾಗ್ ಸ್ಕ್ವಾಡ್(ಥಾಯ್ ವೆಬ್ ಸೀರಿಸ್)- ಡಿಸೆಂಬರ್ 7
4. ಡ್ಯೂ ಡ್ರಾಪ್ ಡೈರೀಸ್: ಸೀಸನ್ 2(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 4
5. ಸ್ಟಾವ್ರೋಸ್ ಹಲ್ಕಿಯಾಸ್: ಫ್ಯಾಟ್ ರಾಸ್ಕಲ್ (ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 5
6. ಬ್ಲಡ್ ಕೋಸ್ಟ್ (ಫ್ರೆಂಚ್ ವೆಬ್ ಸೀರಿಸ್) ಡಿಸೆಂಬರ್ 6
7. ಕ್ರಿಸ್ಮಸ್ ಆಸ್‌ಯೂಷ್ಯಲ್ (ನಾರ್ವೇಜಿಯನ್ ಸಿನಿಮಾ)- ಡಿಸೆಂಬರ್ 6
8. ಹೈ ಟೈಡ್ಸ್(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 7
9. ಹೀಲ್ಡಾ: ಸೀಸನ್ 3 (ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 7
10. ಈ ಹೇಟ್ ಕ್ರಿಸ್ಮಸ್ ಸೀಸನ್-2(ಇಟಾಲಿಯನ್ ಸೀರಿಸ್) ಡಿಸೆಂಬರ್ 7
11. ಮೈ ಲೈಫ್ ವಿತ್ ವಾಲ್ಟರ್ ಬಾಯ್ಸ್ (ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 7
12. ಸುಜನ್ನಾ: ಮಲಮ್ ಜುಮಾನ್ ಕ್ಲಿವಾನ್(ಇಂಡೋನೇಷ್ಯಾ ಸಿನಿಮಾ) ಡಿಸೆಂಬರ್ 7
13. ದಿ ವರ್ಲ್ಡ್ ವಾರ್-2 (ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 7
14. ಧಕ್ ಧಕ್(ಹಿಂದಿ ಸಿನಿಮಾ) ಡಿಸೆಂಬರ್ 8
15. ಲಿವ್ ದಿ ವರ್ಲ್ಡ್ ಬಿಹೈಂಡ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 8

ಅಮೇಜಾನ್ ಪ್ರೈಂ
1. ಮೆರ್ರಿ ಲಿಟಲ್ ಬ್ಯಾಟ್‌ಮ್ಯಾನ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 8
2. ಮಸ್ತ್ ಮೈನ್ ರಹನೆ ಕಾ (ಹಿಂದಿ ಸಿನಿಮಾ) ಡಿಸೆಂಬರ್ 8
3. ಡೇಟಿಂಗ್ ಶಾಂಟಾ (ಸ್ಪ್ಯಾನಿಷ್ ಸಿನಿಮಾ) ಡಿಸೆಂಬರ್ 7
4. ಮನ್ ಪಸಂದ್(ಸ್ಟ್ಯಾಡಪ್ ಕಾಮಿಡಿ ಸ್ಪೆಷಲ್) ಡಿಸೆಂಬರ್ 8
5. ಯುವರ್ ಕ್ರಿಸ್ಮಸ್ ಆರ್ ಮೈನ್- 2 (ಇಂಗ್ಲೀಷ್ ಸಿನಿಮಾ) ಡಿಸೆಂಬರ್ 8
ಬುಕ್‌ಮೈ ಶೋ
1. ಬ್ಲಾಕ್‌ಬೆರಿ(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 7
2. ಫೈವ್ ನೈಟ್ ಅಟ್ ಫ್ರೆಡ್ಡಿಸ್ (ಇಂಗ್ಲೀಷ್ ಸಿನಿಮಾ) ಡಿಸೆಂಬರ್ 8
ಜೀ-5
1. ಕೂಸೆ ಮುನಿಸ್ವಾಮಿ ವೀರಪ್ಪನ್(ಕನ್ನಡ ಡಬ್ ಸೀರಿಸ್)
ಕಾಡುಗಳ್ಳ ವೀರಪ್ಪನ್ ಕುರಿತು ಈಗಾಗಲೇ ಸಾಕಷ್ಟು ಸಿನಿಮಾ, ವೆಬ್ ಸೀರಿಸ್ ಬಂದಿವೆ. ಈ ಸಾಲಿಗೆ 'ಕೂಸೆ ಮುನಿಸ್ವಾಮಿ ವೀರಪ್ಪನ್' ಹೆಸರಿನ ಡಾಕ್ಯೂ ಸೀರಿಸ್ ಕೂಡ ಸೇರಿಕೊಳ್ತಿದೆ. ವೀರಪ್ಪನ್ ಕ್ರೈಂಗಳ ಸಂಪೂರ್ಣ ಚಿತ್ರಣವನ್ನು ಈ ಸೀರಿಸ್‌ನಲ್ಲಿ ಬಿಚ್ಚಿಡಲಾಗಿದೆ. ಶರತ್ ಜ್ಯೋತಿ ಈ ಡಾಕ್ಯೂ ಸೀರಿಸ್ ನಿರ್ದೇಶನ ಮಾಡಿದ್ದು ಪ್ರಭಾವತಿ ನಿರ್ಮಾಣ ಮಾಡಿದ್ದಾರೆ. ವೀರಪ್ಪನ್ ಕುರಿತ ನೈಜ ವಿಷ್ಯುವಲ್ಸ್, ವೀರಪ್ಪನ್ ಹಿಡಿಯಲು ಶ್ರಮಿಸಿದ ಅಧಿಕಾರಿಗಳು ಇದರಲ್ಲಿ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಈ ಡಾಕ್ಯೂ ಸೀರಿಸ್ ಡಿಸೆಂಬರ್ 8ಕ್ಕೆ ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
2. ಖಡಕ್ ಸಿಂಗ್(ಹಿಂದಿ ಸಿನಿಮಾ) ಡಿಸೆಂಬರ್ 8
ಜಿಯೋ ಸಿನಿಮಾ
1. ಸ್ಕೂಬಿ-ಡೂ! ಮತ್ತು ಕ್ರಿಪ್ಟೋ ಟೂ!(ಆನಿಮೇಷನ್ ಸಿನಿಮಾ) ಡಿಸೆಂಬರ್ 10
ಡಿಸ್ನಿ ಪ್ಲಸ್ ಹಾಟ್‌ಸ್ಟರ್
1. ಸೌಂಡ್ ಟ್ರ್ಯಾಕ್(ಕೊರಿಯನ್ ವೆಬ್ ಸೀರಿಸ್) ಡಿಸೆಂಬರ್ 6
2. ಡೈರಿ ಆಫ್ ಎ ವಿಂಪಿ ಕಿಡ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 8
3. ಹಿಸ್ಟರಿ: ದಿ ಇಂಟ್ರೆಸ್ಟಿಂಗ್ ಬೀಟ್ಸ್(ಇಂಗ್ಲೀಷ್ ವೆಬ್ ಸೀರಿಸ್) ಡಿಸೆಂಬರ್ 7
4. ವಧುವು(ತೆಲುಗು ವೆಬ್ ಸೀರಿಸ್) ಡಿಸೆಂಬರ್ 8
5. ದಿ ಮಿಷನ್ (ಇಂಗ್ಲೀಷ್ ಸಿನಿಮಾ) ಡಿಸೆಂಬರ್ 10
ಸೋನಿ ಲಿವ್
1. ಚಮಕ್(ಹಿಂದಿ ಸಿನಿಮಾ) ಡಿಸೆಂಬರ್ 7


Click it and Unblock the Notifications