OTT Releases this week; 'ಕಲ್ಕಿ', 'ರಾಯನ್' ಸೇರಿ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ

ಇಂಡಿಪೆಂಡೆನ್ಸ್ ಡೇ ವೀಕೆಂಡ್‌ನಲ್ಲಿ ತೆರೆಕಂಡ ಸಿನಿಮಾಗಳ ಭವಿಷ್ಯ ಗೊತ್ತಾಗಿ ಹೋಗಿದೆ. ಕನ್ನಡದಲ್ಲಿ 'ಕೃಷ್ಣ ಪ್ರಣಯ ಸಖಿ', ತಮಿಳಿನ 'ತಂಗಳಾನ್' ಹಾಗೂ ಬಾಲಿವುಡ್‌ನ 'ಸ್ತ್ರೀ-2' ಚಿತ್ರಗಳು ಗೆಲುವಿನ ನಗೆ ಬೀರಿವೆ. ಇನ್ನುಳಿದಂತೆ 'ಇಸ್ಮಾರ್ಟ್ ಶಂಕರ್' ಮತ್ತು 'ಮಿಸ್ಟರ್ ಬಚ್ಚನ್' ರೀತಿಯ ಚಿತ್ರಗಳು ಮುಗ್ಗರಿಸಿವೆ.

ವೀಕೆಂಡ್ ಮುಗಿದು ಹೊಸ ವಾರ ಶುರುವಾಗಿದೆ. ಆಗಸ್ಟ್ 15ಕ್ಕೆ ತೆರೆಕಂಡ ಸಿನಿಮಾಗಳ ಪೈಕಿ ಕೆಲವು ವಾರದ ದಿನಗಳಲ್ಲಿ ಕೂಡ ಸದ್ದು ಮಾಡ್ತಿವೆ. ಬಾಕ್ಸಾಫೀಸ್‌ನಲ್ಲಿ 'ಸ್ತ್ರೀ-2' ಸಿನಿಮಾ ಆರ್ಭಟ ತುಸು ಜೋರಾಗಿಯೇ ಇದೆ. ಇನ್ನು ಈ ವೀಕೆಂಡ್‌ನಲ್ಲಿ ಓಟಿಟಿಯಲ್ಲಿ ಕೂಡ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತಿದೆ.

from Kalki 2898 AD to Raayan New OTT releases this week

ಪ್ರಭಾಸ್ ನಟನೆಯ 'ಕಲ್ಕಿ 2898 AD' ಹಾಗೂ ಧನುಷ್ 'ರಾಯನ್' ಸಿನಿಮಾಗಳು ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡ್ತಿದೆ. ಇಲ್ಲಿದೆ ನೋಡಿ ಕಂಪ್ಲೀಟ್ ಲಿಸ್ಟ್.

ಅಮೇಜಾನ್ ಪ್ರೈಂ

1. ಕಲ್ಕಿ 2898 AD

ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದು ಗೊತ್ತೇಯಿದೆ. ನಾಗ್‌ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ರೀತಿಯ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಜೂನ್ 27ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಸಖತ್ ಸದ್ದು ಮಾಡಿತ್ತು. ಇದೇ ಶುಕ್ರವಾರ ಸಿನಿಮಾ ಪ್ರೈಂ ವೀಡಿಯೋಗೆ ಬರ್ತಿದೆ. ತೆಲುಗು ಜೊತೆಗೆ ತಮಿಳು, ಮಲಯಾಳಂ, ಕನ್ನಡ ವರ್ಷನ್ ಕೂಡ ವೀಕ್ಷಣೆಗೆ ಸಿಗಲಿದೆ.

2. ರಾಯನ್

ಧನುಷ್ ನಿರ್ದೇಶಿಸಿ ನಟಿಸಿದ ಆಕ್ಷನ್ ಥ್ರಿಲ್ಲರ್ 'ರಾಯನ್' ಹಿಟ್ ಲಿಸ್ಟ್ ಸೇರಿದೆ. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. ಎಸ್‌. ಜೆ ಸೂರ್ಯ, ಪ್ರಕಾಶ್ ರಾಜ್, ಸಂದೀಪ್ ಕಿಶನ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಎ. ಆರ್ ರಹಮಾನ್ ಮ್ಯೂಸಿಕ್, ಓಂ ಪ್ರಕಾಶ್ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಆಗಿತ್ತು. ಧನುಷ್ 59ನೇ ಸಿನಿಮಾ 'ರಾಯನ್' ಆಗಸ್ಟ್ 23ಕ್ಕೆ ಓಟಿಟಿಗೆ ಬರ್ತಿದೆ.

3. ಆಂಗ್ರಿ ಯಂಗ್‌ಮ್ಯಾನ್; ದ ಸಲೀಂ- ಜಾವೇದ್ ಸ್ಟೋರಿ

ಬಾಲಿವುಡ್‌ನ ಖ್ಯಾತ ಬರಹಗಾರರಾದ ಸಲೀಂ- ಜಾವೇದ್ ಜೋಡಿ ಜೀವನ ಕಥೆ ಡಾಕ್ಯೂ ಸೀರಿಸ್‌ ರೂಪದಲ್ಲಿ ಬರ್ತಿದೆ. ಹಲವು ಸೂಪರ್ ಹಿಟ್ ಬಾಲಿವುಡ್ ಕಮರ್ಷಿಯಲ್ ಚಿತ್ರಗಳಿಗೆ ಈ ಜೋಡಿ ಕಥೆ ಬರೆದಿತ್ತು. ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಯಶ್, ಹೃತಿಕ್ ರೋಷನ್ ಸೇರಿದಂತೆ ಹಲವರು ದಿಗ್ಗಜರ ಬಗ್ಗೆ ಡಾಕ್ಯುಮೆಂಟರಿಯಲ್ಲಿ ಮಾತನಾಡಿದ್ದಾರೆ. ಆಗಸ್ಟ್ 20ಕ್ಕೆ ಸಲ್ಲು ನಿರ್ಮಾಣದ ಈ ಸರಣಿ ಸ್ಟ್ರೀಮಿಂಗ್ ಆಗಲಿದೆ.

4. ಫಾಲೋ ಕರ್‌ಲೊ ಯಾರ್(ಹಿಂದಿ ಸೀರಿಸ್) ಆಗಸ್ಟ್ 23

ಹಾಟ್‌ಸ್ಟರ್

1. ಗರ್‌ರ್‌ರ್‌ (ಮಲಯಾಳಂ ಸಿನಿಮಾ) ಆಗಸ್ಟ್ 20

2. ಸುಪ್ರೀಮ್ಸ್ ಅಟ್ ಅರ್ಲ್ಸ್ ಆಲ್-ಯು-ಕ್ಯಾನ್-ಈಟ್(ಇಂಗ್ಲೀಷ್ ಸಿನಿಮಾ) ಆಗಸ್ಟ್ 23

ನೆಟ್‌ಫ್ಲಿಕ್ಸ್

1. ಜಜಿ ಪ್ರಿಸಿಂಕ್ಟ್(ಕೊರಿಯನ್ ಸೀರಿಸ್) ಆಗಸ್ಟ್ 22

2. ಮರ್ಮೈಂಡ್ ಮ್ಯಾಜಿಕ್(ಇಂಗ್ಲೀಷ್ ಸೀರಿಸ್) ಆಗಸ್ಟ್ 22

3. ಕಲ್ಕಿ 2898 AD (ಹಿಂದಿ ಡಬ್ಬಿಂಗ್) ಆಗಸ್ಟ್ 22

4. ಟೆರರ್ ಟ್ಯೂಜೆಡ್: ಎಕ್ಸ್‌ಟ್ರೀಮ್(ಥಾಯ್ ಸೀರಿಸ್) ಆಗಸ್ಟ್ 20

5. ಇನ್ ಕಮ್ಮಿಂಗ್(ಇಂಗ್ಲೀಷ್ ಸಿನಿಮಾ) ಆಗಸ್ಟ್ 23

6. ದಿ ಫ್ರಾಗ್(ಕೊರಿಯನ್ ಸೀರಿಸ್) ಆಗಸ್ಟ್ 23

7. ಪ್ರೆಟಿ ಗಾರ್ಡಿಯನ್ ಸೈಲರ್ ಮೂನ್ ಕಾಸ್ಮೊಸ್ ದಿ ಮೂವಿ-1 (ಜಪಾನೀಸ್ ಸಿನಿಮಾ) ಆಗಸ್ಟ್ 22

ಅಹಾ ಓಟಿಟಿ

1. ಪುನರ್ವುಗಲ್ ತೊಡರಕಥೈ(ತಮಿಳು ಸಿನಿಮಾ) ಆಗಸ್ಟ್ 23

ಜಿಯೋ ಸಿನಿಮಾ

1. ಡ್ರೈವ್ ಅವೇ ಡಾಲ್ಸ್(ಇಂಗ್ಲೀಷ್ ಸಿನಿಮಾ) ಆಗಸ್ಟ್ 23

More from Filmibeat

English summary
Latest OTT releases this week: 17 new movies and series to watch on Netflix, Disney+ Hotstar, Prime Video and more;
Read more about: ott dhanush prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X