OTT Releases This Week: ಈ ವಾರ ಓಟಿಟಿಗೆ ಹಿಟ್ ಸಿನಿಮಾಗಳ ಮೆರವಣಿಗೆ; ಒಂದು ಹಿಟ್ ಕನ್ನಡ ಸಿನಿಮಾ ಕೂಡ ಇದೆ

ನೋಡ ನೋಡುತ್ತಾ ನವೆಂಬರ್ ಕಳೆದ ವರ್ಷದ ಕೊನೆ ತಿಂಗಳು ಹತ್ತಿರವಾಗಿದೆ. ಈ ವರ್ಷ ಸಾಕಷ್ಟು ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿವೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಸಿನಿಮಾಗಳು ಬಳಿಕ ಓಟಿಟಿಗೆ ಬಂದು ಸದ್ದು ಮಾಡಿವೆ.

'ಕಾಂತಾರ'-1 ಆರ್ಭಟ ಕಮ್ಮಿ ಆಗಿ ಬೇರೆ ಸಿನಿಮಾಗಳಯ ಪ್ರೇಕ್ಷಕರ ಮುಂದೆ ಬರ್ತಿವೆ. ಆದರೆ ಯಾವುದು ಕೂಡ ವಾರಕ್ಕಿಂತ ಹೆಚ್ಚು ದಿನ ಉಳಿಯುತ್ತಿಲ್ಲ. ಡಿಸೆಂಬರ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿವೆ. ಈ ಪಟ್ಟಿಯಲ್ಲಿ ಕನ್ನಡದ 'ಡೆವಿಲ್', '45' ಹಾಗೂ 'ಮಾರ್ಕ್' ಚಿತ್ರಗಳು ಇವೆ.

From Kantara-1 to Mass Jathara This week Ott Release Movies and web series list

ಕಳೆದೊಂದು ತಿಂಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ಈ ವಾರ ಓಟಿಟಿಗೆ ಬರ್ತಿವೆ. ಲಿಸ್ಟ್‌ನಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಿವೆ. ಪ್ರೈಂ ವಿಡಿಯೋ, ನೆಟ್‌ಫ್ಲಿಕ್ಸ್, ಹಾಟ್‌ಸ್ಟರ್ ಹಾಗೂ ಜೀ-5ನಲ್ಲಿ ಯಾವೆಲ್ಲಾ ಸಿನಿಮಾ ಈ ವಾರ ಸ್ಟ್ರೀಮಿಂಗ್ ಆಗಲಿದೆ ಬನ್ನಿ ನೋಡೋಣ.

1. ಬ್ರ್ಯಾಟ್

ಕನ್ನಡದ ಸೂಪರ್ ಹಿಟ್ 'ಬ್ರ್ಯಾಟ್' ಸಿನಿಮಾ ನವೆಂಬರ್ 28ಕ್ಕೆ ಪ್ರೈಂ ವೀಡಿಯೋಗೆ ಬರ್ತಿದೆ. ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹೀರೊ ಆಗಿ ಮಿಂಚಿದ್ದಾರೆ. ಅಚ್ಯುತ್‌ ಕುಮಾರ್, ರಮೇಶ್ ಇಂದಿರಾ ಹಾಗೂ ಡ್ರ್ಯಾಗನ್ ಮಂಜು ಚಿತ್ರದ ತಾರಾಗಣದಲ್ಲಿದ್ದಾರೆ. 25 ದಿನ ಪೂರೈಸಿ ಗೆದ್ದಿದ್ದ ಸಿನಿಮಾ ದಿಢೀರನೆ ಓಟಿಟಿಗೆ ಬರ್ತಿರೋದು ವಿಶೇಷ.

2. ಮಾಸ್ ಜಾತರ

ರವಿತೇಜಾ ಹಾಗೂ ಶ್ರೀಲೀಲಾ ನಟನೆಯ 'ಮಾಸ್ ಜಾತರ' ಸಿನಿಮಾ ಓಟಿಟಿಗೆ ಬರ್ತಿದೆ. ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಭಾನು ಬೊಗವರಪು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದಾಜು 60 ಕೋಟಿ ರೂ. ಬಜೆಟ್ ಸಿನಿಮಾ 20 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿತ್ತು. ಶುಕ್ರವಾರ(ನವೆಂಬರ್ 28) ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

From Kantara-1 to Mass Jathara This week Ott Release Movies and web series list

3. ಕಾಂತಾರ ಚಾಪ್ಟರ್-1

ಕನ್ನಡದ 'ಕಾಂತಾರ ಚಾಪ್ಟರ್-1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಈ ವರ್ಷದ ನಂಬರ್ 1 ಸಿನಿಮಾ ಎನಿಸಿಕೊಂಡಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸಿನಿಮಾ ಇದು. ಅಕ್ಟೋಬರ್ 31ರಂದು ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿತ್ತು. ಹಿಂದಿ ಬಿಟ್ಟು ಕನ್ನಡ, ತೆಲುಗು, ತಮಿಳುಮ ಮಲಯಾಳಂ ವರ್ಷನ್ ಮಾತ್ರ ಬಂದಿತ್ತು. ಇದೀಗ ಹಿಂದಿ ವರ್ಷನ್ ಕೂಡ ವೀಕ್ಷಣೆಗೆ ಲಭ್ಯವಿದೆ.

4. ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ

ಅಕ್ಟೋಬರ್ 2ರಂದು ತೆರೆಗೆ ಬಂದಿದ್ದ ಬಾಲಿವುಡ್ ಸಿನಿಮಾ 'ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ' ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಆದರೆ 'ಕಾಂತಾರ-1' ಪ್ತರಬಲ ಪೈಪೋಟಿ ನೀಡಿತ್ತು. ಶಶಾಂತ್ ಖೈತಾನ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 95 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಹಿರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ, ಆದರ ಪೂನವಲ್ಲ ಹಾಗೂ ಶಶಾಂಕ್ ಖೈತಾನ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ವರುಣ್ ಧವನ್, ಜಾನ್ವಿ ಕಪೂರ್ ಹಾಗೂ
ಸನ್ಯಾ ಮಲ್ಹೋತ್ರಾ ಚಿತ್ರದ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ಈ ವಾರವೇ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಇನ್ನು ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ ಮುಂದೆ ಓದಿ.

ಅಮೇಜಾನ್ ಪ್ರೈಂ

1. ವೀ ಆರ್ ಗ್ರೀನ್‌ಲ್ಯಾಂಡ್- (ಡಾಕ್ಯಮೆಂಟರಿ) ನವೆಂಬರ್ 24

ಜೀ-5

1. ರಕ್ತಬಿಜ್(ಬೆಂಗಾಲಿ ಸಿನಿಮಾ) ನವೆಂಬರ್ 28

2. ದಿ ಪೆಟ್ ಡಿಟೆಕ್ಟಿವ್(ಮಲಯಾಳಂ ಸಿನಿಮಾ) ನವೆಂಬರ್ 28

3. ರೆಗಾಯ್(ತಮಿಳು ವೆಬ್ ಸೀರಿಸ್) ನವೆಂಬರ್ 28

ಸನ್ ನೆಕ್ಸ್ಟ್

1. ಸಸಿವದನೆ(ತೆಲುಗು ಸಿನಿಮಾ) ನವೆಂಬರ್ 28

ನೆಟ್‌ಫ್ಲಿಕ್ಸ್

1. ಜಿಂಗಲ್ ಬೆಲ್ ಹೈಸ್ಟ್(ಇಂಗ್ಲೀಷ್ ಸಿನಿಮಾ) ನವೆಂಬರ್ 26

2. ಆರ್ಯನ್(ಕನ್ನಡ ಡಬ್ಬಿಂಗ್) ನವೆಂಬರ್ 28

More from Filmibeat

Read more about: sandalwood bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X