OTT Releases This Week: 'ಕಾಂತಾರ- 1' ಜೊತೆ ಈ ವಾರ ಬ್ಲಾಕ್‌ಬಸ್ಟರ್ ಚಿತ್ರಗಳು ಓಟಿಟಿಗೆ ಎಂಟ್ರಿ, ಇಲ್ಲಿದೆ ಲಿಸ್ಟ್

ಚಿತ್ರಮಂದಿರಗಳಲ್ಲಿ ಮಾತ್ರವಲ್ಲ ಓಟಿಟಿಯಲ್ಲಿ ಕೂಡ ಈ ವಾರ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಕಾದಿದೆ. ಬ್ಲಾಕ್‌ಬಸ್ಟರ್ ಚಿತ್ರಗಳು ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡದ 'ಕಾಂತಾರ'-1 ಸಿನಿಮಾ ಕೂಡ ಪಟ್ಟಿಯಲ್ಲಿದೆ. ತಿಂಗಳಿಗೂ ಮುನ್ನ ಸಿನಿಮಾ ಓಟಿಟಿಗೆ ಬರುತ್ತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

'ಕಾಂತಾರ- 1' ಮಾತ್ರವಲ್ಲ ಮತ್ತಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ಈ ವಾರ ಪ್ರೈಂ ವೀಡಿಯೋ, ನೆಟ್‌ಫ್ಲಿಕ್ಸ್, ಜೀ-5 ಸೇರಿ ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಎಂಟ್ರಿ ಕೊಡುತ್ತಿದೆ. 'ಕಾಂತಾರ- 1' ಹಿಂದಿ ವರ್ಷನ್ ಈ ವಾರ ಓಟಿಟಿಗೆ ಬರ್ತಿಲ್ಲ.

From Kantara chapter 1 to Lokah Chapter 1 this week Ott release Movies list

ಕನ್ನಡದಲ್ಲಿ ವೆಬ್‌ ಸೀರಿಸ್‌ಗಳ ಸಂಖ್ಯೆ ಕಮ್ಮಿ. ಆದರೆ ಇತ್ತೀಚೆಗೆ ಆ ಪ್ರಯತ್ನ ಶುರುವಾಗಿದೆ. ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಮಾರಿಗಲ್ಲು' ಕನ್ನಡ ವೆಬ್ ಸೀರಿಸ್ ಕೂಡ ಈ ವಾರವೇ ಬಿಡುಗಡೆ ಆಗ್ತಿದೆ.

1. ಕಾಂತಾರ ಚಾಪ್ಟರ್-1

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ'-1 ಸಿನಿಮಾ ಅಕ್ಟೋಬರ್ 31ರಂದು ಓಟಿಟಿಗೆ ಬರ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ ಸಿನಿಮಾ 25 ದಿನ ಪೂರೈಸಿತ್ತು. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಡಿಜಿಟಲ್ ಸ್ಟ್ರೀಮಿಂಗ್‌ಗೆ ಮುಂದಾಗಿದೆ. 120 ಕೋಟಿ ರೂ.ಗೆ ಪ್ರೈಂ ವೀಡಿಯೋ ರೈಟ್ಸ್ ಕೊಂಡಿಕೊಂಡಿದೆ. ಬೇಗ ಬಿಡುಗಡೆಗೆ ಒಪ್ಪಂದ ಮಾಡಿಕೊಂಡಂತೆ ಕಾಣ್ತಿದೆ.

From Kantara chapter 1 to Lokah Chapter 1 this week Ott release Movies list

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ- 1' ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಈ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಭಾರತದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಕ್ಸಾಫೀಸ್ ಗಳಿಕೆ ಪಕ್ಕಕ್ಕಿಟ್ಟರೆ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಹುಸಿಮಾಡದೇ ಸಕ್ಸಸ್ ಕಂಡಿದೆ. ಬಹಳ ಬೇಗ ಸಿನಿಮಾ ಓಟಿಟಿಗೆ ಬರುತ್ತಿರುವುದು ಕೆಲವೆ ಬೇಸರಕ್ಕೆ ಕಾರಣವಾಗಿದೆ.

2. ಲೋಕ

ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಚಿತ್ರ 'ಲೋಕ'. ಕಲ್ಯಾಣಿ ಪ್ರಿಯದರ್ಶನ್ ನಟನೆಯ ಸೂಪರ್ ಹೀರೊ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಡೊಮಿಕ್ ಅರುಣ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಗಸ್ಟ್ 28ರಂದು ಬಿಡುಗಡೆಯಾಗಿದ್ದ ಸಿನಿಮಾ ಸಣ್ಣ ವಿವಾದಕ್ಕೂ ಕಾರಣವಾಗಿತ್ತು. ಬಳಿಕ ಚಿತ್ರತಂಡ ಕ್ಷಮೆ ಕೇಳಿತ್ತು.

ಅಂದಾಜು 30 ಕೋಟಿ ರೂ. ಬಜೆಟ್ ಸಿನಿಮಾ 'ಲೋಕ' 10 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಅಕ್ಟೋಬರ್ 31ರಂದು ಹಾಟ್‌ಸ್ಟರ್ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ಕನ್ನಡಕ್ಕೂ ಡಬ್ ಆಗಿ ಬರ್ತಿದೆ.

3. ಇಡ್ಲಿ ಕಡೇ

ಧನುಷ್ ನಿರ್ದೇಶಿಸಿ ನಟಿಸಿರುವ 'ಇಡ್ಲಿ ಕಡೇ' ಚಿತ್ರಕ್ಕೂ ಈ ವಾರವೇ ಓಟಿಟಿ ಬಿಡುಗಡೆ ಭಾಗ್ಯ ಸಿಕ್ತಿದೆ. ಅಕ್ಟೋಬರ್ 1ರಂದು ತೆರೆಗೆ ಬಂದಿದ್ದ ಸಿನಿಮಾ 'ಕಾಂತಾರ- 1' ಆರ್ಭಟದ ಮುಂದೆ ಡಲ್ಲಾಗಿತ್ತು. ಫೀಲ್ ಗುಡ್ ಸಿನಿಮಾ ಎನಿಸಿಕೊಂಡರೂ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲಿಲ್ಲ. ತಮಿಳುನಾಡಿನಲ್ಲಿ ಮಾತ್ರ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಅಕ್ಟೋಬರ್ 29ರಂದು ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.

4. ಮಾರಿಗಲ್ಲು

ಅಪ್ಪು ಕನಸಿನ 'ಮಾರಿಗಲ್ಲು' ವೆಬ್ ಸೀರಿಸ್ ಅಕ್ಟೋಬರ್ 31ರಂದು ಜೀ-5ನಲ್ಲಿ ರಿಲೀಸ್ ಆಗ್ತಿದೆ. ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಿದೆ. 1990ರ ಕಾಲಘಟ್ಟದ ಕಥೆ ಚಿತ್ರದಲ್ಲಿದ್ದು ಕದಂಬರ ಕಾಲದ ಕಥೆಯನ್ನು ಹಿನ್ನೆಲೆಯಲ್ಲಿ ಬಳಸಿಕೊಂಡಿದ್ದಾರೆ. ಪ್ರವೀಣ್ ತೇಜ್, ನಿಧಿ ಹೆಗಡೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ತಾರಾಗಣದಲ್ಲಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಮೇಲೆ ತರಲಾಗ್ತಿದೆ. ಇನ್ನು ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಈ ವಾರ ಓಟಿಟಿಗೆ ಬರುತ್ತೆ ಎನ್ನುವ ಲಿಸ್ಟ್ ಇಲ್ಲಿದೆ.

ಪ್ರೈಂ ವೀಡಿಯೋ

1. ಹಜ್ಬಿನ್ ಹೋಟೆಲ್- ಸೀಸನ್ 2 (ಆನಿಮೇಟೆಡ್ ಸೀರಿಸ್)- ಅಕ್ಟೋಬರ್ 29

2. ಹೆಡ್ಡಾ(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 29

ಹಾಟ್‌ಸ್ಟರ್

1. ಮೆಗಾ 2.0(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 27

2. ಐಟಿ ವೆಲ್ಕಮ್ ಟು ಡೆರ್ರಿ(ಇಂಗ್ಲೀಷ್ ಸೀರಿಸ್) ಅಕ್ಟೋಬರ್ 27

3. ಮಾನಾ ಕಿ ಹಮ್ ಯಾರ್ ನಹೀನ್(ಹಿಂದಿ ಸೀರಿಸ್) ಅಕ್ಟೋಬರ್ 29

ಜೀ-5

1. ಡಾಟರ್ ಆಫ್ ಪ್ರಸಾದ್ ರಾವ್ ಕನಬಡಟಲೇದು(ತೆಲುಗು ಸೀರಿಸ್) ಅಕ್ಟೋಬರ್ 31

ಸನ್‌ ನೆಕ್ಸ್ಟ್

1. ಬ್ಲಾಕ್‌ಮೇಲ್ (ತಮಿಳು ಸಿನಿಮಾ) ಅಕ್ಟೋಬರ್ 30

ನೆಟ್‌ಫ್ಲಿಕ್ಸ್

1. ಬಲ್ಲಾಡ್ ಆಫ್ ಎ ಸ್ಮಾಲ್ ಪ್ಲೇಯರ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 29

2. ದಿ ಅಸ್ಸೆಟ್ (ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 27

3. ಸ್ಟಿಚ್ ಹೆಡ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 29

4. ಐಲಿನ್: ಕ್ವೀನ್ ಆಫ್ ಸೀರಿಯಲ್ ಕಿಲ್ಲರ್ಸ್ (ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 30

5. ದಿ ವೈಟ್ ಹೌಸ್ ಎಫೆಕ್ಟ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 31

More from Filmibeat

Read more about: kantara chapter 1 sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X